ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಮೆಣಸಿನ ಥ್ರಿಪ್ಸ್ ನುಸಿ

Scirtothrips dorsalis

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳು ಮೇಲಕ್ಕೆ ಸುರುಳಿಯಾಗಿರುತ್ತವೆ.
  • ಸಸ್ಯವು ಬೇಗನೆ ಎಲೆ ಉದುರಿಸುತ್ತದೆ.
  • ಹೂವುಗಳು ಮತ್ತು ಹಣ್ಣುಗಳ ಮೇಲೂ ಸಹ ಪರಿಣಾಮ ಬೀರುತ್ತದೆ.
  • ಕಪ್ಪು ಮತ್ತು ಕಂದು ಬಣ್ಣದ ದೇಹ ಮತ್ತು ಹಳದಿ ಮಿಶ್ರಿತ ರೆಕ್ಕೆಗಳನ್ನು ಹೊಂದಿರುವ ಸಣ್ಣ ಮತ್ತು ತೆಳ್ಳಗಿನ ಕೀಟಗಳು ಕಂಡುಬರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ರೋಗಲಕ್ಷಣಗಳು

ಎಳೆಯ ಮತ್ತು ವಯಸ್ಕ ಕೀಟಗಳೆರಡೂ ಹೊಸ ಎಲೆಗಳ ಕೆಳಭಾಗವನ್ನು ತಿನ್ನುತ್ತವೆ. ಅವು ಅಂಗಾಶಗಳನ್ನು ಉಜ್ಜುತ್ತವೆ ಮತ್ತು ತೂತು ಮಾಡಿ ಹೊರ ಬರುವ ದ್ರವಗಳನ್ನು ಹೀರಿಕೊಳ್ಳುತ್ತವೆ. ಮುತ್ತಿಗೆಗೆ ಒಳಗಾದ ಎಲೆಗಳು ತಿಳಿ ಕಂದು ಬಣ್ಣದಿಂದ ಬೆಳ್ಳಿ ಬಣ್ಣದ ಕಲೆಗಳನ್ನು ಬೆಳೆಸಿಕೊಳ್ಳುತ್ತವೆ ಮತ್ತು ವಿರೂಪತೆ ಚಿಹ್ನೆಗಳನ್ನು (ಸುರುಳಿ ಸುತ್ತುವಿಕೆ) ತೋರಿಸಬಹುದು. ತೀವ್ರ ಸಂದರ್ಭಗಳಲ್ಲಿ ಎಲೆಗಳು ಸಂಪೂರ್ಣ ವಿರೂಪಗೊಳ್ಳುತ್ತವೆ ಮತ್ತು ನಂತರ ಸಸ್ಯದ ಎಲೆಗಳು ಅಕಾಲಿಕವಾಗಿ ಉದುರುತ್ತವೆ. ಹೂವುಗಳನ್ನು ತಿನ್ನುವುದರಿಂದ ದಳಗಳ ಮೇಲೆ ಪಟ್ಟೆಗಳು ಕಾಣುತ್ತವೆ ಮತ್ತು ಇವು ಒಣಗಿ ಉದುರಬಹುದು. ಹಕ್ಕಳೆಗಳು, ಕಲೆಗಳು ಮತ್ತು ಹಣ್ಣುಗಳ ವಿರೂಪತೆ ಅವುಗಳ ಮಾರುಕಟ್ಟೆ ಮೌಲ್ಯವನ್ನು ಕಡಿಮೆಗೊಳಿಸುತ್ತದೆ. ವರ್ಷವಿಡೀ ಧಾಳಿ ಸಂಭವಿಸಿದರೂ, ಒಣ ತಿಂಗಳುಗಳಲ್ಲಿ ಮತ್ತು ಹೆಚ್ಚಿನ ಸಾರಜನಕ ಗೊಬ್ಬರ ಹಾಕಿದ ಮಣ್ಣುಗಳಲ್ಲಿ ಇದು ಅತ್ಯಂತ ಹೆಚ್ಚಾಗಿರುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಓರಿಯಸ್ ಕುಲದ ಸಣ್ಣ ಪೈರೇಟ್ ಬಗ್ ಗಳು ಮತ್ತು ಫೈಟೊಸೈಯಿಡ್ ಹುಳಗಳು, ನಿಯೋಸಿಯಾಲಸ್ ಕ್ಯುಕುಮೆರಿಸ್ ಮತ್ತು ಅಂಬ್ಲೈಸಿಯಸ್ ಸ್ವಿರ್ಸ್ಕಿ ಯಂತಹ ವಿವಿಧ ಜೈವಿಕ ನಿಯಂತ್ರಣ ಏಜೆಂಟ್ ಗಳು ದಾಳಿಂಬೆಗಳಲ್ಲಿ ಥ್ರಿಪ್ಸ್ ಗಳ ವಿರುದ್ಧ ಪರಿಣಾಮಕಾರಿ ನಿಯಂತ್ರಣವನ್ನು ಒದಗಿಸುವುದು ವರದಿಯಾಗಿದೆ. ಯೂಸಿಯಸ್ ಸೋಜೆನ್ಸಿಸ್, ಇ. ಹೈಬಿಸ್ಕಿ ಮತ್ತು ಇ. ಟ್ಯುಲರೆನ್ಸಿಸ್ ನಂತಹ ಪರಭಕ್ಷಕ ಹುಳಗಳು ಸಹ, ಮೆಣಸು ಮತ್ತು ದ್ರಾಕ್ಷಿಗಳಂತಹ ಪರ್ಯಾಯ ಆಶ್ರಯದಾತ ಸಸ್ಯಗಳ ಮೇಲೆ ಕೀಟಗಳ ಸಂಖ್ಯೆ ನಿಯಂತ್ರಿಸಲು ಪರಿಣಾಮಕಾರಿಯಾಗಿ ಬಳಸಲ್ಪಟ್ಟಿವೆ. ಗಿಡದ ತಳದಲ್ಲಿ ಮತ್ತು ಸಸ್ಯದ ಎಲೆಗಳ ಸುತ್ತಲೂ ಡಯಾಟೊಮ್ಯಾಸಿಯಸ್ ಅರ್ತ್ ಗಳನ್ನು ಹರಡಿದರೆ, ಅದು ಥ್ರಿಪ್ಸ್ ಗಳು ಮತ್ತು ಅವುಗಳ ಮರಿಹುಳುಗಳನ್ನು (ಸಂಜೆಯಲ್ಲಿ) ನಿವಾರಿಸುವುದಕ್ಕೆ ಕಾರಣವಾಗುತ್ತವೆ. ಬೇವಿನ ಎಣ್ಣೆ, ಸ್ಪಿನೆಟೋರಮ್ ಅಥವಾ ಸ್ಪಿನೊಸಡ್ ಗಳನ್ನು ಎಲೆಗಳ ಎರಡೂ ಬದಿ ಹಚ್ಚಿ ಮತ್ತು ಸಸ್ಯದ ತಳದ ಸುತ್ತಲೂ ಹಾಕಿ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿ ಇರುವ ಸಮಗ್ರವಾದ ಮಾರ್ಗವಿದ್ದರೆ ಅದನ್ನುಯಾವಾಗಲೂ ಮೊದಲು ಪರಿಗಣಿಸಿ. ಮ್ಯಾಲಾಥಿಯನ್ ಅನ್ನು ಹೊಂದಿರುವ ಎಲೆಗಳ ದ್ರವೌಷಧಗಳನ್ನು ಥ್ರಿಪ್ಸ್ ನಿಯಂತ್ರಣಕ್ಕೆ ಶಿಫಾರಸು ಮಾಡಲಾಗುತ್ತದೆ. ಇತರ ಕೀಟನಾಶಕಗಳ ಬಳಕೆಯೂ ಕೂಡ ಎಸ್. ಡೋರ್ಸಲಿಸ್ ನ ಸಂಖ್ಯೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಉದಾಹರಣೆಗೆ, ಅಬಮೆಕ್ಟಿನ್ ಮತ್ತು ಡಿಮೀಥೊಯೇಟ್ ಗಳ ಬಳಕೆಯು ಸಾಮಾನ್ಯವಾಗಿ ಸೌತೆಕಾಯಿ ಥ್ರಿಪ್ಸ್ ಗಳ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ತಿಳಿದುಬಂದಿದೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಎರಡು ಜಾತಿಗಳ ಥ್ರಿಪ್ಸ್ ಗಳಿಂದ ಉಂಟಾಗುತ್ತವೆ. ಸಿರ್ಥೋಥ್ರಿಪ್ಸ್ ಡೋರ್ಸಲಿಸ್ ಮತ್ತು ರೈಫಿಪೋರೋ ಥ್ರಿಪ್ಸ್ ಕ್ರೂಯೆಂಟಟಸ್. ಸಿರ್ಥೋಥ್ರಿಪ್ಸ್ ಡೋರ್ಸಲಿಸ್ ನ ವಯಸ್ಕ ಕೀಟವು ಒಣ ಹುಲ್ಲಿನ ಹಳದಿ ಬಣ್ಣದಲ್ಲಿರುತ್ತವೆ. ಹೆಣ್ಣು ಕೀಟಗಳು ಬಿಳಿಯ-ಹುರುಳಿ-ಆಕಾರದ ಸುಮಾರು 50 ಮೊಟ್ಟೆಗಳನ್ನು ಸಾಮಾನ್ಯವಾಗಿ ಎಳೆಯ ಎಲೆಗಳು ಮತ್ತು ಮೊಗ್ಗುಗಳ ಒಳಗಡೆ ಇಡುತ್ತವೆ. ಕೀಟಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಅವು ಬೆಳೆದ ಎಲೆಗಳ ಮೇಲ್ಮೈಯನ್ನು ಆಯ್ಕೆ ಮಾಡುತ್ತವೆ. ಹೊರಹೊಮ್ಮುವ ಅವಧಿಯು 3-8 ದಿನಗಳು. ಹೊಸದಾಗಿ ಮೊಟ್ಟೆಯೊಡೆದು ಹೊರಬಂದ ಮರಿಹುಳುಗಳು ಸಣ್ಣದಾಗಿ, ಕೆಂಪು ಬಣ್ಣದ ದೇಹವನ್ನು ಹೊಂದಿದ್ದು ಅದು ನಂತರ ಹಳದಿ ಕಂದು ಬಣ್ಣಕ್ಕೆ ತಿರುಗುತ್ತದೆ. ರೂಪಾಂತರ ಪ್ರಕ್ರಿಯೆಯನ್ನು ಪ್ರವೇಶಿಸುವ ಮರಿಹುಳುಗಳು ಸಸ್ಯದಿಂದ ಹೊರಬರುತ್ತವೆ ಮತ್ತು ತಮ್ಮ ಮುಂದಿನ ಬೆಳೆವಣಿಗೆಯನ್ನು ಆಶ್ರಯದಾತ ಸಸ್ಯಗಳ ತಳದಲ್ಲಿನ ಸಡಿಲವಾದ ಮಣ್ಣಿನಲ್ಲಿ ಅಥವಾ ಎಲೆಯ ಕಸದಲ್ಲಿ ಪೂರ್ಣಗೊಳಿಸುತ್ತವೆ. ಕೋಶಾವಸ್ಥೆಯು 2-5 ದಿನಗಳವರೆಗೆ ಇರುತ್ತದೆ. ವಯಸ್ಕ ಆರ್. ಕ್ರುಯೆಂಟಟಸ್ ಗಳು ಸಣ್ಣದಾದ, ತೆಳುವಾದ, ಮೃದುವಾದ ದೇಹಗಳನ್ನು ಹೊಂದಿದ್ದು, ಹೆಚ್ಚು ವಿನ್ಯಾಸವಿರುವ ರೆಕ್ಕೆಗಳನ್ನು ಹೊಂದಿರುತ್ತವೆ. ಅವುಗಳ ದೇಹ ಕಪ್ಪುಕಂದು ಬಣ್ಣದಲ್ಲಿದ್ದು, ಹಳದಿ ರೆಕ್ಕೆಗಳು 1.4 ಮಿಮೀ ಉದ್ದವಾಗಿರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಆಯ್ಕೆಮಾಡಿ.
  • ಥ್ರಿಪ್ಸ್ ಗಳ ಸಂಖ್ಯೆಯನ್ನು ನಿಯಂತ್ರಿಸಲು ಜಿಗುಟಾದ ಬಲೆಗಳನ್ನು ಬಳಸಿ.
  • ಪರ್ಯಾಯವಾಗಿ, ಸೋಂಕಿತ ಸಸ್ಯದಿಂದ ಎಲೆಗಳನ್ನು ತೆಗೆದುಹಾಕಿ ಮತ್ತು ಅದನ್ನು ಬಿಳಿ ಕಾಗದದ ಮೇಲೆ ನಿಧಾನವಾಗಿ ಬಡಿಯಿರಿ.
  • ಹೊಲದಿಂದ ಅಧಿಕ ಸೋಂಕಿಗೆ ಒಳಗಾಗಿರುವ ಸಸ್ಯಗಳನ್ನು ತೆಗೆದುಹಾಕಿ.
  • ಮಣ್ಣನ್ನು ಚೆನ್ನಾಗಿ ನೀರಾವರಿ ಮಾಡಿ ಮತ್ತು ವಿಪರೀತ ಸಾರಜನಕ ಗೊಬ್ಬರ ಬಳಕೆಯನ್ನು ತಪ್ಪಿಸಿ.
  • ಪ್ರಯೋಜನಕಾರಿ ಕೀಟಗಳ ಸಂಖ್ಯೆಯನ್ನು ಕಾಪಾಡಿಕೊಳ್ಳಲು ಕೀಟನಾಶಕಗಳ ಅತಿಯಾದ ಬಳಕೆಯನ್ನು ತಪ್ಪಿಸಿ.
  • ಸುತ್ತಮುತ್ತಲು ಪರ್ಯಾಯ ಆಶ್ರಯದಾತ ಸಸ್ಯಗಳನ್ನು ನೆಡಬೇಡಿ.
  • ಹೊಲ ಮತ್ತು ಸುತ್ತಲಿನಲ್ಲಿ ಕಳೆಗಳನ್ನು ತೆಗೆದುಹಾಕಿ.
  • ಗಾಳಿ ತಡೆಗಳು, ದೂರದ ಪ್ರದೇಶಗಳಿಂದಾಗುವ ಸೋಂಕಿನಿಂದ ಹೊಲವನ್ನು ರಕ್ಷಿಸುತ್ತದೆ.
  • ಥ್ರಿಪ್ಸ್ ಕೋಶಹುಳುಗಳನ್ನು ಮಣ್ಣಿನ ಮೇಲ್ಮೈಗೆ ತಂದು, ಸೂರ್ಯನಿಗೆ ಒಡ್ಡಲು ಮಣ್ಣನ್ನು ಉಳುಮೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ