Spodoptera littoralis
ಕೀಟ
ಲಾರ್ವಾಗಳು ಜಾಸ್ತಿ ತಿಂದು ಗಮನಾರ್ಹ ಹಾನಿಯನ್ನುಂಟುಮಾಡುತ್ತವೆ. ಹೆಚ್ಚಾಗಿ ಸಸ್ಯಗಳನ್ನು ಸಂಪೂರ್ಣವಾಗಿ ತರಿದು ಹಾಕುತ್ತವೆ. ಅವು ಎಳೆಯ, ನವಿರಾದ ಎಲೆಗಳಿಗೆ ಆದ್ಯತೆ ನೀಡುತ್ತವಾದರೂ, ಬೆಳೆಯುವ ಭಾಗಗಳು, ಎಳೆಯ ಚಿಗುರುಗಳು, ಕಾಂಡಗಳು, ಮೊಗ್ಗುಗಳು, ಹಣ್ಣುಗಳು ಮತ್ತು ಎಲ್ಲಾ ಸಸ್ಯ ಭಾಗಗಳನ್ನು ತಿನ್ನುತ್ತವೆ. ಲಾರ್ವಾಗಳು ಕಾಂಡಗಳೊಳಗೆ ಅಗಿಯುತ್ತವೆ ಮತ್ತು ತೂತುಗಳನ್ನು ಮಾಡಿ ಇತರ ರೋಗಗಳನ್ನು ಒಳಗೆ ಬಿಡುತ್ತವೆ. ಲಾರ್ವಾಗಳು ಎಳೆಯ ಸಸ್ಯವನ್ನು ಹೆಚ್ಚು ತಿನ್ನುತ್ತಿದ್ದರೆ, ಸಸ್ಯದ ಬೆಳವಣಿಗೆಯು ಕುಂಠಿತವಾಗುತ್ತದೆ ಮತ್ತು ಅದು ಸಣ್ಣ ಹಣ್ಣುಗಳನ್ನು ಅಥವಾ ತಡವಾಗಿ ಹಣ್ಣುಗಳನ್ನು ನೀಡುತ್ತವೆ.
ತಡೆಗಟ್ಟುವಿಕೆಯಿಂದ ಪ್ರಾರಂಭವಾಗುವಂತಹ ಸರಿಯಾದ ಸಮಗ್ರ ಕೀಟ ನಿರ್ವಹಣೆ ಬಹಳ ಮುಖ್ಯ. ಪತ್ತೆಹಚ್ಚುವಿಕೆಗಾಗಿ ಫೆರೋಮೋನ್ ಬಲೆಗಳ ಬಳಕೆ ಮತ್ತು ಸಾಮೂಹಿಕವಾಗಿ ಹಿಡಿಯುವುದು ಮತ್ತು ಸಂಯೋಗಕ್ಕೆ ಅಡ್ಡಿ ಪಡಿಸುವುದು ಬಹಳ ಮುಖ್ಯ.
ಈ ಕೀಟವು ಅನೇಕ ರಾಸಾಯನಿಕ ಸಂಯುಕ್ತಗಳಿಗೆ ನಿರೋಧಕವಾಗಿದೆ. ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ.
ಚಳಿಗಾಲದಲ್ಲಿ ಕೆಲವು ಬಾರಿ ಮಂಜು ಬೀಳುವ ಪ್ರದೇಶಗಳಲ್ಲಿ ಇದು ಸಾಮಾನ್ಯವಾಗಿದೆ. ಮೊಟ್ಟೆ ಮತ್ತು ಲಾರ್ವಾ ಎರಡೂ ಕೂಡ ನೆಡು ವಸ್ತು ಅಥವಾ ಸಸಿಗಳ ಮೂಲಕ ಹೊಲದೊಳಗೆ ಸೇರಬಹುದು. ವಯಸ್ಕ ಕೀಟವು ಚಿಕ್ಕ ದ್ರಾಕ್ಷಿಯ ಗಾತ್ರವನ್ನು ಹೊಂದಿರುತ್ತದೆ. ಇದರ ರೆಕ್ಕೆಗಳು ಬೂದು-ಕಂದು ಬಣ್ಣದಲ್ಲಿದ್ದು ಬಿಳಿ ರೇಖೆಗಳಿರುತ್ತವೆ. ಹೆಣ್ಣು ಪತಂಗಗಳು ತಮ್ಮ ಮೊಟ್ಟೆಯ ರಾಶಿಯನ್ನು (20 ರಿಂದ 1,000 ಮೊಟ್ಟೆಗಳು) ಎಳೆಯ ಎಲೆಗಳ ಕೆಳಗಿನ ಮೇಲ್ಮೈಯಲ್ಲಿ ಅಥವಾ ಸಸ್ಯದ ಮೇಲಿನ ಭಾಗಗಳಲ್ಲಿ ಇಡುತ್ತವೆ: ಮೊಟ್ಟೆಗಳು ಬಿಳಿ-ಹಳದಿ ಬಣ್ಣದಲ್ಲಿದ್ದು, ಹೆಣ್ಣಿನ ಹೊಟ್ಟೆಯ ಕೂದಲಿನಂತಹ ಹೆಕ್ಕಳೆಗಳಿಂದ ಆವೃತವಾಗಿರುತ್ತವೆ. ಲಾರ್ವಾಗಳು ಸುಮಾರು ಹೆಬ್ಬೆರಳಿನ ಗಾತ್ರದವರೆಗೆ ಬೆಳೆಯುತ್ತವೆ, ಕೂದಲುರಹಿತವಾಗಿರುತ್ತವೆ ಮತ್ತು ಬಣ್ಣ ಬದಲಾಗುತ್ತಿರುತ್ತದೆ (ಕಡು ಬೂದು ಬಣ್ಣದಿಂದ ಕಡು ಹಸಿರು, ನಂತರದ ಹಂತಗಳಲ್ಲಿ ಕೆಂಪು-ಕಂದು ಅಥವಾ ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತದೆ).