Elateridae
ಕೀಟ
ನೆಲದಡಿಯಲ್ಲಿರುವ ಚಿಗುರುತ್ತಿರುವ ಬೀಜಗಳು, ಬೇರುಗಳು ಮತ್ತು ಎಳೆ ಸಸಿಗಳನ್ನು ಸರಿಗೆಹುಳುಗಳು ತಿನ್ನುತ್ತವೆ, ಸಸ್ಯಗಳನ್ನು ನೇರವಾಗಿ ಸಾಯಿಸುತ್ತವೆ ಅಥವಾ ಗಾಯಗೊಳಿಸುತ್ತವೆ. ಈ ಗಾಯಗಳು ಅವಕಾಶವಾದಿ ರೋಗಕಾರಕಗಳಿಗೆ ಒಂದು ಪರಿಪೂರ್ಣವಾದ ದ್ವಾರವಾಗಿದ್ದು, ಇದು ರೋಗಲಕ್ಷಣಗಳನ್ನು ಮತ್ತಷ್ಟು ಕೆಡಿಸುತ್ತವೆ. ನಾಟಿ ಮಾಡಿದ ಸ್ವಲ್ಪ ದಿನಗಳಲ್ಲೇ ಮೃತ ಸಸಿಗಳು ಮತ್ತು ಟೋಳ್ಳಾದ ಬೀಜಗಳು ಕಂಡುಬರುವುದು ಈ ಕೀಟದಿಂದ ಮಣ್ಣಿನಲ್ಲಾಗುವ ಸೋಂಕಿನ ಹೇಳಿಮಾಡಿಸಿದಂತಹ ಚಿಹ್ನೆಗಳು. ಸಸ್ಯದ ಬೆಳವಣಿಗೆಯ ನಂತರದ ಹಂತಗಳಲ್ಲಿ, ಎಳೆ ಸಸ್ಯಗಳು ಬಾಡಬಹುದು ಮತ್ತು ಬಣ್ಣಗೆಡುವ ಲಕ್ಷಣಗಳನ್ನು ತೋರಿಸಬಹುದು. ಮಧ್ಯಭಾಗದಲ್ಲಿನ ಎಲೆಗಳ ಮೇಲೆ ತಿಂದು ಬಿಟ್ಟಿರುವ ಹಾನಿ ಉಂಟಾಗುತ್ತದೆ ಅಥವಾ ಅವು ಹೊರ ಎಲೆಗಳು ಹಸಿರಾಗಿದ್ದಾಗಲೇ ಸಾಯುತ್ತವೆ. ಕಾಂಡವು ಚೂರುಚೂರಾಗಿ ಮುರಿಯುತ್ತದೆ ಅದರೆ ಇನ್ನೂ ಬೇರುಗಳಿಗೆ ಅಂಟಿಕೊಂಡಿರುತ್ತವೆ. ಗದ್ದೆಯಲ್ಲಿ, ಎಲ್ಲೋ ಕೆಲವು ಸಸ್ಯಗಳು ಬೆಳೆದು ನಿಂತಿರುವ ಅಥವಾ ಸಸ್ಯಗಳೇ ಇಲ್ಲದ ಭೂಪ್ರದೇಶಗಳು ಕಂಡುಬರುತ್ತವೆ. ವಸಂತಕಾಲದ ಆರಂಭದಲ್ಲಿ ಹೆಚ್ಚಿನ ಹಾನಿ ಉಂಟಾಗುತ್ತದೆ. ಆಲೂಗೆಡ್ಡೆಗಳಲ್ಲಿ, ಸರಿಗೆಹುಳುಗಳು ವಸಂತಕಾಲದಲ್ಲಿ ಆಲೂಗೆಡ್ಡೆ ಬೀಜದ ಚೂರುಗಳೊಳಗೆ ಕೊರೆದುಕೊಂಡು ಹೋಗುವುದು ಒಂದೆಡೆಯಾದರೆ, ಮತ್ತೊಂದೆಡೆ ಶರತ್ಕಾಲದಲ್ಲಿ ಬೆಳೆಯುವ ಗೆಡ್ಡೆಗಳೊಳಗೆ ಕೊರೆದುಕೊಂಡು ಹೋಗುತ್ತವೆ.
ಕೆಲವು ನೆಲದ ಜೀರುಂಡೆಗಳು ಮತ್ತು ರೋವ್ ಜೀರುಂಡೆಗಳು ಸರಿಗೆ ಹುಳುಗಳನ್ನು ತಿನ್ನುತ್ತವೆ. ಸ್ಟಿಲೆಟ್ಟೊ ನೊಣಗಳ (ಥೆರೆವಿಡೆ) ಲಾರ್ವಾಗಳು ಸರಿಗೆಹುಳುಗಳ ಪರಭಕ್ಷಕಗಳಾಗಿವೆ. ನೆಮಟೋಡ್ಗಳ ಕೆಲವು ಜಾತಿಗಳು ಸಹ ಸರಿಗೆಹುಳುಗಳನ್ನು ತಿನ್ನುತ್ತವೆ. ಮೆಟಾರ್ಹಿಜಿಯಾಮ್ ಅನಿಸೊಪ್ಲಿಯಾ ಎನ್ನುವ ಶಿಲೀಂಧ್ರವು ಸರಿಗೆಹುಳುಗಳನ್ನು ಮುತ್ತಿಕೊಂಡು ಅವುಗಳನ್ನು ಕೊಲ್ಲುತ್ತದೆ ಎಂದು ಕಂಡುಬಂದಿದೆ. ಸರಿಗೆಹುಳುಗಳ ನಿಯಂತ್ರಣದ ಕ್ರಮವಾಗಿ ಈ ಶಿಲೀಂಧ್ರವನ್ನು ಹೊಂದಿರುವ ಒಂದು ಹರಳಿನ ಸೂತ್ರೀಕರಣಕ್ಕಿರುವ ಸಾಮರ್ಥ್ಯವನ್ನು ಕಂಡುಹಿಡಿಯಲು ಪರೀಕ್ಷೆ ಮಾಡಲಾಗುತ್ತಿದೆ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸರಿಗೆ ಹುಳುಗಳ ಹಾನಿಯನ್ನು ತಡೆಗಟ್ಟಲು ನಾಟಿ ಮಾಡುವ ಮೊದಲು ಅಥವಾ ನಾಟಿ ಮಾಡುವ ಸಮಯದಲ್ಲಿ ಚಿಕಿತ್ಸೆಯ ಅಗತ್ಯವಿರುತ್ತದೆ. ಕೀಟನಾಶಕಗಳನ್ನು ಹೊಂದಿರುವ ಬೀಜ ಚಿಕಿತ್ಸೆಯನ್ನು ಬಳಸಿಕೊಂಡು ಅವುಗಳ ಸಂಖ್ಯೆಯ ಸ್ವಲ್ಪ ಮಟ್ಟಿನ ನಿಯಂತ್ರಣವನ್ನು ಪಡೆಯಬಹುದಾಗಿದೆ. ನಿಮ್ಮ ದೇಶದಲ್ಲಿ ಈ ಕೆಲವು ಉತ್ಪನ್ನಗಳ ಬಳಕೆಯ ನಿರ್ಬಂಧಗಳು ತಿಳಿದಿರಲಿ.
ಕ್ಲಿಕ್ ಜೀರುಂಡೆಗಳ ಗುಂಪಿನ (ಎಲಾಟೆರಿಡೆ) ಇನ್ನೂ ಬೆಳೆಯದ ಲಾರ್ವಾ ಹಂತದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಸರಿಗೆಹುಳುಗಳು ಸುಮಾರು 2 ಸೆಂ.ಮೀ ಉದ್ದವಿರುತ್ತವೆ, ತೆಳ್ಳಗಿನ, ಸಿಲಿಂಡರಾಕಾರದ ದೇಹಗಳನ್ನು ಹೊಂದಿರುತ್ತವೆ ಮತ್ತು ಬಿಳಿ, ಹಳದಿ, ಅಥವಾ ತಾಮ್ರ ಬಣ್ಣದಲ್ಲಿರುತ್ತವೆ. ಬೇಸಿಗೆಯಲ್ಲಿ ಹೆಣ್ಣು ಹುಳುಗಳು ಮಣ್ಣಿನ ಕಣಗಳ ನಡುವೆ ಒಂದೊಂದರಂತೆ ನೂರಾರು ಮೊಟ್ಟೆಗಳನ್ನು ಇಡುತ್ತವೆ. ಸಡಿಲವಾದ ಮತ್ತು ಮರಳು ಮಣ್ಣುಗಳು ಅವುಗಳ ಪ್ರಸರಣಕ್ಕೆ ಅನುಕೂಲಕರ. ಲಾರ್ವಾಗಳು ತಮ್ಮ ಪ್ರೌಢಾವಸ್ಥೆ ತಲುಪುವ ಮೊದಲು 2 ರಿಂದ 3 ವರ್ಷಗಳ ಕಾಲ ನೆಲದಡಿಯಲ್ಲಿರುವ ಸಸ್ಯದ ಭಾಗಗಳು, ಚಿಗುರುತ್ತಿರುವ ಬೀಜಗಳು ಅಥವಾ ಎಳೆ ಸಸಿಗಳನ್ನು ತಿನ್ನುತ್ತವೆ. ಇದರಿಂದ ಸಸ್ಯಗಳು ಬೆಳೆದು ನಿಲ್ಲುವ ಪ್ರಮಾಣ ಮತ್ತು ಇಳುವರಿ ಕಡಿಮೆಯಾಗುತ್ತದೆ. ಗೋಧಿ ಮಾತ್ರವಲ್ಲದೆ ಅವು ಮೆಕ್ಕೆಜೋಳ, ಹುಲ್ಲು ಮತ್ತು ಕೆಲವು ತರಕಾರಿಗಳನ್ನು (ಆಲೂಗೆಡ್ಡೆ, ಕ್ಯಾರೆಟ್, ಈರುಳ್ಳಿ) ಆಕ್ರಮಿಸುತ್ತವೆ. ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ತುಂಬಾ ವಿಳಂಬವಾದಾಗ ಅಂದರೆ ನಾಟಿ ಮಾಡಿದ ನಂತರ ಬೆಳೆ ಹಾನಿ ಪತ್ತೆಯಾಗುತ್ತದೆ. ಇದರಿಂದ ನೆಡುವ ಮೊದಲು ಸರಿಗೆ ಹುಳಗಳನ್ನು ಭೂಮಿಯಲ್ಲಿ ಪರಿಶೀಲಿಸುವುದು ಬಹಳ ಮುಖ್ಯ.