ದ್ರಾಕ್ಷಿ

ವೈನ್ ಫ್ಲೀ ಬೀಟಲ್/ ಬಳ್ಳಿ ಚಿಗಟ ಜೀರುಂಡೆ

Altica ampelophaga

ಕೀಟ

5 mins to read

ಸಂಕ್ಷಿಪ್ತವಾಗಿ

  • ಹೊಳೆಯುವ ಜೀರುಂಡೆಗಳು ಕಪ್ಪು, ಕಂದು ಅಥವಾ ಪಟ್ಟೆ ಬಣ್ಣದಲ್ಲಿರುತ್ತವೆ ಮತ್ತು ಸಾಮಾನ್ಯವಾಗಿ 4 ರಿಂದ 5 ಮಿ.ಮೀ ಉದ್ದವಿರುತ್ತವೆ.
  • ಅವು ಎಲೆಗಳ ಮೇಲೆ ವಿಶೇಷವಾಗಿ ಎಳೆಯ ಮೊಳಕೆಗಳ ಮೇಲೆ ಹಲವಾರು ರಂಧ್ರಗಳನ್ನು ಉತ್ಪತ್ತಿ ಮಾಡುತ್ತವೆ ಮತ್ತು ನೆಕ್ರೋಟಿಕ್ ಅಂಗಾಂಶಗಳ ಗುರುತುಗಳನ್ನು ಬಿಡುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ದ್ರಾಕ್ಷಿ

ರೋಗಲಕ್ಷಣಗಳು

ವಯಸ್ಕ ಕೀಟಗಳು ಮತ್ತು ಲಾರ್ವಾಗಳು ಎಲೆಗಳಲ್ಲಿ ಉತ್ಪತ್ತಿ ಮಾಡುವ ಲಕ್ಷಣಗಳು ವಿಭಿನ್ನವಾಗಿವೆ. ವಯಸ್ಕ ಕೀಟಗಳು ಅಂಗವನ್ನು ಚುಚ್ಚುವ ಮೂಲಕ ಎಲೆಗಳನ್ನು ತಿನ್ನುತ್ತವೆ ಮತ್ತು ಸಾಮಾನ್ಯವಾಗಿ ಸಣ್ಣದಾಗಿರುವ ಹಲವಾರು ರಂಧ್ರಗಳನ್ನು ಮಾಡುತ್ತವೆ. ಲಾರ್ವಾಗಳು ಎಲೆಗಳನ್ನು ಮೇಲೆಮೇಲೆ ತಿನ್ನುತ್ತವೆ, ಎದುರು ಭಾಗದ ನೆಕ್ರೋಟಿಕ್ ಎಪಿಡರ್ಮಿಸ್ ಅನ್ನು ಮಾತ್ರ ಬಿಡುತ್ತವೆ. ಹವಾಮಾನ ಪರಿಸ್ಥಿತಿಗಳು ಅತಿಯಾದ ವಯಸ್ಕ ಕೀಟದ ಆರಂಭಿಕ ಕಾಣಿಸಿಕೊಳ್ಳುವಿಕೆಯನ್ನು ಬೆಂಬಲಿಸಿದಾಗ ದೊಡ್ಡ ಹಾನಿ ಉಂಟಾಗುತ್ತದೆ. ವಸಂತಕಾಲದ ಆರಂಭದಲ್ಲಿ ಅವು ಸಕ್ರಿಯವಾಗಿದ್ದರೆ, ಅವು ಎಲೆಗಳನ್ನು ಮಾತ್ರವಲ್ಲದೆ ಈಗಷ್ಟೇ ಅರಳಿರುವ ದ್ರಾಕ್ಷಿ ಮೊಗ್ಗುಗಳನ್ನು ಸಹ ತಿನ್ನುತ್ತವೆ. ತೀವ್ರ ಮುತ್ತಿಕೊಳ್ಳುವಿಕೆಯ ಸಂದರ್ಭದಲ್ಲಿ, ಎಲೆಗಳನ್ನು ಅಸ್ಥಿಪಂಜರಗೊಳಿಸಬಹುದು ಮತ್ತು ಹೊಸದಾಗಿ ರೂಪುಗೊಂಡ ಹೂಗೊಂಚಲುಗಳು ನಾಶವಾಗುತ್ತವೆ. ಹೆಚ್ಚು ಮತ್ತು ಕಠಿಣವಾದ ಎಲೆಗಳನ್ನು ಹೊಂದಿರುವ ಪ್ರಭೇದಗಳು ದಾಳಿಯನ್ನು ಉತ್ತಮವಾಗಿ ವಿರೋಧಿಸುತ್ತವೆ ಮತ್ತು ಗಾಯವು ಅಲ್ಪವಾಗಿರುತ್ತದೆ. ಮೊಗ್ಗುಗಳು ಸಾಕಷ್ಟು ದೊಡ್ಡದಾಗಿ ಬೆಳೆದ ನಂತರ, ಈ ಜೀರುಂಡೆಗಳು ದ್ರಾಕ್ಷಿಗೆ ದೊಡ್ಡ ಹಾನಿಯನ್ನುಂಟುಮಾಡುವುದಿಲ್ಲ.

Recommendations

ಜೈವಿಕ ನಿಯಂತ್ರಣ

ಪರಭಕ್ಷಕ ಕೀಟ ಕ್ರೊನೊಕೊರುಲಿಯಾ (ನೀಲಿ ಕೀಟ) ಬಳ್ಳಿ ಚಿಗಟ ಜೀರುಂಡೆಯ ಮುಖ್ಯ ಜೈವಿಕ ನಿಯಂತ್ರಣ ವೆಕ್ಟರ್ ಆಗಿದೆ. ಕೀಟ ನಿಯಂತ್ರಣದಲ್ಲಿ ಇತರ ಪರಭಕ್ಷಕ ಮತ್ತು ಪಾಲಿಫಾಗಸ್ ಪರಾವಲಂಬಿಗಳನ್ನು ಸಹ ಬಳಸಬಹುದು. ಮಣ್ಣಿಗೆ ಅನ್ವಯಿಸುವ ಪ್ರಯೋಜನಕಾರಿ ನೆಮಟೋಡ್ಗಳು ಲಾರ್ವಾಗಳನ್ನು ನಾಶಮಾಡುತ್ತವೆ ಮತ್ತು ಮುಂದಿನ ಪೀಳಿಗೆಯ ವಯಸ್ಕ ಕೀಟಗಳು ಹೊರಹೊಮ್ಮದಂತೆ ತಡೆಯಲು ಸಹಾಯ ಮಾಡುತ್ತದೆ. ಮೊದಲ ವಯಸ್ಕ ಕೀಟಗಳನ್ನು ಗಮನಿಸಿದ ನಂತರ ಸಿಂಪಡಿಸುವ ಮೂಲಕ ಅನ್ವಯಿಸುವ ಸ್ಪಿನೋಸಾಡ್ ಅಥವಾ ಬೇವಿನ ಎಣ್ಣೆ ಸೂತ್ರೀಕರಣಗಳು ಕೀಟಗಳ ಸಂಖ್ಯೆಯನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳೊಂದಿಗೆ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಬಳ್ಳಿ ಚಿಗಟ ಜೀರುಂಡೆಯ ವಿರುದ್ಧ ಶಿಫಾರಸು ಮಾಡಲಾದ ಸಕ್ರಿಯ ಪದಾರ್ಥಗಳಲ್ಲಿ ಕ್ಲೋರ್‌ಪಿರಿಫೊಸ್, ಲ್ಯಾಂಬ್ಡಾ ಸಿಹಲೋಥ್ರಿನ್ ಸೂತ್ರೀಕರಣಗಳು ಸೇರಿವೆಯ ಇದನ್ನು ಮೊದಲ ವಯಸ್ಕ ಕೀಟಗಳನ್ನು ಗಮನಿಸಿದ ನಂತರ ಸಿಂಪಡಿಸುವ ಮೂಲಕ ಅಥವಾ ಎರಚುವ ಮೂಲಕ ಹಾಕಬೇಕು.

ಅದಕ್ಕೆ ಏನು ಕಾರಣ

ಬಳ್ಳಿ ಚಿಗಟ ಜೀರುಂಡೆ, ಅಲ್ಟಿಕಾಂಪೆಲೋಫಾಗಾ ಹಾನಿಯನ್ನು ತರುತ್ತದೆ. ಈ ಹೊಳೆಯುವ ಲೋಹದಂತಹ ಜೀರುಂಡೆಗಳು ವಸಂತಕಾಲದಲ್ಲಿ ಅವು ಹೊಸದಾಗಿ ಹೊರಹೊಮ್ಮುವ ಎಲೆಗಳು ಅಥವಾ ದ್ರಾಕ್ಷಿ ಮೊಗ್ಗುಗಳ ಮೇಲೆ ದಾಳಿ ಮಾಡಿದಾಗ ಸಕ್ರಿಯವಾಗಿರುತ್ತವೆ. ಪರಿಸರೀಯ ಅಂಶಗಳನ್ನು ಅವಲಂಬಿಸಿ ವಿವಿಧ ಅಭಿವೃದ್ಧಿ ಹಂತಗಳ ಅವಧಿ ಗಣನೀಯವಾಗಿ ಬದಲಾಗುತ್ತದೆ. ಹೆಣ್ಣು ಎಲೆಗಳ ಕೆಳಭಾಗದಲ್ಲಿ ಗುಂಪಿನಲ್ಲಿ ಮೊಟ್ಟೆಗಳನ್ನು ಇಡುತ್ತವೆ, ಇದು ಜೀವಿತಾವಧಿಯಲ್ಲಿ ನೂರಾರು ಮೊಟ್ಟೆಗಳನ್ನಿಡುತ್ತದೆ. ಸಾಮಾನ್ಯವಾಗಿ, ಮೊಟ್ಟೆ ಇಟ್ಟ 1-2 ವಾರಗಳ ನಂತರ ಮೊಟ್ಟೆಗಳು ಹೊರಬರುತ್ತವೆ. ಲಾರ್ವಾಗಳು ನಂತರ ಸುಮಾರು 1 ತಿಂಗಳ ಕಾಲ ಚಿಗುರೆಲೆಗಳನ್ನು ಆಹಾರವಾಗಿ ತಿನ್ನುತ್ತವೆ. ಇದು ಮೂರು ಬೆಳವಣಿಗೆಯ ಹಂತಗಳನ್ನು ಹಾದುಹೋಗುತ್ತದೆ. ನಂತರ ಅವು 5 ಸೆಂ.ಮೀ ಆಳದಲ್ಲಿ ಮಣ್ಣಿನಲ್ಲಿ ಕೋಶ ಮಾಡುತ್ತವೆ ಮತ್ತು ಮುಂದಿನ ಪೀಳಿಗೆಯ ವಯಸ್ಕ ಕೀಟಗಳು 1-3 ವಾರಗಳ ನಂತರ ಕಾಣಿಸಿಕೊಳ್ಳುತ್ತವೆ. ವರ್ಷಕ್ಕೆ ಸಾಮಾನ್ಯವಾಗಿ 2 ಮತ್ತು ಕೆಲವೊಮ್ಮೆ 3 ತಲೆಮಾರುಗಳಿರುತ್ತವೆ. ಅಂತಿಮ ಪೀಳಿಗೆಯ ವಯಸ್ಕ ಕೀಟಗಳು ಎಲೆ ಕಸ ಅಥವಾ ಇತರ ಆಶ್ರಯಗಳ ನಡುವೆ ಅಡಗಿಕೊಂಡಿರುತ್ತವೆ.


ಮುಂಜಾಗ್ರತಾ ಕ್ರಮಗಳು

  • ವಯಸ್ಕ ಕೀಟಗಳು ಅಥವಾ ಲಾರ್ವಾಗಳಿಂದ ಉಂಟಾಗುವ ರೋಗಲಕ್ಷಣಗಳಿಗಾಗಿ ದ್ರಾಕ್ಷಿತೋಟವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಿರಿ.
  • ಮರ ಅಥವಾ ಬಂಜರು ಪ್ರದೇಶಗಳಿಗೆ ಹತ್ತಿರದಲ್ಲಿ ದ್ರಾಕ್ಷಿತೋಟಗಳನ್ನು ನೆಡುವುದನ್ನು ತಪ್ಪಿಸಿ.
  • ಬಳ್ಳಿ ಚಿಗಟ ಜೀರುಂಡೆ ಪ್ಯೂಪೆಯನ್ನು ನಿಯಂತ್ರಿಸಲು ಸಾಲುಗಳ ನಡುವೆ ಬೆಳೆಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ