ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸಿಟ್ರಸ್ ಥ್ರೈಪ್ಸ್

Scirtothrips citri

ಕೀಟ

ಸಂಕ್ಷಿಪ್ತವಾಗಿ

  • ಹಣ್ಣಿನ ತೊಗಟೆಯ ಮೇಲೆ ಹಕ್ಕಳೆ ರೀತಿಯ, ಬೂದು ಅಥವಾ ಬೆಳ್ಳಿ ಬಣ್ಣದ ಕಲೆಗಳು.
  • ಹಣ್ಣುಗಳು ಬೆಳೆದಂತೆ ಹಾನಿಗೊಳಗಾದ ಅಂಗಾಂಶಗಳು ದೊಡ್ಡದಾಗಿ ಬೆಳೆಯುತ್ತವೆ.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಸಿಟ್ರಸ್ ಥ್ರೈಪ್ಸ್ ನ ದೊಡ್ಡ ಹುಳುಗಳು ಮತ್ತು ಲಾರ್ವಾಗಳು ಎಳೆಯ, ಅಪಕ್ವವಾದ ಹಣ್ಣುಗಳ ಎಪಿಡರ್ಮಿಸ್ಗಳನ್ನು ತೂತು ಮಾಡಿ, ಹಣ್ಣಿನ ತೊಗಟೆಯ ಮೇಲೆ ಹಕ್ಕಳೆ ರೀತಿಯ, ಬೂದು ಅಥವಾ ಬೆಳ್ಳಿ ಬಣ್ಣದ ಕಲೆಗಳನ್ನು ಉಂಟುಮಾಡುತ್ತವೆ. ಬೆಳೆದ ಲಾರ್ವಾಗಳು ವಾಸ್ತವವಾಗಿ ಅತ್ಯಂತ ಕೆಟ್ಟ ಹಾನಿಯನ್ನು ಉಂಟುಮಾಡುತ್ತವೆ. ಏಕೆಂದರೆ ಅವು ಮುಖ್ಯವಾಗಿ ಎಳೆ ಹಣ್ಣುಗಳ ಪುಷ್ಪ ದಳಗಳ ಅಡಿಯಲ್ಲಿ ಆಹಾರವನ್ನು ತಿನ್ನುತ್ತವೆ. ಹಣ್ಣು ಬೆಳೆದಂತೆ, ಹಾನಿಗೊಳಗಾದ ತೊಗಟೆಯು ದಳಗಳ ಕೆಳಗಿನಿಂದ ಹೊರಕ್ಕೆ ಹರಡುತ್ತವೆ ಮತ್ತು ಕಲೆಯಾಗಿರುವ ಅಂಗಾಂಶಗಳು ಎದ್ದುಕಾಣುವ ರಿಂಗ್ ಗಳಂತೆ ಆಗುತ್ತವೆ. ಪುಷ್ಪದಳವು ಉದುರಿದ ನಂತರ ಹಣ್ಣುಗಳು 3.7 ಸೆಂ.ಮೀ ವ್ಯಾಸವಿರುವವರೆಗೂ ಅವುಗಳಿಗೆ ಹಾನಿಯುಂಟಾಗುವ ಸಾಧ್ಯತೆಯಿದೆ. ಥ್ರೈಪ್ಸ್ ನ ದಾಳಿಯ ಅಪಾಯವು ಮೇಲಾವರಣದ ಹೊರಭಾಗದಲ್ಲಿರುವ ಹಣ್ಣುಗಳಲ್ಲಿ ಹೆಚ್ಚಾಗಿರುತ್ತದೆ, ಅಲ್ಲಿ ಅವುಗಳು ಗಾಳಿ ಹಾನಿ ಮತ್ತು ಬಿಸಿಲಿನ ಹಾನಿಗೆ ಸಹ ಸೂಕ್ಷ್ಮವಾಗಿರುತ್ತವೆ. ತಿರುಳಿನ ವಿನ್ಯಾಸ ಮತ್ತು ರಸದ ಗುಣಲಕ್ಷಣಗಳನ್ನು ಇದು ಬಾಧಿಸದಿದ್ದರೂ, ಹಣ್ಣುಗಳನ್ನು ಮಾರಾಟ ಮಾಡಲಾಗುವುದಿಲ್ಲ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಪರಭಕ್ಷಕ ಮಿಟೆಯಾದ ಯೂಸಿಯಸ್ ಟುಲರೆನ್ಸಿಸ್, ಜೇಡಗಳು, ಲೇಸ್ವಿಂಗ್ಸ್, ಮತ್ತು ಅತಿಸಣ್ಣದಾದ ಪೈರೇಟ್ ಬಗ್ ಗಳು ಸಿಟ್ರಸ್ ಥ್ರೈಪ್ಸ್ ಅನ್ನು ಆಕ್ರಮಿಸುತ್ತವೆ. ಇ. ಟುಲಾರೆನ್ಸಿಸ್ ಈ ಕೀಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಅದು "ಸೂಚಕ" ಜಾತಿಯಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ, ಇದು ಹಣ್ಣಿನ ತೋಟದಲ್ಲಿ ಕಂಡುಬರುವ ನೈಸರ್ಗಿಕ ಶತ್ರುಗಳ ಸಾಮಾನ್ಯ ಮಟ್ಟವನ್ನು ತಿಳಿಸುತ್ತದೆ. ವಿಶಾಲ-ರೋಹಿತ ಕ್ರಿಮಿನಾಶಕಗಳ ಬಳಕೆಯಿಂದ ಈ ಪರಭಕ್ಷಕ ಜಾತಿಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಿ. ಜೈವಿಕವಾಗಿ ಅನುಮೋದಿತ ಎಣ್ಣೆಗಳಾದ, ಕೋಲೋಲಿನ್ ಅಥವಾ ಸಬಾಡಿಲ್ಲಾ ಆಲ್ಕಲಾಯ್ಡ್ ಗಳೊಂದಿಗೆ ಸ್ಪಿನೊಸಡ್ನ ಸೂತ್ರೀಕರಣಗಳ ದ್ರವೌಷಧಗಳನ್ನು ಮೊಲಸ್ ಅಥವಾ ಸಕ್ಕರೆ ಗಾಳಗಳೊಂದಿಗೆ ಸಿಂಪಡಿಸಬಹುದು ಮತ್ತು ಇದನ್ನು ಸಾಮಾನ್ಯವಾಗಿ ಸಾವಯವವಾಗಿ ನಿರ್ವಹಿಸುವ ತೋಟಗಳಲ್ಲಿ ಸೂಚಿಸಲಾಗುತ್ತದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಎಲೆಗಳಿಗೆ ದಾಳಿಯಾಗುತ್ತಾದರೂ, ಸಾಮಾನ್ಯವಾಗಿ ಥ್ರೈಪ್ ನ ಸಂಖ್ಯೆ ಕಡಿಮೆಯಿದ್ದರೆ ಆರೋಗ್ಯಕರವಾದ ಮರಗಳು ಅವುಗಳ ಹಾನಿಗಳನ್ನು ತಡೆದುಕೊಳ್ಳಬಲ್ಲವು. ಹಣ್ಣಿಲ್ಲದ ಮರಗಳಿಗೆ ಕ್ರಿಮಿನಾಶಕಗಳನ್ನು ನಿರಂತರವಾಗಿ ಹಾಕುವುದನ್ನು ಸೂಚಿಸಲಾಗುವುದಿಲ್ಲ . ಏಕೆಂದರೆ ಇದು ಪ್ರತಿರೋಧ ಶಕ್ತಿಯ ಬೆಳವಣಿಗೆಗೆ ಕಾರಣವಾಗಬಹುದು ಮತ್ತು ನಂತರದ ವರ್ಷಗಳಲ್ಲಿ ಥೈಪ್ ನ ನಿಯಂತ್ರಣ ಇನ್ನಷ್ಟು ಕಷ್ಟಕರವಾಗುತ್ತದೆ. ಅಬಮೆಕ್ಟಿನ್, ಸ್ಪಿನೆಟೊರಾಮ್, ಡಿಮೀಥೋಯೇಟ್ ಮತ್ತು, ಸೈಫ್ಲುಥ್ರಿನ್ ಗಳನ್ನು ಸಿಟ್ರಸ್ ಥ್ರೈಪ್ಗಳಿಗೆ ವಿರುದ್ಧವಾಗಿ ಬಳಸಿಕೊಳ್ಳಬಹುದು.

ಅದಕ್ಕೆ ಏನು ಕಾರಣ

ಸ್ಕರ್ಟೋಥ್ರೈಪ್ಸ್ ಸಿಟ್ರಿ ಎಂಬ ಸಿಟ್ರಸ್ ಥ್ರೈಪ್ ನಿಂದ ಈ ಹಾನಿ ಉಂಟಾಗುತ್ತದೆ. ಪ್ರೌಢ ಹುಳುಗಳು ಸಣ್ಣ, ಕಿತ್ತಳೆ-ಹಳದಿ ಬಣ್ಣದ್ದಾಗಿದ್ದು, ಅವುಗಳಿಗೆ ಕುಚ್ಚು ರೀತಿಯ ರೆಕ್ಕೆಗಳಿರುತ್ತವೆ. ವಸಂತಕಾಲ ಮತ್ತು ಬೇಸಿಗೆಯಲ್ಲಿ, ಹೆಣ್ಣು ಹುಳುಗಳು ಹೊಸ ಎಲೆಯ ಅಂಗಾಂಶ, ಎಳೆಯ ಹಣ್ಣು, ಅಥವಾ ಹಸಿರು ಕೊಂಬೆಗಳಲ್ಲಿ ಸುಮಾರು 250 ಮೊಟ್ಟೆಗಳನ್ನು ಇಡುತ್ತವೆ. ಶರತ್ಕಾಲದಲ್ಲಿ, ಚಳಿಗಾಲವನ್ನು ಕಳೆಯುವ ಮೊಟ್ಟೆಗಳನ್ನು ಋತುವಿನ ಕೊನೆಯ ಬೆಳವಣಿಗೆಯ ಚಿಗುರುಗಳಲ್ಲಿ ಇಡಲಾಗುತ್ತದೆ. ಈ ಮೊಟ್ಟೆಗಳು ಮುಂದಿನ ವಸಂತ ಋತುವಿನಲ್ಲಿ ಮರಗಳ ಹೊಸ ಬೆಳವಣಿಗೆಯ ಸಮಯದಲ್ಲಿ ಹೊರಬರುತ್ತವೆ. ಸಣ್ಣ ಲಾರ್ವಾಗಳು ತುಂಬಾ ಚಿಕ್ಕದಾಗಿರುತ್ತವೆ, ಆದರೆ ದೊಡ್ಡ ಲಾರ್ವಾಗಳು ಪ್ರೌಢ ಹುಳುಗಳ ಗಾತ್ರವಿರುತ್ತವೆ ಮತ್ತು ಅವು ಕದಿರಣಿಗೆಯ ಆಕಾರವಿದ್ದು ಅವುಗಳಿಗೆ ರೆಕ್ಕೆ ಇರುವುದಿಲ್ಲ. ಕೊನೆಯ ಲಾರ್ವಾ ಹಂತಗಳ (ಪ್ಯೂಪ) ಥ್ರೈಪ್ ಗಳು ಆಹಾರ ತಿನ್ನುವುದಿಲ್ಲ ಮತ್ತು ನೆಲದ ಮೇಲೆ ಅಥವಾ ಮರಗಳ ಬಿರುಕುಗಳಲ್ಲಿ ತಮ್ಮ ಬೆಳವಣಿಗೆಯನ್ನು ಪೂರ್ಣಗೊಳಿಸುತ್ತವೆ. ದೊಡ್ದ ಹುಳುಗಳು ಹೊರಹೊಮ್ಮಿದಾಗ, ಅವು ಮರದ ಎಲೆಗಳ ಸುತ್ತಲೂ ಸಕ್ರಿಯವಾಗಿ ಓಡಾಡುತ್ತವೆ. ಸಿಟ್ರಸ್ ಥ್ರೈಪ್ಗಳು 14 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ತಾಪಮಾನದಲ್ಲಿ ಬೆಳೆಯುವುದಿಲ್ಲ ಮತ್ತು ಹವಾಮಾನವು ಅನುಕೂಲಕರವಾಗಿದ್ದರೆ ಅವು ವರ್ಷಕ್ಕೆ 8 ರಿಂದ 12 ಪೀಳಿಗೆಯನ್ನು ಉತ್ಪಾದಿಸಬಹುದು.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ನೆಡಿ.
  • ಕೀಟದ ಲಕ್ಷಣಗಳನ್ನು ಗುರುತಿಸಲು ಹಣ್ಣಿನ ತೋಟವನ್ನು ನಿಯಮಿತವಾಗಿ ಪರಿಶೀಲಿಸಿ.
  • ಕೀಟಗಳನ್ನು ಸಮೂಹವಾಗಿ ಹಿಡಿಯಲು ದೊಡ್ಡ ಪ್ರದೇಶದ ಮೇಲೆ ಜಿಗುಟಾದ ಬಲೆಗಳನ್ನು ಬಳಸಿ.
  • ವಿಶಾಲ-ರೋಹಿತ ಕ್ರಿಮಿನಾಶಕಗಳ ಬಳಕೆಯಿಂದ ಪರಭಕ್ಷಕ ಜಾತಿಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಿ.
  • ಪರ್ಯಾಯ ಆಶ್ರಯದಾತ ಸಸ್ಯಗಳ ಬಳಿ ನಾಟಿ ಮಾಡಬೇಡಿ ಮತ್ತು ಹೊಲದ ಸುತ್ತ ಮುತ್ತಲವಿರುವ ಕಳೆಗಳನ್ನು ತೆಗೆದುಹಾಕಿ.
  • ಸಸ್ಯಗಳಿಗೆ ಚೆನ್ನಾಗಿ ನೀರಾವರಿ ಮಾಡಿ ಮತ್ತು ಸಾರಜನಕ ಗೊಬ್ಬರವನ್ನು ಅತಿಯಾಗಿ ಬಳಸಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ