Toxoptera aurantii
ಕೀಟ
ಸಿಟ್ರಸ್ ಮರಗಳ ಎಲ್ಲಾ ಬೆಳವಣಿಗೆಯ ಹಂತಗಳ ಮೇಲೆ ಇವುಗಳ ಪರಿಣಾಮವಾಗಬಹುದು. ಗಿಡಹೇನುಗಳಿಗೆ ಉದ್ದವಾದ ಚೂಪಾದ ಬಾಯಿ ಇರುತ್ತದೆ, ಅವುಗಳ ಮೂಲಕ ಅವು ಚಿಗುರು ಸುಳಿವುಗಳು ಮತ್ತು ಎಳೆ ಎಲೆಗಳ ಮೇಲಿರುವ ರಸವನ್ನು ಹೀರುತ್ತವೆ. ಇದು ಕೊಂಬೆಗಳ ಮತ್ತು ಹೂಗೊಂಚಲುಗಳ ವಿರೂಪತೆಗೆ ಕಾರಣವಾಗುತ್ತದೆ ಮತ್ತು ಎಲೆಗಳು, ಸುರುಳಿಯಾಗುತ್ತವೆ, ಸುತ್ತಿಕೊಳ್ಳುತ್ತವೆ ಅಥವಾ ಮಡಿಚಿಕೊಳ್ಳುತ್ತವೆ. ಅವು ಸಿಹಿಯಾದ ಸಸ್ಯದ ಪ್ಲೋಯೆಮ್ ಅನ್ನು ತಿನ್ನುವುದರಿಂದ, ಅಧಿಕ ಸಕ್ಕರೆಯನ್ನು ಜೇನುತುಪ್ಪದಂಥ ದ್ರವವಾಗಿ ಹೊರಹಾಕುತ್ತವೆ. ಎಲೆಗಳ ಮೇಲೆ ಅದು ಬಿದ್ದಾಗ, ಮಸಿ ಬೂಷ್ಟು ಶಿಲೀಂಧ್ರಗಳು ತಕ್ಷಣವೇ ಸುಲಭವಾಗಿ ವಸಾಹತುಮಾಡುತ್ತವೆ. ಅದು ಎಲೆಗಳನ್ನು ಕಪ್ಪು ಬಣ್ಣಕ್ಕೆ ತಿರುಗಿಸುತ್ತದೆ. ಇದು ದ್ಯುತಿಸಂಶ್ಲೇಷಣೆಗೆ ಅಡ್ಡಿಮಾಡುತ್ತದೆ ಮತ್ತು ಮರದ ಚಟುವಟಿಕೆಯ ಮೇಲೆ ಮತ್ತು ಹಣ್ಣುಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಸಿಟ್ರಸ್ ಮರಗಳಿಗೆ ಟ್ರೈಸ್ಟೀಜಾ ವೈರಸ್ನ ಸೋಂಕಿನಿಂದ ಕೂಡಾ ಹಾನಿಯುಂಟಾಗುತ್ತದೆ. ಏಕೆಂದರೆ ಇದನ್ನು ಗಿಡಹೇನುಗಳು ಸಾಗಿಸುತ್ತವೆ.
ಪರಭಕ್ಷಕಗಳಾದ ಹೂವರ್ ಫ್ಲೈ ಗಳು, ಲೇಸ್ವಿಂಗ್ ಗಳು ಮತ್ತು ಲೇಡಿ ಬರ್ಡ್ ಗಳ ಹಲವು ಜಾತಿಗಳು, ಇವು ಗಿಡಹೇನುಗಳ ಬೆಳವಣಿಗೆಯ ಎಲ್ಲಾ ಹಂತಗಳಲ್ಲೂ ಆಕ್ರಮಣ ಮಾಡಬಹುದು. ಈ ಕೀಟಕ್ಕೆ ವಿರುದ್ಧವಾಗಿ ಸಾಮಾನ್ಯವಾಗಿ ಬಳಸುವ ಎರಡು ಕೋಕ್ಸಿನಲಿಡ್ಸ್ಗಳೆಂದರೆ ಸೈಕ್ಲೋನೆಡಾ ಸಾಂಗಿನೀನಾ ಮತ್ತು ಹಿಪ್ಪೊಡಮಿಯಾ ಕಾನ್ವೆರ್ಜೆನ್ಸ್ ನ ದೊಡ್ಡ ಹುಳುಗಳು ಮತ್ತು ಲಾರ್ವಾಗಳು. ಕೆಲವು ಬೇಸಾಯ-ನಿರ್ದಿಷ್ಟ ಪರಾವಲಂಬಿ ಕಣಜಗಳು ಸಹ ನಿರ್ದಿಷ್ಟ ಪ್ರದೇಶಕ್ಕನುಗುಣವಾಗಿ ಸಿಟ್ರಸ್ಗೆ ಲಭ್ಯವಿರುತ್ತವೆ. ಆರ್ದ್ರ ವಾತಾವರಣದ ಸಮಯದಲ್ಲಿ ಗಿಡಹೇನು ಸಂಖ್ಯೆಯ ವಿರುದ್ಧ ಶಿಲೀಂಧ್ರ ನಿಯೋಜೈಗೈಟ್ಸ್ ಫ್ರೆಸ್ಸೆನ್ಸಿಯನ್ನು ನೀಡಬಹುದು. ಇರುವೆಗಳನ್ನು ಕುದಿಯುವ ನೀರಿನಿಂದ ಅಥವಾ ನೈಸರ್ಗಿಕ ಪೈರೆಥ್ರಿನ್ಗಳನ್ನು ಹೊಂದಿರುವ ದ್ರಾವಣಗಳ ಮೂಲಕ ಕೊಲ್ಲಬಹುದು. ಕೀಟನಾಶಕ ದ್ರಾವಣಗಳನ್ನು ಗಿಡಹೇನುಗಳ ವಿರುದ್ಧವಾಗಿ ಬಳಸಬಹುದು, ಉದಾಹರಣೆಗೆ ಸೋಪ್, ಮಾರ್ಜಕ ಸೋಪ್, ಬೇವು ಅಥವಾ ಮೆಣಸಿನಕಾಯಿ ಸಾರಗಳನ್ನು ಆಧರಿಸಿದ ದ್ರಾವಣಗಳು.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಗಿಡಹೇನುಗಳನ್ನು ನಿಯಂತ್ರಿಸಲು ಹಲವಾರು ಕೀಟನಾಶಕಗಳನ್ನು ಬಳಸಬಹುದು, ಆದರೆ ಅವುಗಳ ಪರಿಣಾಮಕಾರಿತ್ವವು ಸಕಾಲಿಕವಾಗಿ ಸಿಂಪಡಿಸುವುದರ ಮೇಲೆ ಅವಲಂಬಿಸಿರುತ್ತದೆ, ಉದಾಹರಣೆಗೆ ಎಲೆಗಳು ಸುರುಳಿಯಾಗುವ ಮುನ್ನ ಅಥವಾ ಅವುಗಳ ಸಂಖ್ಯೆ ತುಂಬಾ ಹೆಚ್ಚಾಗುವ ಮುನ್ನ. ಪೆಟ್ರೋಲಿಯಂ ಎಣ್ಣೆಯನ್ನು ಹೊಂದಿರುವ ವಾಣಿಜ್ಯ ಉತ್ಪನ್ನಗಳನ್ನು ಎಲೆಗಳ ಕೆಳಭಾಗದಲ್ಲಿ ಸಿಂಪಡಿಸಬಹುದು. ಇದರಿಂದಾಗಿ ಅವು ನೇರವಾಗಿ ಗಿಡಹೇನುಗಳ ಸಂಪರ್ಕಕ್ಕೆ ಬರುತ್ತವೆ. ಸಂಶ್ಲೇಷಿತ ಪೈರೆಥ್ರಾಯ್ಡ್ಗಳು ಗಿಡಹೇನುಗಳು ಮತ್ತು ಇರುವೆಗಳ ವಿರುದ್ಧ ಪರಿಣಾಮಕಾರಿಯಾಗಬಹುದು. ಆದರೆ ಅವು ನೈಸರ್ಗಿಕ ಶತ್ರುಗಳ ಮೇಲೆ ಸಹ ನಕಾರಾತ್ಮಕ ಪ್ರಭಾವ ಬೀರಬಹುದು.
ತೋಕ್ಸೊಪ್ಟೆರಾ ಔರಂಟಿ ಎಂಬ ಕಪ್ಪು ಸಿಟ್ರಸ್ ಗಿಡಹೇನುಗಳ ದೊಡ್ಡ ಹುಳುಗಳು ಮತ್ತು ಮರಿಹುಳುಗಳಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಅವು ಸಾಮಾನ್ಯವಾಗಿ ಸಿಟ್ರಸ್ ಮರಗಳು ಮತ್ತು ಇತರ ಕೃಷಿಗಳಿಗೆ ಟಿ. ಸಿಟ್ರಿಡಿಡಾದ ಮತ್ತೊಂದು ಸಂಬಂಧಿತ ಗಿಡಹೇನು ಜಾತಿಯ ಜೊತೆ ಸೇರಿ ಸೋಂಕು ಮಾಡುತ್ತದೆ. ಇದನ್ನು ಸಾಮಾನ್ಯವಾಗಿ ಕಂದು ಸಿಟ್ರಸ್ ಗಿಡಹೇನು ಎಂದು ಕರೆಯಲಾಗುತ್ತದೆ. ದೊಡ್ಡ ಹುಳುಗಳು, ಎರಡು ರೂಪಗಳಲ್ಲಿ ಇರುತ್ತವೆ, ರೆಕ್ಕೆಗಳೊಂದಿಗೆ ಅಥವಾ ಇಲ್ಲದೆ. ರೆಕ್ಕೆಯಿರುವ ಹುಳುಗಳು 30 ಕಿ.ಮೀ. ದೂರದವರೆಗೆ ಹಾರಬಲ್ಲವು ಮತ್ತು ಆಹಾರ ಸರಬರಾಜು ಸೀಮಿತವಾಗಿದ್ದಾಗ ಅಥವಾ ಅವುಗಳು ತುಂಬಾ ದೊಡ್ಡದಾದಾಗ ಮಾತ್ರ ಅವು ಕಂಡುಬರುತ್ತವೆ. ಅವುಗಳಿಗೆ ಸುಮಾರು 1.5 ಮಿಮೀ ಉದ್ದವಿರುವ ತೆಳು ಕಂದು ಅಥವಾ ಕಪ್ಪು ಬಣ್ಣದ ದೇಹವಿರುತ್ತದೆ. ಕಪ್ಪು ಸಿಟ್ರಸ್ ಗಿಡಹೇನಿಗೆ ಒಂದು ಸರಳ ಜೀವನ ಚಕ್ರವಿರುತ್ತದೆ ಮತ್ತು ಅವುಗಳ ಸಂತಾನೋತ್ಪತ್ತಿ ಪ್ರಮಾಣ ಹೆಚ್ಚಿರುವುದರಿಂದ ಅದು ವೇಗವಾದ ಮತ್ತು ತೀವ್ರವಾದ ಸೋಂಕುಗಳಿಗೆ ಕಾರಣವಾಗಬಹುದು. ಅವುಗಳ ಬೆಳವಣಿಗೆ, ಉಳಿವು ಮತ್ತು ಸಂತಾನೋತ್ಪತ್ತಿ, 9.4 ಮತ್ತು 30.4 °ಸಿ ಉಷ್ಣಾಂಶದ ನಡುವೆ ಬದಲಾಗುತ್ತದೆ. ಜೇನುತುಪ್ಪ ಇರುವೆಗಳನ್ನು ಆಕರ್ಷಿಸುತ್ತದೆ. ಇದು ನೈಸರ್ಗಿಕ ಪರಭಕ್ಷಕಗಳಿಂದ ಗಿಡಹೇನುಗಳನ್ನು ರಕ್ಷಿಸುತ್ತದೆ. ಅವುಗಳನ್ನು ಸಿಟ್ರಸ್ ನ ಟ್ರೈಸ್ಟೀಜಾ ರೋಗ ಮತ್ತು ಝುಕಿನಿ ಹಳದಿ ಮೊಸಾಯಿಕ್ ವೈರಸ್ ನ ವಾಹಕ ಎಂದು ಪರಿಗಣಿಸಲಾಗುತ್ತದೆ.