ಭತ್ತ

ಅಕ್ಕಿಯ ಕೊಳವೆ ಹುಳು (ಕೇಸ್ ವರ್ಮ್)

Parapoynx stagnalis

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳು ಲಂಬ ಕೋನಗಳಲ್ಲಿ ಮುರಿಯುತ್ತವೆ.
  • ಏಣಿಯಂತಹ ರಚನೆಗಳು.
  • ಲಾರ್ವಾಗಳು ಹಳದಿ ತಲೆಯೊಂದಿಗೆ ಹಸಿರಾಗಿರುತ್ತವೆ.
  • ದೊಡ್ಡ ಕೀಟಗಳು ಬಿಳಿ ಪತಂಗಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಎಳೆಯ ಪಿ. ಸ್ನ್ಯಾಗ್ಯಾಲಿಸ್ ಲಾರ್ವಾ ಎಲೆಗಳನ್ನು ಲಂಬವಾಗಿ ತಿನ್ನುತ್ತದೆ. ಅಕ್ಕಿಯ ಕೇಸ್ ಹುಳುಗಳು ಎಲೆಯ ಕೇಸ್ಗಳನ್ನು ಮಾಡಲು ಲಘು ಕೋನಗಳಲ್ಲಿ ಅಕ್ಕಿಯ ಎಲೆ ತುದಿಯನ್ನು ಕತ್ತರಿಸುತ್ತವೆ. ಒಂದು ಜೋಡಿ ಕತ್ತರಿಗಳಂತೆ ಲಂಬ ಕೋನಗಳಲ್ಲಿ ಎಲೆಗಳನ್ನು ಕತ್ತರಿಸುವ ಗುಣಲಕ್ಷಣಗಳನ್ನು ಕೇಸ್ ಹುಳು ಹೊಂದಿದೆ ಮತ್ತು ನೀರಿನ ಮೇಲೆ ಎಲೆ ಕೇಸ್ಗಳು ತೇಲುತ್ತಿರುತ್ತವೆ. ಎಲೆಗಳ ಅಂಗಾಂಶವನ್ನು ಕೆರೆದು ಮರಿಗಳು ಮೇಯುತ್ತವೆ, ಎಲೆಗಳ ಮೇಲೆ ಕಾಗದದಂತ ಪದರವನ್ನು ಬಿಡುತ್ತವೆ. ಹುಳುಗಳು ತಿನ್ನಲ್ಪಟ್ಟ ಎಲೆಗಳ ಮೇಲೆ ಕೂಡ ಗಟ್ಟಿ ಫೈಬರ್ಗಳ ಏಣಿ-ತರಹದ ರಚನೆಗಳನ್ನು ಉಂಟು ಮಾಡುತ್ತವೆ. ಈ ಹಾನಿಯ ರೋಗಲಕ್ಷಣಗಳನ್ನು ಇನ್ನಿತರ ಕೀಟಗಳಿಂದ ಉಂಟಾಗುವ ವಿಪರ್ಣನದ ರೋಗಲಕ್ಷಣಗಳೆಂದು ತಪ್ಪು ತಿಳಿಯುವಂತಾಗಬಹುದು. ಹೇಗೆ ದೃಢಪಡಿಸಿಕೊಳ್ಳಬಹುದೆಂದರೆ, ಮೊದಲು ಇದನ್ನು ಕಣ್ಣಿನಿಂದ ಪರಿಶೀಲಿಸಿ: ಏಣಿಯಂತಹ- ಎಲೆಯ ಅಂಗಾಂಶಗಳು; ಎರಡು, ಕತ್ತರಿಸಲ್ಪಟ್ಟ ಎಲೆಗಳು; ಮತ್ತು ಮೂರು, ಎಲೆಯ ಪೊರೆಗಳಿಗೆ ಜೋಡಿಸಲ್ಪಟ್ಟ ಎಲೆಯ ಕೇಸುಗಳ ಉಪಸ್ಥಿತಿ ಮತ್ತು ಅವು ನೀರಿನಲ್ಲಿ ತೇಲುತ್ತಿರುವುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಬಸವನ ಹುಳು (ಮೊಟ್ಟೆಗಳನ್ನು ಆಹಾರವಾಗಿ ತಿನ್ನುವ), ಹೈಡ್ರೊಫಿಲಿಡ್ ಮತ್ತು ಡಿಟಿಸ್ಸಿಡ್ ವಾಟರ್ ಜೀರುಂಡೆಗಳು (ಲಾರ್ವಾಗಳನ್ನು ಆಹಾರವಾಗಿ ತಿನ್ನುವ), ಜೇಡಗಳು, ಡ್ರ್ಯಾಗನ್‌ಫ್ಲೈ ಮತ್ತು ಪಕ್ಷಿಗಳಂತಹ (ಪ್ರೌಢ ಕೀಟಗಳನ್ನು ಆಹಾರವಾಗಿ ತಿನ್ನುವ) ಜೈವಿಕ ನಿಯಂತ್ರಣ ಏಜೆಂಟ್ಗಳ ಬಳಕೆಯನ್ನು ಪ್ರೋತ್ಸಾಹಿಸಿ. ಕೀಟಗಳು ಕಂಡುಬರುವ ಸ್ಥಳಕ್ಕೆ ಬೂದಿ ಅಥವಾ ಬೇವಿನ ಎಲೆಯ ಸಾರವನ್ನು ಹಾಕಿ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಅಧಿಕೃತ ಕಾರ್ಬಾಮೇಟ್ ಕೀಟನಾಶಕಗಳ ಎಲೆಗಳ ಚಿಕಿತ್ಸೆಯನ್ನು ಬಳಸಿ ಮತ್ತು ಪೈರೆಥ್ರಾಯ್ಡ್ಗಳನ್ನು ತಪ್ಪಿಸಿ, ಇದಕ್ಕೆ ಕೀಟವು ಸಹಿಷ್ಣುವಾಗಿ ಮಾರ್ಪಟ್ಟಿದೆ.

ಅದಕ್ಕೆ ಏನು ಕಾರಣ

ತೇವಾಂಶದ ಪ್ರದೇಶ ಹಾಗು ನೀರಾವರಿ ಪರಿಸರದಲ್ಲಿ ನೀರು ನಿಂತಿರುವ ಅಕ್ಕಿ ಪ್ರದೇಶಗಳಲ್ಲಿ ಈ ಕೀಟವು ಕಂಡುಬರುತ್ತದೆ. ಇದು ಕಳೆಗಳ ಮೇಲೆ ಮತ್ತು ಅಕ್ಕಿಯ ಕಳೆಯ ಮೇಲೆ ಗದ್ದೆಯಲ್ಲಿ ಮತ್ತು ಸುತ್ತಮುತ್ತಲಲ್ಲಿ ಬದುಕುತ್ತದೆ ಹಾಗು ಹೊಸ ಅಕ್ಕಿ ಬೆಳೆಯನ್ನು ಪರಿಸ್ಥಿತಿಗಳು ಅನುಕೂಲಕರವಾಗಿದ್ದಾಗ ಸೋಂಕಿತಗೊಳಿಸುತ್ತದೆ. ಎಳೆಯ ಸಸಿಗಳನ್ನು ಕಸಿ ಮಾಡುವುದೂ ಸಹ ಈ ಕೀಟದ ಅಭಿವೃದ್ಧಿಗೆ ಕಾರಣವಾಗುತ್ತದೆ. ಕಳಪೆಯಾದ ಪೂರ್ವಭಾವಿ ಬೇಸಾಯ ಮತ್ತು ಸತುವಿನ ಕೊರತೆಯುಳ್ಳ ಮಣ್ಣು ಬೆಳೆಯನ್ನು ಈ ರೋಗಕ್ಕೆ ತುತ್ತಾಗುವಂತೆ ಮಾಡುತ್ತದೆ. ಆದರೆ, ಇದಲ್ಲದರ ಮೇಲೂ, ಈ ಕೀಟವು ಸಾಮಾನ್ಯವಾಗಿ ಕಡಿಮೆ ಸಂಖ್ಯೆಯಲ್ಲಿ ಅಕ್ಕಿಯ ಗದ್ದೆಗಳಲ್ಲಿ ಕಂಡುಬರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಆರಂಭದಲ್ಲಿ ನೆಡುವಿಕೆ ಸೋಂಕಿನ ಸಂಭವವನ್ನು ಕಡಿಮೆ ಮಾಡುತ್ತದೆ.
  • ನೆಡುವಾಗ ವಿಶಾಲ ಅಂತರ (30 × 20 ಸೆಂ) ಇರುವಂತೆ ನೋಡಿಕೊಳ್ಳಿ.
  • ಹಳೆಯ ಸಸಿ ಕಸಿ ಮಾಡಿ ಮತ್ತು ಉಳಿದಿರ ಬಹುದಾದಂತಹ ಮೊಟ್ಟೆಗಳನ್ನು ನಾಶಮಾಡಿ.
  • 2-3 ದಿನಗಳ ನಂತರ ಪುನಃ ನೀರಾವರಿ ಮಾಡುವಾಗ ಹುಳುಗಳನ್ನು ಹಿಡಿಯಲು ಗದ್ದೆಯನ್ನು ಬರಿದು ಮಾಡಿ ಫಿಲ್ಟರ್ಗಳನ್ನು ಬಳಸಿ.
  • ಶಿಫಾರಸು ಮಾಡಲಾದ ರಸಗೊಬ್ಬರಗಳನ್ನು ಬಳಸಿ, ಅತಿಯಾದ ರಸಗೊಬ್ಬರ ಬಳಕೆ ತಪ್ಪಿಸಿ.
  • ಪರ್ಯಾಯ ಹೋಸ್ಟ್ ಗಳನ್ನು ತೆಗೆದು ಹಾಕಲು, ಹೊಲದಲ್ಲಿ ಮತ್ತು ಸುತ್ತಮುತ್ತಲಲ್ಲಿ ಕಳೆಗಳನ್ನು ಹಾಗು ಅಕ್ಕಿಯ ಕಳೆಗಳನ್ನು ತೆಗೆದು ಹಾಕಿ.
  • ಎಷ್ಟು ಬೇಕೋ ಅಷ್ಟು ಪೊಟಾಶಿಯಮ್ ಬಳಕೆಯನ್ನು ಕಾಪಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ