ಇತರೆ

ಪಾರದರ್ಶಕ ಸ್ಕೇಲ್

Aspidiotus destructor

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳು, ಕಾಂಡಗಳು ಮತ್ತು ಹಣ್ಣುಗಳಲ್ಲಿರುವ ಸಸ್ಯದ ರಸವನ್ನು ಕೀಟವು ತಿನ್ನುತ್ತದೆ.
  • ಇದು ಅಂಗಾಂಶಗಳಲ್ಲಿ ಕ್ಲೋರೋಸಿಸ್ ಮತ್ತು ಎಲೆ ಉದುರುವಿಕೆಗೆ ಕಾರಣವಾಗುತ್ತದೆ.
  • ಸೋಂಕು ತೀವ್ರವಾಗಿದ್ದಾಗ, ಎಲೆಗಳು ಅಥವಾ ಹಣ್ಣುಗಳು ಸಂಪೂರ್ಣವಾಗಿ ಹಳದಿ ಅಥವಾ ಕಂದು ಬಣ್ಣಕ್ಕೆ ತಿರುಗಿ ಉದುರಬಹುದು.
  • ಸಂಪೂರ್ಣ ಸಸ್ಯದ ಬೆಳವಣಿಗೆ ಕುಂಠಿತಗೊಳ್ಳಬಹುದು ಅಥವಾ ನಿರ್ಜೀವಗೊಳ್ಳಬಹುದು.


ಇತರೆ

ರೋಗಲಕ್ಷಣಗಳು

ಕೀಟವು ಎಲೆಗಳಲ್ಲಿರುವ ಸಸ್ಯದ ರಸವನ್ನು ತಿನ್ನುತ್ತದೆ ಮತ್ತು ಇದರಿಂದ ಆ ಭಾಗದಲ್ಲಿ ಕ್ಲೋರೋಸಿಸ್ ಉಂಟಾಗುತ್ತದೆ ಮತ್ತು ಎಲೆಗಳು ಉದುರುತ್ತವೆ. ಮುಖ್ಯವಾಗಿ ಎಲೆಗಳ ಕೆಳಭಾಗಕ್ಕೆ ಆಕ್ರಮಣವಾಗುತ್ತದೆ. ಆದರೆ ಕಾಂಡಗಳು, ಹೂವಿನ ಗೊಂಚಲುಗಳು ಮತ್ತು ಸಣ್ಣ ಹಣ್ಣುಗಳ ಮೇಲೂ ಸಹ ಪರಿಣಾಮವಾಗಬಹುದು. ಸೋಂಕು ತೀವ್ರವಾಗಿದ್ದಾಗ, ಎಲೆಗಳು ಸಂಪೂರ್ಣವಾಗಿ ಹಳದಿ ಅಥವಾ ಕಂದು ಬಣ್ಣಕ್ಕೆ ತಿರುಗಿ ಉದುರಬಹುದು. ಅತೀಸಣ್ಣದಾದ ಹುರಿದ ಮೊಟ್ಟೆಗಳಂತೆ ಕಾಣುವ ನಿಕಟವಾಗಿ ಪ್ಯಾಕ್ ಮಾಡಲಾದ ಕಾಲೋನಿಗಳ ರಚನೆಗಳ ಮೂಲಕ ಸೋಂಕನ್ನು ಗುರುತಿಸಬಹುದು. ಸೋಂಕಿತ ಮರಗಳಲ್ಲಿರುವ ಗಾಢ ಹಳದಿ ಬಣ್ಣವು ಬಹಳ ದೂರದಿಂದಲೂ ಸಹ ಸ್ಪಷ್ಟವಾಗಿ ಕಾಣುತ್ತದೆ. ಹಣ್ಣುಗಳೂ ಸಹ ಬಣ್ಣ ಕಳೆದುಕೊಂಡು ಅಕಾಲಿಕವಾಗಿ ಉದುರಬಹುದು. ಸಂಪೂರ್ಣ ಸಸ್ಯದ ಬೆಳವಣಿಗೆ ಕುಂಠಿತಗೊಳ್ಳಬಹುದು ಅಥವಾ ನಿರ್ಜೀವಗೊಳ್ಳಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕ್ರಮವಾಗಿ 15 ಮತ್ತು 10 ನಿಮಿಷಗಳ ಕಾಲ 47 ಮತ್ತು 49 °ಸಿ ನಲ್ಲಿ ಬಿಸಿನೀರಿನ ಸಂಸ್ಕರಣೆಗಳ ಮೂಲಕ ಮರಗಳನ್ನು ಸ್ಕೇಲ್ ನಿಂದ ವಿಮುಕ್ತಿಗೊಳಿಸಬಹುದು. ತೆಂಗಿನ ಸ್ಕೇಲ್ ನ ಪರಭಕ್ಷಕ ಜಾತಿಗಳೆಂದರೆ ರೈಬೋಬಿಯಸ್ ಲೋಪಂಥೆ, ಚಿಲೊಕೋರಸ್ ನಿಗ್ರಿಟಸ್, ತೆಲ್ಸಿಮಿಯಾ ನಿಟೈಡಾ, ಸೂಡೊಸೈಮ್ನಸ್ ಅನೋಮಲಸ್ ಮತ್ತು ಕ್ರಿಪ್ಟೋಗ್ನಾಥಾ ನೊಡೈಸ್ಪ್ಸ್ ಮೊದಲಾದ ಲೇಡಿಬರ್ಡ್ ಜೀರುಂಡೆಗಳು. ಇವುಗಳ ಸಂಖ್ಯೆಯನ್ನು ನಿಯಂತ್ರಿಸಲು ಪ್ಯಾರಾಸೈಟಾಯ್ಡ್ ಕಣಜಗಳನ್ನು ಕೂಡಾ ಬಿಡಬಹುದು: ಅವುಗಳೆಂದರೆ ಅಪೈಟಿಸ್ ಮೆಲಿನಸ್, ಅಪೈಟಿಸ್ ಲಿಂಗ್ನಾನೆನ್ಸಿಸ್ ಮತ್ತು ಕೊಂಪೆರಿಯೆಲಾ ಬಿಫಾಸ್ಸಿಯಾಟಾ. ಈ ನೈಸರ್ಗಿಕ ಶತ್ರುಗಳು ಇಲ್ಲದಿದ್ದಲ್ಲಿ, ಈ ಕೀಟದ ಸಂಖ್ಯಾ ಸ್ಫೋಟವಾಗಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಕ್ರಾಲರ್ ಹಂತಗಳು ಸಾಮಾನ್ಯವಾಗಿ ಕೀಟನಾಶಕಗಳಿಗೆ ಬೇಗ ತುತ್ತಾಗುತ್ತವೆ. ಈ ಕೀಟಗಳು ತಮ್ಮ ಮೇಣದ ರಕ್ಷಣೆಗಳನ್ನು ಬೆಳೆಸಿಕೊಂಡಂತೆ, ಸಂಸ್ಕರಣೆಗಳಿಂದ ಬೇಗ ಚೇತರಿಸಿಕೊಳ್ಳುತ್ತವೆ. ಪೈರಿಪ್ರೋಕ್ಸಿಫೆನ್ ಬಳಸಿ ಸಂಸ್ಕರಣೆ ಮಾಡುವುದನ್ನು ಸೂಚಿಸಲಾಗುತ್ತದೆ. ತೀವ್ರವಾದ ಸೋಂಕಿನ ಸಂಪೂರ್ಣ ನಿರ್ವಹಣೆಗಾಗಿ 15-20 ದಿನಗಳ ಅಂತರಗಳಲ್ಲಿ ಹಲವಾರು ಬಾರಿ ಸಿಂಪಡಿಕೆಗಳನ್ನು ಮಾಡುವುದು ಅಗತ್ಯವಾಗಬಹುದು.

ಅದಕ್ಕೆ ಏನು ಕಾರಣ

ತೆಂಗಿನಕಾಯಿ ಸ್ಕೇಲ್ ಎನ್ನಲಾಗುವ ಅಸ್ಪಿಡಿಯೊಟಸ್ ಡೆಸ್ಟ್ರಕ್ಟರ್ ನಿಂದ ಈ ಹಾನಿ ಉಂಟಾಗುತ್ತದೆ. ತೆಂಗಿನಕಾಯಿ ಮಾತ್ರವಲ್ಲದೆ, ಮಾವಿನಕಾಯಿ, ತಾಳೆ ಮರ, ಪಪ್ಪಾಯಿ, ಫಿಕಸ್, ಆವಕಾಡೊ, ಮತ್ತು ಸಿಟ್ರಸ್ನಂಥ ಉಷ್ಣವಲಯದ ಮರಗಳನ್ನು ಇದು ಆಕ್ರಮಿಸುತ್ತದೆ. ಇತರ ರಕ್ಷಾಕವಚವಿರುವ ಸ್ಕೇಲ್ ಗಳಂತೆಯೇ, ಅವುಗಳು ಎಲೆಗಳ ಕೆಳಭಾಗದಲ್ಲಿ ಸಣ್ಣದಾದ ಹುರಿದ ಮೊಟ್ಟೆಗಳಂತೆ ಕಾಣುವ ಕಾಲೋನಿಗಳಲ್ಲಿ ಬದುಕುತ್ತವೆ ಮತ್ತು ಅವುಗಳ ಮೇಲೆ ಮೇಣದಂಥ ಕವಚವಿರುತ್ತದೆ. ಇವು ಸಣ್ಣ ಹುರಿದ ಮೊಟ್ಟೆಗಳಂತೆ ಕಾಣುತ್ತವೆ. ಕೀಟಗಳು ಎಲೆಗಳನ್ನು ತಿನ್ನುವಾಗ, ಅವುಗಳು ಅಂಗಾಂಶಗಳ ಒಳಗೆ ಬಿಡುವ ವಿಷಯುಕ್ತ ಲಾಲಾರಸದಿಂದ ಎಲೆಗಳು ವಿರೂಪಗೊಳ್ಳುತ್ತವೆ. ಹೆಣ್ಣು ಕೀಟಗಳು ತಮ್ಮ ದೇಹದ ಸುತ್ತಲೂ ಬಿಳಿ ಮೊಟ್ಟೆಗಳನ್ನು ಇಡುತ್ತವೆ ಮತ್ತು ಸೋಂಕು ತೀವ್ರವಾದ ಸಂದರ್ಭದಲ್ಲಿ ಸಂಪೂರ್ಣ ಎಪಿಡರ್ಮಿಸ್ ಅನ್ನೇ ಇವು ಆವರಿಸುತ್ತವೆ. ಮೊದಲ ಮರಿಹುಳುಗಳಿಗೆ ಕಾಲುಗಳಿದ್ದು, ಅವು ಕಾಲುಗಳ ಸಹಾಯದಿಂದ ಸಾಕಷ್ಟು ದೂರ (1 ಮೀ ವರೆಗೆ) ಸ್ವತಂತ್ರವಾಗಿ ಚಲಿಸಬಲ್ಲವು. ಕ್ರಾಲರ್ಗಳು ಎಂದು ಕರೆಯಲ್ಪಡುವ ಈ ಕೀಟಗಳು ಗಾಳಿ, ಹಾರುವ ಕೀಟಗಳು ಮತ್ತು ಪಕ್ಷಿಗಳು ಮತ್ತು ರೈತರಿಂದ ಸೋಂಕಿತ ಸಸ್ಯ ವಸ್ತುಗಳ ಸಾಗಣೆಯ ಮೂಲಕ ಹೆಚ್ಚು ದೂರದವರೆಗೆ ಹರಡಬಹುದು. ಎ. ಡಿಸ್ಟ್ರಕ್ಟರ್ನ ಜೀವನ ಚಕ್ರವು ಸಾಮಾನ್ಯವಾಗಿ 32-34 ದಿನಗಳದ್ದಾಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಕೀಟಗಳು ಚೆನ್ನಾಗಿ ಬೆಳೆದ ಸಸ್ಯಗಳಿಗೆ ಆದ್ಯತೆ ನೀಡುವುದರಿಂದ ಸಾರಜನಕವು ಸಮೃದ್ಧವಾಗಿರುವ ರಸಗೊಬ್ಬರದ ಮಿತಿಮೀರಿದ ಬಳಕೆ ಮಾಡಬೇಡಿ.
  • ದಟ್ಟವಾದ ಕ್ಯಾನೋಪಿಗಳು ಬೆಳೆಯದಿರಲು ಮರಗಳ ಎತ್ತರವನ್ನು ಕತ್ತರಿಸಿ.
  • ಸೋಂಕಿತ ಎಲೆಗಳು, ಶಾಖೆಗಳು ಮತ್ತು ಕೊಂಬೆಗಳನ್ನು ವಿಲೇವಾರಿ ಮಾಡುವುದರಿಂದ ನರ್ಸರಿಗಳ ಮೇಲೆ ಸ್ಕೇಲ್ ಕೀಟಗಳ ಸೋಂಕನ್ನು ನಿಯಂತ್ರಿಸಲು ಸಹಾಯವಾಗುತ್ತದೆ.
  • ತೋಟಗಳಲ್ಲಿ ಅತೀ ಹೆಚ್ಚಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.
  • ಸುತ್ತಮುತ್ತಲಿನಲ್ಲಿ ಬೆಂಡೆಕಾಕಿ ಬೆಳೆ ಮತ್ತು ಅಬುಟಿಲೋನ್ ಇಂಡಿಸಿಮ್(ತುಟ್ಟೂರು ಬೆಂಡಾ) ಉಪಸ್ಥಿತಿಯನ್ನು ತಪ್ಪಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ