ಸೋಯಾಬೀನ್

ಸೋಯಾಬೀನ್ ಕಾಂಡ ಕೊರಕ

Melanagromyza sojae

ಕೀಟ

ಸಂಕ್ಷಿಪ್ತವಾಗಿ

  • ಮೃದುವಾದ, ಕೆಂಪು-ಕಂದು ಬಣ್ಣದ ಕೊಳೆಯುತ್ತಿರುವ ಕಾಂಡದ ಅಂಗಾಂಶಗಳು ಕಾಣುವುದು.
  • ಅತೀ ಸಣ್ಣದಾದ ಅಂಡಪ್ರಸವದ ಕೀಟ ತಿಂದುಬಿಟ್ಟಿರುವ ತೂತುಗಳು.
  • ಕುಂಠಿತ ಬೆಳವಣಿಗೆ.
  • ಸಣ್ಣ ಕಪ್ಪು ನೊಣಗಳ ಸಂಭವ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೋಯಾಬೀನ್

ರೋಗಲಕ್ಷಣಗಳು

ಹಾನಿಯನ್ನು ಕಾಂಡದ ಅಂಗಾಂಶಗಳ ಕೊಳೆತದಿಂದ ನಿರೂಪಿಸಬಹುದು. ಅವು ಮೃದುವಾಗಿ ಕೆಂಪು-ಕಂದು ಬಣ್ಣದಲ್ಲಿರುತ್ತವೆ. ಎಲೆಗಳ ಲ್ಯಾಮಿನಾದ ತಳದಲ್ಲಿ ಅತೀಸಣ್ಣದಾದ ಅಂಡಪ್ರಸವದ ಕೀಟ ತಿಂದುಬಿಟ್ಟಿರುವ ತೂತುಗಳ ಮೂಲಕ ಮಾತ್ರ ಬಾಹ್ಯ ಲಕ್ಷಣಗಳು ಕಂಡುಬರುತ್ತವೆ. 5 - 8 ಸೆಂ.ಮೀ ಎತ್ತರದ ಸಸ್ಯಗಳಿಗೆ ಸೋಂಕಾಗುತ್ತದೆ. ಕಾಂಡದ ವ್ಯಾಸವು ಕಡಿಮೆಯಾಗಬಹುದು ಹಾಗೆಯೇ ಸಸ್ಯದ ಎತ್ತರ (ಕುಬ್ಜತೆ). ಉತ್ಪಾದಕ ಹಂತದಲ್ಲಿ ಸೋಂಕಾದಾಗ, ಬೀಜಕೋಶಗಳು ಕಡಿಮೆಯಾಗುವುದರಿಂದ ಹಣ್ಣಿನ ನಷ್ಟವಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಎಮ್. ಸೊಜೆಯಲ್ಲಿ ಹೆಚ್ಚಿನ ಸಂಖ್ಯೆಯ ಪರಭಕ್ಷಕ ಮತ್ತು ಇತರ ನೈಸರ್ಗಿಕ ಶತ್ರುಗಳಿವೆ, ಇದು ಅದರ ಹರಡುವಿಕೆಯನ್ನು ನಿಯಂತ್ರಿಸಲು ಸಾಮಾನ್ಯವಾಗಿ ಸಾಕಾಗುತ್ತದೆ. ಸೈನಿಪೊಯಿಡಿಯಾ ಜಾತಿ, ಸ್ಪೆಗಿಗಾಸ್ಟರ್ ಜಾತಿ, ಯೂರಿಟೋಮಾ ಮೆಲನಾಗ್ರೊಮೈಜಾ, ಸಿಂಟೊಮೊಪಸ್ ಕ್ಯಾರಿನಾಟಸ್, ಮತ್ತು ಅನ್ಯೂರೋಪ್ರಿಯಾ ಕೈರಾಲಿ ಮುಂತಾದ ಪರಾವಲಂಬಿ ಕಣಜಗಳು ಸ್ಪೆಗಿಗಾಸ್ಟರ್ ಜಾತಿಯಲ್ಲಿ 3% ರಷ್ಟು, ಇ. ಮೆಲನಾಗ್ರೊಮೈಜಾದಲ್ಲಿ 20% ನಷ್ಟು ನಿಯಂತ್ರಿಸುತ್ತದೆ. ಸೈನಿಪೋಡಿಯಾ ಜಾತಿ ಮತ್ತು ಇ. ಮೆಲನಾಗ್ರೊಮಿಜಾವನ್ನು ಸಂಯೋಜಿತ ಕೀಟ ನಿರ್ವಹಣಾ ವಿಧಾನಗಳಲ್ಲಿ ಬಳಸಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಮಣ್ಣಿನ ಸಂಸ್ಕರಣೆಯ ರೀತಿಯಲ್ಲಿ ಬಿತ್ತನೆ ಮಾಡುವಾಗ ಅಥವಾ ಮೊಳಕೆಯೊಡೆದ ತಕ್ಷಣ ಲ್ಯಾಂಬ್ಡಾ-ಸಿಹಲೋಥ್ರಿನ್ 4.9% ಸಿಎಸ್, ಥಿಯಾಮೆಥೊಕ್ಸಮ್ 12.6% ಝೆಡ್‌ಸಿ ಮತ್ತು ಲ್ಯಾಂಬ್ಡಾ-ಸಿಹಲೋಥ್ರಿನ್ 9.5% ಝೆಡ್‌ಸಿ ಅಥವಾ ಇಂಡೊಕ್ಸಾಕಾರ್ಬ್ 15.8% ಇಸಿ ಯೊಂದಿಗೆ ಎಲೆಗಳನ್ನು ಸಿಂಪಡಿಸುವ ಮೂಲಕ ಕ್ರಮಗಳನ್ನು ಕಾರ್ಯಗತಗೊಳಿಸುವುದು ಮುಖ್ಯವಾಗಿದೆ.

ಅದಕ್ಕೆ ಏನು ಕಾರಣ

ಸೋಯಾಬೀನ್ ಕಾಂಡ ಕೊರಕದ ಲಾರ್ವಾಗಳಾದ ಮೆಲನಾಗ್ರೊಮಿಜಾ ಸೊಜೆಯದಿಂದ ಈ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ. ಪ್ರೌಢ ಕೀಟಗಳನ್ನು ಸಣ್ಣ ಕಪ್ಪು ನೊಣಗಳಾಗಿ ನಿರೂಪಿಸಲಾಗಿದೆ. ಹೆಣ್ಣು ಕಾಂಡ ಕೊರಕಗಳು ಸಸ್ಯದ ಅಂಗಾಂಶಗಳ ಬಳಿಯಿರುವ ಮಣ್ಣಿನಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಲಾರ್ವಾ ಮೊಟ್ಟೆಯೊಡೆದ ನಂತರ, ಅದು ಕಾಂಡದೊಳಗೆ ಕೊರೆದುಕೊಂಡು ಹೋಗುತ್ತದೆ ಮತ್ತು ಮೇಲ್ಭಾಗಕ್ಕೆ ಅಥವಾ ಬೇರಿನ ಬಳಿ ಕೆಳಭಾಗಕ್ಕೆ ತಿನ್ನುತ್ತಾ ಹೋಗುತ್ತದೆ. ಈ ಚಲನೆಯ ಕಾರಣದಿಂದ ಮೇಲ್ಭಾಗವು ಸೊರಗಬಹುದು. ನಂತರದ ಹಂತದಲ್ಲಿ, ಬೆಳೆದ ಲಾರ್ವಾಗಳು ಕಾಂಡದಲ್ಲಿಯೇ ಉಳಿಯುತ್ತದೆ, ರಂಧ್ರವನ್ನು ಹಿಕ್ಕೆಗಳಿಂದ ತುಂಬಿಸುತ್ತದೆ ಮತ್ತು ಅದು ಮಾಡಿದ ರಂಧ್ರದ ಬಳಿ ಕೋಶಾವಸ್ಥೆಗೆ ಹೋಗುತ್ತದೆ. ಕಾಂಡವನ್ನು ಕತ್ತರಿಸಿ ತೆರೆದಾಗ, ಅವು ತಿಂದು ಮಾಡಿದ ಸುರಂಗಗಳು ಗೋಚರಿಸುತ್ತವೆ. 2 ಮತ್ತು 3 ನೇ ತಲೆಮಾರಿನ ಕೀಟಗಳು ಹೆಚ್ಚಿನ ಹಾನಿ ಉಂಟುಮಾಡುತ್ತವೆ ಎಂದು ಗಮನಿಸಲಾಗಿದೆ. ಎಂ. ಸೊಜೆ ಆತಿಥೇಯ ಸಸ್ಯಗಳನ್ನು ಅಪರೂಪವಾಗಿ ಹಾಳುಮಾಡುತ್ತವೆ ಆದರೆ ಆರ್ಥಿಕ ಇಳುವರಿ ನಷ್ಟಕ್ಕೆ ಕಾರಣವಾಗಬಹುದು. ಎಷ್ಟು ತಡವಾಗಿ ಸೋಂಕು ತಗುಲುತ್ತದೋ, ಇಳುವರಿ ನಷ್ಟವು ಅಷ್ಟೇ ಕಡಿಮೆಯಾಗುತ್ತದೆ. ಎಮ್. ಸೋಜೆಗಿಂತ ಮೊದಲು ಒಫಿಯೋಮಿಯಾ ಫಾಸೋಲಿ ತೀವ್ರ ಹಾನಿಯನ್ನುಂಟುಮಾಡುತ್ತದೆ ಎಂದು ವರದಿಯಾಗಿದೆ, ಇದು ಹಾನಿಯನ್ನು ಎಂ. ಸೊಜೆಗೆ 100% ಲಿಂಕ್ ಮಾಡಲಾಗುವುದಿಲ್ಲ ಎಂದು ಸೂಚಿಸುತ್ತದೆ. ಸೋಯಾಬೀನ್ ಕಾಂಡ ಕೊರೆಕವು ವೈವಿಧ್ಯಮಯ ಪರಿಸರ-ಹವಾಮಾನ ವಲಯಗಳಲ್ಲಿ ಪತ್ತೆಯಾಗಿದೆ ಮತ್ತು ವಿವಿಧ ದ್ವಿದಳ ಧಾನ್ಯ / ಕಾಳಿನ ಪ್ರಭೇದಗಳ ಮೇಲೆ ಆಕ್ರಮಣ ಮಾಡುತ್ತಿದೆ.


ಮುಂಜಾಗ್ರತಾ ಕ್ರಮಗಳು

  • ಸಹಿಷ್ಣು ಪ್ರಭೇದಗಳನ್ನು ಬಳಸಿ, ಉದಾಹರಣೆಗೆ, ತಮಿಳುನಾಡಿನಲ್ಲಿ CO-1, ಅಥವಾ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ NRC 7, NRC 37.
  • ಎಂ.
  • ಸೊಜೆಯ ಸಣ್ಣ ಮತ್ತು ಕಪ್ಪು ವಯಸ್ಕ ಕೀಟಗಳಿಗೆ ನಿಮ್ಮ ಹೊಲವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.
  • ಕೀಟದಿಂದ ಉಂಟಾಗಿರುವ ಸುರಂಗಗಳಿಗಾಗಿ ಕಾಂಡಗಳನ್ನು ಪರಿಶೀಲಿಸಿ.
  • ಬೆಳೆ ಸರದಿಯನ್ನು ಶಿಫಾರಸು ಮಾಡಲಾಗಿದೆ.
  • ಸುಗ್ಗಿಯ ನಂತರ, ಮುಂದಿನ ಋತುವಿಗೆ ಮಣ್ಣನ್ನು ಸಮರ್ಪಕವಾಗಿ ತಯಾರಿಸಿ ಮತ್ತು ತಡವಾಗಿ ನೆಡುವುದನ್ನು ತಪ್ಪಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ