Toxotrypana curvicauda
ಕೀಟ
ಹೆಣ್ಣು ಕೀಟಗಳು ಎಳೆಯ ಹಣ್ಣುಗಳ ಮೇಲೆ ಅನೇಕ ಮೊಟ್ಟೆಗಳನ್ನು ಇಡುತ್ತವೆ. ತೂತಾದ ಹಣ್ಣಿನ ಸಿಪ್ಪೆಯು ಹಾಲಿನಂತಹ ಹನಿಗಳನ್ನು ಹೊರಸೂಸುತ್ತದೆ, ಅದು ಹಣ್ಣಿನ ಕಡು ಹಸಿರು ಬಣ್ಣದ ಪದರಕ್ಕೆ ವ್ಯತಿರಿಕ್ತ ಬಣ್ಣದಲ್ಲಿರುವುದರಿಂದ ಸ್ಪಷ್ಟವಾಗಿ ಕಾಣುತ್ತದೆ. ಬೀಜದ ಕುಳಿಯನ್ನು ತಲುಪಿ ಅಲ್ಲಿ ಬೆಳೆಯುತ್ತಿರುವ ಬೀಜಗಳನ್ನು ತಿನ್ನಲು ಮರಿಹುಳುಗಳು ತಿರುಳಿನ ಮೂಲಕ ಸುರಂಗ ಕೊರೆಯುತ್ತವೆ. ಹೊರ ರಂಧ್ರಗಳು ಹಣ್ಣಿನ ಸಿಪ್ಪೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ವ್ಯಾಪಕ ಕೊರೆತದಿಂದ ಹಣ್ಣಿನ ತಿರುಳು ಕೊಳೆಯಲು ಪ್ರಾರಂಭಿಸುತ್ತದೆ. ಕೊಳೆತ ಮುಂದುವರಿದಂತೆ ಅದು ಕಂದು ಮತ್ತು ಕೆಲವೊಮ್ಮೆ ಕಪ್ಪು ಗಾಯಗಳಾಗಿ ಕಂಡುಬರುತ್ತದೆ. ಹಣ್ಣುಗಳು ತರುವಾಯ ಕೆಟ್ಟ ವಾಸನೆ ಹೊರಸೂಸುತ್ತವೆ ಮತ್ತು ರಸದಂತಹ ಪದಾರ್ಥವನ್ನು ಸ್ರವಿಸಬಹುದು. ಸಿಪ್ಪೆ ಹಳದಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಹಣ್ಣು ವಿರೂಪವಾಗಿ ಅಥವಾ ತೂತು ತೂತಾಗಿ ಕಾಣಬಹುದು. ಹಣ್ಣುಗಳು ಕಳಿತು ಅಕಾಲಿಕವಾಗಿ ಉದುರಬಹುದು.
ಪರಾವಲಂಬಿ ಕಣಜ ಡೊರಿಕ್ಟೊಬ್ರಕನ್ ಟೋಕ್ಸೋಟ್ರಿಪನೇ ನಿಯಂತ್ರಿಸುವ ಗುಣ ಹೊಂದಿರಬಹುದು.
ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರ ಮಾರ್ಗವಿದ್ದರೆ ಅದನ್ನು ಮೊದಲು ಪರಿಗಣಿಸಿ. ಈ ನೊಣಕ್ಕೆ ವಿರುದ್ಧವಾಗಿ ಯಾವುದೇ ಕೀಟನಾಶಕವು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಕೀಟನಾಶಕವನ್ನು ಒಳಗೊಂಡಿರುವ ಬಲೆಗಳೊಂದಿಗೆ (ಉದಾ. ಮ್ಯಾಲಾಥಿಯಾನ್ ಅಥವಾ ಡೆಲ್ಟಾಮೆಥ್ರಿನ್) ನಿರ್ದಿಷ್ಟ ಗಾಳಗಳನ್ನು (ಗಂಡು ಅಥವಾ ಹೆಣ್ಣುಗಳಿಗೆ) ಸೇರಿಸಿ ಪರೀಕ್ಷಿಸಲಾಗುತ್ತಿದೆ. ಪಪ್ಪಾಯಿ ಹಣ್ಣಿನ ನೊಣವನ್ನು ಕೊಲ್ಲಲು ಹಣ್ಣುಗಳನ್ನು ಕೀಟನಾಶಕಗಳ ಬಿಸಿ ಆವಿಯಿಂದ ಚಿಕಿತ್ಸೆ ಮಾಡಬಹುದು.
ಟೋಕ್ಸೊಟ್ರಿಪನಾ ಕರ್ವಿಕಾಡಾ ಎಂಬ ನೊಣದಿಂದ ಈ ರೋಗಲಕ್ಷಣಗಳು ಬರುತ್ತವೆ. ಸಣ್ಣ ಹಸಿರು ಪಪ್ಪಾಯ ಹಣ್ಣುಗಳ ಮೇಲೆ ಇದು ಮೊಟ್ಟೆಗಳನ್ನು ಇಡುತ್ತದೆ. ವಯಸ್ಕ ನೊಣಗಳನ್ನು ಅವುಗಳ ಗಾತ್ರ, ಬಣ್ಣ ಮತ್ತು ನಡವಳಿಕೆಯಿಂದಾಗಿ ಕಣಜಗಳೆಂದು ತಪ್ಪಾಗಿ ಗ್ರಹಿಸುವುದು ಸಾಮಾನ್ಯವಾಗಿದೆ. ಅವುಗಳು ಹಳದಿ ಬಣ್ಣದ ಶರೀರವನ್ನು ಹೊಂದಿದ್ದು, ಬಗ್ಗರಿಯ ಬಳಿ ಸಮಾನಾಂತರವಾದ, ಕಪ್ಪು ಬಣ್ಣದ ಗುರುತುಗಳನ್ನು ಹೊಂದಿರುತ್ತವೆ. ಹೆಣ್ಣುಗಳ ದೇಹ ಉದ್ದವಾಗಿದ್ದು, ತೆಳ್ಳಗಿರುತ್ತದೆ. ವಿಸ್ತರಿಸಿದ ವಕ್ರವಾದ ಮೊಟ್ಟೆ-ಇಡುವ ಅಂಗವನ್ನು ಹೊಂದಿರುತ್ತದೆ. ಈ ಅಂಗ ದೇಹವನ್ನು ಮೀರಿ ಬೆಳೆದಿರುತ್ತದೆ. ಮರಿಹುಳುಗಳು ಬಿಳಿಯದಾಗಿ, ತೆಳ್ಳಗಿರುತ್ತವೆ. ಸುಮಾರು 13-15 ಮಿಮೀ ಉದ್ದವಿರುತ್ತವೆ. ಹಣ್ಣುಗಳು ಅನೇಕ ಲಾರ್ವಾಗಳಿಂದ ಸೋಂಕಿತಗೊಂಡಿರಬಹುದು ಮತ್ತು ಅವು ಸುಗ್ಗಿಯ ನಂತರ ಲಕ್ಷಣಗಳನ್ನು ತೋರಿಸುತ್ತವೆ. ಮಳೆಗಾಲ ಮುಗಿದ ನಂತರ ಹಣ್ಣಿನ ಹಾನಿ ಅತ್ಯಧಿಕವಾಗಿರುತ್ತದೆ. ಅಮೆರಿಕಾ ಖಂಡದ ಉಷ್ಣವಲಯ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಪಪ್ಪಾಯಿ ಹಣ್ಣಿನ ನೊಣ ಒಂದು ಪ್ರಮುಖ ಕೀಟವಾಗಿದೆ.