ಬಾಳೆಹಣ್ಣು

ಬಾಳೆಯ ಸ್ಕ್ಯಾಬ್ ಮಾತ್

Nacoleia octasema

ಕೀಟ

ಸಂಕ್ಷಿಪ್ತವಾಗಿ

  • ಹೊರಹೊಮ್ಮುವ ಸಮಯದಲ್ಲಿ, ಮರಿಹುಳುಗಳು ಹೂಗೊಂಚಲುಗಳು ಮತ್ತು ಬೆಳೆಯುತ್ತಿರುವ ಹಣ್ಣುಗಳ ಮೇಲ್ಮೈಯನ್ನು ತಿನ್ನುತ್ತವೆ.
  • ಕೆಲವು ಸಂದರ್ಭಗಳಲ್ಲಿ, ಪುರುಷ ಹೂಗೊಂಚಲುಗಳು ಅಥವಾ ಪ್ರೌಢಾವಸ್ಥೆಯಲ್ಲಿರುವ ಹಣ್ಣುಗಳ ಮೇಲೂ ಸಹ ಆಕ್ರಮಣ ಮಾಡುತ್ತವೆ.
  • ಹಣ್ಣಿನ ಅಂದವನ್ನು ಹಾಳು ಮಾಡುವ ಗುಳ್ಳೆಗಳು ಮಾರಾಟದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಬಾಳೆಹಣ್ಣು

ರೋಗಲಕ್ಷಣಗಳು

ಬಾಳೆ ಸ್ಕ್ಯಾಬ್ ಮಾತ್ ನಿಂದಾಗುವ ಹಾನಿ ಪ್ರಾಥಮಿಕವಾಗಿ ಲಾರ್ವಾ ಹಂತದಿಂದ ಉಂಟಾಗುತ್ತದೆ ಮತ್ತು ಮುಖ್ಯವಾಗಿ ಹಣ್ಣುಗಳಲ್ಲಿ ಉಂಟಾಗುತ್ತದೆ. ಮರಿಹುಳುಗಳು ಇನ್ನೂ ಕವಚಗಳಿಂದ(ಬ್ರಾಕ್ಟ್) ರಕ್ಷಿಸಲ್ಪಟ್ಟಿರುವ ಹಣ್ಣಿನ ಗೊನೆಗಳ ಮೇಲೆ ಮುಖ್ಯವಾಗಿ ದಾಳಿ ನಡೆಸುತ್ತವೆ. ಹೊರಹೊಮ್ಮುವಿಕೆಯ ಸಮಯದಲ್ಲಿ, ಇವು ಹೂಗೊಂಚಲುಗಳು ಮತ್ತು ಬೆಳೆಯುತ್ತಿರುವ ಹಣ್ಣುಗಳ ಮೇಲ್ಮೈಯನ್ನು ತಿನ್ನಲು ಪ್ರಾರಂಭಿಸುತ್ತವೆ. ಇದರಿಂದ ಮೇಲ್ಮಟ್ಟದ ಹಾನಿಯಾಗುತ್ತದೆ ಮತ್ತು ಇದರ ಪರಿಣಾಮವಾಗಿ ಕಲೆಗಳು ಉಂಟಾಗಿ ಅವು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಕಾಲಾನಂತರದಲ್ಲಿ, ಕವಚಗಳು(ಬ್ರಾಕ್ಟ್) ಎದ್ದು ಉದುರಲು ಆರಂಭಿಸಿದಾಗ, ಈ ಪತಂಗಗಳು ಗೊನೆಯಲ್ಲಿರುವ ಹೊಸ ಮತ್ತು ಇನ್ನೂ ಕವಚಗಳಿಂದ ರಕ್ಷಿಸಲ್ಪಟ್ಟಿರುವ ಹಣ್ಣುಗಳತ್ತ ವಲಸೆ ಹೋಗುತ್ತವೆ. ಯಾವುದೇ ಪರ್ಯಾಯವಿಲ್ಲದಿದ್ದರೆ, ಲಾರ್ವಾಗಳು ಗೊನೆಯ ತಳದಲ್ಲಿ ಉಳಿಯುತ್ತವೆ. ಪುರುಷ ಹೂಗೊಂಚಲುಗಳನ್ನು ಅಥವಾ ಪಕ್ವಗೊಳುತ್ತಿರುವ ಹಣ್ಣುಗಳನ್ನು ತಿನ್ನುತ್ತವೆ. ಬಾಳೆ ಸ್ಕ್ಯಾಬ್ ಮಾತ್ ಆಹಾರ ಕ್ರಮದಿಂದ ಉಂಟಾಗುವ ಪಾರದರ್ಶಕ ಜೆಲ್ಲಿ ರೀತಿಯ ಪದಾರ್ಥ ಈ ತಾಣಗಳಲ್ಲಿ ಕಂಡುಬರುತ್ತವೆ. ಹಣ್ಣಿನ ಅಂದಗೆಡಿಸುವ ಈ ಕಲೆಗಳಿಂದಾಗಿ ಹಣ್ಣುಗಳು ಮಾರುಕಟ್ಟೆಗೆ ಸೂಕ್ತವಲ್ಲವಂತೆ ಆಗುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಈ ಕೀಟದ ವಿರುದ್ಧ ಯಾವುದೇ ಪ್ರಮುಖ ಪರಾವಲಂಬಿ ಅಥವಾ ಪರಭಕ್ಷಕವನ್ನು ಗುರುತಿಸಲಾಗಿಲ್ಲ. ಕೆಲವು ಪರಾವಲಂಬಿ ಕಣಜಗಳು, ಜೇಡಗಳು ಮತ್ತು ಇತರ ಸಾಮಾನ್ಯ ಪರಭಕ್ಷಕಗಳು ಸ್ವಲ್ಪ ಪ್ರಮಾಣದ ನೈಸರ್ಗಿಕ ನಿಯಂತ್ರಣವನ್ನು ನೀಡುತ್ತವೆ. ಸಸ್ಯಗಳು ಮತ್ತು ಹೂವುಗಳ ಮೇಲೆ ಸಾಮಾನ್ಯವಾಗಿ ಕಂಡುಬರುವ ಇರುವೆ ಟೆಟ್ರಾಮೋರಿಯಮ್ ಬೈಕಾರಿನಾಟಮ್ ಬಾಳೆ ಸ್ಕ್ಯಾಬ್ ಮಾತ್ ಗೆ ಸ್ವಲ್ಪ ನಿಯಂತ್ರಣವನ್ನು ನೀಡುತ್ತದೆ. ಸ್ಪೈನೋಸ್ಯಾಡ್ ಸಂಯುಕ್ತ, ಶಿಲೀಂಧ್ರ ಬ್ಯೂವಾರಿಯಾ ಬಾಸ್ಸಿನಾ ಅಥವಾ ಮೆಟಾರ್ಹಾರ್ಜಿಯಾಮ್ ಅನಿಸೊಪ್ಲಿಯಾ ಅಥವಾ ಬ್ಯಾಕ್ಟೀರಿಯ ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಸಹ ಪರಿಣಾಮಕಾರಿಯಾಗಬಲ್ಲವು.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರವಾದ ಮಾರ್ಗ ಲಭ್ಯವಿದ್ದರೆ ಮೊದಲು ಅದನ್ನು ಪರಿಗಣಿಸಿ. ಕ್ಲೋರಿಪಿರಿಫೊಸ್, ಬಿಫೆಂಥ್ರಿನ್ ಮತ್ತು ಬೆಂಡಿಕಾರ್ಬ್ ನ ಸಕ್ರಿಯ ಅಂಶಗಳಿರುವ ಸಂಯುಕ್ತವನ್ನು ಸಾಮಾನ್ಯವಾಗಿ ಗೊನೆಗಳಿಗೆ ಚುಚ್ಚುಮದ್ದಾಗಿ ಶಿಫಾರಸು ಮಾಡಲಾಗುತ್ತದೆ. ಸಸ್ಯದಲ್ಲಿ ಗೊನೆ ಇನ್ನೂ ನೇರವಾಗಿ ಇರುವಾಗಲೇ ಚಿಕಿತ್ಸೆ ಮಾಡಬೇಕು. ಮೇಲಿನ ತುದಿಯಿಂದ ಮೂರನೇ ಒಂದು ಭಾಗ ಕೆಳಗೆ, ಸರಿಯಾದ ಪ್ರಮಾಣದಲ್ಲಿ 20 ರಿಂದ 40 ಮಿಲೀ ನಷ್ಟು ದುರ್ಬಲ ಕೀಟನಾಶಕವನ್ನು ಚುಚ್ಚುಮದ್ದಾಗಿ ನೀಡಿ. ಇದಕ್ಕಿಂತ ಮೇಲೆ ಅಥವಾ ಕೆಳಗೆ ಚುಚ್ಚುಮದ್ದು ನೀಡುವುದರಿಂದ ಹಣ್ಣುಗಳಿಗೆ ಹಾನಿಯಾಗಬಹುದು ಅಥವಾ ಪರಿಣಾಮಕಾರಿಯಾಗಿರುವುದಿಲ್ಲ.

ಅದಕ್ಕೆ ಏನು ಕಾರಣ

ಬಾಳೆ ಸ್ಕ್ಯಾಬ್ ಮಾತ್, ನಕೋಲಿಯಾ ಆಕ್ಟಸೀಮಾದಿಂದ ಈ ಹಾನಿ ಉಂಟಾಗುತ್ತದೆ. ವಯಸ್ಕ ಕೀಟಗಳು ಹಳದಿ ಮಿಶ್ರಿತ ಕಂದು ಬಣ್ಣದ ರೆಕ್ಕೆಗಳನ್ನು ಹೊಂದಿದ್ದು, ರೆಕ್ಕೆಗಳ ಮೇಲೆ ಕಪ್ಪು ಗುರುತುಗಳು ಇರುತ್ತವೆ. ಈ ಅಲ್ಪಾಯಸ್ಸಿನ ಪತಂಗಗಳು (4-5 ದಿನಗಳು) ಮಬ್ಬು ಬೆಳಕಿನಲ್ಲಿ ಸಕ್ರಿಯವಾಗಿರುತ್ತವೆ. ಸಂಜೆ ಸಂಭೋಗ ನಡೆಸುತ್ತವೆ. ಹಗಲು ಹೊತ್ತಿನಲ್ಲಿ, ಅವು ಕಸದಲ್ಲಿ ಮತ್ತು ಹಳೆ ಎಲೆಯ ಕವಚಗಳ ಅಡಿಯಲ್ಲಿ ಮರೆಯಾಗಿರುತ್ತವೆ. ಹೆಣ್ಣು ಕೀಟಗಳು ಹೊರಹೊಮ್ಮುತ್ತಿರುವ ಗೊನೆಗಳಲ್ಲಿ ಅಥವಾ ಸುತ್ತಮುತ್ತಲಿನ ಎಲೆಗಳು ಮತ್ತು ಕವಚಗಳಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಯೊಡೆದು ಹೊರ ಬಂದ ನಂತರ, ಲಾರ್ವಾಗಳು ಗೊನೆಯತ್ತ ಸಾಗಿ ತಿನ್ನಲು ಪ್ರಾರಂಭಿಸುತ್ತವೆ. ಮೊಟ್ಟೆಯೊಡೆದು ಹೊರಬರುವುದರಿಂದ ಹಿಡಿದು ಮೊಟ್ಟೆ-ಇಡುವವರೆಗಿನ ಜೀವನ ಚಕ್ರವು 28 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಬಾಳೆಯ ಸ್ಕ್ಯಾಬ್ ಮಾತ್ ಗೆ ತೇವಾಂಶ ಮತ್ತು ಬೆಚ್ಚಗಿನ ಸ್ಥಿತಿ ಅನುಕೂಲಕರ. ಇದರಿಂದಾಗಿ ಆರ್ದ್ರ ಋತುವಿನಲ್ಲಿ ಈ ರೋಗ ಅಧಿಕ ಹಾನಿ ಉಂಟುಮಾಡುತ್ತದೆ. ತಂಪಾದ ಮತ್ತು ಶುಷ್ಕ ಚಳಿಗಾಲದ ತಿಂಗಳುಗಳಲ್ಲಿ ಅಕಾಲಿಕ ಮಳೆ ಸಂಭವಿಸದಿದ್ದರೆ ಈ ಅವಧಿ ಸಾಮಾನ್ಯವಾಗಿ ಈ ಕೀಟದಿಂದ ಮುಕ್ತವಾಗಿರುತ್ತವೆ. ವಯಸ್ಕ ಕೀಟಗಳು ಕಡಿಮೆ ತೇವಾಂಶ ಮತ್ತು ಒಣ ಪರಿಸ್ಥಿತಿಗಳಲ್ಲಿ ಲೈಂಗಿಕ ಕ್ರಿಯೆ ನಡೆಸುವುದಿಲ್ಲ ಮತ್ತು ಮೊಟ್ಟೆಗಳನ್ನು ಇಡುವುದಿಲ್ಲ ಎಂದು ಸಂಶೋಧನೆ ತೋರಿಸಿದೆ. ಇದು ಬಾಳೆ ಬೆಳೆಗೆ ಆರ್ಥಿಕವಾಗಿ ಹಾನಿಮಾಡುವ ಕೀಟಗಳಲ್ಲಿ ಒಂದಾಗಿದೆ ಮತ್ತು ನಿಯಂತ್ರಿಸದಿದ್ದರೆ 100% ಗೊನೆಗಳಿಗೆ ಹಾನಿಯನ್ನು ಉಂಟುಮಾಡಬಹುದು.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ಶಕ್ತಿಶಾಲಿ ಪ್ರಭೇದಗಳನ್ನು ಆಯ್ಕೆ ಮಾಡಿ.
  • ಹಾನಿ ಮತ್ತು / ಅಥವಾ ಲಾರ್ವಾಗಳ ಉಪಸ್ಥಿತಿಗಾಗಿ ಹೊಸದಾಗಿ ಹೊರಹೊಮ್ಮಿರುವ ಗೊನೆಗಳನ್ನು ಪರೀಕ್ಷಿಸಿ.
  • ಗೊನೆಯ ಕಾಂಡದ ತಳಭಾಗಕ್ಕೆ ವಿಶೇಷ ಗಮನ ಕೊಟ್ಟು ನೋಡಿ.
  • ಅಲ್ಲಿ ಪಾರದರ್ಶಕ ಜೆಲ್ಲಿ ಮಾದರಿಯ ವಸ್ತುವಿದೆಯೇ ಪರಿಶೀಲಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ