ಕಡಲೆಕಾಯಿ

ಕ್ಯಾಸ್ಟರ್ ಸೆಮಿಲೂಪರ್ (ಕೊಂಡಿಹುಳು)

Achaea janata

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಕೀಟ ತಿನ್ನುವುದರಿಂದ ಹಾನಿ.
  • ಎಲ್ಲೆ ಅಸ್ಥಿಪಂಜರದಂತೆ ಕಾಣುವುದರಿಂದ ಹಿಡಿದು ಸಂಪೂರ್ಣ ಎಲೆಗಳಚುವಿಕೆ.


ಕಡಲೆಕಾಯಿ

ರೋಗಲಕ್ಷಣಗಳು

ನಯವಾದ ಬೂದು-ಕಂದು ಮರಿಹುಳುಗಳು ಬೆಳೆಗಳಿಗೆ ಹಾನಿಯನ್ನು ಉಂಟುಮಾಡುತ್ತವೆ, ಅವುಗಳು ಎಲೆಗಳನ್ನು ಅಸ್ಥಿಪಂಜರದಂತೆ ಮಾಡುವುದರಿಂದ ಹಿಡಿದು (ಕೇವಲ ಮುಖ್ಯ ಸಿರೆಗಳನ್ನು ಬಿಟ್ಟು) ಸಸ್ಯದಲ್ಲಿ ಸಂಪೂರ್ಣ ಎಲೆಗಳಚುವಿಕೆಯನ್ನು ಉಂಟುಮಾಡುತ್ತವೆ ಅಥವಾ ಕೃಷಿ ಭೂಮಿಯ ವಿನಾಶವನ್ನುಂಟುಮಾಡುತ್ತದೆ. ಸಣ್ಣ ಮರಿ ಹುಳಗಳು ಎಲೆಗಳ ಹೊರ ಚರ್ಮವನ್ನು ಚೂರು ಚೂರಾಗಿ ತಿನ್ನುತ್ತವೆ, ಆದರೆ ಸ್ವಲ್ಪ ಬೆಳೆದ ಮರಿ ಹುಳಗಳು ಬಕಾಸುರನಂತೆ ತಿನ್ನುವ ಹುಳಗಳಾಗಿವೆ, ಅವು ಸಂಪೂರ್ಣ ಸಸ್ಯವನ್ನು ತಿನ್ನುತ್ತವೆ ಮತ್ತು ಸಾಕಷ್ಟು ಹಾನಿ ಉಂಟುಮಾಡುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಬೇವಿನ ಬೀಜದ ತಿರುಳು 5% ಮತ್ತು 2% ರಷ್ಟು ಬೇವಿನ ಎಣ್ಣೆಯ ಮಿಶ್ರಣವನ್ನು ಅಳವಡಿಸಿ, ಆರಂಭಿಕ ಮರಿ ಹುಳಗಳ ಹಂತದೊಂದಿಗೆ ಸಂಯೋಜಿಸಿದರೆ ಅದರ ಸಂಖ್ಯೆಯನ್ನು ಕಡಿಮೆಮಾಡಬಹುದು. ಟ್ರೈಕೊಗ್ರಾಮ ಎವಾನೆಸೆನ್ಸ್ ಮಿನಿಟಮ್ ಹುಳಗಳು ಮೊಟ್ಟೆಗಳನ್ನು ಪರಾವಲಂಬಿಗೊಳಿಸುತ್ತದೆ. ಮರಿಹುಳುಗಳ, ಪ್ರತಿಯಾಗಿ ಬ್ರಕೊನಿಡ್ ಪರಾವಲಂಬಿಗಳು, ಮೈಕ್ರೊಪ್ಲೈಟಿಸ್ ಮ್ಯಾಕುಲಿಪ್ನಿಸ್ ಮತ್ತು ರೋಗಸ್ನ ಜಾತಿಗಳಿಂದ ಅತೀವವಾಗಿ ಪರಾವಲಂಬಿಯಾಗಿರುತ್ತವೆ. ಇತರ ಪರಾವಲಂಬಿಗಳು ವಾಣಿಜ್ಯಿಕವಾಗಿ ಲಭ್ಯವಿವೆ ಅಥವಾ ವಿಚಾರಣೆಯ ಸಂಶೋಧನೆಯಡಿಯಲ್ಲಿವೆ. ಕೆಲವು ಜಾತಿಯ ಪಕ್ಷಿಗಳೂ ಸಹ ತಡವಾದ ಮರಿ ಹುಳಗಳ ಹಂತಗಳ ಪರಿಣಾಮಕಾರಿ ಪರಭಕ್ಷಕಗಳಾಗಿವೆ. ಪಕ್ಷಿಗಳ ವ್ಯಾಪ್ತಿಯನ್ನು ಒದಗಿಸುವುದರಿಂದ ಕೀಟದ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಮೂರು ವಾರಗಳ ಮಧ್ಯಂತರದಲ್ಲಿ ಹೂವು ಬಿಡುವಾಗ ಮೂರು ಬಾರಿ ಮ್ಯಾಲಥಿಯಾನ್ ಅನ್ನು ಸಿಂಪಡಿಸಬಹುದಾಗಿದೆ. ಆಪತ್ತಿನ ಸ್ಥಿತಿಯಲ್ಲಿ ಹೆಚ್ಚು ಲೂಪರ್ ಸಂಖ್ಯೆಯನ್ನು ಗಮನಿಸಿದರೆ 2ಮಿಲೀ/ಲೀ ನೀರಿನಲ್ಲಿ 2ಮಿಲೀ/ಲೀ ಕ್ಲೋರೊಪೈರಿಫೊಸ್ ನ್ನು ಸೇರಿಸಿ ಸಿಂಪಡಿಸಿ.

ಅದಕ್ಕೆ ಏನು ಕಾರಣ

ಒಫಿಯಾಸಾ ಮೆಲಿಕೆರ್ಟಾದ ಮರಿಹುಳದಿಂದ ಈ ಆಹಾರ ಚಟುವಟಿಕೆ ನಡೆಯುತ್ತದೆ. ವಯಸ್ಕ ಪತಂಗಗಳ ಇಡೀ ದೇಹದ ಮೇಲೆ ಪಟ್ಟಿಗಳೊಂದಿಗೆ ತಿಳಿ ಕಂದು ಬಣ್ಣ ಇರುತ್ತದೆ, ಅದು ಹ್ಯಾಂಗ್-ಗ್ಲೈಡರ್ ಅನ್ನು ಹೋಲುತ್ತದೆ. ಅವುಗಳ ರೆಕ್ಕೆಗಳ ಹಿಂಭಾಗದ ಪ್ರದೇಶದಲ್ಲಿ ವಿಶಿಷ್ಟ ಕಪ್ಪು ಮತ್ತು ಬಿಳಿ ಮಾದರಿಗಳನ್ನು ಹೊಂದಿವೆ. ಹೆಣ್ಣುಗಳು ಎಲೆಯ ಮೇಲೆ ಮತ್ತು ಸಸ್ಯಗಳ ಕೋಮಲ ಭಾಗಗಳ ಮೇಲೆ ಗೊಂಚಲುಗಳಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳು ಹಸಿರಾಗಿರುತ್ತವೆ ಮತ್ತು ಮೇಲ್ಮೈಯಲ್ಲಿ ಗಂಟುಗಳು ಮತ್ತು ಉಬ್ಬುಗಳಿಂದ ಸುಂದರವಾಗಿ ರಚನೆಯಾಗಿರುತ್ತವೆ. ಸಂಪೂರ್ಣವಾಗಿ ಬೆಳೆದ ಕಂಬಳಿಹುಳ 60 ಮಿ.ಮೀ. ಉದ್ದದವರೆಗೆ ಇರುತ್ತದೆ ಮತ್ತು ಕಪ್ಪು ತಲೆ ಹೊಂದಿರುತ್ತದೆ ಮತ್ತು ದೇಹವು ವಿಭಿನ್ನವಾದ ಬಣ್ಣವನ್ನು ಹೊಂದಿರುತ್ತದೆ. ದೇಹವು ಮೃದುವಾದ, ಕಪ್ಪು-ಹಿನ್ನಲೆಯಲ್ಲಿ ದೀರ್ಘಕಾಲದವರೆಗೆ ನಡೆಯುವ ಮಧ್ಯದ- ಬೆನ್ನಿನ ಕಪ್ಪು ಸ್ತರಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಈ ಹುಳದ ಲಾರ್ವಾ ಅವಧಿಯು ಸುಮಾರು 15-19 ದಿನಗಳು ಮತ್ತು 33-41 ದಿನಗಳಲ್ಲಿ ಒಟ್ಟು ಬೆಳವಣಿಗೆ ಇರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸಸ್ಯವನ್ನು ಮೇಲ್ವಿಚಾರಣೆ ಮಾಡಿ ಮತ್ತು ಹಳೆಯ ಮರಿಹುಳ ಅಥವಾ ಸೋಂಕಿತ ಸಸ್ಯದ ಭಾಗಗಳನ್ನು ಸಂಗ್ರಹಿಸಿ.
  • ಪ್ರಯೋಜನಕಾರಿ ಕೀಟಗಳ ಮೇಲೆ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಲು ಕೀಟನಾಶಕದ ಬಳಕೆಯನ್ನು ನಿಯಂತ್ರಿಸಿ.
  • ಮರಿ ಹುಳಗಳನ್ನು ಪಕ್ಷಿಗಳು ಆಹಾರವಾಗಿ ತಿನ್ನುವ ಹಾಗೆ ಹಕ್ಕಿ ಬಂದು ಕೂರಲು ತೆರೆದ ಜಾಗವನ್ನು ನಿರ್ಮಿಸಿ.
  • ಪತಂಗಗಳನ್ನು ನಿಯಂತ್ರಿಸಲು ಮತ್ತು ಹಿಡಿಯಲು ಬಲೆಗಳನ್ನು ಬಳಸಿ.
  • ಕೊಯ್ಲಿನ ನಂತರ ಸೆಮಿಲೂಪರ್ಗಳನ್ನು ಪರಭಕ್ಷಕಗಳಿಗೆ ಒಡ್ಡಲು ನೆಲವನ್ನು ಕೆತ್ತಿ ಖಾಲಿ ಬಿಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ