ಬಾಳೆಹಣ್ಣು

ಕ್ಯಾಸ್ಟರ್ ಹೇರಿ ಕ್ಯಾಟರ್ಪಿಲ್ಲರ್ (ಕಂಬಳಿಹುಳು)

Pericallia ricini

ಕೀಟ

ಸಂಕ್ಷಿಪ್ತವಾಗಿ

  • ಕೆರೆತದಿಂದಾಗುವ ಹಾನಿಯ ಲಕ್ಷಣಗಳು ಕ್ಲೋರೊಫಿಲ್ ಇಲ್ಲದ ತೆಳು ಕಂದು ಬಣ್ಣದ ಎಲೆ ಅಂಗಾಂಶವಾಗಿ ಕಾಣಿಸಿಕೊಳ್ಳುತ್ತದೆ.
  • ತೆರೆದ ಎಲೆಗಳಲ್ಲಾಗುವ ಆಹಾರ ಹಾನಿಯು ಕಿಟಕಿ ತರಹದ ಮಾದರಿಯಾಗಿ ಕಾಣಿಸಿಕೊಳ್ಳುತ್ತದೆ.
  • ಸೋಂಕು ತೀವ್ರವಾಗಿದ್ದಾಗ, ಆಹಾರ ಹಾನಿಯು ಎಲೆಗಳಚುವಿಕೆಗೆ ಕಾರಣವಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಬಾಳೆಹಣ್ಣು

ರೋಗಲಕ್ಷಣಗಳು

ಲಾರ್ವಾಗಳಿಂದ ಈ ಹಾನಿ ಉಂಟಾಗುತ್ತದೆ. ಆರಂಭಿಕ ರೋಗಲಕ್ಷಣಗಳೆಂದರೆ ಎಲೆಗಳ ಮೇಲೆ ಕೆರೆತದಂತೆ ಕಾಣುವ ಹಾನಿ, ಏಕೆಂದರೆ ಲಾರ್ವಾಗಳು ಎಲೆಗಳ ಅಂಗಾಂಶದ ಕ್ಲೋರೊಫಿಲ್ ಸತ್ವವನ್ನು ತಿನ್ನುತ್ತವೆ. ಕಾಲಾನಂತರದಲ್ಲಿ, ಎಲೆಗಳು ಕಿಟಕಿ ಮಾದರಿಯ ಆಹಾರ ಹಾನಿಯನ್ನು ತೋರುತ್ತವೆ ಮತ್ತು ಅದರಲ್ಲಿ ದೊಡ್ಡ ತೆಳು-ಕಂದು ಬಣ್ಣದ, ಅರೆಪಾರದರ್ಶಕ ಕಲೆಗಳಿರುತ್ತವೆ. ಸೋಂಕು ತೀವ್ರವಾಗಿದ್ದಾಗ, ಆಹಾರ ಹಾನಿಯು ಎಲೆಗಳಚುವಿಕೆಗೆ ಕಾರಣವಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ನೀಮ್ ಬೀಜಗಳ ಕುಸುರಿ ಸಾರವನ್ನು ಲಾರ್ವಾ ಬೆಳವಣಿಗೆಯ ಆರಂಭಿಕ ಹಂತಗಳಲ್ಲಿ ಬಳಸಿದರೆ ಅದು ಸೋಂಕನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಕುಸುರಿ ಸಾರದ 5% ದ್ರಾವಣವನ್ನು 1 ಲೀ ನೀರಿನೊಂದಿಗೆ ಬೆರೆಸಬೇಕು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಕೀಟನಾಶಕಗಳ ಅಗತ್ಯವಿದ್ದರೆ, ಕ್ಲೋರಿಪಿರಿಫೊಸ್ ಹೊಂದಿರುವ ಉತ್ಪನ್ನಗಳನ್ನು ಎಲೆಗಳ ಮೇಲೆ ಸಿಂಪಡಿಸಬಹುದು. ಪಟ್ಟಿಮಾಡಿದ ರಾಸಾಯನಿಕಗಳು ಮಾನವನ ಮತ್ತು ಇತರ ಸಸ್ತನಿಗಳು, ಜೇನುನೊಣಗಳು, ಮೀನು ಮತ್ತು ಪಕ್ಷಿಗಳ ಆರೋಗ್ಯದ ಮೇಲೆ ವಿಷಕಾರಿ ಪರಿಣಾಮವನ್ನು ಬೀರಬಹುದು ಎಂಬುದನ್ನು ದಯವಿಟ್ಟು ನೆನಪಿನಲ್ಲಿಡಿ.

ಅದಕ್ಕೆ ಏನು ಕಾರಣ

ಕ್ಯಾಸ್ಟರ್ ಹೇರಿ ಕ್ಯಾಟರ್ಪಿಲ್ಲರ್ ಎಂಬುದು ರಾತ್ರಿಯ ವೇಳೆ ಓಡಾಡುವ ಚಿಟ್ಟೆ ಜಾತಿಯ ಕೀಟವಾಗಿದೆ. ಹೀಗಾಗಿ, ದೊಡ್ಡ ಹುಳುಗಳನ್ನು ಸಂಜೆಯ ನಂತರ ಮತ್ತು ರಾತ್ರಿ ಸಮಯದಲ್ಲಿ ಮಾತ್ರ ಕಾಣಬಹುದು. ದಪ್ಪವಾದ ಪ್ರೌಢ ಹುಳುಗಳ ಮುಂದಿನ ರೆಕ್ಕೆಗಳು ಬೂದು ಬಣ್ಣದ್ದಾಗಿದ್ದು ಅವುಗಳ ಮೇಲೆ ಗಾಢ ಕಲೆಗಳಿರುತ್ತವೆ ಮತ್ತು ಹಿಂದಿನರೆಕ್ಕೆಗಳು ಗುಲಾಬಿ ಬಣ್ಣದ್ದಾಗಿರುತ್ತವೆ. ಲಾರ್ವಾಗಳು ಕಪ್ಪು ಬಣ್ಣದ್ದಾಗಿರುತ್ತವೆ ಮತ್ತು ಅವಕ್ಕೆ ಕಂದು ಬಣ್ಣದ ತಲೆ ಮತ್ತು ದೇಹದಲ್ಲೆಲ್ಲ ಉದ್ದನೆಯ ಕಂದು ಬಣ್ಣದ ಕೂದಲಿರುತ್ತವೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಸಸ್ಯಗಳನ್ನು ಅಥವಾ ಹೊಲವನ್ನು ಕೀಟದ ಯಾವುದೇ ಚಿಹ್ನೆಗಾಗಿ ಪರಿಶೀಲಿಸಿ.
  • ಸೋಂಕಿನ ಹರಡುವಿಕೆಯನ್ನು ತಡೆಯಲು ಮೊಟ್ಟೆಯ ದ್ರವ್ಯರಾಶಿಗಳು, ಲಾರ್ವಾಗಳು, ಸೋಂಕಿತ ಸಸ್ಯಗಳು ಅಥವಾ ಹೊಲದಲ್ಲಿರುವ ಸಸ್ಯದ ಭಾಗಗಳನ್ನು ಕೈಯಿಂದ ತೆಗೆದುಹಾಕಿ ಮತ್ತು ನಾಶಮಾಡಿ.
  • ದೊಡ್ಡ ಕೀಟಗಳನ್ನು ಕಡಿಮೆ ಮಾಡುವ ಸಲುವಾಗಿ ಬೆಳಕಿನ ಬಲೆಗಳನ್ನು ಬಳಸಿ ಅಥವಾ ಅವುಗಳನ್ನು ಕೊಲ್ಲುವ ಸಲುವಾಗಿ ಸಾಮೂಹಿಕ ಬಲೆಯನ್ನು ಹಾಕಿ.
  • ಸಾಮೂಹಿಕ ಬಲೆಗೆ, ಕಿರಿಯ ಕೀಟಗಳನ್ನು ಆಕರ್ಷಿಸಲು ಸುಡುವ ಟಾರ್ಚ್ ಗಳನ್ನು ಬಳಸಿ.
  • ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ಸುಡುವ ಮೂಲಕ ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ