Amsacta albistriga
ಕೀಟ
ಮಳೆಗಾಲದ ಸಮಯದಲ್ಲಿ ಎಳೆಯ ಮರಿಹುಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತವೆ ಮತ್ತು ಎಲೆಗಳ ಕೆಳ ಮೇಲ್ಮೈಯನ್ನು ಕೆರೆದು ಹಾಕುತ್ತವೆ. ಪ್ರೌಢ ಕಂಬಳಿಹುಳುಗಳು ಹೂವುಗಳು, ಮೊಗ್ಗುಗಳು ಮತ್ತು ಎಲೆಗಳನ್ನು ಒಳಗೊಂಡಂತೆ ಎಲ್ಲಾ ಸಸ್ಯ ಭಾಗಗಳನ್ನು ವಿಪರೀತವಾಗಿ ತಿನ್ನುತ್ತವೆ . ನಡುದಿಂಡಿ ನಂತಹ ಗಡುಸು ಅಂಗಾಂಶಗಳು, ರಕ್ತನಾಳಗಳು ಮತ್ತು ತೊಟ್ಟುಗಳನ್ನು ಮಾತ್ರ ಬಿಡಲಾಗುತ್ತದೆ. ಬೆಳೆದ ಕೆಂಪು ಕೂದಲುಳ್ಳ ಕಂಬಳಿಹುಳುಗಳು ಗದ್ದೆಯಿಂದ ಗದ್ದೆಗೆ ಸಮೂಹಗಳಲ್ಲಿ ಚಲಿಸುತ್ತವೆ, ಇದು ಆಗಾಗ್ಗೆ ಇಡೀ ಪ್ರದೇಶದಲ್ಲಿ ತೀವ್ರ ವಿಪರ್ಣತೆ ಮತ್ತು ಇಳುವರಿ ಕಡಿಮೆಯಾಗಲು ಕಾರಣವಾಗುತ್ತದೆ. ಸಂಪೂರ್ಣವಾಗಿ ಬೆಳೆದ ಲಾರ್ವೇಗಳು ಸಾಮಾನ್ಯವಾಗಿ ಸಮತಟ್ಟಾದ ಮಣ್ಣಿನೊಳಗೆ ಪೊರೆ ಕಟ್ಟಲು (ಪ್ಯೂಪೇಟ್) ತೋಡುತ್ತವೆ.
ಜೈವಿಕನಿಯಂತ್ರಣದ ವಿಧಾನಗಳಲ್ಲಿ ಟ್ರೈಕೊಗ್ರಾಮ ಪ್ಯಾರಾಸಿಟಾಯ್ಡ್ ಕಣಜಗಳನ್ನು ಬಿಡುವುದೂ ಸೇರಿದೆ. ಇವು ಮೊಟ್ಟೆಗಳು ಮತ್ತು ಕೆಂಪು ಕೂದಲುಳ್ಳ ಕಂಬಳಿ ಹುಳಗಳ ಎಳೆಯ ಲಾರ್ವಾಗಳ ಮೇಲೆ ಪರಾವಲಂಬಿಯಾಗುತ್ತವೆ. ಆರಂಭಿಕ ಹಂತಗಳಲ್ಲಿ ನ್ಯೂಕ್ಲಿಯರ್ ಪಾಲಿಹೆಡ್ರೊಸಿಸ್ ವೈರಸ್ (ಎನ್ಪಿವಿ) ಅಥವಾ ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಅನ್ನು ಆಧರಿಸಿದ ಜೈವಿಕ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಕೀಟವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು.
ಕೆಂಪು ಕೂದಲಿನ ಕಂಬಳಿ ಹುಳುವಿನ ಸಂಖ್ಯೆಯನ್ನು ನಿಯಂತ್ರಿಸಲು ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳೊಂದಿಗೆ ಸಮಗ್ರ ವಿಧಾನವನ್ನು ಬಳಸಿ. ರಾಸಾಯನಿಕ ಚಿಕಿತ್ಸೆಯ ಆರ್ಥಿಕ ಮಿತಿ ತಲುಪಿದಲ್ಲಿ (100 ಎಮ್ ಉದ್ದಕ್ಕೆ ಎಂಟು ಮೊಟ್ಟೆಯ ದ್ರವ್ಯರಾಶಿಗಳು ಅಥವಾ 10% ಎಲೆ ಹಾನಿ) ತಲುಪಿದರೆ, ಎಳೆಯ ಲಾರ್ವೇಗಳನ್ನು ಕೀಟನಾಶಕಗಳನ್ನು ಉದುರಿಸುವ ಮೂಲಕ ನಿಯಂತ್ರಿಸಬಹುದು. ಪೂರ್ಣ ಬೆಳೆದ ಕೀಟಗಳನ್ನು ನಿಯಂತ್ರಿಸಲು ಇನ್ನಿತರ ಕೀಟನಾಶಕಗಳನ್ನೂ ಸಹ ಬಳಸಬಹುದು.
ಮಾನ್ಸೂನ್ ಮಳೆ ನಂತರ ತಕ್ಷಣವೇ ಮಣ್ಣಿನಲ್ಲಿ ವಯಸ್ಕ ಪತಂಗ ಹೊರಹೊಮ್ಮುತ್ತದೆ. ಇದರ ದೇಹದ ಮೇಲೆ ಬಿಳಿ ಗೆರೆಗಳಿರುವ ತಿಳಿ ಕಂದು ಬಣ್ಣದ ಮುಂಭಾಗದ ರೆಕ್ಕೆಗಳಿರುತ್ತವೆ ಮತ್ತು ಮುಂಭಾಗದ ಅಂಚಿನಲ್ಲಿ ಹಳದಿ ಬ್ಯಾಂಡ್ ಅನ್ನು ಹೊಂದಿರುತ್ತದೆ. ಅದರ ಹಿಂಬದಿಯ ರೆಕ್ಕೆಗಳು ವಿಶಿಷ್ಟವಾದ ಕಪ್ಪು ಚುಕ್ಕೆಗಳನ್ನು ಹೊಂದಿರುವ ಬಿಳಿ ಬಣ್ಣದಲ್ಲಿರುತ್ತವೆ. ಹೆಣ್ಣುಗಳು ಎಲೆಗಳ ಕೆಳಭಾಗದಲ್ಲಿ ಅಥವಾ ಮಣ್ಣಿನ ಉಳಿಕೆಗಳ ಮೇಲೆ ಸಮೂಹಗಳಲ್ಲಿ ಸುಮಾರು 1000 ಕೆನೆ ಹಳದಿ ಬಣ್ಣದ ಮೊಟ್ಟೆಗಳನ್ನು ಇಡುತ್ತವೆ. ತಿಳಿ- ಕಂದುಬಣ್ಣದ ಕಿರಿಯ ಲಾರ್ವಾಗಳು ಕೂದಲುರಹಿತವಾಗಿವೆ ಮತ್ತು ಎಲೆಗಳ ಮೇಲೆ ಗುಂಪಾಗಿ ಜೀವಿಸುತ್ತಾ ಆಹಾರವನ್ನು ತಿನ್ನುತ್ತವೆ. ಪ್ರೌಢ ಲಾರ್ವಾಗಳು ಕೆಂಪಾಗಿನ ಕಂದು ಬಣ್ಣದ್ದಾಗಿದ್ದು ಅವುಗಳ ಪಾರ್ಶ್ವದಲ್ಲಿ ಕಪ್ಪು ಬ್ಯಾಂಡ್ ಇರುತ್ತದೆ ಮತ್ತು ದೇಹದ ಮೇಲೆ ಉದ್ದನೆಯ ಕೆಂಪು ಕೂದಲುಗಳಿರುತ್ತವೆ. ಅವು ಹೆಚ್ಚು ಸಕ್ರಿಯವಾಗಿರುತ್ತವೆ ಮತ್ತು ವಿನಾಶಕಾರಿಯಾಗಿವೆ. ಅವುಗಳು ಮರಗಳು, ಪೊದೆಗಳು ಅಥವಾ ನೆರಳಿನ ಮೂಲೆಗಳಲ್ಲಿ ಮಣ್ಣಿನೊಳಗೆ 10 ರಿಂದ 20 ಸೆಂ.ಮೀ.ವರೆಗೂ ತೋಡುತ್ತವೆ ಮತ್ತು ಪ್ರೌಢತೆಯ ಮೊದಲು ಸುಮಾರು 10 ತಿಂಗಳುಗಳವರೆಗೆ ಅಲ್ಲಿ ಪ್ಯೂಪೆಯಾಗಿ ಉಳಿಯುತ್ತವೆ.