Dysdercus cingulatus
ಕೀಟ
ವಯಸ್ಕ ಮತ್ತು ಸಣ್ಣ ಮರಿಹುಳುಗಳು ಹೂವಿನ ಮೊಗ್ಗುಗಳು ಮತ್ತು ಮುಚ್ಚಿದ ಅಥವಾ ಭಾಗಶಃ ತೆರೆದ ಹತ್ತಿ ಬೀಜಕೋಶಗಳನ್ನು ತಿನ್ನುತ್ತವೆ. ಅವು ನಾರುಗಳ ಮೂಲಕ ಕೊರೆದು ಬೀಜಗಳನ್ನು ತಿನ್ನುತ್ತವೆ. ಹಾನಿಗೊಳಗಾದ ಅಂಗಾಂಶಗಳನ್ನು ಸೂಕ್ಷ್ಮಾಣುಜೀವಿಗಳು ಆಕ್ರಮಿಸುತ್ತವೆ ಮತ್ತು ಇದು ಬೀಜದ ಕೊಳೆತ ಮತ್ತು ಬಣ್ಣ ಕಳೆದುಕೊಳ್ಳುವಿಕೆಗೆ ಕಾರಣವಾಗುತ್ತದೆ. ಬೀಜಕೋಶಗಳ ಸಾವು, ಅಕಾಲಿಕ ತರೆಯುವಿಕೆ ಮತ್ತು ಬೇಗನೆ ಉದುರುವುದು ಸಾಮಾನ್ಯವಾಗಿರುತ್ತದೆ. ಮತ್ತಷ್ಟು ರೋಗಲಕ್ಷಣಗಳೆಂದರೆ ಕಡಿಮೆ ತೈಲ ಅಂಶದೊಂದಿಗೆ ಸಣ್ಣ ಬೀಜಗಳು, ಕಲೆಯಾದ ನಾರುಗಳು ಮತ್ತು ಕಡಿಮೆ ಮೊಳಕೆ ದರ. ಈ ಬೀಜಗಳು ಬಿತ್ತನೆಗಾಗಿ ಯೋಗ್ಯವಾಗಿರುವುದಿಲ್ಲ. ಡಿ. ಸಿಂಗಲುಟಸ್ ಒಂದೇ ಸಸ್ಯಕ್ಕೆ ಸೀಮಿತವಲ್ಲ ಮತ್ತು ಅದು ಇತರ ಎಳೆಯ ಬೀಜಗಳಿಗೆ ವಲಸೆ ಹೋಗಬಹುದು. ಹೆಚ್ಚು ಮುತ್ತುವಿಕೆ ಕಲೆಯಾದ ಲಿಂಟ್ ಕಾರಣದಿಂದಾಗಿ ತೀವ್ರವಾದ ನಷ್ಟವನ್ನು ಉಂಟುಮಾಡಬಹುದು.
ದುರ್ಬಲ ಬೇವಿನ ಬೀಜದ ಎಣ್ಣೆ ಹೊಂದಿರುವ ಎಲೆಗಳ ದ್ರವೌಷಧಗಳು ಈ ಕೀಟದ ವಿರುದ್ಧ ಪರಿಣಾಮಕಾರಿ ಎಂದು ಕಂಡುಬಂದಿದೆ.
ಲಭ್ಯವಿದ್ದರೆ , ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಇರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಕ್ಲೋರಿಪಿರಿಫೊಸ್, ಎಸ್ಫೆನ್ವಲರೆಟ್ ಅಥವಾ ಇಂಡೊಕ್ಸಾಕಾರ್ಬ್ ಗಳನ್ನು ಹೊಂದಿರುವ ಎಲೆ ಕೀಟನಾಶಕ ಸಂಯುಕ್ತಗಳು ಗುಲಾಬಿ ಬೊಲ್ವರ್ಮ್ ವಿರುದ್ಧ ಕೆಲಸ ಮಾಡುತ್ತವೆ. ಮತ್ತು ಇವು ಕೆಂಪು ಹತ್ತಿ ತಿಗಣೆ ಸಂಖ್ಯೆಯನ್ನು ಕಡಿಮೆ ಮಾಡುವುದು ಕಂಡುಬಂದಿದೆ. ಆದರೂ, ಕೊನೆಯಲ್ಲಿ ಮುತ್ತುವಿಕೆ ಸಂಭವಿಸಿದರೆ, ರಾಸಾಯನಿಕ ನಿಯಂತ್ರಣ ಅನೇಕ ವೇಳೆ ಕಾರ್ಯಸಾಧ್ಯವಲ್ಲ. ಏಕೆಂದರೆ ಕೊಯ್ಲಿನ ಸಮಯದಲ್ಲಿ ಅವಶೇಷಗಳು ಇನ್ನೂ ಉಳಿದುಕೊಂಡಿರುತ್ತವೆ.
ಡಿಸ್ಡೆರ್ಕಸ್ ಸಿಂಗ್ಯುಲಟಸ್ ನ ಮರಿಹುಳು ಮತ್ತು ವಯಸ್ಕ ಹುಳುಗಳು ಹಾನಿ ಉಂಟು ಮಾಡುತ್ತವೆ. ವಯಸ್ಕ ಕೀಟಗಳು 12-13 ಮಿಮೀ ಉದ್ದವನ್ನು ತಲುಪಬಹುದು ಮತ್ತು ಒಂದು ವಿಶಿಷ್ಟವಾದ ಕೆಂಪು-ಕಿತ್ತಳೆ ಬಣ್ಣ ಹೊಂದಿರುತ್ತವೆ. ತಲೆ ಬಿಳಿ ಬಣ್ಣದ್ದಾಗಿದ್ದು ಕೆಂಪು ಕಾಲರ್ ಇರುತ್ತದೆ. ಹೊಟ್ಟೆ ಕಪ್ಪಾಗಿರುತ್ತದೆ ಮತ್ತು ಮುಂದಿನ ರೆಕ್ಕೆಗಳ ಮೇಲೆ ಎರಡು ಕಪ್ಪು ಚುಕ್ಕೆಗಳಿರುತ್ತವೆ. ಗಂಡು ಹೆಣ್ಣಿಗಿಂತ ಚಿಕ್ಕದಾಗಿರುತ್ತದೆ. ಹೆಣ್ಣುಗಳು ಆಶ್ರಯದಾತ ಸಸ್ಯಗಳ ಸಮೀಪ ಮಣ್ಣಿನಲ್ಲಿ ಒಮ್ಮೆಗೆ 130 ಹಳದಿ ಮೊಟ್ಟೆಗಳನ್ನು ಇಡಬಹುದು. 7-8 ದಿನಗಳ ಕಾವಿನ ಅವಧಿಯ ನಂತರ, ಮರಿಹುಳುಗಳು ಹೊರಬಂದು, ಹತ್ತಿ ಸಸ್ಯಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಅವು ಕೆಂಪು ಬಣ್ಣದ್ದಾಗಿರುತ್ತವೆ ಮತ್ತು ಹೊಟ್ಟೆಯ ಮೇಲೆ ಮೂರು ಕಪ್ಪು ಚುಕ್ಕೆಗಳನ್ನು ಮತ್ತು ಮೂರು ಜೋಡಿ ಬಿಳಿ ಚುಕ್ಕೆಗಳನ್ನು ಹೊಂದಿರುತ್ತವೆ. ಹವಾಮಾನವನ್ನು ಆಧರಿಸಿ ಈ ಅವಧಿಯು ಒಟ್ಟು 50-90 ದಿನಗಳವರೆಗೆ ಇರುತ್ತದೆ. ಮೊದಲ ಬೀಜಕೋಶಗಳು ತೆರೆಯುವಾಗ ಋತುಮಾನದ ಕೊನೆಯಲ್ಲಿ ಮುತ್ತುವಿಕೆ ಸಂಭವಿಸುತ್ತದೆ. ಪರ್ಯಾಯ ಆಶ್ರಯದಾತ ಸಸ್ಯಗಳೆಂದರೆ ಬೆಂಡೆಕಾಯಿ, ದಾಸವಾಳ ಮತ್ತು ಸಿಟ್ರಸ್.