Oxycarenus hyalinipennis
ಕೀಟ
ಇದನ್ನು ಹತ್ತಿಯ ಸ್ಟೈನರ್ ಎಂದು ಕೂಡ ಕರೆಯಲಾಗುತ್ತದೆ. ಈ ಕೀಟ ಮತ್ತು ಅದರ ಮರಿಹುಳುಗಳು ಮುಖ್ಯವಾಗಿ ಭಾಗಶಃ ತೆರೆದ ಹತ್ತಿಯ ಬೀಜಕೋಶಗಳನ್ನು ಆಕ್ರಮಿಸುತ್ತವೆ. ಇದರಿಂದಾಗಿ ಹತ್ತಿಯ ನಾರು ಕಲೆಯಾಗುತ್ತದೆ, ಬೀಜಕೋಶ ಬಣ್ಣ ಕಳೆದುಕೊಳ್ಳುತ್ತದೆ, ಕೊಳೆಯುತ್ತದೆ ಮತ್ತು ಕೆಲವೊಮ್ಮೆ ಉದುರುತ್ತದೆ. (ಹತ್ತಿ ಸಾರವನ್ನು ಹೀರುವಾಗ ಹರಡಿದ ಬ್ಯಾಕ್ಟೀರಿಯಾದ ಕಾರಣದಿಂದಾಗಿ). ಮತ್ತಷ್ಟು ಲಕ್ಷಣಗಳೆಂದರೆ ಸರಿಯಾಗಿ ಬೆಳೆಯದ, ಸರಿಯಾಗಿ ಹಣ್ಣಾಗಲು ವಿಫಲವಾಗುವ ಹಗುರ ಬೀಜಗಳು. ಅತೀ ಮುತ್ತುವಿಕೆ, ಸುಗ್ಗಿಯ ಗುಣಮಟ್ಟದಲ್ಲಿ ಹತ್ತಿ ಕಲೆಯಾಗಿರುವ ಕಾರಣದಿಂದಾಗಿ ತೀವ್ರವಾದ ನಷ್ಟವನ್ನು ಉಂಟುಮಾಡಬಹುದು. ಅದಕ್ಕಾಗಿಯೇ ಈ ಸಾಮಾನ್ಯ ಹೆಸರು ಕಾಟನ್ ಸ್ಟೈನರ್. ಬೆಂಡೆಕಾಯಿ ರೀತಿಯ ಇತರ ಆಶ್ರಯದಾತ ಸಸ್ಯಗಳನ್ನು ತಿನ್ನುವಾಗ, ಸಾಮಾನ್ಯ ರೋಗಲಕ್ಷಣಗಳೆಂದರೆ ಕಟುವಾದ ವಾಸನೆ ಮತ್ತು ಜಿಡ್ಡಿನ ಸ್ರಾವಗಳು.
ಆಫ್ರಿಕಾದಲ್ಲಿ, ಕೆಲವು ಜಾತಿಗಳ ಪರಾವಲಂಬಿ ಹುಳಗಳು, ತಿಗಣೆಗಳ ಮೇಲೆ ಕಂಡುಬರುತ್ತವೆ. ಅವುಗಳು ಜಡವಾಗುತ್ತವೆ ಮತ್ತು ಶೀಘ್ರವೇ ಸಾಯುತ್ತವೆ. ಕೆಲವು ಜೇಡಗಳು ಸಹ ಈ ಕೀಟವನ್ನು ಆಕ್ರಮಿಸುತ್ತವೆ. ದುರ್ಬಲ ಬೇವಿನ ಬೀಜದ ಎಣ್ಣೆ (5%), ಬೆವೆರಿಯಾ ಬಾಸ್ಸಿಯಾನಾ ಮತ್ತು ಮೆಟಾಹಾರ್ಜಿಯಾಮ್ ಅನಿಸೋಪ್ಲಿಯಂತಹ ಎಂಟೊಮೋಪಾಥೋಜೆನಿಕ್ ಶಿಲೀಂಧ್ರಗಳ ಎಲೆಗಳ ದ್ರವೌಷಧಗಳು ಕೀಟ ಸಂಖ್ಯೆಯ ನಿಯಂತ್ರಣದ ಮೇಲೆ ಸ್ವಲ್ಪ ಪರಿಣಾಮಗಳನ್ನು ತೋರಿಸಿವೆ.
ಲಭ್ಯವಿದ್ದರೆ, ತಡೆಗಟ್ಟುವ ಕ್ರಮಗಳ ಜೊತೆ, ಜೈವಿಕ ಚಿಕಿತ್ಸೆಗಳು ಇರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಕ್ಲೋರಿಪಿರಿಫೊಸ್, ಎಸ್ಫೆನ್ವಲರೇಟ್, ಬೈಫೆಂಥ್ರಿನ್, ಡೆಲ್ಟಾಮೆಥ್ರಿನ್, ಲಮಬ್ಡಾ -ಸೈಹಲೋಥ್ರಿನ್ ಅಥವಾ ಇಂಡೊಕ್ಸಾಕಾರ್ಬ್ ಒಳಗೊಂಡಿರುವ ಸೂತ್ರೀಕರಣಗಳ ಕೀಟನಾಶಕಗಳನ್ನು ಎಲೆಗಳಿಗೆ ಸಿಂಪಡಿಸುವುದರಿಂದ ಅದು ಗುಲಾಬಿ ಬೋಲ್ವರ್ಮ್ ವಿರುದ್ಧ ಕಾರ್ಯನಿರ್ವಹಿಸುವುದು ತಿಳಿದು ಬಂದಿದೆ. ಇದು ಡಸ್ಚೀ ಕಾಟನ್ ಸ್ಟೈನರ್ ಸಂಖ್ಯೆಯನ್ನು ಕಡಿಮೆ ಮಾಡುವುದು ಕಂಡುಬಂದಿದೆ. ಆದರೆ, ಈ ಕೀಟ ಸಾಮಾನ್ಯವಾಗಿ ಋತುವಿನ ಕೊನೆಯ ಭಾಗದಲ್ಲಿ ಆಕ್ರಮಣ ಮಾಡುವುದರಿಂದ, ರಾಸಾಯನಿಕ ನಿಯಂತ್ರಣಗಳು ಅನೇಕ ವೇಳೆ ಕಾರ್ಯಸಾಧ್ಯವಲ್ಲ. ಏಕೆಂದರೆ, ಇಳುವರಿಯ ಮೇಲೆ ಇದರ ಉಳಿಕೆಗಳು ಇರಬಹುದು. ಕೀಟನಾಶಕಗಳಿಗೆ ಪ್ರತಿರೋಧವೂ ಕಂಡುಬಂದಿದೆ.
ಡಸ್ಚೀ ಕಾಟನ್ ಸ್ಚೈನರ್, ಆಕ್ಸಿಕೆರೆನಸ್ ಹೈಲಿನಿಪೆನಿಸ್, ಎಂಬ ಪಾಲಿಫಾಗಸ್ ಕೀಟದಿಂದ ಹಾನಿ ಉಂಟಾಗುತ್ತದೆ. ಅದು ಹತ್ತಿಯ ತೀವ್ರವಾದ ಕೀಟವಾಗಿರಬಹುದು. ವಯಸ್ಕ ಕೀಟಗಳು 4-5 ಮಿಮೀ ಉದ್ದವನ್ನು ತಲುಪುತ್ತವೆ ಮತ್ತು ಪಾರದರ್ಶಕ ರೆಕ್ಕೆಗಳೊಂದಿಗೆ ಮಬ್ಬು ಕಂದು ಬಣ್ಣದಲ್ಲಿರುತ್ತವೆ. ಗಂಡುಗಳು ಹೆಣ್ಣು ಕೀಟಗಳಿಗಿಂತ ಚಿಕ್ಕದಾಗಿರುತ್ತವೆ. ತೆರೆದ ಬೀಜಕೋಶಗಳ ಲಿಂಟ್ ನಲ್ಲಿ, ಬೀಜಗಳ ಹತ್ತಿರ, ಬಿಳಿ ಹಳದಿ ಬಣ್ಣದ ಮೊಟ್ಟೆಗಳನ್ನು 4 ಸಂಖ್ಯೆವರೆಗಿನ ಗುಂಪುಗಳಲ್ಲಿ ಇರಿಸುತ್ತವೆ. ಮರಿಹುಳುಗಳು 2.5 ಮಿ.ಮೀ ಉದ್ದವಿರುತ್ತವೆ ಮತ್ತು ಅವುಗಳು ತಮ್ಮ ಬಣ್ಣವನ್ನು ತಮ್ಮ ಜೀವನ ಚಕ್ರದ ವಿಭಿನ್ನ ಹಂತಗಳಲ್ಲಿ ಗುಲಾಬಿಯಿಂದ ಕಂದು ಬಣ್ಣಕ್ಕೆ ಬದಲಾಯಿಸುತ್ತವೆ. ಈ ಜೀವನ ಚಕ್ರ ಒಟ್ಟು 40-50 ದಿನಗಳವರೆಗೆ ಇರುತ್ತದೆ. ಬಹುತೇಕ ಬೀಜಕೋಶಗಳು ಈಗಾಗಲೇ ತೆರೆದಿರುವಾಗ ಋತುವಿನ ಅಂತ್ಯದಲ್ಲಿ ಮುತ್ತುವಿಕೆ ಸಂಭವಿಸುತ್ತದೆ. ಮತ್ತಷ್ಟು ಆಶ್ರಯದಾತ ಸಸ್ಯಗಳೆಂದರೆ ಬೆಂಡೆಕಾಯಿ ಮತ್ತು ಮಾಲ್ವಾಸಿಯ ಕುಟುಂಬದ ಇತರ ಸಸ್ಯಗಳಾಗಿವೆ.