Archips argyrospila
ಕೀಟ
ಮರಿ ಲಾರ್ವಾಗಳು ಆರಂಭದಲ್ಲಿ ಹೂವುಗಳು ಮತ್ತು ಮೊಗ್ಗುಗಳನ್ನು ತಿನ್ನುತ್ತವೆ. ರಂಧ್ರಗಳನ್ನು ಕೊರೆದುಕೊಂಡು ಒಳಗಿನ ಅಂಗಾಂಶಗಳಿಗೆ ಹೋಗುತ್ತವೆ. ನಂತರದಲ್ಲಿ ಎಲೆಯ ಎರಡು ಅಂಚುಗಳನ್ನು ರೇಷ್ಮೆ ದಾರಗಳೊಂದಿಗೆ ಸುತ್ತಿಕೊಂಡು ಗೂಡು ಮಾಡಿಕೊಳ್ಳುವ ಮೂಲಕ ಬಹುತೇಕ ಸಸ್ಯದ ಎಲ್ಲಾ ಭಾಗಗಳನ್ನು ಆಕ್ರಮಿಸುತ್ತವೆ. ಕೀಟ ಮುತ್ತಿಕೊಂಡ ಎಲೆಗಳು ಬಾಡಿದಂತೆ ಕಾಣುತ್ತವೆ ಮತ್ತು ತೀವ್ರತರವಾದ ಸಂದರ್ಭಗಳಲ್ಲಿ ಎಲೆಗಳಚುವಿಕೆಯಾಗಬಹುದು. ಹಣ್ಣುಗಳ ಸಿಪ್ಪೆಯ ಮೇಲೆ ಆಳವಿಲ್ಲದ ಗುಂಡಿಗಳು ಕಾಣಬಹುದು ಮತ್ತು ಅಕಾಲಿಕವಾಗಿ ಬೀಳದ ಹಣ್ಣುಗಳು ಒರಟಾಗಿದ್ದು, ಬಲೆ-ತರಹದ ಮೇಲ್ಮೈಗಳೊಂದಿಗೆ ಕಂಚಿನ-ಬಣ್ಣದ ಗುರುತುಗಳನ್ನು ಹೊಂದಿರಬಹುದು. ಹಣ್ಣಿನ ವಿರೂಪತೆ ಸಾಮಾನ್ಯವಾಗಿರುತ್ತದೆ ಮತ್ತು ಅವುಗಳನ್ನು ಮಾರಾಟ ಮಾಡಲಾಗುವುದಿಲ್ಲ. ತೀವ್ರವಾದ ಮುತ್ತಿಕೊಳ್ಳುವಿಕೆಯಲ್ಲಿ, ಮರಗಳು ಸಂಪೂರ್ಣವಾಗಿ ರೇಷ್ಮೆ ಎಳೆಗಳಿಂದ ಆವೃತವಾಗಬಹುದು. ಜೊತೆಗೆ, ಅವುಗಳ ಕೆಳಗಿನ ನೆಲದ ಭಾಗವೂ ಸಹ. ಮರಗಳ ಕೆಳಗಿರುವ ಸಸ್ಯಗಳ ಮೇಲೂ ದಾಳಿಯಾಗಬಹುದು. ಏಕೆಂದರೆ ಲಾರ್ವಾಗಳು ನೆಲಕ್ಕೆ ಬಿದ್ದು ಅವುಗಳನ್ನು ತಿನ್ನುತ್ತವೆ.
ಲೇಸ್‍ವಿಂಗ್, ಜೀರುಂಡೆಗಳು ಮತ್ತು ಲೇಡಿಬರ್ಡ್‌ಗಳಂತಹ ಹಲವಾರು ಸಾಮಾನ್ಯ ಪರಭಕ್ಷಕಗಳು ಫ್ರೂಟ್ ಟ್ರೀ ಲೀಫ್‌ರೋಲರ್‌ನ ಲಾರ್ವಾಗಳನ್ನು ತಿನ್ನಬಹುದು. ಟ್ರೈಕೊಗ್ರಾಮಾ ಕುಲದ ಪ್ಯಾರಾಸಿಟಾಯ್ಡ್ ಕಣಜಗಳು ಎಲೆ ಸುರುಳಿ ಕೀಟದ ಮೊಟ್ಟೆಗಳ ಮೇಲೆ ಮೊಟ್ಟೆಗಳನ್ನು ಇಡುತ್ತವೆ ಮತ್ತು ಅವು ಬೆಳೆದಂತೆ ಮರಿ ಲಾರ್ವಾಗಳನ್ನು ಬೇಟೆಯಾಡುತ್ತವೆ. ಈ ನೈಸರ್ಗಿಕ ಶತ್ರುಗಳು ಕೀಟ ಸಂಖ್ಯೆಯನ್ನು ಕಡಿಮೆ ಮಟ್ಟದಲ್ಲಿ ಇರಿಸಲು ಸಹಾಯ ಮಾಡಬಹುದು, ಆದರೆ ಕೆಲವೊಮ್ಮೆ ಏಕಾಏಕಿ ದಾಳಿ ಸಂಭವಿಸಬಹುದು. ಸಣ್ಣ ಶ್ರೇಣಿಯ ತೈಲದ ಅನ್ವಯಗಳು ಅಥವಾ ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಅಥವಾ ಸ್ಪಿನೋಸಾಡ್ ಆಧಾರಿತ ದ್ರವಗಳು ಸಾವಯವವಾಗಿ ಬಳಸಲು ಅಂಗೀಕೃತವಾಗಿವೆ.
ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ಮುಂಜಾಗ್ರತಾ ಕ್ರಮಗಳಿರುವ ಸಮಗ್ರ ಕೀಟ ನಿರ್ವಹಣೆಯನ್ನು ಯಾವಾಗಲೂ ಪರಿಗಣಿಸಿ. ಸಕ್ರಿಯ ಪದಾರ್ಥಗಳಾದ ಮೆಥಾಕ್ಸಿಫೆನೊಜೈಡ್, ಕೊರ್ಪಿರಿಫೊಸ್, ಕ್ಲೋರಂಟ್ರಾನಿಲಿಪ್ರೋಲ್ ಅಥವಾ ಸ್ಪಿನೆಟೋರಮ್ ಅನ್ನು ಒಳಗೊಂಡಿರುವ ಉತ್ಪನ್ನಗಳು ಕೀಟ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಎರಡನೆಯದು ಜೇನುನೊಣಗಳಿಗೆ ವಿಷಕಾರಿಯಾಗಿದೆ. ಬೆಳೆಯ ವಿಧವು ನಿಖರವಾದ ಚಿಕಿತ್ಸೆಯನ್ನು ನಿರ್ಧರಿಸುತ್ತದೆ ಎಂಬುದನ್ನು ಗಮನಿಸಿ.
ರೋಗಲಕ್ಷಣಗಳು ಆರ್ಕಿಪ್ಸ್ ಆರ್ಗೈರೋಸ್ಪಿಲಾ ಎಂಬ ಪತಂಗದ ಲಾರ್ವಾಗಳಿಂದ ಉಂಟಾಗುತ್ತವೆ, ಇದನ್ನು ಸಾಮಾನ್ಯವಾಗಿ ಹಣ್ಣು-ಮರದ ಎಲೆ ಸುರಳಿ ಚಿಟ್ಟೆ (ಫ್ರೂಟ್ ಟ್ರೀ ಲೀಫ್ ರೋಲರ್ ಮಾತ್) ಎಂದು ಕರೆಯಲಾಗುತ್ತದೆ. ಬೆಳೆದ ಕೀಟಗಳು ಕಂದುಬಣ್ಣದ, ಕೂದಲುಳ್ಳ ದೇಹವನ್ನು ಹೊಂದಿದ್ದು, ಮುಂಭಾಗದ ರೆಕ್ಕೆಗಳು ಸುಮಾರು 10 ಮಿಮೀ ಉದ್ದ ಮತ್ತು ಚತುರ್ಭುಜದ ಅಂಶವನ್ನು ಹೊಂದಿರುತ್ತವೆ. ಬಣ್ಣವು ಕೆಂಪು ಕಂದು, ಗಾಢ ಕಂದು ಮತ್ತು ಕಂದು ಬಣ್ಣಗಳ ಸಂಯೋಜನೆಯನ್ನು ಒಳಗೊಂಡಿದೆ. ಹಿಂಭಾಗದ ರೆಕ್ಕೆಗಳು ಏಕರೂಪವಾಗಿ ಬೂದು ಬಣ್ಣದ್ದಾಗಿರುತ್ತವೆ, ಸ್ವಲ್ಪ ಕಂದು ಬಣ್ಣದ ತುದಿಗಳು ಮತ್ತು ಅಂಚಿರುವ ತುದಿಗಳನ್ಗನು ಹೊಂದಿರುತ್ತದೆ. ಹೆಣ್ಣು ಕೀಟಗಳು ಸಾಮಾನ್ಯವಾಗಿ ಗಂಡು ಕೀಟಗಳಿಗಿಂತ ತೆಳುಬಣ್ಣದ್ದಾಗಿರುತ್ತವೆ. ಅವು ಆಶ್ರಯದಾತ ಕೊಂಬೆಗಳ ಮೇಲೆ ಸಾಮೂಹಿಕವಾಗಿ ಮೊಟ್ಟೆಗಳನ್ನು ಇಡುತ್ತವೆ ಮತ್ತು ಅವುಗಳನ್ನು ರಕ್ಷಣಾತ್ಮಕ ಪದರದಿಂದ ಮುಚ್ಚುತ್ತವೆ. ಮರಿ ಲಾರ್ವಾಗಳು ಮೊಗ್ಗುಗಳಲ್ಲಿ ರಂಧ್ರಗಳನ್ನು ಕೊರೆದರೆ, ನಂತರದ ರೂಪಗಳು ಎಲೆಗಳನ್ನು ಸುತ್ತಿಕೊಂಡು ಅಥವಾ ಎಲೆಗಳನ್ನು ಒಟ್ಟಾಗಿ ಸೇರಿಸಿ ಅಥವಾ ಹಣ್ಣುಗಳಿಗೆ ನೇಯ್ದು ಗೂಡನ್ನು ನಿರ್ಮಿಸುತ್ತವೆ. ಅಲ್ಲಿಂದ, ಅವು ಎಲೆಗಳು, ಹೂವುಗಳು, ಮೊಗ್ಗುಗಳು ಅಥವಾ ಕೆಲವೊಮ್ಮೆ ಆಶ್ರಯದಾತ ಸಸ್ಯದ ಹಣ್ಣುಗಳನ್ನು ತಿನ್ನಲು ಹೊರಹೊಮ್ಮುತ್ತವೆ. ಲಾರ್ವಾಗಳು ಸೇಬು ಮತ್ತು ಪೇರಳೆ ಮರಗಳು, ಸಿಟ್ರಸ್ ಮತ್ತು ಸ್ಟೋನ್ ಹಣ್ಣುಗಳಂತಹ ವ್ಯಾಪಕ ಶ್ರೇಣಿಯ ಅತಿಥೇಯಗಳ ಮೇಲೆ ದಾಳಿ ಮಾಡುತ್ತವೆ. ಅವು ವರ್ಷಕ್ಕೆ ಒಂದು ಪೀಳಿಗೆಯನ್ನು ಹೊಂದಿರುತ್ತವೆ.