ಹತ್ತಿ

ಹತ್ತಿಯ ಸೆಮಿಲೂಪರ್

Anomis flava

ಕೀಟ

ಸಂಕ್ಷಿಪ್ತವಾಗಿ

  • ಎಳೆಯ ಲಾರ್ವಾಗಳು ಗುಂಪು ಗುಂಪಾಗಿ, ಎಲೆಗಳ ಮುಖ್ಯಭಾಗವನ್ನು ತಿಂದು ಸಣ್ಣ ರಂಧ್ರಗಳನ್ನು ಮಾಡುತ್ತವೆ.
  • ಬೆಳೆದ ಮರಿಹುಳುಗಳು ಎಲೆಗಳನ್ನು ವಿಪರೀತವಾಗಿ ತಿಂದು, ನಡುದಿಂಡು ಮತ್ತು ನಾಳಗಳನ್ನು ಮಾತ್ರ ಉಳಿಸುತ್ತವೆ.
  • ಯುವ ಲಾರ್ವಾಗಳ ಲೂಪಿಂಗ್ ರೀತಿಯ ಚಲನೆಯಿಂದ ಸೆಮಿಲೂಪರ್ ಎಂಬ ಹೆಸರು ಬಂದಿದೆ.

ಇವುಗಳಲ್ಲಿ ಸಹ ಕಾಣಬಹುದು


ಹತ್ತಿ

ರೋಗಲಕ್ಷಣಗಳು

ಮರಿ ಲಾರ್ವಾಗಳು ಎಳೆಯ ಎಲೆಗಳನ್ನು ಗುಂಪು ಗುಂಪಾಗಿ ತಿನ್ನುತ್ತವೆ. ಮೇಲ್ಮೈಯನ್ನು ಕೆರೆದು ಸಣ್ಣ ರಂಧ್ರಗಳನ್ನು ಉಳಿಸುತ್ತವೆ. ಪ್ರೌಢ ಮರಿಹುಳುಗಳು ಅಂಚುಗಳಿಂದ ಪ್ರಾರಂಭಿಸಿ ನಾಳಗಳ ಕಡೆಗೆ ಚಲಿಸುತ್ತಾ ಸಂಪೂರ್ಣ ಎಲೆಗಳನ್ನು ತಿನ್ನುತ್ತವೆ. ನಡುದಿಂಡು ಮತ್ತು ನಾಳಗಳನ್ನು ಮಾತ್ರ ಬಿಡುತ್ತದೆ (ಅಸ್ಥಿಪಂಜರಣೀಕರಣ ಎಂಬ ಪ್ರಕ್ರಿಯೆ). ನಂತರ, ಅವು ಎಳೆಯ ಚಿಗುರುಗಳು, ಮೊಗ್ಗುಗಳು ಮತ್ತು ಬೀಜಕೋಶಗಳನ್ನು ತಿನ್ನುತ್ತವೆ. ಎಲೆ ಮೇಲ್ಮೈಯ ಮೇಲೆ ಕಪ್ಪು ಹಿಕ್ಕೆ ಕೀಟದ ಉಪಸ್ಥಿತಿಯ ಸಾಮಾನ್ಯ ಲಕ್ಷಣವಾಗಿದೆ. ಹವಾಮಾನದ ಸ್ಥಿತಿಗತಿಗಳ ಮೇಲೆ ಅವಲಂಬಿತವಾಗಿ, ಕೆಲವೊಮ್ಮೆ ಸೋಂಕು ಏಕಾಏಕಿ ಸಂಭವಿಸಬಹುದು ಮತ್ತು ತೀವ್ರವಾದಲ್ಲಿ ಇಳುವರಿ ನಷ್ಟವನ್ನು ಉಂಟುಮಾಡಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸಿದರೆ ಮತ್ತು ಎಳೆಯ ಸಸ್ಯಗಳ ಮೇಲೆ ದಾಳಿ ಮಾಡಿದರೆ ಮಾತ್ರ ಸೆಮಿಲೋಪರ್ ಗಳು ಬೆಳೆಗಳಿಗೆ ಗಮನಾರ್ಹ ಮಟ್ಟದಲ್ಲಿ ಹಾನಿಕಾರಕವಾಗಿದೆ. ಬೆಳೆದಂತೆ, ಸಸ್ಯಗಳು ಈ ಕೀಟಕ್ಕೆ ಹೆಚ್ಚು ನಿರೋಧಕವಾಗುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸೆಮಿಲೂಪರ್ ನಿರ್ವಹಣೆ, ಮೊಟ್ಟೆಗಳು ಅಥವಾ ಸಣ್ಣ ಲಾರ್ವಾಗಳಿಗಾಗಿ ನಿಯಮಿತವಾಗಿ ಹುಡುಕುವುದನ್ನು ಒಳಗೊಂಡಿದೆ. ಇಚ್ನ್ಯೂಮೋನಿಡೆ, ಬ್ರಕೊನಿಡೇ, ಸ್ಕೇಲಿಯೊನಿಡೆ, ಟ್ರೈಕೊಗ್ರಮ್ಯಾಟಿಡೆ ಮತ್ತು ಟಚಿನಿಡೆ ಕುಟುಂಬದ ಪ್ಯಾರಾಸಿಟಾಯ್ಡ್ ಕಣಜಗಳ ಕೆಲವು ಜಾತಿಗಳನ್ನು ಜೈವಿಕ ನಿಯಂತ್ರಣ ವಿಧಾನವಾಗಿ ಬಳಸಬಹುದು. ಕೀಟಸಂಖ್ಯೆಯು ಶಿಖರ ತಲುಪುವುದನ್ನು ನಿಯಂತ್ರಿಸಲು ನೀವು ಬೇವಿನ ತೈಲ ಸಿಂಪಡಣೆಯನ್ನು ಸಹ ಮಾಡಬಹುದು. ಉದಾಹರಣೆಗೆ, ಬೇವಿನ ಬೀಜದ ಕಷಾಯ (NSKE 5%) ಅಥವಾ ಬೇವಿನ ಎಣ್ಣೆ (1500ppm) @ 5ಮಿಲೀ / ಲೀ ಅನ್ನು ಸಿಂಪಡಿಸಬಹುದಾಗಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಯೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಕೀಟನಾಶಕಗಳ ವ್ಯಾಪಕ ಬಳಕೆ ಕೀಟದಲ್ಲಿ ಪ್ರತಿರೋಧಕತೆಗೆ ಕಾರಣವಾಗಬಹುದು. ಲಾರ್ವಾಗಳು ಕೀಟನಾಶಕ ಚಿಕಿತ್ಸೆಗೆ ಹೆಚ್ಚು ಪ್ರತಿರೋಧಕತೆ ಬೆಳೆಸಿಕೊಂಡಂತೆ , ಮೊಟ್ಟೆಗಳು ಮತ್ತು ಎಳೆಯ ಲಾರ್ವಾಗಳನ್ನು ಹುಡುಕಿ ತೆಗೆಯುವುದು ಅತ್ಯಗತ್ಯವಾಗಿದೆ. ಮೊಟ್ಟೆಯ ಹಂತದಲ್ಲಿ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ. ಕ್ಲೋರಂಟ್ರಾನಿಲಿಪ್ರೋಲ್, ಎಮಮೆಕ್ಟಿನ್ ಬೆಂಜೊಯೇಟ್, ಫ್ಲುಬೆನ್ಡಿಯಮೈಡ್, ಮೆಥೊಮಿಲ್ ಅಥವಾ ಎಸ್ಫೆನ್ವಾಲರೇಟ್ ಹೊಂದಿರುವ ಕೀಟನಾಶಕಗಳನ್ನು ಬಳಸಬಹುದು. ಕಡಿಮೆ ಮೌಲ್ಯದ ಬೆಳೆಗಳಲ್ಲಿ ರಾಸಾಯನಿಕ ಚಿಕಿತ್ಸೆಯು ಲಾಭದಾಯಕವಲ್ಲ.

ಅದಕ್ಕೆ ಏನು ಕಾರಣ

ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ ಕಂಡುಬರುವ ಒಂದು ಚಿಟ್ಟೆ ಅನೋಮಿಸ್ ಫ್ಲಾವಾದ ಲಾರ್ವಾಗಳಿಂದ ಹಾನಿ ಉಂಟಾಗುತ್ತದೆ. ವಯಸ್ಕ ಪತಂಗಗಳು ಕಿತ್ತಳೆ ಕಂದು ಬಣ್ಣದ ಮುಂದಿನ ರೆಕ್ಕಗಳನ್ನು ಹೊಂದಿದ್ದು ಅವುಗಳ ಅಂಚಿನ ಬಳಿ ಎರಡು ಬೂದು ಬಣ್ಣದ ಅಂಕುಡೊಂಕಾದ ರೇಖೆಗಳು ಹಾದುಹೋಗಿರುತ್ತವೆ. ಎದ್ದುಕಾಣುವ ಕಿತ್ತಳೆ, ಬಣ್ಣದ ತ್ರಿಕೋನ ಚಿಹ್ನೆಯು ರೆಕ್ಕೆಗಳ ಮೇಲಿನ, ದೇಹಕ್ಕೆ ಹತ್ತಿರವಾದ ಅರ್ಧದಷ್ಟು ಭಾಗವನ್ನು ಆವರಿಸುತ್ತದೆ. ಹಿಂದಿನ ರೆಕ್ಕೆಗಳು ತೆಳು ಕಂದು ಬಣ್ಣದಲ್ಲಿದ್ದು, ಯಾವುದೇ ವಿಶೇಷ ಲಕ್ಷಣಗಳಿರುವುದಿಲ್ಲ. ಹೆಣ್ಣು ಕೀಟ ಎಲೆಗಳ ಮೇಲೆ ಸುಮಾರು 500-600 ದುಂಡನೆಯ ಮೊಟ್ಟೆಗಳನ್ನು ಇಡುತ್ತವೆ. ಎಳೆಯ ಲಾರ್ವಾಗಳು ತಿಳಿ ಹಸಿರು ಬಣ್ಣದಲ್ಲಿದ್ದು, ತೆಳುವಾದ ಹಳದಿ ಬಣ್ಣದ ರೇಖೆಗಳು ಮೊದಲ ಐದು ಭಾಗಗಳನ್ನು ಸ್ಪಷ್ಟವಾಗಿ ಪ್ರತ್ಯೇಕಿಸುತ್ತವೆ. ಬೆಳೆದ ಲಾರ್ವಾಗಳು ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗಿ ಬೆನ್ನಿನ ಮೇಲೆ ಎರಡು ಹಳದಿ ಸಾಲುಗಳನ್ನು ಹೊಂದುತ್ತವೆ. ಕೋಶವು ಕಂದುಬಣ್ಣದಲ್ಲಿದ್ದು, ಮಡಿಸಿದ ಎಲೆಗಳಲ್ಲಿ ಕಂಡುಬರುತ್ತದೆ. ಇಂಗ್ಲಿಷ್ ಹೆಸರು ಸೆಮಿಲೋಪರ್ ಎನ್ನುವುದು ಲಾರ್ವಾಗಳು ತಮ್ಮ ದೇಹವನ್ನು ಕಮಾನಿನಂತೆ ಬಾಗಿಸಿ ಚಲಿಸುವ ವಿಧಾನವನ್ನು ಸೂಚಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಮಾರುಕಟ್ಟೆಯಲ್ಲಿ ಲಭ್ಯವಿದ್ದರೆ ಸಹಿಷ್ಣು ಪ್ರಭೇದಗಳನ್ನು ನೆಡಿ.
  • ಭಾರೀ ಮಳೆಯು ಮುತ್ತುವಿಕೆಯ ಅವಕಾಶವನ್ನು ಹೆಚ್ಚಿಸುವುದರಿಂದ, ಹೊಲದಲ್ಲಿ ಉತ್ತಮ ಒಳಚರಂಡಿ ಯೋಜನೆ ಮಾಡಿ.
  • ಕೀಟಗಳ ಅತ್ಯಧಿಕ ಸಂಖ್ಯೆಯನ್ನು (ಸಾಮಾನ್ಯವಾಗಿ ಬಿತ್ತನೆಯ 60 ಮತ್ತು 75 ದಿನಗಳ ನಂತರ) ತಪ್ಪಿಸಲು ಬೇಗ ಬಿತ್ತಿ.
  • ಹೊಲದ ಮೇಲ್ವಿಚಾರಣೆ ಮಾಡಿ ಮತ್ತು ಸೋಂಕಿತ ಎಲೆಗಳನ್ನು ಕೈಯಿಂದ ತೆಗೆದುಹಾಕಿ.
  • ಕೀಟನಾಶಕ ಬಳಕೆಯನ್ನು ನಿಯಂತ್ರಿಸಿ.
  • ಇದು ಪ್ರಯೋಜನಕಾರಿ ಕೀಟಗಳ ಮೇಲೂ ಪರಿಣಾಮ ಬೀರಬಹುದು.
  • ಅಲ್ಲದೆ, ಆಶ್ರಯದಾತವಲ್ಲದ ಬೆಳೆಗಳೊಂದಿಗೆ ಬೆಳೆ ಸರದಿ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ