Bucculatrix thurberiella
ಕೀಟ
ಗಿಡಗಳ ಮೇಲಿನ ಮೂರನೆಯ ಒಂದು ಭಾಗದಲ್ಲಿ ಹೆಚ್ಚಿನ ಹಾನಿ ಉಂಟಾಗುತ್ತದೆ. ಎಳೆಯ ಮರಿಹುಳುಗಳು ಎಲೆಗಳ ಒಳಭಾಗವನ್ನು ಕೊರೆದು, ಬಿಳಿಯ ಅಥವಾ ಬೂದು ಬಣ್ಣದ ಅಂಕುಡೊಂಕಾದ ಸುರಂಗದಂತಹ ಜಾಡನ್ನು ರಚಿಸುತ್ತವೆ. ಹುಳಗಳು ದೊಡ್ಡದಾಗಿ ಬೆಳೆಯುತ್ತಿದ್ದಂತೆ, ಈ ಜಾಡಿನಿಂದ ಹೊರಬಂದು ಎಲೆಯ ದಳದ ಮೇಲ್ಮೈಯಲ್ಲಿ ಉಳಿದುಕೊಳ್ಳುತ್ತವೆ. ಹುಳಗಳು ಎಲೆಯ ಕೆಳಭಾಗದ ಅಥವಾ ಮೇಲ್ಭಾಗದ ಹೊರತೊಗಲನ್ನು ತಿನ್ನುವುದರಿಂದ ಆ ಭಾಗ ತೆಳ್ಳಗಾಗಿ ತಿಳಿ ಕಂದು ಬಣ್ಣಕ್ಕೆ ತಿರುಗಿ ಕಿಟಕಿಯ ಗಾಜಿನಂತೆ ಕಾಣುತ್ತದೆ. ಆ ಭಾಗ ಕೆಲವೊಮ್ಮೆ ಒಣಗಿ ಉದುರಿ ಹೋಗುವುದರಿಂದ ಎಲೆಯ ಮೇಲೆ ಬೇರೆ ಬೇರೆ ಆಕಾರ ಹಾಗೂ ಗಾತ್ರದ ತೂತುಗಳಾಗುತ್ತವೆ. ತೀವ್ರತರವಾದ ಪ್ರಕರಣಗಳಲ್ಲಿ ಗಿಡಗಳ ಎಲೆ ಉದುರಿ ಹೋಗುವುದರಿಂದ ಬೀಜಕೋಶಗಳು ಅವಧಿಗೆ ಮುನ್ನವೇ ತೆರೆದುಕೊಳ್ಳುತ್ತವೆ, ಅಥವಾ ಪೂರ್ತಿ ಗೊಂಚಲೇ (ಸ್ಕ್ವೇರ್) ಉದುರಬಹುದು ಹಾಗೂ ಸಣ್ಣ ಬೀಜಕೋಶಗಳು ಉದುರಬಹುದು.
ಆರಿಯಸ್ ಕೀಟದ ಕೆಲವು ಪ್ರಭೇದಗಳ ಮರಿಪತಂಗ, ಕ್ರೈಸೊಪಾ ಕೀಟದ ಕೆಲವು ಲಾರ್ವಾಗಳು ಮತ್ತು ಕೊಲೋಪ್ಸ್ ಮತ್ತು ಹಿಪ್ಪೊಡಮಿಯದ ಪ್ರೌಢ ಕೀಟಗಳಂತಹ ಕೆಲವು ಪರಭಕ್ಷಕ ಕೀಟಗಳು ಹತ್ತಿ ತೋಟದಲ್ಲಿನ ಎಲೆಕೊರಕದ ಲಾರ್ವಾಗಳನ್ನು ತಿನ್ನುವುದು ಕಂಡುಬಂದಿದೆ. ಪ್ರಯೋಗಾಲಯದಲ್ಲಿ ಜೆಯೊಕೊರಿಸ್, ಸಿನಾ ಮತ್ತು ಝೆಲಸ್, ಮತ್ತು ನೊಬಿಸ್ ಪ್ರಭೇದದ ಪ್ರೌಢ ಹಾಗೂ ಎಳೆಯ ಪತಂಗದಂತಹ ಇತರೆ ಪರಭಕ್ಷಕಗಳು ಹತ್ತಿ ಎಲೆಕೊರಕದ ಲಾರ್ವಾಗಳನ್ನು ತಿನ್ನುವುದಾಗಿ ಕಂಡುಬಂದಿದೆ. ಈ ಪ್ರಯೋಜನಕಾರಿ ಕೀಟಗಳನ್ನು ಕಾಪಾಡಲು ಎಲ್ಲ ರೀತಿಯ ಕೀಟಗಳ ಮೇಲೂ ಕೆಲಸ ಮಾಡುವ ಬ್ರಾಡ್-ಸ್ಕೇಲ್ (ವಿಸ್ತರಿತ ಶ್ರೇಣಿಯ) ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಬೇಕು. ಸಾವಯವ ಹತ್ತಿಯ ಮೇಲೆ ಸ್ಪೈನೊಸಾಡಿನ ಸಿಂಪಡಿಸುವುದು ಸ್ವೀಕಾರಾರ್ಹವಾಗಿವೆ.
ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಹತ್ತಿ ಎಲೆಕೊರಕದ ಎದುರು ಅನೇಕ ಕೀಟನಾಶಕ ಉತ್ಪನ್ನಗಳನ್ನು ಬಳಸಬಹುದು. ಎಳೆ ಲಾರ್ವಾಗಳು ಎಲೆಗಳ ಒಳಗೆ ರಕ್ಷಿಸಿಕೊಳ್ಳುವುದರಿಂದ, ನಂತರದ ಹಂತದ ಲಾರ್ವಾಗಳನ್ನು ಚಿಕಿತ್ಸೆಗೆ ಗುರಿಯಾಗಿರಿಸಿಕೊಳ್ಳಬೇಕು. ಸಕ್ರಿಯ ಪದಾರ್ಥಗಳ ಕೆಲವು ಉದಾಹರಣೆಗಳೆಂದರೆ: ಮೀಥೈಲ್ ಪ್ಯಾರಾಥಿಯನ್, ಮ್ಯಾಲಥಿಯಾನ್, ಡಿಮೀಥೊಯೇಟ್ ಮತ್ತು ಎಂಡ್ರಿನ್ ಜೊತೆ ಮೀಥೈಲ್ ಪ್ಯಾರಾಥಿಯನ್ ಮಿಶ್ರಣ.
ಬ್ಯುಕುಲಾಟ್ರಿಕ್ಸ್ ತರ್ಬೇರಿಯೆಲಾ ಅಥವಾ ಹತ್ತಿ ಎಲೆಕೊರಕ ಹುಳುವಿನ ಲಾರ್ವಾಗಳಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಪತಂಗಗಳು ಸುಮಾರು 7-9 ಮಿಮೀ ಅಗಲದ ರೆಕ್ಕೆಗಳನ್ನು ಹೊಂದಿರುತ್ತವೆ. ಮುಂದಿನ ರೆಕ್ಕೆಗಳು ಬಿಳಿಯಾಗಿರುತ್ತವೆ, ಆದರೆ ರೆಕ್ಕೆಯ ತಳದಿಂದ ಮಧ್ಯದವರೆಗೆ ಅಂಚು ಕಪ್ಪು ಬಣ್ಣದಲ್ಲಿರುತ್ತದೆ. ಹಿಂದಿನ ರೆಕ್ಕೆಗಳು ತೆಳು ಬಿಳಿಯ ಬಣ್ಣದಲ್ಲಿರುತ್ತವೆ. ಹತ್ತಿ ಎಲೆಗಳು ಮತ್ತು ಹತ್ತಿ ಜಾತಿಯ ಕಾಡು ಗಿಡಗಳ (ಉದಾ: ತರ್ಬೇರಿಯ ತೆಸ್ಪಿಸಿಯಾಯ್ಡ್ಸ್) ಎಲೆಗಳನ್ನು ಲಾರ್ವಾ ತಿನ್ನುತ್ತದೆ. ಎಳೆಯ ಲಾರ್ವಾಗಳು ಚಪ್ಪಟೆಯಾಗಿರುತ್ತವೆ, ಹಳದಿಯಿಂದ ಕಿತ್ತಳೆ ಬಣ್ಣದ ಮರಿಹುಳುಗಳು ಎಲೆಗಳು ಮತ್ತು ಎಲೆಯ ಮೇಲ್ಮೈಗಳ ನಡುವೆ ಸುರಂಗದಂತಹ ಜಾಡನ್ನು ಕೊರೆಯುತ್ತವೆ. ಬೆಳೆದ ಲಾರ್ವಾಗಳು ಒಳಗಿನ ಅಂಗಾಂಶಗಳಿಂದ ಹೊರಬಂದು ಎಲೆಯ ಮೇಲ್ಭಾಗದ ಅಥವಾ ಕೆಳಭಾಗದ ಮೇಲ್ಮೈಯನ್ನು ತಿನ್ನತೊಡಗುತ್ತವೆ. ಈ ಹಂತದ ಆಹಾರ ಚಟುವಟಿಕೆಗಳು ಮುಗಿದಾಗ, ಲಾರ್ವಾಗಳು ಎಲೆಗಳ ಕೆಳಭಾಗದಲ್ಲಿ ಸ್ವಲ್ಪ ತಗ್ಗಿರುವ ಕಡೆ ಸಣ್ಣ ವೃತ್ತಾಕಾರದ ರೇಷ್ಮೆ ಗೂಡುಗಳನ್ನು ನೇಯ್ದುಕೊಳ್ಳುತ್ತವೆ. ತೀವ್ರ ಸೋಂಕಿದ್ದಲ್ಲಿ, ಎಲೆಗಳ ನಾಳಗಳು ಮಾತ್ರ ಉಳಿದುಕೊಂಡು ಅಸ್ಥಿಪಂಜರದಂತೆ ಕಾಣಬಹುದು ಹಾಗೂ ಎಲೆ ಉದುರಿ ಹೋಗಬಹುದು.