Leucinodes orbonalis
ಕೀಟ
ಸಸ್ಯದ ಚಿಗುರುಗಳನ್ನು ಲಾರ್ವಾಗಳು ತಿನ್ನುವುದರಿಂದ ಅವು ಬಾಡಿ ಹೋಗುವುದು ಮೊದಲು ಗೋಚರಿಸುವ ಲಕ್ಷಣವಾಗಿದೆ. ನಂತರ, ಹೂವುಗಳು, ಮೊಗ್ಗುಗಳು ಮತ್ತು ಕಾಂಡಗಳು ಸಹ ಹಾನಿಗೆ ಒಳಗಾಗುತ್ತವೆ. ದೊಡ್ಡ ಎಲೆಗಳು ಮತ್ತು ಚಿಗುರೆಲೆಗಳ ಮಧ್ಯನಾಳದ ತುದಿಯನ್ನು ಎಳೆಯ ಲಾರ್ವಾಗಳು ಕೊರೆದು ಆ ಮೂಲಕ ಕಾಂಡವನ್ನು ಭೇದಿಸಿ "ಡೆಡ್ ಹಾರ್ಟ್ಸ್" ಲಕ್ಷಣಕ್ಕೆ ಕಾರಣವಾಗುತ್ತವೆ. ಪ್ರಬುದ್ಧ ಲಾರ್ವಾಗಳು ಹಣ್ಣುಗಳನ್ನು ಕೊರೆದು ಸಣ್ಣ ಪ್ರವೇಶ ರಂಧ್ರಗಳನ್ನು ಉಂಟುಮಾಡುತ್ತವೆ. ಈ ರಂಧ್ರಗಳು ಕೀಟಗಳ ಒಣಗಿದ ಮಲಗಳಿಂದ ಮುಚ್ಚಿ ಹೋಗುತ್ತವೆ. ಹಣ್ಣಿನ ಒಳಭಾಗವು ಟೊಳ್ಳಾಗಿ, ಬಣ್ಣ ಕಳೆದುಕೊಂಡು, ನಾರು ನಾರಾಗಿರುತ್ತದೆ. ತೀವ್ರ ಸೋಂಕಿನ ಸಂದರ್ಭಗಳಲ್ಲಿ ಸಸ್ಯಗಳು ದುರ್ಬಲಗೊಳ್ಳುತ್ತವೆ ಮತ್ತು ಬಾಡುತ್ತವೆ. ಇದರಿಂದಾಗಿ ಇಳುವರಿಯಲ್ಲಿ ನಷ್ಟವಾಗುತ್ತದೆ. ಆ ಸಸ್ಯಗಳಿಂದ ಉತ್ಪತ್ತಿಯಾಗುವ ಹಣ್ಣುಗಳು ಬಳಕೆಗೆ ಸೂಕ್ತವಾಗಿರುವುದಿಲ್ಲ. ಹಲವು ತಲೆಮಾರುಗಳಿಂದ ಕೀಟಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದಾಗ ಹಾನಿ ತೀವ್ರವಾಗಿರುತ್ತದೆ.
ಅನೇಕ ಪರಾವಲಂಬಿಗಳು ಎಲ್. ಆರ್ಬೊನಾಲಿಸ್ ಲಾರ್ವಾಗಳನ್ನು ತಿನ್ನುತ್ತವೆ. ಉದಾಹರಣೆಗೆ, ಪ್ರಿಸ್ಟೊಮೆರಸ್ ಟೆಸ್ಟಾಸಸ್, ಕ್ರೆಮಾಸ್ಟಸ್ ಫ್ಲೇವೂರ್ಬಿಟಲಿಸ್ ಮತ್ತು ಶಿರಾಕಿಯಾ ಸ್ಜೆನೊಬಿಕ್. ಸೂಡೋಪೆರಿಚೇಟಾ, ಬ್ರಕೊನಿಡ್ಸ್ ಮತ್ತು ಫನೆರೊಟೋಮಾದ ಜಾತಿಗಳನ್ನು ಕೂಡ ಜಮೀನಿನಲ್ಲಿ ಹೆಚ್ಚು ಪ್ರೋತ್ಸಾಹಿಸಬೇಕು ಅಥವಾ ಪರಿಚಯಿಸಬೇಕು. ಬೇವಿನೆಣ್ಣೆಯ ಸಾರ (NSKE) 5% ಅಥವಾ ಸ್ಪಿನೊಸಡ್ ಗಳನ್ನು ಸಹ ಸೋಂಕಿತ ಹಣ್ಣುಗಳ ಮೇಲೆ ಬಳಸಬಹುದು. ಕೀಟಗಳು ಮೊಟ್ಟೆಗಳನ್ನು ಇಡುವುದನ್ನು ತಡೆಗಟ್ಟಲು ಅಂಚಿನಿಂದ 10 ಸೆಂ ಮೇಲೆ ಅಂಟಾದ ಬಲೆಗಳನ್ನು ಬಳಸಬಹುದು. ಅಂಟು ಲಭ್ಯವಿಲ್ಲದಿದ್ದರೆ, 2 ಮೀ ಎತ್ತರದ ಮೇಲೆ ಬಲೆಯನ್ನು 40 ಸೆಂ.ಮೀ ತನಕ ವಿಸ್ತರಿಸಿ. ನಂತರ ಅದನ್ನು ಲಂಬವಾದ ಬಲೆಯ ಎದುರು 80-85 ಡಿಗ್ರಿ ಕೋನದಲ್ಲಿ ಹಾಕಿ.
ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರ ಮಾರ್ಗವನ್ನು ಮೊದಲು ಪರಿಗಣಿಸಿ. ಚಿಕಿತ್ಸೆ ಸೋಂಕಿನ ಹಂತ ಮತ್ತು ಋತುವನ್ನು ಆಧರಿಸಿ ಬದಲಾಗುತ್ತದೆ. ಸೆವಿಮೊಲ್ (0.1%), ಅಥವಾ ಮ್ಯಾಲಥಿಯಾನ್ (0.1%) ಗಳನ್ನು ನಿಯಮಿತ ಅಂತರಗಳಲ್ಲಿ ಸಿಂಪಡಿಸುವುದರಿಂದ ಕೀಟದ ದಾಳಿಯನ್ನು ನಿಯಂತ್ರಣದಲ್ಲಿಡಬಹುದು. ಹಣ್ಣು ಮಾಗುವ ಮತ್ತು ಸುಗ್ಗಿಯ ಸಮಯದಲ್ಲಿ ಸಂಶ್ಲೇಷಿತ ಪೈರೆಥ್ರಾಯ್ಡ್ಸ್ ಮತ್ತು ಕೀಟನಾಶಕಗಳ ಬಳಕೆಯನ್ನು ತಪ್ಪಿಸಿ.
ಲಯಿಸಿನೋಡ್ಸ್ ಆರ್ಬೋನಾಲಿಸ್ ಎಂಬ ಪತಂಗದ ಲಾರ್ವಾದಿಂದ ಈ ಹಾನಿ ಉಂಟಾಗುತ್ತದೆ. ವಸಂತಕಾಲದಲ್ಲಿ, ಹೆಣ್ಣು ಕೀಟಗಳು ಕೆನೆ-ಬಿಳಿ ಬಣ್ಣದ ಮೊಟ್ಟೆಗಳನ್ನು ಒಂದೊಂದು ಅಥವಾ ಗುಂಪು ಗುಂಪಾಗಿ ಎಲೆಗಳ ಕೆಳಭಾಗದಲ್ಲಿ, ಕಾಂಡಗಳ ಮೇಲೆ, ಹೂವಿನ ಮೊಗ್ಗುಗಳು, ಅಥವಾ ಹಣ್ಣಿನ ತಳ ಭಾಗದಲ್ಲಿ ಇಡುತ್ತವೆ. 3 ರಿಂದ 5 ದಿನಗಳ ನಂತರ ಮೊಟ್ಟೆ ಒಡೆದು ಲಾರ್ವಾಗಳು ಹೊರಬರುತ್ತವೆ ಮತ್ತು ಸಾಮಾನ್ಯವಾಗಿ ನೇರವಾಗಿ ಹಣ್ಣನ್ನು ಕೊರೆಯಲು ಆರಂಭಿಸುತ್ತವೆ. ಸಂಪೂರ್ಣವಾಗಿ ಬೆಳೆದ ಲಾರ್ವಾಗಳು ದಷ್ಟಪುಷ್ಟವಾಗಿ ಗುಲಾಬಿ ಬಣ್ಣದಲ್ಲಿದ್ದು, ಕಂದು ಬಣ್ಣದ ತಲೆಯನ್ನು ಹೊಂದಿರುತ್ತವೆ. ಆಹಾರ ತಿಂದಾದ ಮೇಲೆ, ಬೂದುಬಣ್ಣದ, ಗಟ್ಟಿಯಾದ ಕೋಶಗಳನ್ನು ಕಾಂಡಗಳು, ಒಣಗಿದ ಚಿಗುರುಗಳು, ಅಥವಾ ಬಿದ್ದ ಎಲೆಗಳ ಮಧ್ಯದಲ್ಲಿ ನೇಯುತ್ತವೆ. ಕೋಶಾವಸ್ಥೆಯು 6 ರಿಂದ 8 ದಿನಗಳವರೆಗೆ ಇರುತ್ತದೆ. ನಂತರ ಪ್ರೌಢ ಪತಂಗಗಳು ಕಾಣಿಸಿಕೊಳ್ಳುತ್ತವೆ. ಪ್ರೌಢ ಪತಂಗಗಳು ಎರಡರಿಂದ ಐದು ದಿನಗಳವರೆಗೆ ಬದುಕುತ್ತವೆ ಮತ್ತು ಪರಿಸರ ಪರಿಸ್ಥಿತಿಗಳನ್ನು ಆಧರಿಸಿ 21-43 ದಿನಗಳವರೆಗಿನ ಜೀವನ ಚಕ್ರವನ್ನು ಪೂರ್ಣಗೊಳಿಸುತ್ತವೆ. ಒಂದು ವರ್ಷದ ಅವುಗಳ ಸಕ್ರಿಯ ಹಂತದಲ್ಲಿ ಐದು ತಲೆಮಾರುಗಳು ಇರುವ ಸಾಧ್ಯತೆ ಇದೆ. ಚಳಿಗಾಲದಲ್ಲಿ ಮರಿಗಳು ಮಣ್ಣಿನೊಳಗೆ ಸುಪ್ತಾವಸ್ಥೆಯಲ್ಲಿರುತ್ತವೆ. ಈ ಕೀಟವು ಟೊಮ್ಯಾಟೊ ಮತ್ತು ಆಲೂಗೆಡ್ಡೆ ಮುಂತಾದ ಅನೇಕ ಸೊಲೇನೇಸಿಯಸ್ ಸಸ್ಯಗಳನ್ನು ತಿನ್ನಬಹುದು.