ಹತ್ತಿ

ಸ್ಪೈನಿ ಬೋಲ್ವರ್ಮ್

Earias insulana

ಕೀಟ

ಸಂಕ್ಷಿಪ್ತವಾಗಿ

  • ಹೂಬಿಡುವ ಮೊದಲೇ ತುದಿಯ ಚಿಗುರುಗಳು ಬಾಡುತ್ತವೆ.
  • ಸ್ಕ್ವೇರ್ ಗಳು ಮತ್ತು ಬೀಜಕೋಶಗಳು ಉದುರುತ್ತವೆ.
  • ಬೀಜಗಳಲ್ಲಿ ರಂಧ್ರಗಳು ಉಂಟಾಗುತ್ತವೆ ಮತ್ತು ಒಳಗೆ ಕೊಳೆಯುತ್ತದೆ.
  • ಹತ್ತಿ ಬೀಜಕೋಶಗಳ ಒಳಭಾಗ ಕ್ರಮೇಣ ಖಾಲಿಯಾಗಬಹುದು.

ಇವುಗಳಲ್ಲಿ ಸಹ ಕಾಣಬಹುದು


ಹತ್ತಿ

ರೋಗಲಕ್ಷಣಗಳು

ಮರಿಹುಳುಗಳು ಮುಖ್ಯವಾಗಿ ಹತ್ತಿಯ ಬೀಜಕೋಶಗಳ ಮೇಲೆ ದಾಳಿ ಮಾಡುತ್ತವೆ. ಆದರೆ ಬೀಜಕೋಶಗಳು ಇಲ್ಲದಿದ್ದರೆ ಸ್ಕ್ವೇರ್ ಗಳು, ಚಿಗುರುಗಳು ಮತ್ತು ಹೂವುಗಳನ್ನು ತಿನ್ನುತ್ತವೆ. ಸಸ್ಯಕ ಸ್ಥಿತಿಯಲ್ಲಿ ಕೀಟ ಮುತ್ತಿಕೊಂಡರೆ, ಮರಿಹುಳುಗಳು ಚಿಗುರಿನ ತುದಿ ಮೊಗ್ಗುಗಳನ್ನು ತಿಂದು ಕೆಳಗೆ ಚಲಿಸುತ್ತವೆ. ಇದು ಹೂಬಿಡುವ ಮೊದಲೇ ತುದಿ ಚಿಗುರುಗಳ ಒಣಗುವಿಕೆಗೆ ಮತ್ತು ಉದುರುವಿಕೆಗೆ ಕಾರಣವಾಗುತ್ತದೆ. ಮುಖ್ಯ ಕಾಂಡದ ಮೇಲೆ ಪರಿಣಾಮ ಬೀರಿದರೆ, ಇಡೀ ಸಸ್ಯವೇ ಕುಸಿಯಬಹುದು. ನಂತರದ ಹಂತಗಳಲ್ಲಿ ದಾಳಿ ನಡೆದರೆ, ಹೂವಿನ ಮೊಗ್ಗುಗಳು ಮತ್ತು ಬೀಜಕೋಶಗಳ ಕೆಳಭಾಗದ ಸುತ್ತಲೂ ರಂಧ್ರಗಳನ್ನು ಮಾಡಿ ತಿನ್ನುತ್ತವೆ. ಈ ಸುರಂಗಗಳು ಹೆಚ್ಚಾಗಿ ಹಿಕ್ಕೆಗಳಿಂದ ಮುಚ್ಚಲ್ಪಟ್ಟಿರುತ್ತವೆ. ಹಾನಿಗೊಳಗಾದ ಹೂವಿನ ಮೊಗ್ಗುಗಳು ಕೆಲವೊಮ್ಮೆ ಅಕಾಲಿಕವಾಗಿ ಅರಳುತ್ತವೆ. ಇದರಿಂದ 'ಫ್ಲೇರ್ಡ್ ಸ್ಕ್ವೆರ್ಸ್' ಕಂಡುಬರಬಹುದು. ಸಸ್ಯಗಳ ಅಂಗಾಂಶಗಳಿಗೆ ಆದ ಹಾನಿ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾದ ಸೋಂಕಿಗೆ ಕಾರಣವಾಗುತ್ತದೆ. ಸಸ್ಯವು ಸಣ್ಣದಾಗಿದ್ದಷ್ಟು ಸ್ಪೈನೀ ಬೋಲ್ ವರ್ಮ್ ಕೀಟ ಹೆಚ್ಚು ಹಾನಿ ಉಂಟು ಮಾಡುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಮೊಟ್ಟೆಗಳನ್ನು ಅಥವಾ ಸಣ್ಣ ಲಾರ್ವಾಗಳನ್ನು ಹುಡುಕಿ ತೆಗೆಯುವುದು ಈ ಕೀಟದ ನಿರ್ವಹಣೆಯಲ್ಲಿ ಅಗತ್ಯವಾಗಿದೆ. ಬ್ರಕೊನಿಡೇ, ಸ್ಕೇಲಿಯೊನಿಡೆ ಮತ್ತು ಟ್ರೈಕೊಗ್ರಮ್ಯಾಟಿಡೆ ಕುಟುಂಬದ ಕೆಲವು ಪ್ಯಾರಾಸಿಟಾಯ್ಡ್ ಕೀಟಗಳನ್ನು ಜೈವಿಕ ನಿಯಂತ್ರಣ ವಿಧಾನವಾಗಿ ಬಳಸಬಹುದು. ಈ ಕೆಳಗಿನ ಕ್ರಮದಲ್ಲಿ ಪರಭಕ್ಷಕ ಕೀಟಗಳನ್ನು ಸಹ ಬಳಸಬಹುದು: ಕೋಲಿಯೋಪ್ಟೆರಾ, ಹೈಮೆನೋಪ್ಟೆರಾ, ಹೆಮಿಪ್ಟೆರಾ ಮತ್ತು ನ್ಯೂರೋಪ್ಟೆರಾ. ಈ ಜಾತಿಗಳನ್ನು ಉತ್ತೇಜಿಸಲು (ಅಥವಾ ಅವುಗಳನ್ನು ಹೊಲಗಳಲ್ಲಿ ಪರಿಚಯಿಸಲು), ಮತ್ತು ವಿಶಾಲ-ರೋಹಿತ ಕ್ರಿಮಿನಾಶಕಗಳ ಬಳಕೆಯನ್ನು ತಪ್ಪಿಸಲು ಮರೆಯದಿರಿ. ಕೀಟ ಸಂಖ್ಯೆಯ ಹೆಚ್ಚಾದಾಗ, ಅವುಗಳನ್ನು ನಿಯಂತ್ರಿಸಲು ನೀವು ಬ್ಯಾಸಿಲಸ್ ಥುರಿಂಜಿಯೆನ್ಸಿಸ್ ಅನ್ನು ಹೊಂದಿರುವ ಜೈವಿಕ ನಿರೋಧಕ ಸ್ಪ್ರೇಗಳನ್ನು ಬಳಸಬಹುದು. ಬೇವಿನ ಬೀಜದ ಸಾರವನ್ನು (ಎನ್ ಎಸ್ ಕೆ ಇ) 5% ಅಥವಾ ಬೇವಿನ ಎಣ್ಣೆ (1500 ಪಿಪಿಎಂ) @ 5 ಮಿಲೀ / ಲೀ ಸಿಂಪಡಿಸಿ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಹೂವು ಅರಳುವ ಆರಂಭಿಕ ಸಮಯದಲ್ಲಿ 100 ಸಸ್ಯಗಳಿಗೆ 10 ಮೊಟ್ಟೆಗಳು ಅಥವಾ ಐದು ಮರಿ ಹುಳುಗಳು ಕಂಡುಬಂದಾಗ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ. ಲಾರ್ವಾಗಳು ಕೀಟನಾಶಕ ಚಿಕಿತ್ಸೆಗೆ ಹೆಚ್ಚು ನಿರೋಧಕತೆ ಬೆಳೆಸಿಕೊಂಡಂತೆ, ಮೊಟ್ಟೆಗಳು ಮತ್ತು ಎಳೆಯ ಲಾರ್ವಾಗಳನ್ನು ಹುಡುಕಿ ತೆಗೆಯುವುದು ಅತ್ಯಗತ್ಯವಾಗಿದೆ. ಮೊಟ್ಟೆಯ ಹಂತದಲ್ಲಿ ಚಿಕಿತ್ಸೆ ಆರಂಭಿಸಲು ಸೂಚಿಸಲಾಗುತ್ತದೆ. ಕ್ಲೋರಂಟ್ರಾನಿಲಿಪ್ರೋಲ್, ಎಮೆಟಿಕ್ಟಿನ್ ಬೆಂಜೊಯೇಟ್, ಫ್ಲುಬೆನ್ಡಿಯಮೈಡ್, ಮೆಥೊಮಿಲ್ ಅಥವಾ ಎಸ್ಫೆನ್ವಾಲೆರೇಟ್ ಹೊಂದಿರುವ ಕೀಟನಾಶಕಗಳನ್ನು ಬಳಸಬಹುದು. ಕಡಿಮೆ ಮೌಲ್ಯದ ಬೆಳೆಗಳಲ್ಲಿ ರಾಸಾಯನಿಕ ಚಿಕಿತ್ಸೆಯು ದುಬಾರಿಯಾಗಬಹುದು.

ಅದಕ್ಕೆ ಏನು ಕಾರಣ

ಭಾರತದ ಉತ್ತರದ ಭಾಗಗಳಲ್ಲಿ ಸಾಮಾನ್ಯವಾಗಿರುವ ಕೀಟವಾದ ಎರಿಯಾಸ್ ಇನ್ಸುಲಾನಾ ಎಂಬ ಸ್ಪೈನಿ ಬೋಲ್ವರ್ಮ್ ನ ಲಾರ್ವಾಗಳಿಂದಾಗಿ ಈ ಹಾನಿ ಉಂಟಾಗುತ್ತದೆ. ಈ ಕೀಟದ ಪರ್ಯಾಯ ಆಶ್ರಯದಾತ ಸಸ್ಯಗಳೆಂದರೆ, ದಾಸವಾಳ ಮತ್ತು ಬೆಂಡೆಕಾಯಿ. ಪತಂಗಗಳು ಬೆಳ್ಳಿ-ಹಸಿರಿನಿಂದ ಹಳದಿ ಬಣ್ಣದಲ್ಲಿರುತ್ತವೆ. ಸರಿಸುಮಾರು 2 ಸೆಂ.ಮೀ ಉದ್ದವಿರುತ್ತವೆ ಮತ್ತು ಹೂವುಗಳು ಅಥವಾ ಬೆಳಕಿನ ಮೂಲಗಳ ಹತ್ತಿರ ಇವುಗಳನ್ನು ಕಾಣಬಹುದಾಗಿದೆ. ರೆಕ್ಕೆಗಳ ಮೇಲೆ ಮೂರು ಗಾಢವಾದ ಗೆರೆಗಳನ್ನು ನೋಡಬಹುದು. ಹಳದಿ ಮತ್ತು ಕಂದು ಬಣ್ಣದ ಕೀಟಗಳು ಶರತ್ಕಾಲದಲ್ಲಿ ಹೆಚ್ಚಾಗಿ ಕಂಡುಬಂದರೆ, ಹಸಿರು ಕೀಟಗಳು ಬೇಸಿಗೆಯಲ್ಲಿ ಸಾಮಾನ್ಯವಾಗಿರುತ್ತವೆ. ಮೊಟ್ಟೆ ನೀಲಿ ಬಣ್ಣದಲ್ಲಿರುತ್ತವೆ. ಎಳೆಯ ಚಿಗುರುಗಳು, ಎಲೆಗಳು ಮತ್ತು ಸ್ವ್ವೇರ್ ಗಳ ಮೇಲೆ ಒಂದೇ ಮೊಟ್ಟೆ ಇಡಲಾಗುತ್ತದೆ. ಎಳೆಯ ಲಾರ್ವಾಗಳು ತಿಳಿ ಕಂದು ಬಣ್ಣದಲ್ಲಿರುತ್ತವೆ ಮತ್ತು ಬೂದು ಬಣ್ಣದಿಂದ ಹಳದಿ ಮತ್ತು ಕಿತ್ತಳೆ ಬಣ್ಣದ ವಿನ್ಯಾಸಗಳನ್ನು ಹೊಂದಿರುತ್ತವೆ. ದೇಹದ ಮೇಲ್ಮೈಯನ್ನು ಬಹುತೇಕವಾಗಿ ಆವರಿಸಿರುವ, ಕೈ ಮಸೂರದಲ್ಲಿ ಗೋಚರಿಸುವ, ಸಣ್ಣ ಮುಳ್ಳುಗಳಿಂದ ಇತರ ಮರಿಹುಳುಗಳಿಂದ ಇವುಗಳನ್ನು ಬೇರೆಯಾಗಿ ಗುರುತಿಸಬಹುದಾಗಿದೆ. ಅವು ಪ್ರೌಢಾವಸ್ಥೆಯನ್ನು ತಲುಪಿದಾಗ, ಎಲೆಗಳು ಅಥವಾ ಬಿದ್ದ ಸಸ್ಯದ ಭಾಗಗಳಿಗೆ ಜೋಡಿಸಲಾದ ರೇಷ್ಮೆಯ ಕೋಶಗಳಲ್ಲಿ ಕೋಶಾವಸ್ಥೆ ಕಳೆಯುತ್ತವೆ. ಉಷ್ಣವಲಯದ ಪರಿಸ್ಥಿತಿಗಳಲ್ಲಿ 20-25 ದಿನಗಳಲ್ಲಿ ಒಂದು ಪೀಳಿಗೆಯು ಪೂರ್ಣಗೊಳ್ಳುತ್ತದೆ. ಕಡಿಮೆ ತಾಪಮಾನವು ಈ ಪ್ರಕ್ರಿಯೆಯನ್ನು ಎರಡು ತಿಂಗಳ ವರೆಗೆ ವಿಳಂಬಗೊಳಿಸಬಹುದು.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ಚೇತರಿಸಿಕೊಳ್ಳುವ ಪ್ರಭೇದಗಳನ್ನು ನೆಡಿ.
  • ಏಕಬೆಳೆ ತಪ್ಪಿಸಿ ಮತ್ತು ಲಾಭದಾಯಕ ಸಸ್ಯಗಳೊಂದಿಗೆ ಅಂತರ್ ಬೆಳೆ ಜಾರಿಗೆ ತನ್ನಿ.
  • ಗರಿಷ್ಠ ಕೀಟ ಸಂಖ್ಯೆಯನ್ನು ತಪ್ಪಿಸಲು ಬೇಗನೆ ನೆಡಿ.
  • ಕೀಟಗಳ ಜೀವನ ಚಕ್ರವನ್ನು ಮುರಿಯಲು ಕೃಷಿಗೆ ಒಳಪಡದ ಅಂಚಿನ ಪ್ರದೇಶಗಳನ್ನು ಬಿಡಿ ಅಥವಾ ದಾಸವಾಳ ಮತ್ತು ಬೆಂಡೆಕಾಯಿಗಳಂತಹ ಬಲೆ ಬೆಳೆಗಳನ್ನು ನೆಡಿ.
  • ಸಸ್ಯಗಳ ನಡುವೆ ಸಾಕಷ್ಟು ಅಂತರ ಬಿಡಿ.
  • ಸ್ಪೈನೀ ಬೋಲ್ವರ್ಮ್ನನ ಲಾರ್ವಾ ಮತ್ತು ಮೊಟ್ಟೆಗಳಿಗಾಗಿ ನಿಯಮಿತವಾಗಿ ಹತ್ತಿ ಗದ್ದೆಯ ಮೇಲ್ವಿಚಾರಣೆ ಮಾಡಿ.
  • ಸಾಕಷ್ಟು ರಸಗೊಬ್ಬರ ಹಾಕಿ.
  • ಬೇಗ ಸುಗ್ಗಿ ತರವು ಕೃಷಿ ಪದ್ಧತಿಗಳನ್ನು ಉತ್ತೇಜಿಸಿ.
  • ಪ್ರತಿ ಬೆಳೆ ಚಕ್ರದ ನಂತರ ಎಲ್ಲಾ ಅವಶೇಷಗಳನ್ನು ತೆರವುಗೊಳಿಸಿ.
  • ಪರಭಕ್ಷಕಗಳಿಗೆ ಮತ್ತು ಅಂಶಗಳಿಗೆ ಕೋಶಗಳನ್ನು ಒಡ್ಡಲು ಆಳವಾಗಿ ನೇಗಿಲು ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ