Lepidosaphes beckii
ಕೀಟ
ಪರ್ಪಲ್ ಮಸ್ಸೆಲ್ ಸ್ಕೇಲ್ ಕೀಟಗಳು ಹಣ್ಣುಗಳು, ಎಲೆಗಳು, ಕೊಂಬೆಗಳು ಮತ್ತು ಕಾಂಡವನ್ನು ಒಳಗೊಂಡಂತೆ ಸಸ್ಯಗಳ ಮೇಲ್ಮೈಗೆ ಅಂಟಿಕೊಳ್ಳುತ್ತವೆ. ಅವು ಸಸ್ಯದ ರಸವನ್ನು ತಿನ್ನುತ್ತಲೆ. ಇದು ಹಲವಾರು ಗೋಚರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸ್ಕೇಲ್‌ಗಳು ತಿಂದ ಜಾಗದಲ್ಲಿ ಮಾಗಿದ ಹಣ್ಣುಗಳು ಹಸಿರು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಸಸ್ಯದಿಂದ ಬೀಳಬಹುದು. ತೀವ್ರತರವಾದ ಪ್ರಕರಣಗಳಲ್ಲಿ, ರೆಂಬೆಗಳ ತುದಿಗಳು ಸಾಯಲು ಪ್ರಾರಂಭಿಸಬಹುದು ಮತ್ತು ಈ ಹಾನಿಯು ರೆಂಬೆಗಳ ಮುಖ್ಯ ಭಾಗಕ್ಕೆ ಹಿಮ್ಮುಖವಾಗಿ ಹರಡಬಹುದು.
ಚಳಿಗಾಲದ ಕೊನೆಯಲ್ಲಿ ಮೊದಲ ಮೊಟ್ಟೆ ಒಡೆಯುವ ಮೊದಲು ಅಥವಾ ನೀವು ಮುತ್ತುವಿಕೆಯನ್ನು ಮೊದಲೇ ಗುರುತಿಸಿದರೆ ಮರಗಳಿಗೆ ಸುಪ್ತ ತೈಲಗಳು ಮತ್ತು ಸುಣ್ಣದ ಗಂಧಕವನ್ನು ಸಿಂಪಡಿಸಿ. ಸಣ್ಣ ಮರಗಳಲ್ಲಿ ಅಥವಾ ದೊಡ್ಡ ಮರಗಳ ತಲುಪಬಹುದಾದ ಭಾಗಗಳಲ್ಲಿ, ನೀವು ಪ್ಲಾಸ್ಟಿಕ್ ಡಿಶ್ ಸ್ಕ್ರಬ್ಬರ್ ಅನ್ನು ಬಳಸಿಕೊಂಡು ಸ್ಕೇಲ್‌ಗಳ ಭಾರೀ ಸೃಷ್ಚಿಯನ್ನು ಸ್ಕ್ರಬ್ ಮಾಡಬಹುದು. ಸಾಮಾನ್ಯವಾಗಿ, ನೈಸರ್ಗಿಕ ಶತ್ರುಗಳು ಈ ಕೀಟಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತವೆ, ಆದ್ದರಿಂದ ಅವುಗಳು ಸಾಮಾನ್ಯವಾಗಿ ದೊಡ್ಡ ಸಮಸ್ಯೆಯಾಗಿರುವುದಿಲ್ಲ.
ಈ ಕೀಟವು ಸಾಮಾನ್ಯವಾಗಿ ಕನಿಷ್ಠ ಹಾನಿಯನ್ನುಂಟುಮಾಡುತ್ತದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾಗ, ಇವು ತೀವ್ರ ಹಾನಿಯನ್ನು ಉಂಟುಮಾಡಬಹುದು. ಹೀಗಾಗಿ, ರಾಸಾಯನಿಕ ನಿಯಂತ್ರಣದ ಅಗತ್ಯವಿರುತ್ತದೆ. ಈ ಕೀಟಗಳನ್ನು ನೀವು ಒಮ್ಮೆ ಗಮನಿಸಿದ ಮೇಲೆ ಕೀಟನಾಶಕಗಳಿಂದ ಕೊಲ್ಲುವುದು ಕಠಿಣವಾಗಿದೆ. ಏಕೆಂದರೆ ಅವುಗಳ ಗಟ್ಟಿಯಾದ ಸ್ಕೇಲ್‌ಗಳು ಅವುಗಳನ್ನು ರಕ್ಷಿಸುತ್ತವೆ. ಅವುಗಳನ್ನು ನಿಯಂತ್ರಿಸಲು ಉತ್ತಮ ಮಾರ್ಗವೆಂದರೆ ಮರಿ, ಅಸುರಕ್ಷಿತ ಕೀಟಗಳು ಆಹಾರಕ್ಕಾಗಿ ನೆಲೆಗೊಳ್ಳುವ ಮೊದಲು ಚಲಿಸುತ್ತಿರುವಾಗ ಋತುವಿನ ಆರಂಭದಲ್ಲಿ ಚಿಕಿತ್ಸೆ ನೀಡುವುದು. ಸಿಂಥೆಟಿಕ್ ಪೈರೆಥ್ರಾಯ್ಡ್‌ಗಳಂತಹ ಬಲವಾದ, ವಿಶಾಲ-ಸ್ಪೆಕ್ಟ್ರಮ್ ಕೀಟನಾಶಕಗಳನ್ನು ಬಳಸುವುದನ್ನು ತಪ್ಪಿಸುವುದು ಉತ್ತಮ, ಏಕೆಂದರೆ ಅವು ಈ ಪ್ರಯೋಜನಕಾರಿ ಪರಭಕ್ಷಕಗಳನ್ನು ಕೊಲ್ಲುತ್ತವೆ. ಸಸ್ಯವು ಹೀರಿಕೊಳ್ಳಬಲ್ಲಂತಹ ಕೀಟನಾಶಕಗಳನ್ನು ಬಳಸಲು ಆದ್ಯತೆ ನೀಡಿ.
ನಿಮ್ಮ ಸಸ್ಯದಲ್ಲಿನ ಉಬ್ಬುಗಳು ವಯಸ್ಕ ಹೆಣ್ಣು ನೇರಳೆ ಮಸ್ಸೆಲ್ ಸ್ಕೇಲ್‌ಗಳಾಗಿವೆ. ಅವು ಚಲಿಸುವುದಿಲ್ಲ. ನೇರಳೆ-ಕಂದು ರಕ್ಷಣಾತ್ಮಕ ಪದರದ ಅಡಿಯಲ್ಲಿ ಅಡಗುತ್ತವೆ. ಹೆಣ್ಣು ತನ್ನ ರಕ್ಷಣಾತ್ಮಕ ಸ್ಕೇಲಿನ ಅಡಿಯಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಅಲ್ಲಿ ಅವು ಚಳಿಗಾಲದಲ್ಲಿ ಸುರಕ್ಷಿತವಾಗಿರುತ್ತವೆ ಮತ್ತು ಮೇ ಅಥವಾ ಜೂನ್ ಅಂತ್ಯದಲ್ಲಿ ಮೊಟ್ಟೆಯೊಡೆಯುತ್ತವೆ. ಈ ಕೀಟಗಳು ವರ್ಷಕ್ಕೊಮ್ಮೆ ಸಂತಾನೋತ್ಪತ್ತಿ ಮಾಡುತ್ತವೆ. ಎಳೆಯ ಕೀಟಗಳು ಚಲಿಸುತ್ತವೆ ಮತ್ತು ನಡೆದು ಅಥವಾ ಗಾಳಿ, ವಾಹನಗಳು, ಪ್ರಾಣಿಗಳು, ಪಕ್ಷಿಗಳು ಮತ್ತು ಜನರ ಬಟ್ಟೆಗಳ ಮೂಲಕ ಸಾಗಿ ಹೊಸ ಸಸ್ಯಗಳಿಗೆ ಹರಡಬಹುದು. ಕೀಟಗಳನ್ನು ಹೊಂದಿರುವ ಸಸ್ಯ ವಸ್ತುಗಳ ಮೂಲಕವೂ ಅವು ಹರಡಬಹುದು.