ಹತ್ತಿ

ಹತ್ತಿಯ ಎಲೆ ಸುರುಳಿ ರೋಗ

Syllepte derogata

ಕೀಟ

ಸಂಕ್ಷಿಪ್ತವಾಗಿ

  • ಲಾರ್ವಾಗಳು ಎಲೆಗಳನ್ನು ಸುತ್ತುತ್ತವೆ ಮತ್ತು ಎಲೆ ಅಂಚುಗಳನ್ನು ತಿನ್ನುತ್ತವೆ.
  • ಬಾಧಿತ ಎಲೆಗಳು ಸುರುಳಿಯಾಗುತ್ತದೆ ಮತ್ತು ಬಾಡುತ್ತವೆ.
  • ಇದು ಎಲೆ ಉದುರುವಿಕೆಗೆ ಕಾರಣವಾಗುತ್ತದೆ.
  • ಬೀಜಕೋಶದ ರಚನೆಯು ಕಳಪೆಯಾಗಬಹುದು ಮತ್ತು ಬೀಜಕೋಶಗಳು ಸಮಯಕ್ಕಿಂತ ಮೊದಲೇ ಮಾಗಬಹುದು.
  • ಭಾರಿ ಮುತ್ತುವಿಕೆ ಗಮನಾರ್ಹ ಇಳುವರಿ ನಷ್ಟಕ್ಕೆ ಕಾರಣವಾಗಬಹುದು.

ಇವುಗಳಲ್ಲಿ ಸಹ ಕಾಣಬಹುದು

5 ಬೆಳೆಗಳು
ಹತ್ತಿ
ಬದನೆ
ಮರಗೆಣಸು
ಬೆಂಡೆಕಾಯಿ
ಇನ್ನಷ್ಟು

ಹತ್ತಿ

ರೋಗಲಕ್ಷಣಗಳು

ಸಸ್ಯದ ಮೇಲಿನ ಭಾಗಗಳಲ್ಲಿ, ತುತ್ತೂರಿ ಆಕಾರದಲ್ಲಿ ಎಲೆಗಳು ಸುತ್ತಿಕೊಳ್ಳುವುದು ಆರಂಭಿಕ ಲಕ್ಷಣವಾಗಿದೆ. ಮರಿಹುಳುಗಳು ಒಳಗೆ ಇರುತ್ತವೆ ಮತ್ತು ಎಲೆಯ ಅಂಚುಗಳನ್ನು ಅಗಿಯುತ್ತವೆ. ಕ್ರಮೇಣ, ಸುತ್ತಿಕೊಂಡ ಎಲೆಗಳು ಸುರುಳಿಯಾಗುತ್ತವೆ ಮತ್ತು ಬಾಗುತ್ತವೆ ಮತ್ತು ಉದುರುತ್ತವೆ. ಇದು ಬೀಜಕೋಶಗಳು ಸಮಯಕ್ಕಿಂತ ಮೊದಲೇ ಮಾಗುವುದಕ್ಕೂ ಕಾರಣವಾಗುತ್ತದೆ. ಮೊಗ್ಗಿನ ರಚನೆ ಅಥವಾ ಹೂಬಿಡುವ ಹಂತದಲ್ಲಿ ದಾಳಿ ಸಂಭವಿಸಿದಲ್ಲಿ ಬೀಜಕೋಶಗಳ ರಚನೆ ಕಳೆಪಯಾಗುತ್ತದೆ. ಆದರೂ, ಸಾಮಾನ್ಯವಾಗಿ, ಭಾರೀ ಮುತ್ತುವಿಕೆ ವಿರಳವಾಗಿ ಸಂಭವಿಸುತ್ತದೆ. ಕೀಟಗಳ ಸಂಖ್ಯೆಯನ್ನು ನಿಯಂತ್ರಿಸದಿದ್ದರೆ ಇದು ಗಮನಾರ್ಹ ಇಳುವರಿ ನಷ್ಟಕ್ಕೆ ಕಾರಣವಾಗಬಹುದು. ಎಸ್. ಡರೋಗಟಾ ಬೆಂಡೆಕಾಯಿಯಲ್ಲೂ ಸಹ ಸಾಮಾನ್ಯ ಕೀಟವಾಗಿದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಮುತ್ತುವಿಕೆ ತಗ್ಗಿಸಲು ಪರಾವಲಂಬಿ ಜೀವಿಗಳು ಅಥವಾ ಇತರ ಪರಭಕ್ಷಕ ಕೀಟಗಳನ್ನು ಜೈವಿಕ ನಿಯಂತ್ರಣವಾಗಿ ಬಳಸಲಾಗುತ್ತದೆ. ಲಾರ್ವ ಪರಾವಲಂಬಿಯಾದ ಎರಡು ಜಾತಿಗಳು, ಅಪಾಂಟೆಲೀಸ್ ಸ್ಪೀಷೀಸ್, ಮತ್ತು ಮೆಸೊಕೋರಸ್ ಸ್ಪೀಷೀಸ್ ಹಾಗು 2 ಜಾತಿಯ ಕೋಶದ ಪರಾವಲಂಬಿಗಳು ಬ್ರಾಕಿಮೆರಿಯಾ ಸ್ಪೀಷೀಸ್ ಮತ್ತು ಕ್ಸಾಂಥೊಪಿಂಪ್ಲಾ ಸ್ಪೀಷೀಸ್ ಗಳನ್ನು ಹೊಲದ ಪ್ರಯೋಗಗಳಲ್ಲಿ ಯಶಸ್ವಿಯಾಗಿ ಬಳಸಲಾಗಿದೆ. ಕೀಟನಾಶಕಗಳ ಅಗತ್ಯವಿದ್ದರೆ, ಕೀಟಸಂಖ್ಯೆಯನ್ನು ಕಡಿಮೆ ಮಾಡಲು ಬಾಸಿಲಸ್ ತುರಿಂಜಿಯೆನ್ಸಿಸ್ (ಬಿಟಿ) ಹೊಂದಿರುವ ಸಿಂಪಡಣೆ ಉತ್ಪನ್ನಗಳನ್ನು ಬಳಸಿ

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಒಟ್ಟಾಗಿರುವ ಸಮಗ್ರ ವಿಧಾನವನ್ನು ಪರಿಗಣಿಸಿ. ಪೈರೆತ್ರಾಯಿಡ್, ಸೈಪರ್ಮೆಥ್ರಿನ್ ಮತ್ತು ಇಂಡೊಕ್ಸರ್ಕಾಬ್ (ಅಥವಾ ಈ ಸಕ್ರಿಯ ಪದಾರ್ಥಗಳ ಮಿಶ್ರಣವನ್ನು ಹೊಂದಿರುವ) ಕೀಟನಾಶಕಗಳನ್ನು ಹತ್ತಿಯ ಹೊಲಗಳಲ್ಲಿ ಸೋಂಕಿನ ಮಟ್ಟವನ್ನು ಕಡಿಮೆ ಮಾಡಲು ಬಳಸಲಾಗುತ್ತಿದ್ದು, ಸ್ವಲ್ಪ ಮಟ್ಟಿನಲ್ಲಿ ಯಶಸ್ಸು ದೊರೆತಿದೆ.

ಅದಕ್ಕೆ ಏನು ಕಾರಣ

ಹತ್ತಿಯ ಎಲೆ ಸುರುಳಿ ಕೀಟ, ಸಿಲೆಪ್ಟೆ ಡೆರೋಗಾಟಾದ ಲಾರ್ವಾಗಳ ಆಹಾರ ಸೇವನೆಯಿಂದಾಗಿ ಹಾನಿ ಉಂಟಾಗುತ್ತದೆ. ವಯಸ್ಕ ಪತಂಗಗಳು ಮಧ್ಯಮ ಗಾತ್ರದಲ್ಲಿದ್ದು, 25-30 ಮಿಮೀ ಅಗಲದ ರೆಕ್ಕೆಗಳನ್ನು ಹೊಂದಿರುತ್ತವೆ. ಅವು ಹಳದಿ-ಬಿಳಿ ಬಣ್ಣವನ್ನು ಹೊಂದಿದ್ದು, ತಲೆ ಮತ್ತು ಕುತ್ತಿಗೆಯಲ್ಲಿ ಹೊಳಪಿನ ವಿಶಿಷ್ಟ ಕಪ್ಪು ಮತ್ತು ಕಂದು ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತವೆ. ಗಾಢ-ಕಂದು ಬಣ್ಣದ ಅಲೆಗಳಂತಹ ರೇಖೆಗಳನ್ನು ಎರಡೂ ರೆಕ್ಕೆಗಳಲ್ಲೂ ನೋಡಬಹುದು. ಇದು ಸೂಕ್ಷ್ಮ ಮಾದರಿಗಳನ್ನು ರೂಪಿಸುತ್ತದೆ. ಹೆಣ್ಣು ಕೀಟಗಳು ಗಿಡಗಳ ಎಲೆಗಳ ಕೆಳಭಾಗದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಸಾಮಾನ್ಯವಾಗಿ ಸಸ್ಯದ ಮೇಲ್ಭಾಗದಲ್ಲಿರುವ ಎಳೆಯ ಎಲೆಗಳ ಮೇಲೆ. ಆರಂಭದಲ್ಲಿ ಎಲೆಗಳ ಕೆಳಭಾಗವನ್ನು ಎಳೆಯ ಲಾರ್ವಾಗಳನ್ನು ತಿನ್ನುತ್ತವೆ. ಆದರೆ ನಂತರ ಅವು ಸುತ್ತಿಕೊಂಡ ವಿಶಿಷ್ಟ ಎಲೆ ಸುರುಳಿಗಳನ್ನು ನಿರ್ಮಿಸಲು ಮೇಲಿನ ಭಾಗಕ್ಕೆ ತೆರಳುತ್ತವೆ. ಈ ಕೋಶಗಳಲ್ಲಿಯೇ ಲಾರ್ವಾಗಳು ಕೋಶಾವಸ್ಥೆಯನ್ನು ಕಳೆಯುತ್ತವೆ. ಲಾರ್ವಾವು 15 ಮಿಮೀ ಉದ್ದವಿರುತ್ತದೆ ಮತ್ತು ಕೊಳಕು ಹಸಿರು, ಅರೆಪಾರದರ್ಶಕ ಬಣ್ಣದಿಂದ ಕೂಡಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಎಸ್.
  • ಡೆರೋಗಟಾ ಪುನರಾವರ್ತಿತ ಸಮಸ್ಯೆಯಾಗಿದ್ದರೆ ನಿರೋಧಕ ಪ್ರಭೇದಗಳನ್ನು ನೆಡಿ.
  • ಅತ್ಯಧಿಕ ಕೀಟಸಂಖ್ಯೆಯನ್ನು ತಪ್ಪಿಸಲು ಋತುವಿನಲ್ಲಿ ತಡವಾಗಿ ನೆಡಿ.
  • ಉತ್ತಮ ರಸಗೊಬ್ಬರ ಯೋಜನೆಯೊಂದಿಗೆ ಆರೋಗ್ಯಕರ ಸಸ್ಯಗಳನ್ನು ಬೆಳೆಯಿರಿ.
  • ರೋಗ ಅಥವಾ ಕೀಟದ ಯಾವುದೇ ಚಿಹ್ನೆಗಾಗಿ ನಿಮ್ಮ ಸಸ್ಯಗಳು ಅಥವಾ ಜಾಗಗಳನ್ನು ಪರಿಶೀಲಿಸಿ.
  • ಮೊಟ್ಟೆ ಮುತ್ತಿಕೊಂಡಿರುವ ಎಲೆಗಳನ್ನು, ಸುತ್ತಿಕೊಂಡ ಎಲೆಗಳನ್ನು ಮತ್ತು ಮರಿಹುಳುಗಳನ್ನು ಆರಿಸಿ ತೆಗೆಯಿರಿ.
  • ಪತಂಗಗಳನ್ನು ಆಕರ್ಷಿಸಲು ಬಲೆಗಳನ್ನು ಬಳಸಿ.
  • ಕೀಟದ ನೈಸರ್ಗಿಕ ಶತ್ರುಗಳನ್ನು ನಾಶಮಾಡದಂತೆ ಕೀಟನಾಶಕ ಬಳಕೆಯನ್ನು ವಿವೇಚನೆಯಿಂದ ಮಾಡಿ.
  • ಮುತ್ತಿಕೊಂಡಿರುವ ಸಸ್ಯಗಳನ್ನು ಮತ್ತು ತ್ಯಾಜ್ಯವನ್ನು ತೆಗೆದುಹಾಕಿ ಅಥವಾ ಸುಟ್ಟುಹಾಕುವ ಮೂಲಕ ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ