Zeugodacus cucurbitae
ಕೀಟ
Z. ಕುಕುರ್ಬಿಟೆಯ ಹೆಣ್ಣು ನೊಣಗಳು ತಮ್ಮ ಮೊಟ್ಟೆಗಳನ್ನು ಇಟ್ಟಾಗ ಹಣ್ಣಿನ ಸಿಪ್ಪೆಯನ್ನು ತೂತು ಮಾಡುತ್ತವೆ. ಲಾರ್ವಾಗಳು ಹಣ್ಣಿನೊಳಗೆ ಕೊರೆದುಕೊಂಡು ಹೋಗುತ್ತವೆ. ತಿರುಳಿನೊಳಗೆ ಗಮನಾರ್ಹವಾದ ಹಾನಿಯಾಗಬಹುದು (ಹಿಕ್ಕೆಯ ಕಶ್ಮಲೀಕರಣ, ಕೊಳೆತ). ಅಂಡಾಶಯವು ಸಂಭವಿಸಿದ ಹಣ್ಣಿನ ಚರ್ಮದ ಮೇಲೆ ಸಣ್ಣ, ಬಣ್ಣಗೆಟ್ಟ ತೇಪೆಗಳು ಬೆಳೆಯಬಹುದು. ಮೊಟ್ಟೆಗಳನ್ನು ಹಾಕುವುದರಿಂದ ಉಂಟಾದ ಗಾಯಗಳ ಕಾರಣದಿಂದ, ಹಣ್ಣುಗಳು ಅವಕಾಶವಾದಿ ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳಿಂದಾಗುವ ದ್ವಿತೀಯಕ ಸೋಂಕಿಗೆ ಸೂಕ್ಷ್ಮವಾಗಿರುತ್ತವೆ. ಬಾಧಿತ ಹಣ್ಣುಗಳು ಕೊಳೆಯುತ್ತವೆ ಮತ್ತು ಸಾಮಾನ್ಯವಾಗಿ ಸಸ್ಯದಿಂದ ಅಕಾಲಿಕವಾಗಿ ಬೀಳುತ್ತವೆ. ಮರಿಹುಳುಗಳು ಎಳೆ ಸಸಿಗಳು, ಕಲ್ಲಂಗಡಿಗಳ ರಸವತ್ತಾದ ಮೂಲ ಬೇರುಗಳು ಹಾಗು ಕಾಂಡಗಳು ಮತ್ತು ಸೌತೆಕಾಯಿ, ಸ್ಕ್ವ್ಯಾಷ್ ಹಾಗು ಇತರವುಗಳಂತಹ ಆಶ್ರಯದಾತ ಸಸ್ಯಗಳ ಮೊಗ್ಗುಗಳನ್ನು ಸಹ ಆಕ್ರಮಣ ಮಾಡುತ್ತವೆ.
ಸುಗ್ಗಿಯ ನಂತರದ ಶಾಖ ಚಿಕಿತ್ಸೆ (ಬಿಸಿ ಆವಿ ಅಥವಾ ಬಿಸಿ ನೀರು) ಅಥವಾ ಶೀತ ಚಿಕಿತ್ಸೆಗಳು ಸಾರಿಗೆಯ ಸಮಯದಲ್ಲಿ ಮತ್ತು ನಂತರ ಮಾಲಿನ್ಯದ ಅಪಾಯವನ್ನು ತಪ್ಪಿಸುತ್ತವೆ. ಬೆಳೆಯುತ್ತಿರುವ ಹಣ್ಣುಗಳನ್ನು ರಕ್ಷಣಾತ್ಮಕ ಹೊದಿಕೆಯನ್ನು ಬಳಸಿ ಸುತ್ತಿ ಅಥವಾ ಫೆರೋಮೋನ್ಗಳು ಅಥವಾ ಪ್ರೊಟೀನ್ಗಳನ್ನು ಗಾಳಗಳಾಗಿ ಹಾಕಿರುವ ಬಲೆಗಳನ್ನು ಬಳಸಿ (ಉದಾ: ಗಂಡು ನೊಣಗಳನ್ನು ಆಕರ್ಷಿಸುವ ಮೀಥೈಲ್ ಯುಜೆನಾಲ್). ಯುಜೆನಾಲ್, ಬೀಟಾ-ಕ್ಯಾರಿಯೋಫಿಲೆನ್ ಮತ್ತು ಬೀಟಾ-ಎಲಿಮೆನ್ ಗಳನ್ನು ಒಳಗೊಂಡಿರುವ ಓಸಿಮಮ್ ಸ್ಯಾಂಕ್ಟಮ್ (ಪವಿತ್ರ ತುಳಸಿ) ಎಲೆಗಳ ಸಾರಗಳನ್ನು, ಹತ್ತಿ ಪ್ಯಾಡ್ ಗಳಲ್ಲಿ ಹಾಕಿ ಇರಿಸಿದರೆ ಅವು 0.8 ಕಿ.ಮೀ ದೂರದಲ್ಲಿರುವ ನೊಣಗಳನ್ನು ಆಕರ್ಷಿಸುತ್ತವೆ. ಈ ಅಂಶಗಳನ್ನು ಸ್ಪಿನೊಸಡ್ನೊಂದಿಗೆ ಸೇರಿಸಿ ವಿಷದಂತೆ ಸಿಂಪಡಿಸಿದರೆ ಅದು ಹಣ್ಣಿನ ತೋಟದಲ್ಲಿರುವ ನೊಣಗಳನ್ನು ಸಾಯಿಸುತ್ತದೆ. ನೀಮ್ ಬೀಜದ ಸಾರವನ್ನು ಓವಿಪೊಸಿಷನ್ ನಿರೋಧಕವಾಗಿ ಬಳಸಬಹುದು.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಮ್ಯಾಲಥಿಯಾನ್ ಅನ್ನು ಹೊಂದಿರುವ ಕೀಟನಾಶಕಗಳು, ಹಣ್ಣಿನ ನೊಣದ ವಿರುದ್ಧ ಸಾಧಾರಣವಾಗಿ ಪರಿಣಾಮಕಾರಿಯಾಗಿರುತ್ತವೆ. ಸ್ಪ್ರೇಗಳನ್ನು ಪ್ರೋಟೀನ್ ಗಾಳಗಳೊಂದಿಗೆ ಬೆರೆಸಬೇಕು, ಈ ರೀತಿ ನಿರ್ದಿಷ್ಟ ಸ್ಥಾನಗಳಿಗೆ ನೊಣಗಳನ್ನು ಆಕರ್ಷಿಸಬಹುದು.
ಎಳೆ ಹಣ್ಣುಗಳ ಚರ್ಮದ ಅಡಿಯಲ್ಲಿ ಮೊಟ್ಟೆಗಳನ್ನು ಗುಂಪುಗಳಾಗಿ ಇಡಲಾಗುತ್ತದೆ. ಮರಿಹುಳುಗಳು ಸಂಪೂರ್ಣವಾಗಿ ಬೆಳೆದಾಗ 10-12 ಮಿ.ಮೀ ಉದ್ದವಿರುತ್ತವೆ ಮತ್ತು ಹಣ್ಣುಗಳ ತಿರುಳಿನೊಳಗೆ ಕೊರೆದುಕೊಂಡು ಹೋಗುವ ಮೂಲಕ ಹಾನಿಯುಂಟುಮಾಡುತ್ತವೆ. ಪ್ಯೂಪೇಶನ್ 10 ದಿನಗಳವರೆಗೆ ಇರುತ್ತದೆ, ಸಾಮಾನ್ಯವಾಗಿ ಇದು ಮಣ್ಣಿನಲ್ಲಿ ನಡೆಯುತ್ತದೆ, ಆದರೆ ಕೆಲವೊಮ್ಮೆ ಹಣ್ಣುಗಳಲ್ಲಿ ಕೂಡ ಇರುತ್ತದೆ. ಪ್ಯೂಪಾಗಳು ಅಂಡಾಕಾರದ, ಕಂದು ಬಣ್ಣದ ಮತ್ತು 6-8 ಮಿಮೀ ಉದ್ದದ ಗೂಡುಗಳಲ್ಲಿ ಬೆಳೆಯುತ್ತವೆ. ಅತ್ಯಂತ ಒಣ ಪ್ರದೇಶಗಳಲ್ಲಿ ಪ್ಯೂಪಾ ಕುಂಠಿತ ವಿಕಾಸ(ಡೈಯಾಪಾಸ್) ಹಂತಕ್ಕೆ ಹೋಗಬಹುದು. ಪ್ರೌಢ ನೊಣಗಳು ಕಂದು ಬಣ್ಣದ ತಲೆ ಮತ್ತು ಹಿಂಭಾಗದಲ್ಲಿ ಮೂರು ಪ್ರಕಾಶಮಾನವಾದ ಹಳದಿ ಪಟ್ಟಿಯೊಂದಿಗೆ 8-10 ಮಿಮೀ ಉದ್ದವಿರುತ್ತವೆ. ಅವು ಮಕರಂದ, ಹಾನಿಗೊಳಗಾದ ಹಣ್ಣಿನ ರಸ ಮತ್ತು ಸಸ್ಯದ ರಸವನ್ನು ತಿನ್ನುತ್ತವೆ. ರೆಕ್ಕೆಗಳು 12-15 ಮಿಮೀ ಉದ್ದವಿದ್ದು ತುದಿಯಲ್ಲಿ ಗಾಢ ಕಂದು ಬಣ್ಣದ ಪಟ್ಟಿಯೊಂದಿಗೆ ಪಾರದರ್ಶಕವಾಗಿರುತ್ತವೆ. ಜೀವನ ಚಕ್ರವು 3-4 ವಾರಗಳನ್ನು ತೆಗೆದುಕೊಳ್ಳುತ್ತದೆ ಮತ್ತು ವರ್ಷಕ್ಕೆ ಹಲವು ಬಾರಿ ಪುನರಾವರ್ತಿಸುತ್ತದೆ.