Citripestis eutraphera
ಕೀಟ
ಬಟಾಣಿ- ಅಥವಾ ನಿಂಬೆ- ಗಾತ್ರದ ಹಣ್ಣುಗಳಲ್ಲಿ ಕಪ್ಪು ಬಣ್ಣದ ಪ್ರವೇಶ ರಂಧ್ರಗಳನ್ನು ಕಾಣಬಹುದು. ನೇತಾಡುತ್ತಿರುವ ಹಣ್ಣಿನ ಕೊನೆಯ ತುದಿಯಲ್ಲಿ ಈ ರಂಧ್ರಗಳ ಸುತ್ತ ಬಣ್ಣವಿಲ್ಲದ ವೃತ್ತಾಕಾರದ ಕಲೆಯನ್ನು ಸಹ ಕಾಣಬಹುದು. ಹಣ್ಣುಗಳು ದೊಡ್ಡದಾದಂತೆ ತಿಂದುಬಿಟ್ಟಿರುವ ತಿರುಳು ಮತ್ತು ರಸವು ಪ್ರವೇಶ ರಂಧ್ರದಿಂದ ಸ್ರವಿಸುತ್ತವೆ. ಕೊರಕದ ಕೊರೆತದಿಂದ ಹಣ್ಣುಗಳು ಎರಡು ಹೋಳಾಗಬಹುದು. ಆಗ ಮರಿಹುಳುಗಳು ಇತರ ಹಣ್ಣುಗಳಿಗೆ ವಲಸೆ ಹೋಗಬಹುದು. ಹೊಸದಾಗಿ ಮೊಟ್ಟೆಯೊಡೆದ ಲಾರ್ವಾಗಳು ಗಾಢ ಕಂದು ಬಣ್ಣ ಅಥವ ಕಪ್ಪು ಬಣ್ಣದ ತಲೆಯೊಂದಿಗೆ ತೆಳುವಾದ ಗುಲಾಬಿ ಬಣ್ಣದ ದೇಹವನ್ನು ಹೊಂದಿರುತ್ತವೆ. ನಂತರ, ಅವು ಕೆಂಪು-ಕಂದು ಬಣ್ಣಕ್ಕೆ ತಿರುಗುತ್ತವೆ. ಆರಂಭದಲ್ಲಿ, ಅವು ಹಣ್ಣಿನ ಸಿಪ್ಪೆಯನ್ನು ಕೊರೆಯುತ್ತವೆ, ಇದರಿಂದ ಹಕ್ಕಳೆ ತರಹದ ತೇಪೆಗಳು ಬರುತ್ತವೆ, ನಂತರ ಅವು ಹಣ್ಣಿನೊಳಗೆ ಕೊರೆದುಕೊಂಡು ಹೋಗುತ್ತವೆ, ಇದರಿಂದ ಸಣ್ಣ ಹಣ್ಣುಗಳು ಅಕಾಲಿಕವಾಗಿ ಉದುರುತ್ತವೆ. ತೀವ್ರ ಸೋಂಕಾಗಿರುವ ಮರಗಳ ಅಡಿಯಲ್ಲಿ ಈ ರೀತಿಯ ನೂರಾರು ಕೀಟಗಳು ಕಂಡುಬರುತ್ತವೆ. ಸೋಂಕಿತ ಹಣ್ಣುಗಳು ಅಕಾಲಿಕವಾಗಿ ಉದುರುತ್ತವೆ.
ಮಾವು ಹೂವಿನ ಹಂತದಲ್ಲಿದ್ದಾಗ ನೀಮ್ ಸಾರವನ್ನು (ಅಜಡಿರಾಚ್ಟಿನ್) ಸಾಪ್ತಾಹಿಕ ಅಂತರಗಳಲ್ಲಿ ಹಾಕಿ ಅದನ್ನು 2 ತಿಂಗಳುಗಳವರೆಗೆ ಮುಂದುವರೆಸಿ. ಮಾವಿನ ಹಣ್ಣು ಕೊರಕದ ನೈಸರ್ಗಿಕ ಶತ್ರುಗಳ ಸಂಖ್ಯೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ, ಉದಾಹರಣೆಗೆ ರೈಚಿಯಂ ಅರಿಸ್ಟಾಮಮ್ (ಲಾರ್ವಾಗಳನ್ನು ತಿನ್ನುತ್ತವೆ) ಮತ್ತು ಟ್ರೈಕೊಗ್ರಾಮ ಚಿಲೊನಿಸ್ ಎಂಬ ಕಣಜಗಳು ಮತ್ತು ಟ್ರೈಕೋಗ್ರಾಮ ಚಿಲೊಟ್ರೆಯೆ, ಇವುಗಳು ಮೊಟ್ಟೆಗಳ ಮೇಲೆ ಪರಾವಲಂಬಿಯಾಗುತ್ತವೆ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಥಿಯಾಕ್ಲೋಪ್ರಿಡ್ ಅನ್ನು ಹೊಂದಿರುವ ಸಿಂಪರಿಕೆಗಳು ಮಾವಿನ ಹಣ್ಣಿನ ಕೊರಕಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತವೆ. ಅಲ್ಲದೆ, ಮಾರ್ಬಲ್-ಗಾತ್ರದ ಹಣ್ಣುಗಳ ಮೇಲೆ ಸಿಂಪಡಿಸಲಾಗಿರುವ ಕೀಟನಾಶಕಗಳು ತೃಪ್ತಿಕರ ಫಲಿತಾಂಶಗಳನ್ನು ತೋರಿಸಿದವು. ಕ್ಲೋರಿಪೈರಿಫೋಸ್ (2.5 ಮಿಲೀ / ಲೀ ನೀರು) ಹೊಂದಿರುವ ಸ್ಪ್ರೇಗಳು ಪರಿಣಾಮಕಾರಿಯಾಗಿ ಮಾವಿನ ಹಣ್ಣಿನ ಬೋರೆಸ್ ಅನ್ನು ನಿರ್ಮೂಲನೆ ಮಾಡುತ್ತವೆ.
ಪ್ರೌಢ ಕೀಟಗಳ ಮುಂದಿನ ರೆಕ್ಕೆಗಳು ಗಾಢ ಕಂದು ಬಣ್ಣದ್ದಾಗಿದ್ದು, ಅವುಗಳ ಹಿಂದಿನ ರೆಕ್ಕೆಗಳು ಬಿಳಿ- ಬೂದು ಬಣ್ಣದ್ದಾಗಿರುತ್ತವೆ. ಪ್ರೌಢ ಕೀಟಗಳು ಒಂದು ಮಧ್ಯಮ ಗಾತ್ರದ್ದಾಗಿದ್ದು, ಅವುಗಳ ರೆಕ್ಕೆಯ ಅಗಲ 20 ಮಿಮೀ ಇರುತ್ತದೆ. ಪ್ರೌಢ ಕೀಟಗಳು ಸುಮಾರು ಒಂದು ವಾರದವರೆಗೆ ಬದುಕುತ್ತವೆ ಮತ್ತು ಹಣ್ಣಿನ ಮತ್ತು ತೊಟ್ಟಿನ ಒರಟಾದ ಜಾಗಗಳಲ್ಲಿ 125-450 ಮೊಟ್ಟೆಗಳನ್ನು ಇಡುತ್ತವೆ. ಮರಿಹುಳುಗಳು ಹಣ್ಣಿನೊಳಗೆ ಬಂದು ತಿರುಳು ಮತ್ತು ಬೀಜವನ್ನು ತಿನ್ನುತ್ತವೆ. ಸಂಪೂರ್ಣವಾಗಿ ಬೆಳೆದ ಕ್ಯಾಟರ್ಪಿಲ್ಲರ್ ಸುಮಾರು 20 ಮಿಮೀ ಉದ್ದವಿರುತ್ತದೆ. ಇದು ಬಿದ್ದ ಹಣ್ಣಿನ ಪಕ್ಕದಲ್ಲಿರುವ ಮಣ್ಣಿನಲ್ಲಿ ಸಡಿಲವಾಗಿ ನೇಯ್ದ ರೇಷ್ಮೆ ಗೂಡಿನಲ್ಲಿ ಪೊರೆಹುಳು(ಪ್ಯೂಪಾ) ಆಗುತ್ತದೆ. ಇದರ ಬೆಳವಣಿಗೆಗೆ ಸುಮಾರು 30 ದಿನಗಳು ಬೇಕಾಗುತ್ತದೆ. ಸೋಂಕಿತ ಹಣ್ಣುಗಳ ಸಾಗಣೆಯ ಮೂಲಕ ಕೀಟಗಳು ಹರಡುತ್ತವೆ. ಇನ್ನೇನು, ಪ್ರೌಢ ಕೀಟಗಳು ವಿವಿಧ ತೋಟಗಳಿಗೆ ಹಾರಬಲ್ಲವು.