Cerosterna scabrator
ಕೀಟ
ಮರಿಹುಳುಗಳು ಮುಖ್ಯ ಕಾಂಡಗಳ ತೊಗಟೆಯಲ್ಲಿ ತೂತುಗಳನ್ನು ಕೊರೆದು ಸಸ್ಯರಸ ಹರಿದಾಡುವ ಭಾಗದಿಂದ ಆಹಾರ ಸಂಪಾದಿಸಿಕೊಳ್ಳುತ್ತವೆ. ವಯಸ್ಕ ಕೀಟಗಳು ಹಗಲು ಚುರುಕಾಗಿದ್ದು ಎಳೆಯ ಚಿಗುರುಗಳ ತೊಗಟೆಯನ್ನು ತಿನ್ನುತ್ತವೆ. ಮುಖ್ಯ ಕಾಂಡದಲ್ಲಿ ತೂತುಗಳು ಕಾಣಸಿಗುತ್ತವೆ, ಗಿಡದ ಬುಡದಲ್ಲಿ ಕೀಟ ವಿಸರ್ಜಿಸಿದ ಪದಾರ್ಥ ಮತ್ತು ಒಣ ಹುಡಿ ಕಂಡು ಬರುತ್ತದೆ. ಕೋಯೆಲೊಸ್ಟರ್ನಾ ಸ್ಪೈನೇಟರ್ ದಾಳಿಂಬೆ ಗಿಡದ ಮೇಲೆ ಮಾತ್ರವೇ ದಾಳಿ ಮಾಡುವ ಕೀಟವಲ್ಲ. ಇದು ಹಲವು ಬಗೆಯ ಗಿಡಗಳಿಂದ ಆಹಾರ ಸಂಪಾದಿಸಿಕೊಳ್ಳುವ ಕೀಟ, ಹಾಗೂ ವಾಸ್ತವದಲ್ಲಿ ಇದು ಸಣ್ಣಮಟ್ಟಿನ ಹಾನಿಯನ್ನಷ್ಟೆ ಮಾಡುತ್ತದೆ. ಮರದ ಸತ್ತು ಹೋದ ಭಾಗಗಳನ್ನು ವಂಶಾಭಿವೃದ್ಧಿಗೆ ಆರಿಸಿಕೊಳ್ಳುತ್ತದೆಯಾದರೂ ಜೀವವಿರುವ ರೆಂಬೆಗಳ ಮೇಲೆ ಕೂಡ ದಾಳಿಯಿಡುತ್ತದೆ.
ಡಾಮ್ಸೆಲ್ ಬಗ್, ಎಲ್ಮ್ ಲೀಫ್ ಬೀಟಲ್, ಕೆಲವು ಜಾತಿಯ ಜೇಡಗಳು, ಜಿಯೋಕಾರಿಸ್ ಎಸ್‍ಪಿಪಿ, ಪರಾವಲಂಬಿ ಟ್ಯಾಕಿನಿಡ್ ನುಸಿಗಳು ಅಥವಾ ಬ್ರಾಕೊನಿಡ್ ಕಣಜಗಳ ಕಾಂಡಕೊರಕದ ಸಹಜ ವೈರಿಗಳು.
ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಕಾಂಡಕೊರಕವು ಕೊರೆದ ತೂತುಗಳಿಗೆ ಸೂಕ್ತ ಕೀಟನಾಶಕಗಳನ್ನು ಚುಚ್ಚಿ ಹಾಗೂ ತೂತುಗಳನ್ನು ಜೇಡಿಮಣ್ಣಿನಿಂದ ಮುಚ್ಚಿ ಹಾಕಿ. ಕ್ಲಾರ್ಪೈರಿಫೋಸ್ (0.05%) ರಾಸಾಯನಿಕವಿರುವ, ಎಲೆಗಳ ಮೇಲೆ ಸಿಂಪಡಿಸುವ ಕೀಟನಾಶಕಗಳನ್ನು ಬಳಸುವುದರಿಂದ ಕೂಡ ಕಾಂಡಕೊರಕದ ಸಂಖ್ಯೆಯನ್ನು ತಗ್ಗಿಸಬಹುದು.
ಮೇಲೆ ವಿವರಿಸಲಾಗಿರುವ ಸೋಂಕಿನ ಲಕ್ಷಣಗಳಿಗೆ ಕೋಯೆಲೊಸ್ಟರ್ನಾ ಸ್ಪೈನೇಟರ್ ನ ಲಾರ್ವಾ ಹಾಗೂ ಝಿಯೂಝೆರಾ ಜೀನಸ್ಸಿನ ಹಲವು ವರ್ಗದ ಕೀಟಗಳು ಕಾರಣ. ಪ್ಯೂಪಾವಸ್ಥೆಗೆ ಬಂದ ನಂತರ ವಯಸ್ಕ ಕೀಟವು ತೊಗಟೆಯಲ್ಲಿ ವರ್ತುಲಾಕಾರದ ತೂತು ಕೊರೆದು ಹೊರಗೆ ಬರುತ್ತದೆ. ಪೇಲವ ಹಳದಿ-ಕಂದು ಬಣ್ಣದಲ್ಲಿರುವ ಇವು 30ರಿಂದ 35 ಮಿಮೀ ಉದ್ದವಿರುತ್ತವೆ. ತಿಳಿ ಊದಾ ಬಣ್ಣದ ರೆಕ್ಕೆ ಕವಚಗಳಿದ್ದು ವಿವಿಧ ಗಾತ್ರದ ಕಪ್ಪು ಚುಕ್ಕೆಗಳಿರುತ್ತವೆ. ನೀಲಿ ಬಣ್ಣದ ಉದ್ದನೆಯ ಕಾಲುಗಳಿರುತ್ತವೆ. ಹೆಣ್ಣು ಕೀಟವು ಎಳೆಯ ರೆಂಬೆಗಳ ತೊಗಟೆಯಡಿಯಲ್ಲಿ ಮೊಟ್ಟೆಯಿಡುವ ಚೀಲವೊಂದರಲ್ಲಿ 20ರಿಂದ 40 ಮೊಟ್ಟೆಗಳನ್ನಿಡುತ್ತದೆ. ಎರಡು ವಾರದ ನಂತರ ಮೊಟ್ಟೆಯೊಡೆದು ಹೊರಬರುವ ಮರಿಹುಳುಗಳು ಸುತ್ತಲಿರುವ ಮೃದು ಅಂಗಾಂಶವನ್ನು ತಿನ್ನತೊಡಗುತ್ತವೆ. ಬಳಿಕ ಅವು ಕಾಂಡ ಮತ್ತು ಬೇರುಗಳನ್ನು ಕೊರೆಯತೊಡಗುತ್ತವೆ. ಲಾರ್ವಾ ಸ್ಥಿತಿಯು ಒಂಬತ್ತರಿಂದ ಹತ್ತು ತಿಂಗಳವರೆಗೆ ಇರುತ್ತದೆ.