ಇತರೆ

ಬಟಾಣಿ ಬೀಜ ಕೊರಕ

Etiella zinckenella

ಕೀಟ

ಸಂಕ್ಷಿಪ್ತವಾಗಿ

  • ಹೂವು ಮತ್ತು ಎಳೆಯದಾದ ಬೀಜಕೋಶಗಳನ್ನು ಒಳಗಿನಿಂದ ತಿನ್ನುತ್ತಾ ಹಾನಿ ಮಾಡುತ್ತವೆ.
  • ಅಂತೆಯೇ ಅವುಗಳು ಕ್ರಮೇಣ ಉದುರಿಹೋಗುತ್ತವೆ.
  • ಮರಿಹುಳುಗಳ ಹಿಕ್ಕೆ ಹರಡುವುದರಿಂದ ಮೇಲ್ಮೈಯಲ್ಲಿ ಮೃದುವಾದ, ಕಂದು ಬಣ್ಣದ, ಕೊಳೆತ ತೇಪೆಗಳು ಕಂಡುಬರುತ್ತವೆ.
  • ಒಡೆದ ಬೀಜಕೋಶಗಳಲ್ಲಿ ಭಾಗಶಃ ಅಥವಾ ಸಂಪೂರ್ಣವಾಗಿ ತಿಂದಿರುವ ಬೀಜಗಳು ಇರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಇತರೆ

ರೋಗಲಕ್ಷಣಗಳು

ಲಾರ್ವಾಗಳು ಬಟಾಣಿ, ತೊಗರಿ ಬೇಳೆ, ಸಾಮಾನ್ಯ ಹುರುಳಿ ಮತ್ತು ಸೋಯಾಬೀನ್ ಸೇರಿದಂತೆ ಬೆಳೆದ ದ್ವಿದಳ ಧಾನ್ಯಗಳಲ್ಲಿ ಹರಡುತ್ತವೆ. ಆಶ್ರಯದಾತ ಸಸ್ಯವಾಗಿ ಸೋಯಾಬೀನ್ ಗೆ ಹೆಚ್ಚಿನ ಆದ್ಯತೆ. ಸಣ್ಣ ಲಾರ್ವಾಗಳು ಹೊಸ ಹೂವು ಮತ್ತು ಎಳೆಯದಾದ ಬೀಜ ಕೋಶಗಳನ್ನು ಒಳಗಿನಿಂದ ತಿನ್ನುತ್ತಾ ಬರುತ್ತವೆ. ಅಂತೆಯೇ ಅವುಗಳು ಕ್ರಮೇಣ ಉದುರಿಹೋಗುತ್ತವೆ. ಬೀಜಕೋಶಗಳಿಗೆ ಆಗುವ ಹಾನಿಯು ಲಾರ್ವಾಗಳ ಬೀಜದ ಕೋಶವನ್ನು ಹಾನಿಮಾಡಲು ಒಳ ಬಂದಿರುವ ಅಥವಾ ಹೊರ ಹೋಗಿರುವ ರಂಧ್ರಗಳಿಂದ ಗೊತ್ತಾಗುತ್ತದೆ. ಸಾಮಾನ್ಯವಾಗಿ ಒಂದು ಅಥವಾ ಎರಡು ಲಾರ್ವಾಗಳನ್ನು ಪ್ರತಿ ಬೀಜಕೋಶಗಳಲ್ಲಿಯೂ ಕಾಣಬಹುದು ಮತ್ತು ಮರಿಹುಳುಗಳ ಹಿಕ್ಕೆ ಹರಡುವುದರಿಂದ ಮೇಲ್ಮೈಯಲ್ಲಿ ಮೃದುವಾದ, ಕಂದು ಬಣ್ಣದ, ಕೊಳೆತ ತೇಪೆಗಳು ಕಂಡುಬರುತ್ತವೆ. ಬೀಜಗಳನ್ನು ಭಾಗಶಃ ಅಥವಾ ಸಂಪೂರ್ಣವಾಗಿ ತಿನ್ನಲ್ಪಟ್ಟಿರುತ್ತವೆ, ಮತ್ತು ಹೂವುಗಳು ಹಾಗು ಬೀಜಕೋಶಗಳು ಇಲ್ಲದಿದ್ದರೆ, ಲಾರ್ವಾಗಳು ಎಲೆಗೊಂಚಲುಗಳನ್ನು ತಿನ್ನುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಈ ಕೀಟದ ಪರಭಕ್ಷಕಗಳೆಂದರೆ, ಕೆಲವು ಕಶೇರುಕಗಳು, ಆರ್ತ್ರೋಪಾಡ್ಗಳು ಮತ್ತು ಪಕ್ಷಿಗಳು. ಬ್ರಾಕನ್ ಪ್ಲಾಟಿನೊಟೆ, ಪೆರಿಸಿಯೊಲಾ ಸೆಲ್ಯುಲಾರಿಸ್, ಮತ್ತು ಝಟ್ರೋಪಿಸ್ ಟಾಟ್ರಿಶಿಡಿಸ್ ಜಾತಿಗಳ ಪರಾವಲಂಬಿ ಅಥವಾ ಪ್ಯಾರಾಸಿಟೊಯಿಡ್ ಕಣಜಗಳು ಗೋಲ್ಡ್-ಬ್ಯಾಂಡ್ಡ್ ಎಟಿಲ ಮಾತ್ ನ ಲಾರ್ವಾವನ್ನು ಆಕ್ರಮಿಸುತ್ತವೆ ಮತ್ತು ಅದರ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತವೆ. ಕೀಟಗಳು ಹರಡುವುದನ್ನು ನಿಯಂತ್ರಿಸಲು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ರೋಗಗಳನ್ನು ಸಹ ಬಳಸಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಈ ಹಾರುವ ಕೀಟವನ್ನು ಸಾಮಾನ್ಯವಾಗಿ ದ್ವಿದಳ ಧಾನ್ಯಗಳ ಪ್ರಮುಖ ಕೀಟ ಎಂದು ಪರಿಗಣಿಸುವುದಿಲ್ಲ ಮತ್ತು ಸಾಮಾನ್ಯವಾಗಿ ಇದರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ. ಆದಾಗ್ಯೂ, ಕೆಲವು ಕೀಟನಾಶಕಗಳ ಸೂತ್ರಗಳನ್ನು ಎಲೆಗಳ ಸಿಂಪರಿಕೆಗಳಾಗಿ ಬಳಸಲಾಗುತ್ತದೆ. ಬಿತ್ತಿದ 45 ದಿನಗಳ ಬಳಿಕ ಮ್ಯಲಾಥಿಯಾನ್ 5ಡಿ (25 ಕೆಜಿ/ಹೆ) ಯನ್ನು ಕೀಟ ತಡೆಗಟ್ಟಲು ಬಳಸಬಹುದು.

ಅದಕ್ಕೆ ಏನು ಕಾರಣ

ವಿಶ್ವಾದ್ಯಂತದ ಕಂಡುಬರುವ ಕೀಟವಾದ, ಎಟಿಲ ಜಿಂಕೆನೆಲ್ಲಾ ಎಂಬ ಹಾರುವ ಕೀಟದ ಲಾರ್ವಾದಿಂದ ಈ ಹಾನಿ ಉಂಟಾಗುತ್ತದೆ. ದೊಡ್ಡ ಕೀಟಗಳು ರಾತ್ರಿಯ ಸಮಯದಲ್ಲಿ ಓಡಾಡುತ್ತವೆ ಮತ್ತು ಅವುಗಳಿಗೆ ಉಬ್ಬಿದ ತಲೆ ಮತ್ತು ಎರಡು ಉದ್ದವಾದ ಉಬ್ಬಿಕೊಂಡಿರುವ ಆಂಟೆನಾಗಳೊಂದಿಗೆ ತಿಳಿ ಕಂದು ಬಣ್ಣದ ದೇಹ ಇರುತ್ತದೆ. ಮುಂದಿನ ರೆಕ್ಕೆಗಳು ಒಂದು ವಿಶಿಷ್ಟ ಹೊಳೆಯುವ ಅಂಶದೊಂದಿಗೆ ಕಂದು-ಬೂದು ಬಣ್ಣದ್ದಾಗಿರುತ್ತವೆ ಮತ್ತು ಮುಂಭಾಗದ ತುದಿಯ ಉದ್ದಕ್ಕೂ ಬಿಳಿ ಪಟ್ಟೆ ಇರುತ್ತದೆ. ರೆಕ್ಕೆಗಳ ಎರಡೂ ಬದಿಗಳಲ್ಲಿ ಸುವರ್ಣ-ಕಿತ್ತಳೆ ಬಣ್ಣದ ಪಟ್ಟೆ ಇರುವುದರಿಂದ ಇದರ ಸಾಮಾನ್ಯ ಹೆಸರು "ಗೋಲ್ಡ್-ಬ್ಯಾಂಡ್ಡ್ ಎಟಿಲ ಮಾತ್" ಆಗಿರುತ್ತದೆ. ಹಿಂದಿನ ರೆಕ್ಕೆಗಳು ಸ್ವಲ್ಪ ಬೂದು ಬಣ್ಣದ್ದಾಗಿದ್ದು, ಅವುಗಳ ಮೇಲೆ ಗಾಢವರ್ಣದ ನಾಳ ಮತ್ತು ಗಾಢವರ್ಣದ ಉದ್ದನೆಯ ಅಂಚು ಇರುತ್ತದೆ. ಹೆಣ್ಣು ಕೀಟಗಳು ಹೂವುಗಳ ಮೇಲೆ ಅಥವಾ ಹಸಿರು ಹಣ್ಣುಗಳ ಮೇಲೆ ಮೊಟ್ಟೆ ಇಡುತ್ತವೆ ಮತ್ತು ಮರಿಹುಳುಗಳು ಹಣ್ಣಿನ ಒಳಗೆ ವಾಸಿಸುತ್ತವೆ, ಬೀಜಗಳನ್ನು ತಿನ್ನುತ್ತವೆ ಮತ್ತು ಸುಲಭವಾಗಿ ಒಂದು ಬೀಜದಿಂದ ಇನ್ನೊಂದಕ್ಕೆ ಓಡಾಡುತ್ತವೆ. ಅವುಗಳ ಬಣ್ಣ ತಿಳಿ ಹಸಿರಾಗಿದ್ದು ಸ್ವಲ್ಪ ಕಂದು ಬಣ್ಣದ ಮಿಶ್ರಣವಿರುತ್ತದೆ ಮತ್ತು ಕಿತ್ತಳೆ ಬಣ್ಣದ ತಲೆ ಇದ್ದು ಅದರ ಮೇಲೆ ಕಪ್ಪು ಬಣ್ಣದ V ಆಕಾರ ಮತ್ತು ನಾಲ್ಕು ಕಪ್ಪು ಚುಕ್ಕೆಗಳಿರುತ್ತವೆ. ಲಾರ್ವಾಗಳು ಮಣ್ಣಿನ ಮೇಲೆ ಬೀಳುತ್ತವೆ ಮತ್ತು, ಮಣ್ಣಿನಲ್ಲಿ ಒಂದು ಕೋಶದೊಳಗೆ 2-5 ಸೆಂ.ಮೀ ಆಳದಲ್ಲಿ ಚಳಿಗಾಲವನ್ನು ಕಳೆದು ನಂತರ ವಸಂತಕಾಲದಲ್ಲಿ ದೊಡ್ಡ ಹುಳುವಾಗಿ ಹೊರಹೊಮ್ಮುತ್ತವೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ಸಹಿಷ್ಣು ಪ್ರಭೇದಗಳನ್ನು ಬಳಸಿ.
  • ಕೀಟದ ಚಿಹ್ನೆಗಳಿಗಾಗಿ ಹೊಲಗಳನ್ನು ಮೇಲ್ವಿಚಾರಣೆ ಮಾಡಿ (ಮೊಟ್ಟೆಯ ರಾಶಿಗಳು, ಮರಿಹುಳುಗಳು, ಹಾನಿ).
  • ಆವರಿಸಿರುವ ಹೂವುಗಳು, ಬೀಜಗಳು ಅಥವಾ ಸಸ್ಯ ಭಾಗಗಳನ್ನು ಕೈಯಿಂದ ತೆಗೆದುಹಾಕಿ.
  • ಸಾರಜನಕ ಗೊಬ್ಬರದ ಸೂಕ್ತ ಮಟ್ಟವನ್ನು ಉಳಿಸಿಕೊಳ್ಳಿ.
  • ಹೊಲದ ಒಳಚರಂಡಿಯನ್ನು ಅತ್ಯುತ್ತಮವಾಗಿ ಮಾಡಿ, ಪ್ರವಾಹವು ಕೀಟ ಧಾಳಿಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
  • ಪತಂಗಗಳನ್ನು ಗಮನಿಸಲು ಅಥವಾ ಗುಂಪಾಗಿ ಹಿಡಿಯಲು ಬಲೆಗಳನ್ನು ಬಳಸಿ.
  • ಲಾರ್ವಾಗಳನ್ನು ತಿನ್ನುವ ಪಕ್ಷಿಗಳಿಗೆ ಸ್ಥಳಾವಕಾಶ ಮಾಡಿ ಮತ್ತು ತೆರೆದ ಜಾಗವನ್ನು ನಿರ್ಮಿಸಿ.
  • ಹೊಲ ಮತ್ತು ಸುತ್ತಲಿನ ಪ್ರದೇಶದಲ್ಲಿ ಉತ್ತಮವಾದ ಕಳೆ ಕಿತ್ತುವ ಕಾರ್ಯಕ್ರಮವನ್ನು ಅನುಸರಿಸಿ.
  • ವಿಶಾಲ-ವ್ಯಾಪ್ತಿಯ ಕೀಟನಾಶಕಗಳನ್ನು ಬಳಸುವುದನ್ನು ನಿಯಂತ್ರಿಸಿ.
  • ಇದರಿಂದ ಪ್ರಯೋಜನಕಾರಿ ಕೀಟಗಳ ಮೇಲೆ ಪರಿಣಾಮ ಬೀರಬಹುದು.
  • ಸುಗ್ಗಿಯ ನಂತರ ಸಸ್ಯದ ಉಳಿಕೆಗಳು ಅಥವಾ ಸ್ವಯಂಸೇವಕ ಸಸ್ಯಗಳನ್ನು ತೆಗೆದುಹಾಕಿ.
  • ರೋಗದ ಸಂಭಾವ್ಯತೆ ಇಲ್ಲದ ಬೆಳೆಗಳೊಂದಿಗೆ ಬೆಳೆ ಸರದಿ ಅನುಸರಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ