ಭತ್ತ

ಭತ್ತದಲ್ಲಿ ಹಿಂಡಾದ ಕ೦ಬಳಿಹುಳು

Spodoptera mauritia

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಸಣ್ಣ ರಂಧ್ರಗಳು ಕಂಡುಬರುತ್ತವೆ, ಎಲೆಗಳು ಅಸ್ಥಿಪಂಜರವಾದಂತಾಗುತ್ತವೆ ಮತ್ತು ಕಾಂಡಗಳು ನಿರ್ಜೀವಗೊಳ್ಳುತ್ತವೆ.
  • ಸೋಂಕು ತೀವ್ರವಾದ ಸಂದರ್ಭಗಳಲ್ಲಿ, ಬೆಳೆಗಳು ರಾತ್ರೋರಾತ್ರಿ ನಾಶವಾಗುತ್ತವೆ.
  • ಕ೦ಬಳಿಹುಳುಗಳ ಹಿಂಡುಗಳು ಹೊಲಗಳ ನಡುವೆ ವಲಸೆ ಹೋಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಕಂಬಳಿಹುಳುಗಳು ಸಸ್ಯಗಳನ್ನು ತಿನ್ನುತ್ತವೆ ಮತ್ತು ಆ ಮೂಲಕ ಎಲೆಗಳ ಮೇಲೆ ಸಣ್ಣ ರಂಧ್ರಗಳನ್ನು ಮಾಡುತ್ತವೆ. ಎಲೆಗಳು ಅಸ್ಥಿಪಂಜರವಾದಂತಾಗುತ್ತವೆ. ಮತ್ತು ಕಾಂಡಗಳು ನಿರ್ಜೀವಗೊಳ್ಳುವ ರೂಪದಲ್ಲಿ ಹಾನಿಯನ್ನು ಉಂಟುಮಾಡುತ್ತವೆ. ಸೋಂಕು ತೀವ್ರವಾದ ಸಂದರ್ಭಗಳಲ್ಲಿ, ಕೀಟಗಳ ಹಿಂಡು ನಾಟಿ ಮಾಡಿದ ಪ್ರದೇಶಗಳನ್ನು ಅಧಿಕ ಸಂಖ್ಯೆಯಲ್ಲಿ ಆಕ್ರಮಣ ಮಾಡಬಹುದು ಮತ್ತು ಬೆಳೆಯನ್ನು ರಾತ್ರೋರಾತ್ರಿ ನಾಶಮಾಡುತ್ತವೆ. ಇದು ಜಾನುವಾರು ಮಾಡುವ ನಾಶವನ್ನು ಹೋಲುತ್ತದೆ. ಹಿಂಡಾದ ಕಂಬಳಿಹುಳುಗಳು ಎಲೆಗಳ ತುದಿ, ಎಲೆಗಳ ಅಂಚು ಮತ್ತು ಸಸ್ಯಗಳ ತಳ ಭಾಗವನ್ನು ಕತ್ತರಿಸುವುದರ ಮೂಲಕ ಭತ್ತದ ಬೆಳೆಗಳನ್ನು ಹಾನಿಮಾಡುತ್ತವೆ. ಈ ಹಾನಿಯು ನರ್ಸರಿಯಲ್ಲಿರುವ ಮೊಳಕೆಗಳು, ಬೀಜಗಳನ್ನು ನೇರವಾಗಿ ನಾಟಿ ಮಾಡಿದ ಬೆಳೆಗಳು ಮತ್ತು ಆರಂಭಿಕ ಉಳುಮೆ ಹಂತದಲ್ಲಿರುವ ಅಕ್ಕಿಯಲ್ಲಿ ಹೆಚ್ಚು ತೀವ್ರವಾಗಿರುತ್ತದೆ. ಒಂದು ಬೆಳೆಯನ್ನು ನಾಶಮಾಡಿದ ನಂತರ, ಲಾರ್ವಾಗಳ ಸಮೂಹವು ಸಾಮಾನ್ಯ ಆರ್ಮಿ ರಚನೆಯ ರೀತಿಯಲ್ಲಿ ಮತ್ತೊಂದು ಹೊಲಕ್ಕೆ ವಲಸೆ ಹೋಗುತ್ತವೆ. ಕಳೆದ ದಶಕದಲ್ಲಿ, ಇದು 10 ರಿಂದ 20% ದಷ್ಟು ನಷ್ಟವನ್ನು ಉಂಟುಮಾಡಿದ ಭತ್ತದ ಸಸಿಗಳಲ್ಲಿ ಕಂಡುಬಂದ ಗಂಭೀರವಾದ ಕೀಟವಾಗಿದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸಣ್ಣ ಪ್ರದೇಶಗಳಲ್ಲಿ, ಲಾರ್ವಾಗಳನ್ನು ತಿನ್ನಲು ಬಾತುಕೋಳಿಗಳನ್ನು ಹೊಲದಲ್ಲಿ ಬಿಡಬಹುದು. ಬಾಲಸ್ ಜೇಡಗಳನ್ನು ಬಿಡುವ ಮೂಲಕ ದೊಡ್ಡ ಹುಳುಗಳನ್ನೂ ಸಹ ತೆಗೆದುಹಾಕಬಹುದು. ಇದು ಹೆಣ್ಣು ಹುಳುಗಳಿಗೆ ಹೋಲುವ ಫೆರೋಮೋನ್ ಬಲೆಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಗಂಡು ಹುಳುಗಳನ್ನು ಆಕರ್ಷಿಸುತ್ತದೆ ಮತ್ತು ಸಂಯೋಗವಾಗುವುದನ್ನು ತಡೆಗಟ್ಟುತ್ತದೆ. ಭತ್ತದ ಹಿಂಡಾದ ಕಂಬಳಿಹುಳುವಿನ ವಿರುದ್ಧ ಸ್ಟೈನೆರ್ನೆಮಾ ಕಾರ್ಪೋಕಾಪ್ಸೆ ಎಂಬ ನೆಮಟೋಡ್ ಮತ್ತು ನ್ಯೂಕ್ಲಿಯೊಪೊಲಿಹೆಡ್ರೋವೈರಸ್ ಅನ್ನು ಹೊಂದಿರುವ ಸಿಂಪಡಿಕೆ ದ್ರಾವಣಗಳ ಬಳಕೆಯೂ ಸಹ ಪರಿಣಾಮಕಾರಿಯಾಗಿದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸೋಂಕಿನ ಆರಂಭಿಕ ಹಂತಗಳಲ್ಲಿ ಕ್ಯಾಟರ್ಪಿಲ್ಲರ್ ಗಳು ವಲಸೆ ಬರುವುದನ್ನು ತಪ್ಪಿಸಲು ಹೊಲದ ಅಂಚುಗಳಿಗೆ ಕೀಟನಾಶಕವನ್ನು ಸಿಂಪಡಿಸಬಹುದು. ಕ್ಲೋರೋಪಿರಿಫೋಸ್ ಆಧಾರಿತ ಸಂಪರ್ಕ ಕೀಟನಾಶಕಗಳನ್ನು ಹಾಕುವುದರಿಂದಲೂ ಸಹ ಕ್ಯಾಟರ್ಪಿಲ್ಲರ್ ಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.

ಅದಕ್ಕೆ ಏನು ಕಾರಣ

ಸ್ಪೊಡೋಪೆಟೆರಾ ಮೌರಿಶಿಯಾ ಎಂದು ಕರೆಯಲ್ಪಡುವ ಭತ್ತದ ಹಿಂಡಾದ ಕಂಬಳಿಹುಳುಗಳಿಂದ ಈ ಹಾನಿ ಉಂಟಾಗುತ್ತದೆ. ಈ ಪಾಲಿಫಾಗಸ್ (ವಿವಿಧ ರೀತಿಯ ಆಹಾರವನ್ನು ತಿನ್ನುವ ಜೀವಿಗಳು) ಪ್ರಭೇದಗಳು ಭತ್ತದ ಬೆಳೆಗೆ ಗಂಭೀರವಾದ ನಷ್ಟವನ್ನು ಉಂಟುಮಾಡಬಹುದು. ಹುಳುಗಳು ಬೂದುಬಣ್ಣದ್ದಾಗಿದ್ದು ಅವುಗಳ ರೆಕ್ಕೆಗಳ ಅಗಲ ಸುಮಾರು 40 ಮಿಮೀ ಗಳಿರುತ್ತವೆ. ಹೆಣ್ಣು ಹುಳುಗಳು ರಾತ್ರಿಯ ಸಮಯದಲ್ಲಿ ಓಡಾಡುತ್ತವೆ ಮತ್ತು ಅವು ಹುಟ್ಟಿದ ಕೇವಲ 24 ಗಂಟೆಗಳ ನಂತರ ಸಂಯೋಗ ಮಾಡುತ್ತವೆ. ಅವು ಸಂಯೋಗ ಮಾಡಿದ ಒಂದು ದಿನದ ನಂತರ, ವಿವಿಧ ರೀತಿಯ ಹುಲ್ಲು, ಕಳೆ ಮತ್ತು ಭತ್ತದ ಎಲೆಗಳ ಮೇಲೆ ಸುಮಾರು 200-300 ಸಂಖ್ಯೆಗಳ ಸಮೂಹದಲ್ಲಿ ಮೊಟ್ಟೆಗಳನ್ನು ಇಡಲು ಪ್ರಾರಂಭಿಸುತ್ತವೆ. ಲಾರ್ವಾಗಳು ಎಲೆಯ ಅಂಗಾಂಶಗಳನ್ನು ತಿನ್ನುತ್ತವೆ ಮತ್ತು ಅವು ಆರು ಲಾರ್ವಾ ಹಂತಗಳನ್ನು ಹೊಂದಿರುತ್ತವೆ ಮತ್ತು ಅಂತಿಮವಾಗಿ 3.8 ಸೆಂ.ಮೀ ಉದ್ದ ಬೆಳೆಯುತ್ತವೆ. ಸಂಪೂರ್ಣವಾಗಿ ಬೆಳೆದ ಲಾರ್ವಾಗಳು ಮೃದುವಾಗಿದ್ದು, ಸಿಲಿಂಡರಾಕಾರದಲ್ಲಿರುತ್ತವೆ ಮತ್ತು ಹಿಂಬದಿಯಲ್ಲಿ ಪಟ್ಟಿಯೊಂದಿಗೆ ಬಿಳಿಚಿಕೊಂಡ ದೇಹವನ್ನು ಹೊಂದಿರುತ್ತವೆ. C- ಆಕಾರದ ಕಪ್ಪು ಚುಕ್ಕೆಗಳ ಎರಡು ಸಾಲುಗಳು ಅವುಗಳ ಹಿಂಭಾಗದಲ್ಲಿ ಕಾಣುತ್ತವೆ. ಅವು ರಾತ್ರಿಯ ಸಮಯದಲ್ಲಿ ಆಹಾರ ತಿನ್ನುತ್ತವೆ ಮತ್ತು ದಿನದಲ್ಲಿ ಮಣ್ಣಿನಲ್ಲಿ ಅಡಗಿಕೊಳ್ಳುತ್ತವೆ. ಮಣ್ಣಿನಲ್ಲಿ ಹೂತಿರುವ ಕೋಶದಲ್ಲಿ ಕೋಶಾವಸ್ಥೆ ಪ್ರಕ್ರಿಯೆ ನಡೆಯುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸೋಂಕನ್ನು ಕಂಡುಹಿಡಿಯಲು ಹೊಲವನ್ನು ಆಗಾಗ್ಗೆ ಪರಿಶೀಲಿಸಿ.
  • ಕಂಬಳಿಹುಳುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕೈ ಬಲೆ ಅಥವಾ ಸ್ವೀಪಿಂಗ್ ಬುಟ್ಟಿಯಲ್ಲಿ ಅವುಗಳನ್ನು ಹಿಡಿಯಿರಿ.
  • ಪ್ಯೂಪಾಗಳನ್ನು ಕೊಲ್ಲಲು ಬೇಸಿಗೆಯಲ್ಲಿ ಆಳವಾದ ಉಳುಮೆ ಮಾಡಿ.
  • ಹೊಲಗಳಿಂದ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಂದ ಹೆಚ್ಚುವರಿ ನರ್ಸರಿ ಸಸ್ಯಗಳು ಮತ್ತು ಕಳೆಗಳನ್ನು ತೆಗೆದುಹಾಕಿ.
  • ಕೀಟಗಳ ಜೀವನ ಚಕ್ರವನ್ನು ಮುರಿಯಲು ಆಗಾಗ್ಗೆ ನೀರು ಹರಿಸುವುದು ಮತ್ತು ಬರಡು ಮಾಡುವ ಕೆಲಸಗಳನ್ನು ಮಾಡಿ.
  • ಸಾರಜನಕವನ್ನು ಅತಿಯಾಗಿ ಬಳಸಬೇಡಿ.
  • ಆಶ್ರಯದಾತವಲ್ಲದ ಸಸ್ಯಗಳೊಂದಿಗೆ ಸರದಿ ಬೆಳೆ ಮಾಡಿದರೆ ಅದು ರೋಗವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
  • ದೊಡ್ಡ ಹುಳುಗಳನ್ನು ಹಿಡಿಯಲು ಮಾತ್ ಟ್ರಾಪ್ ಗಳನ್ನು ಬಳಸಬಹುದು.
  • ಸೋಂಕು ತೀವ್ರವಾದ ಸಂದರ್ಭದಲ್ಲಿ, ಕಾಲುವೆ ತೋಡುವ ಮೂಲಕ ಹೊಲವನ್ನು ಪ್ರತ್ಯೇಕಿಸಿ ಮತ್ತು ಉಳುಮೆ ಮಾಡುವ ಮೂಲಕ ಬೆಳೆಯನ್ನು ನಾಶಮಾಡಿ.
  • ಕಂಬಳಿಹುಳುಗಳು ಮತ್ತು ಕೋಶಗಳನ್ನು ನಂತರ ಪರಭಕ್ಷಕ ಪಕ್ಷಿಗಳು ತಿನ್ನುತ್ತವೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ