ಸೋಯಾಬೀನ್

ಸೋಯಾಬೀನ್ ಗಿರ್ಡಲ್ ಬೀಟಲ್

Obereopsis brevis

ಕೀಟ

ಸಂಕ್ಷಿಪ್ತವಾಗಿ

  • ಶಾಖೆ ಅಥವಾ ಕಾಂಡದ ಮೇಲೆ ಎರಡು ವೃತ್ತಾಕಾರದ ರೀತಿಯಲ್ಲಿ ಕಡಿತ.
  • ಎಲೆಗಳು ಇಳಿ ಮುಖವಾಗುವುದು ಮತ್ತು ಒಣಗುವುದು.
  • ಎಳೆಯ ಸಸ್ಯಗಳು ಸೊರಗುವುದು ಮತ್ತು ಸಾವು.
  • ಜೀರುಂಡೆಗೆ ಹಳದಿ-ಕೆಂಪು ಬಣ್ಣದ ತಲೆ ಮತ್ತು ಎದೆ ಮತ್ತು ಕಂದು ಬಣ್ಣದ ರೆಕ್ಕೆ ಕವಚಗಳಿರುತ್ತವೆ.
  • ಲಾರ್ವಾಗಳು ಕಪ್ಪು ತಲೆಯೊಂದಿಗೆ ಬಿಳಿಯಾಗಿ ಕಾಣಿಸುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೋಯಾಬೀನ್

ರೋಗಲಕ್ಷಣಗಳು

ಸಸಿ ಹಂತದಲ್ಲಿ ರೋಗಲಕ್ಷಣಗಳು ಕಾಣಿಸುತ್ತವೆ ಮತ್ತು ಅವುಗಳನ್ನು ಸಸ್ಯದ ಶಾಖೆ ಅಥವಾ ಕಾಂಡದ ಮೇಲೆ ಎರಡು ವೃತ್ತಾಕಾರದ ಕಡಿತಗಳಿಂದ ಗುರುತಿಸಬಹುದು. ಸಸಿ ಮತ್ತು ಎಳೆಯ ಸಸ್ಯಗಳು ಒಣಗುತ್ತವೆ ಅಥವಾ ಸಾಯುತ್ತವೆ ಆದರೆ ಬೆಳೆದ ಸಸ್ಯಗಳ ಎಲೆಗಳು ಕೇವಲ ಬಾಡುತ್ತವೆ ಅಥವಾ ಕಂದು ಬಣ್ಣದ್ದಾಗಿರುತ್ತವೆ ಮತ್ತು ಎಲ್ಲವೂ ಒಣಗುತ್ತವೆ. ಪೀಡಿತ ಶಾಖೆಗಳಲ್ಲಿ ವೃತ್ತಾಕಾರದ ಉಂಗುರಗಳು ಕಂಡುಬರುತ್ತವೆ. ಕಡಿತದ ಮೇಲಿನ ಸೋಂಕಿತ ಭಾಗವು ಅಂತಿಮವಾಗಿ ಒಣಗುತ್ತದೆ. ನಂತರದ ಮುತ್ತಿಕೊಳ್ಳುವಿಕೆಯ ಹಂತದಲ್ಲಿ, ಸಸ್ಯವು ನೆಲದಿಂದ ಸುಮಾರು 15 - 25 ಸೆಂ.ಮೀ. ಮೇಲೆ ಮುರಿದು ಬೀಳುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಇಂದಿನವರೆಗೆ, ಯಾವುದೇ ಪರಿಣಾಮಕಾರಿ ಸಾವಯವ ಚಿಕಿತ್ಸೆ ಲಭ್ಯವಿಲ್ಲ. ಸೋಯಾಬೀನ್ ಗ್ರಿಡಲ್ ಜೀರುಂಡೆಯ ನಿಯಂತ್ರಣಕ್ಕೆ ಪರ್ಯಾಯ ಆಯ್ಕೆಗಳು ಮುಂಜಾಗ್ರತಾ ಮತ್ತು ಸೂಕ್ತ ಬೇಸಾಯ ಕ್ರಮಗಳ ಬಳಕೆಗೆ ಸೀಮಿತವಾಗಿವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಹಾನಿ 5% ನ ಆರ್ಥಿಕ ಮಿತಿಯನ್ನು ಮೀರಿದರೆ, ಗಿರ್ಡಲ್ ಜೀರುಂಡೆಯು ಮೊಟ್ಟೆಗಳನ್ನು ಇಡದಂತೆ ತಪ್ಪಿಸಲು ನೀವು NSKE 5% ಅಥವಾ 1 ಮಿಲಿ / 1 ಲೀ ನೀರಿನಷ್ಟು ಅಜಾಡಿರಾಕ್ಟಿನ್ 10000 ಪಿಪಿಎಂ ಅನ್ನು ಬಳಸಬಹುದು. ಹರಳಿನ ರೀತಿಯ ಕಾರ್ಟಪ್ ಹೈಡ್ರೋಕ್ಲೋರೈಡ್ ಅನ್ನು ಎಕರೆಗೆ 4 ಕೆಜಿಯಷ್ಟು ಬಿತ್ತನೆ ಸಮಯದಲ್ಲಿ ಹರಡಬಹುದು. ಬಿತ್ತನೆ ಮಾಡಿದ 30 - 35 ದಿನಗಳಲ್ಲಿ ಪ್ರತಿ ಲೀಟರ್ ನೀರಿಗೆ 10 ಮಿಲಿಯಷ್ಟು ಲ್ಯಾಂಬ್ಡಾ-ಸಿಹಲೋಥ್ರಿನ್ 5 ಇಸಿ ಅಥವಾ 2 ಮಿಲಿಯಷ್ಟು ಡೈಮೆಥೊಯೇಟ್ 25 ಇಸಿ ಅನ್ನು ಸಿಂಪಡಿಸಿ ಮತ್ತು ಮೊದಲ ಸಿಂಪಡಣೆಯ 15 - 20 ದಿನಗಳ ನಂತರ ಮುತ್ತಿಕೊಳ್ಳುವಿಕೆಯನ್ನು ಗಮನಿಸಿದರೆ ಆ ಕಾರ್ಯವಿಧಾನವನ್ನು ಪುನರಾವರ್ತಿಸಿ. ಸಸ್ಯಕ ಹಂತದಲ್ಲಿ ಅಥವಾ ಹೂಬಿಡುವ ಹಂತದಲ್ಲಿ 150 ಮಿಲಿ / ಹೆಕ್ಟೇರ್ನಷ್ಟು ಕ್ಲೋರಾಂಟ್ರಾನಿಲಿಪ್ರೊಲ್ 18.5% ಎಸ್‌ಸಿ, ಪ್ರೊಫೆನೋಫೋಸ್ ಮತ್ತು ಟ್ರೈಜೋಫೋಸ್ ಅನ್ನು ಸಹ ಸೂಚಿಸಲಾಗುತ್ತದೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಹೆಚ್ಚಾಗಿ ಒಬೆರಾಪ್ಸಿಸ್ ಬ್ರೀವಿಸ್‌ನ ಬಿಳಿ, ಮೃದುವಾದ ಮೈ ಇರುವ, ಗಾಢ ಬಣ್ಣದ ತಲೆಯ ಲಾರ್ವಾಗಳಿಂದ ಉಂಟಾಗುತ್ತವೆ. ವಯಸ್ಕ ಜೀರುಂಡೆಯನ್ನು ಅದರ ಹಳದಿ-ಕೆಂಪು ತಲೆ ಮತ್ತು ಎದೆಯ ಬಣ್ಣ ಮತ್ತು ಎಲ್ಟ್ರಾ (ರೆಕ್ಕೆ ಕವಚ) ನ ಕಂದು ಬಣ್ಣದ ತಳಗಳಿಂದ ನಿರೂಪಿಸಲಾಗಿದೆ. ಮೊಟ್ಟೆಗಳನ್ನು ಹೆಣ್ಣು ಕೀಟಗಳು ನಡುಗೆಣ್ಣುಗಳ ನಡುವೆ ಇಡುತ್ತವೆ. ಲಾರ್ವಾಗಳು ಕಾಂಡದೊಳಗೆ ಕೊರೆದುಕೊಂಡು ಹೋಗಿ ಒಳಭಾಗದಲ್ಲಿ ಆಹಾರವನ್ನು ತಿನ್ನುತ್ತವೆ, ಈ ರೀತಿಯಾಗಿ ಕಾಂಡದಲ್ಲಿ ಸುರಂಗವನ್ನು ರೂಪಿಸುತ್ತವೆ. ಕತ್ತರಿಸಿದ ಭಾಗದ ಮೇಲಿನ ಭಾಗವು ಸಾಕಷ್ಟು ಪೌಷ್ಠಿಕಾಂಶವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ಒಣಗುತ್ತದೆ. ತೀವ್ರ ಇಳುವರಿ ನಷ್ಟಗಳು ಸಂಭವಿಸುತ್ತವೆ. ಜೀರುಂಡೆಗೆ ಸೂಕ್ತವಾದ ಹವಾಮಾನ ಪರಿಸ್ಥಿತಿಗಳೆಂದರೆ 24 - 31 °C ಮತ್ತು ಹೆಚ್ಚಿನ ಸಾಪೇಕ್ಷ ಆರ್ದ್ರತೆಯ ನಡುವಿನ ತಾಪಮಾನ.


ಮುಂಜಾಗ್ರತಾ ಕ್ರಮಗಳು

  • NRC-12 ಅಥವಾ NRC-7 ನಂತಹ ಸಹಿಷ್ಣು ಪ್ರಭೇದಗಳನ್ನು ಬಳಸಿ.
  • ಬಿತ್ತನೆ ಮಾಡುವಾಗ ಸರಿಯಾದ ಸಮಯದಲ್ಲಿ (ಅಂದರೆ ಮಳೆಗಾಲದ ಪ್ರಾರಂಭದಲ್ಲಿ) ಬೀಜಗಳನ್ನು ಸಮವಾಗಿ ಹರಡಿ.
  • ಸಾರಜನಕ ಗೊಬ್ಬರದ ಅತಿಯಾದ ಬಳಕೆಯನ್ನು ಮಾಡಬೇಡಿ.
  • ಪ್ರತಿ 10 ದಿನಗಳಿಗೊಮ್ಮೆ ಸೋಂಕಿತ ಸಸ್ಯ ಭಾಗಗಳನ್ನು ಸಂಗ್ರಹಿಸಿ ನಾಶಮಾಡಿ.
  • ಸುಗ್ಗಿಯ ನಂತರ, ಬೆಳೆ ಉಳಿಕೆಗಳನ್ನು ನಾಶಮಾಡಿ.
  • ಬೆಳೆ ಸರದಿಯನ್ನು ಶಿಫಾರಸು ಮಾಡಲಾಗಿದೆ, ಆದರೆ ಮೆಕ್ಕೆಜೋಳ ಅಥವಾ ಹುಲ್ಲುಜೋಳದೊಂದಿಗೆ ಅಂತರ ಬೆಳೆಯನ್ನು ತಪ್ಪಿಸಿ.
  • ಬೇಸಿಗೆಯ ತಿಂಗಳುಗಳಲ್ಲಿ ಆಳವಾದ ಉಳುಮೆ ಮಾಡುವ ಮೂಲಕ ಮುಂದಿನ ಋತುವಿಗೆ ಮಣ್ಣನ್ನು ತಯಾರಿಸಿ.
  • ಶೈಂಚವನ್ನು ಬಲೆ ಬೆಳೆಯಾಗಿ ಬೆಳೆಸಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ