Stephanitis typica
ಕೀಟ
ಎಲೆಗಳ ಮೇಲಿನ ಸೋಂಕು ದೂರದಿಂದಲೂ ಗೋಚರಿಸುತ್ತದೆ. ವಯಸ್ಕ ಮತ್ತು ಮರಿಹುಳುಗಳು ಎಲೆಯ ಕೆಳ ಭಾಗದಲ್ಲಿ ಇರುತ್ತವೆ ಮತ್ತು ಅಲ್ಲಿಯೇ ಗುಂಪುಗುಂಪಾಗಿ ನಲೆಸಿರುತ್ತವೆ ಹಾಗು ಎಲೆಗಳನ್ನು ತಿನ್ನುತ್ತವೆ. ಸಾಮಾನ್ಯವಾಗಿ, ಕೀಟಗಳು ಮಧ್ಯನಾಳದ ಸುತ್ತಮುತ್ತ ಎಲೆಯ ಸಾರವನ್ನು ಹೀರುತ್ತವೆ. ಕೀಟಗಳ ಆಹಾರ ಅಭ್ಯಾಸದಿಂದ ಆದ ಹಾನಿಯು ಎಲೆಯ ಮೇಲ್ಭಾಗದಲ್ಲಿ ಸಣ್ಣ ಬಿಳಿ, ಕ್ಲೋರೋಟಿಕ್ ಚುಕ್ಕೆಗಳಂತೆ ಕಂಡುಬರುತ್ತದೆ. ಕಪ್ಪನೆಯ ಕೀಟ ಸ್ರಾವಗಳು ಎಲೆ ಮೇಲ್ಭಾಗದಲ್ಲಿ ಕಂಡುಬರುತ್ತವೆ. ಕೀಟಗಳು ಇರುವ ಪ್ರದೇಶಗಳು ಕಾಲಾನಂತರದಲ್ಲಿ ಹಳದಿ ಬಣ್ಣದಿಂದ ಕಂದು ಬಣ್ಣಕ್ಕೆ ತಿರುಗಿ ಒಣಗುತ್ತವೆ. ಮರಗಳು ಕುಂಠಿತ ಬೆಳವಣಿಗೆ ಹೊಂದಿದ್ದು, ರೋಗಗ್ರಸ್ತವಾದಂತೆ ಕಾಣುತ್ತವೆ.
ಸ್ಟೆಥೊಕೊನಸ್ ಪ್ರೆಫೆಕ್ಟಸ್ ನಂತಹ ಪರಭಕ್ಷಕ ಕೀಟ ಜಾತಿಗಳನ್ನು ಸಮಗ್ರ ವಿಧಾನದಲ್ಲಿ ಬಳಸಿದರೆ ಸೋಂಕನ್ನು ತಗ್ಗಿಸಬಹುದು. ಬೇವಿನ ಎಣ್ಣೆ ಮತ್ತು ಬೆಳ್ಳುಳ್ಳಿ (2%) ಯ ಮಿಶ್ರಣವನ್ನು ಸೋಂಕನ್ನು ನಿಯಂತ್ರಿಸಲು ಎಲೆಗಳ ಸಿಂಪಡಣೆಯಾಗಿ ಬಳಸಬಹುದು.
ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಕೀಟನಾಶಕಗಳ ಬಳಕೆ ಈ ರೋಗದ ವಿರುದ್ಧ ಹೋರಾಡುವ ಸಾಮಾನ್ಯ ವಿಧಾನವಾಗಿದೆ. ಡಿಮಿಥೊಯೇಟ್ ಹೊಂದಿರುವ ಉತ್ಪನ್ನಗಳನ್ನು ಎಲೆಗಳ ಮೇಲೆ ಸಿಂಪಡಿಸಲು ಬಳಸಬಹುದು. ಎಲೆಗಳ ಕೆಳ ಭಾಗ ಆವರಿಸುವಂತೆ ಇದನ್ನು ಸಿಂಪಡಿಸಬೇಕು.
ವಯಸ್ಕ ಕೀಟಗಳು ಹಳದಿ ಬಣ್ಣದಿಂದ ಬಿಳಿ ಬಣ್ಣದ್ದಾಗಿದ್ದು, ಗಾತ್ರದಲ್ಲಿ ಸುಮಾರು 4 ಮಿಮೀ ಇರುತ್ತದೆ. ಅರೆಪಾರದರ್ಶಕವಾದ, ಅಂಚಿರುವ ಲೇಸ್ ತರಹದ ರೆಕ್ಕೆಗಳನ್ನು ಹೊಂದಿರುತ್ತವೆ. ಹೆಣ್ಣು ಜೀರುಂಡೆಯು ಎಲೆಗಳ ಕೆಳ ಭಾಗದಲ್ಲಿ ಸುಮಾರು 30 ಮೊಟ್ಟೆ ಇಡುತ್ತದೆ. ಸುಮಾರು ಹನ್ನೆರಡು ದಿನಗಳ ನಂತರ ಮೊಟ್ಟೆ ಒಡೆದು ಹಳದಿ ಮರಿಹುಳುಗಳು ಹೊರಬರುತ್ತವೆ. ಈ ಬೆಳವಣಿಗೆಯ ಹಂತವು ಸುಮಾರು 13 ದಿನಗಳವರೆಗೆ ಇರುತ್ತದೆ. ಪ್ರಸ್ತುತ, ಬಾಳೆಯ ಕೈಸೋಪ ಸೋಂಕಿನಿಂದಾಗಿ ಬಾಳೆಯಲ್ಲಿ ಇಳುವರಿ ನಷ್ಟವಾದ ಕುರಿತು ಯಾವುದೇ ವಿವರವಾದ ಮಾಹಿತಿ ಇಲ್ಲ. ಈವರೆಗೆ, ಕೀಟದಿಂದ ಬಾಳೆ ಸಸ್ಯಗಳಿಗೆ ಗಂಭೀರ ಹಾನಿಯಾದ ಬಗ್ಗೆ ಯಾವುದೇ ವರದಿಗಳಿಲ್ಲ.