Plutella xylostella
ಕೀಟ
ಈ ಪತಂಗವನ್ನು ನಿರುಪದ್ರವಿಯೆಂದು ಪರಿಗಣಿಸಲಾಗಿದೆ. ಆದರೆ ಕೀಟಗಳು ನಿಬಿಡವಾಗಿದ್ದರೆ ಬ್ರಾಸಿಕಾ ಜಾತಿಯ ಬೆಳೆಗೆ ತೊಂದರೆ ಉಂಟಾಗಬಹುದು. ಎಲೆಯ ಕೆಳ ಮೇಲ್ಮೈಯನ್ನು ಕೆರೆಯುವ ಅಥವಾ ಎಲೆಯ ಅಂಗಾಂಶವನ್ನು ಕೊರೆಯುವ ಲಾರ್ವಾದಿಂದಾಗಿ ಹಾನಿಯುಂಟಾಗುತ್ತದೆ. ಅನಿಯಮಿತ ಕಲೆಗಳು ಕಾಣಿಸಿಕೊಳ್ಳುತ್ತವೆ, ಕೆಲವೊಮ್ಮೆ ಎಲೆಯ ಮೇಲ್ಮೈಗೆ ಯಾವುದೇ ಹಾನಿಯಾಗಿರುವುದಿಲ್ಲವಾದ್ದರಿಂದ ಎಲೆಯು ಪಾರದರ್ಶಕವಾಗಿ ಕಿಟಕಿಯ ಗಾಜಿನಂತೆ ಭಾಸವಾಗುತ್ತದೆ. ಬೆಳೆದ ಲಾರ್ವಾ ಹೆಚ್ಚು ಆಹಾರ ಬೇಡುತ್ತದೆ, ಸೋಂಕು ತೀವ್ರವಾದಾಗ ಎಲೆನಾಳಗಳನ್ನು ಮಾತ್ರವೇ ಉಳಿಸಿ ಇಡೀ ಎಲೆಯನ್ನೇ ತಿಂದುಬಿಡುವ ಸಾಧ್ಯತೆ ಇರುತ್ತದೆ. ಕಿರುಹೂವುಗಳಲ್ಲಿ ಲಾರ್ವಾಗಳಿದ್ದರೆ ಕೋಸುಗೆಡ್ಡೆ ಮತ್ತು ಹೂಕೋಸುಗಳ ಶಿರವು ಪೂರ್ತಿಯಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ.
ಪರಾವಲಂಬಿ ಕೀಟಗಳಾದ ಡಯಾಡೆಗ್ಮಾ ಇನ್ಸುಲೇರ್, ಓಮಿಝಸ್ ಸೊಕೊಲೊವ್ಸ್ಕಿ, ಮೈಕ್ರೊಪ್ಲೈಟಿಸ್ ಪ್ಲೂಟೆಲೇ, ಡಯಾಡ್ರೋಮಸ್ ಸಬ್ಟಿಲಿಕಾರ್ನಿಸ್ ಮತ್ತು ಕೊಟೇಸಿಯಾ ಪ್ಲೂಟೆಲೇ ಮುಂತಾದವು ವಜ್ರಕವಚ ಪತಂಗದ ಶತ್ರುಗಳು. ಇದಲ್ಲದೆ ಕೀಟಾವಲಂಬಿ ಶಿಲೀಂಧ್ರಗಳನ್ನು ಅಥವಾ ನ್ಯೂಕ್ಲಿಯರ್ ಪಾಲಿಹೈಡ್ರೊಸಿಸ್ ವೈರಸ್ಸನ್ನು ಹೊಂದಿರುವ ದ್ರಾವಣವನ್ನು ಉಪಯೋಗಿಸಿ ಈ ಪತಂಗದ ಸಂಖ್ಯೆಯನ್ನು ನಿಯಂತ್ರಿಸಬಹುದು. ಬಾಸಿಲಸ್ ತುರಿಂಜಿಯೆನ್ಸಿಸ್ ಇರುವ ಕೀಟನಾಶಕಗಳು ಬಹಳ ಪ್ರಯೋಜನಕಾರಿಯಾಗಿದ್ದರೂ ಕೂಡ ಪ್ರತಿರೋಧ ಬೆಳೆಸಿಕೊಳ್ಳುವುದನ್ನು ತಡೆಯಲು ಉತ್ಪನ್ನಗಳನ್ನು ಆಗಾಗ ಬದಲಿಸಿ ಬಳಸುವುದು ಉತ್ತಮ.
ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಹೆಚ್ಚಿನ ವರ್ಗದ ಕೀಟನಾಶಕಗಳಿಗೂ ಈ ಪತಂಗವು ಪ್ರತಿರೋಧ ತೋರುವುದು ವ್ಯಾಪಕವಾಗಿ ಕಂಡುಬಂದಿದೆ, ಹಾಗಾಗಿ ಸಕ್ರಿಯ ಪದಾರ್ಥಗಳನ್ನು ಬದಲಾಯಿಸಿ ಉಪಯೋಗಿಸುವುದು ಉತ್ತಮ. 80ರ ದಶಕದಲ್ಲೇ ಅತಿಯಾಗಿ ಬಳಸಿದ್ದರಿಂದ ಪೈರೆತ್ರಾಯಿಡ್ಸ್ ಹೊಂದಿರುವ ಉತ್ಪನ್ನಗಳು ಈಗಾಗಲೇ ಕೆಲಸ ಮಾಡುವುದು ನಿಲ್ಲಿಸಿವೆ.
ಪ್ಲುಟೆಲ್ಲಾ ಕ್ಸೈಲೋಸ್ಟೆಲಾ ಎಂಬ ಪತಂಗದ ಲಾರ್ವಾ ಹಾನಿಗೆ ಕಾರಣ. ಬ್ರಾಸಿಕಾ ಪ್ರಭೇದದ ಕೋಸುಗೆಡ್ಡೆ, ಎಲೆಕೋಸು, ಹೂಕೋಸು, ಮೂಲಂಗಿ ಮತ್ತು ಟರ್ನಿಪ್ ಮುಂತಾದವು ಹಾಗೂ ಹಲವು ಕಳೆಗಳು ಈ ಕೀಟಕ್ಕೆ ಆಶ್ರಯ ಕೊಡುತ್ತವೆ. ಪ್ರೌಢ ಕೀಟಗಳು ಸಣ್ಣಗೆ, ತೆಳ್ಳಗೆ ಇರುತ್ತವೆ. ಇವುಗಳ ಉದ್ದ 6 ಮಿಮೀ ನಷ್ಟು ಇರುತ್ತದೆ. ಎದ್ದು ಕಾಣುವ ಆಂಟೆನಾ ಇರುತ್ತದೆ. ಗಾಢ ಕಂದು ಬಣ್ಣದ ಕೀಟದ ಬೆನ್ನಿನುದ್ದಕ್ಕೂ ತೆಳು ಕಂದು ಬಣ್ಣದ ಪಟ್ಟಿ ಇರುತ್ತದೆ. ಹಾರುವ ಕೌಶಲವಿಲ್ಲದಿದ್ದರೂ ಗಾಳಿಯೇ ಈ ಕೀಟಗಳನ್ನು ಬಹುದೂರ ಸಾಗಿಸುತ್ತದೆ. ಪ್ರತಿ ಹೆಣ್ಣು ಕೀಟವು ಎಲೆಯ ಕೆಳಭಾಗದಲ್ಲಿ ಸರಾಸರಿ 150 ಮೊಟ್ಟೆಗಳನ್ನಿಡುತ್ತದೆ. ಸಾಮಾನ್ಯವಾಗಿ ಎಲೆಯ ನಾಳದ ಬಳಿ ಗುಂಪು ಗುಂಪಾಗಿರುವ ಮೊಟ್ಟೆಗಳನ್ನು ಕಾಣಬಹುದು, ಪ್ರತಿ ಗುಂಪಿನಲ್ಲೂ ಸುಮಾರು ಎಂಟರಷ್ಟು ಮೊಟ್ಟೆಗಳಿರುತ್ತವೆ. ಎಳೆಯ ಲಾರ್ವಾಗಳಿಗೆ ಎಲೆ ಕೊರೆದು ತಿನ್ನುವ ಅಭ್ಯಾಸವಿದ್ದರೆ, ಬೆಳೆದವು ಎಲೆಯ ಕೆಳ ಮೇಲ್ಮೈಯನ್ನು ತಿನ್ನುತ್ತವೆ. ಇದರಿಂದಾಗಿ ಅನಿಯಮಿತ ಕಲೆಗಳುಂಟಾಗುತ್ತವೆ. ಎಳೆಯ ಲಾರ್ವಾ ಮಳೆ ಬಿದ್ದಾಗ ಸಾಯುವುದು ಕಂಡುಬಂದಿದೆ.