ಇತರೆ

ಗೆದ್ದಲು ಹುಳುಗಳು

Termitidae

ಕೀಟ

ಸಂಕ್ಷಿಪ್ತವಾಗಿ

  • ಎಳೆ ಅಥವಾ ಸ್ವಲ್ಪ ಬೆಳೆದ ಸಸ್ಯಗಳು ಬಾಡುವುದು ಮತ್ತು ಸಾಮಾನ್ಯವಾಗಿ ನೆಲಕ್ಕೆ ಬಾಗುವುದು.
  • ಬೇರುಗಳ ಸುತ್ತ ಮತ್ತು ಅವುಗಳೊಳಗೆ ಗೆದ್ದಲು ಹುಳುಗಳು ಮತ್ತು ಸುರಂಗಗಳು ಕಂಡುಬರುವುದು.
  • ಬೇರುಗಳು ಮತ್ತು ಕಾಂಡದ ತಳಭಾಗವು ಟೊಳ್ಳಾಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

11 ಬೆಳೆಗಳು

ಇತರೆ

ರೋಗಲಕ್ಷಣಗಳು

ಸಸಿಗಳಿಂದ ಹಿಡಿದು ಬೆಳೆದ ಸಸ್ಯಗಳವರೆಗೆ ಎಲ್ಲಾ ಬೆಳವಣಿಗೆಯ ಹಂತಗಳಲ್ಲಿ ಗೆದ್ದಲುಗಳು ಸಸ್ಯಗಳನ್ನು ಆಕ್ರಮಣ ಮಾಡಬಹುದು. ಅವು ಬೇರುಗಳನ್ನು ಹಾಳುಮಾಡುತ್ತವೆ, ಇದು ಸಸ್ಯದ ಮೇಲಿನ ಭಾಗಗಳಲ್ಲಿ ಮೊದಲ ಬಾರಿಗೆ ಸಸ್ಯ ಬಾಡುವ ಮೂಲಕ ಕಂಡುಬರುತ್ತದೆ. ಗೆದ್ದಲುಗಳ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು, ತೊಂದರೆಗೊಳಗಾದ ಸಸ್ಯಗಳನ್ನು ಹೊರಕ್ಕೆ ಕಿತ್ತು ಬೇರುಗಳಲ್ಲಿ ಜೀವಂತ ಕೀಟಗಳು ಮತ್ತು ಕೆಳಗಿನ ಕಾಂಡದಲ್ಲಿರುವ ಸುರಂಗಗಳ ಉಪಸ್ಥಿತಿಯನ್ನು ಪರೀಕ್ಷಿಸುವುದು ಅಗತ್ಯವಾಗಿರುತ್ತದೆ. ಸಸ್ಯದ ಬೇರುಗಳು ಮತ್ತು ಕಾಂಡಗಳು ಸಂಪೂರ್ಣವಾಗಿ ಟೊಳ್ಳಾಗಿ ಮಣ್ಣಿನ ತ್ಯಾಜ್ಯದಿಂದ ತುಂಬಿರಬಹುದು. ಕೆಲವು ಸಸ್ಯಗಳು ಬಲವಾದ ಗಾಳಿ ಬಂದಾಗ ನೆಲಕ್ಕೆ ಬಾಗುತ್ತವೆ ಮತ್ತು ಅವು ಅನೇಕ ವೇಳೆ ಮಣ್ಣಿನಿಂದ ಮುಚ್ಚಲ್ಪಟ್ಟಿರುತ್ತವೆ, ಇದರ ಅಡಿಯಲ್ಲಿ ಗೆದ್ದಲು ಕಂಡುಬರಬಹುದು. ತಾಪಮಾನವು ಹೆಚ್ಚಿರುವ ಬೆಳಿಗ್ಗೆ ಅಥವಾ ಮಧ್ಯಾಹ್ನದ ಸಮಯದಲ್ಲಿ ಗೆದ್ದಲುಗಳು ಮಣ್ಣಿನೊಳಗೆ ಆಳವಾಗಿ ಹೋಗಬಹುದಾದ್ದರಿಂದ ಬೆಳಗ್ಗಿನ ಜಾವ ಅಥವಾ ಸಂಜೆಯ ವೇಳೆ ಸಸ್ಯಗಳನ್ನು ಪರೀಕ್ಷಿಸುವುದು ಮುಖ್ಯ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಗೆದ್ದಲುಗಳ ಮೇಲೆ ದಾಳಿ ಮಾಡುವ ನೆಮಟೊಡ್ಗಳನ್ನು ಆಧರಿಸಿದ ಸಿದ್ಧತೆಗಳು ಈ ಕೀಟದ ವಿರುದ್ಧ ಪರಿಣಾಮಕಾರಿಯಾಗಿರುತ್ತವೆ. ಬ್ಯೂವರ್ರಿಯಾ ಬಾಸ್ಸಿಯಾನಾ ಅಥವಾ ಮೆಟಾಹಾರ್ಜಿಯಾಮ್ ನ ಕೆಲವು ಜಾತಿಯ ಶಿಲೀಂಧ್ರಗಳನ್ನು ಹೊಂದಿರುವ ದ್ರಾವಣಗಳನ್ನು ಗೆದ್ದಲಿನ ಗೂಡಿಗೆ ಹಾಕಿದಾಗ ಅದು ಪರಿಣಾಮಕಾರಿಯಾಗಿರುತ್ತದೆ. ಶಿಲೀಂಧ್ರಗಳ ಬೀಜಕಣಗಳು ಸಹ ನಿವಾರಕಗಳಾಗಿ ಕಾರ್ಯನಿರ್ವಹಿಸುತ್ತವೆ. ಮರಗಳು ಮತ್ತು ಹೊಲದಲ್ಲಿನ ಬೆಳೆಗಳ ಮೇಲಿರುವ ಗೆದ್ದಲುಗಳ ವಿರುದ್ಧ ಬೇವಿನ ಬೀಜದ ಸಾರವು (NSKE) ಒಳ್ಳೆಯ ಫಲಿತಾಂಶಗಳನ್ನು ನೀಡಿದೆ. ಮತ್ತೊಂದು ಪರಿಹಾರವೆಂದರೆ, ಮರದ ಬೂದಿ ಅಥವಾ ಪುಡಿಮಾಡಿದ ಬೇವಿನ ಎಲೆಗಳು ಅಥವಾ ಬೀಜಗಳನ್ನು ಗೆದ್ದಲುಗಳು ತೋಡಿದ ಗುಂಡಿಗಳಲ್ಲಿ ಹಾಕಿದರೆ ಅದು ಗೆದ್ದಲುಗಳನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಕ್ಲೋರಿರಿಫೋಸ್, ಡೆಲ್ಟಾಮೆಥ್ರಿನ್ ಅಥವಾ ಇಮಿಡಾಕ್ಲೋಪ್ರಿಡ್ಗಳನ್ನು ಆಧರಿಸಿರುವ ಉತ್ಪನ್ನಗಳನ್ನು ಗೆದ್ದಲುಗಳ ಗೂಡುಗಳೊಳಗೆ ದ್ರಾವಣಗಳ ಇಂಜೆಕ್ಶನ್ ರೂಪದಲ್ಲಿ ಚುಚ್ಚಬಹುದು.

ಅದಕ್ಕೆ ಏನು ಕಾರಣ

ಗೆದ್ದಲುಗಳು ಅನೇಕ ಕಾರ್ಮಿಕ ಹುಳುಗಳು, ಸೈನಿಕ ಹುಳುಗಳು ಮತ್ತು ಸಂತಾನೋತ್ಪತ್ತಿ ಹುಳುಗಳನ್ನು ಒಳಗೊಂಡಿರುವ ದೊಡ್ಡ ಕಾಲೋನಿಗಳಲ್ಲಿ(ವಸಾಹತುಗಳು)ಬದುಕುತ್ತವೆ. ಅವುಗಳ ಗೂಡುಗಳು ಕೆಲವೊಮ್ಮೆ ವಿಸ್ತಾರವಾಗಿರುತ್ತವೆ. ತೇವವಾದ ಸತ್ತ ಮರದ ತುಂಡಿನ ಮೇಲೆ ಕೆಲವು ಹುಳುಗಳು ಗೂಡು ನಿರ್ಮಿಸಿದರೆ, ಇತರವು ನೆಲದಡಿಯ ಗೂಡುಗಳನ್ನು ನಿರ್ಮಿಸುತ್ತವೆ. ನೆಲದಡಿಯ ಸುರಂಗಗಳ ಮೂಲಕ ರಕ್ಷಿಸಲ್ಪಟ್ಟ ಗೂಡಿನಿಂದ, ಸಸ್ಯದ ಬೇರುಗಳು ಮತ್ತು ಇತರ ವಸ್ತುಗಳನ್ನು ಅವು ತಿನ್ನುತ್ತವೆ. ಯಾವುದೇ ಇತರ ಆಹಾರ ಲಭ್ಯವಿಲ್ಲದಿದ್ದರೆ ಗೆದ್ದಲುಗಳು ಸಸ್ಯಗಳ ಮೇಲೆ ದಾಳಿ ಮಾಡಬಹುದು, ಆದ್ದರಿಂದ ಮಣ್ಣಿನಲ್ಲಿ ಸಾಕಷ್ಟು ಸಾವಯವ ಪದಾರ್ಥವಿದೆ ಎಂದು ಖಚಿತಪಡಿಸಿಕೊಳ್ಳಿ. ಸಂತಾನೋತ್ಪತ್ತಿ ಮಾಡುವ ಗೆದ್ದಲುಗಳಿಗೆ ರೆಕ್ಕೆಯಿರುತ್ತದೆ. ಹಲವಾರು ರೆಕ್ಕೆಯುಳ್ಳ ಗಂಡು ಮತ್ತು ಹೆಣ್ಣು ಕೀಡೆಗಳನ್ನು, ಸಾಮಾನ್ಯವಾಗಿ ಕಪ್ಪು ಬಣ್ಣ ಮತ್ತು ಉತ್ತಮವಾಗಿ-ಬೆಳೆದ ಕಣ್ಣುಗಳೊಂದಿಗೆ, ಹಿಂಡಾಗಿ ಹಾರುವುದಕ್ಕಾಗಿ ತಯಾರಿಸಲಾಗುತ್ತದೆ. ಭಾರಿ ಮಳೆಯಾದಾಗ ಮುಸ್ಸಂಜೆಯಲ್ಲಿ ಈ ರೀತಿ ಹಿಂಡಾಗಿ ಹಾರುತ್ತವೆ. ಹಾರಿದ ನಂತರ, ಅವು ತಮ್ಮ ರೆಕ್ಕೆಗಳನ್ನು ಉದುರಿಸಿ, ಸಂಯೋಗ ಮಾಡುತ್ತವೆ ಮತ್ತು ಮಣ್ಣಿನಲ್ಲಿ ಹಾಗು ಮರದ ಬಿರುಕುಗಳೊಳಗೆ ಕೊರೆದುಕೊಂಡು ಹೋಗಿ ಹೊಸ ಕಾಲೋನಿಯನ್ನು ಹುಡುಕುತ್ತವೆ.


ಮುಂಜಾಗ್ರತಾ ಕ್ರಮಗಳು

  • ನೆಡುವಾಗ, ಉಳಿಕೆಗಳು ಮತ್ತು ಸಾವಯವ ಅಂಶ ಕಡಿಮೆಯಿರುವ ಬರಡಾದ, ಒಣ ಮಣ್ಣುಗಳನ್ನು ಬಳಸಬೇಡಿ.
  • ಸಸ್ಯಗಳನ್ನು ನಿಯಮಿತವಾಗಿ ಪರೀಕ್ಷಿಸಿ, ನಿರ್ದಿಷ್ಟವಾಗಿ ಬೆಳಗ್ಗಿನ ಜಾವ ಅಥವಾ ಸಂಜೆಯ ಸಮಯದಲ್ಲಿ.
  • ಪೀಡಿತ ಸಸ್ಯಗಳು ಅಥವಾ ಸಸ್ಯ ಭಾಗಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ.
  • ಆರೋಗ್ಯಕರ ಸಸ್ಯ ಬೆಳವಣಿಗೆಗೆ ಬೇಕಾದ ಸ್ಥಿತಿಗಳನ್ನು ಉತ್ತೇಜಿಸಿ.
  • ನೀರಿನ ಒತ್ತಡ ಮತ್ತು ಸಸ್ಯಗಳಿಗೆ ಅನಗತ್ಯವಾದ ಗಾಯವನ್ನು ತಪ್ಪಿಸಿ.
  • ಸಾಧ್ಯವಾದರೆ ಬೇಗನೆ ಕೊಯ್ಲು ಮಾಡಿ, ಏಕೆಂದರೆ ಸಾಮಾನ್ಯವಾಗಿ ಪರಿಪಕ್ವತೆಯ ನಂತರ ಗದ್ದೆಯಲ್ಲಿ ಹಾಗೇ ಬಿಟ್ಟ ಬೆಳೆಗಳನ್ನು ಗೆದ್ದಲು ಹುಳುಗಳು ಆಕ್ರಮಿಸುತ್ತವೆ.
  • ಸುಗ್ಗಿಯ ನಂತರ ಸಸ್ಯಾವಶೇಷಗಳು ಮತ್ತು ಇತರ ಉಳಿಕೆಗಳನ್ನು ತೆಗೆದುಹಾಕಿ.
  • ಗೆದ್ದಲುಗಳ ಗೂಡುಗಳು ಹಾಗು ಸುರಂಗಗಳನ್ನು ನಾಶಮಾಡಲು ಮತ್ತು ಇರುವೆಗಳು, ಹಕ್ಕಿಗಳು, ಕೋಳಿ ಮುಂತಾದ ಪರಭಕ್ಷಕಗಳಿಗೆ ಅವುಗಳನ್ನು ಒಡ್ಡಲು ಭೂಮಿಯನ್ನು ಉಳುಮೆ ಮಾಡಿ.
  • ಸರದಿ ಬೆಳೆಯನ್ನು ಅಭ್ಯಾಸ ಮಾಡಿ ಅಥವಾ ಅಂತರ ಬೇಸಾಯವಿರುವ ಭೂಮಿಗಳಲ್ಲಿ ಬೆಳೆಯಿರಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ