ಭತ್ತ

ರೈಸ್ ಲೀಫ್ ರೋಲರ್

Cnaphalocrocis medinalis

ಕೀಟ

ಸಂಕ್ಷಿಪ್ತವಾಗಿ

  • ಮರಿಹುಳುಗಳ ಸುತ್ತಲೂ ಮಡಿಸಿದ ಭತ್ತದ ಎಲೆಗಳು.
  • ಬ್ಲೇಡ್ನಲ್ಲಿ ರೇಖಾಂಶದ ಬಿಳಿ ಮತ್ತು ಪಾರದರ್ಶಕ ಗೆರೆಗಳು.
  • ಎಲೆ ಸುಳಿವುಗಳ ಮೇಲೆ ಡಿಸ್ಕ್ ಆಕಾರದ ಮೊಟ್ಟೆಗಳು.
  • ರೆಕ್ಕೆಗಳ ಮೇಲೆ ಕಂದು ಬಣ್ಣದ ಝಿಗ್-ಝಾಗ್ ರೇಖೆಗಳನ್ನು ಹೊಂದಿರುವ ಪತಂಗಗಳು.

ಇವುಗಳಲ್ಲಿ ಸಹ ಕಾಣಬಹುದು


ಭತ್ತ

ರೋಗಲಕ್ಷಣಗಳು

ಲೀಫ್ ಫೋಲ್ಡರ್ ಎಂದೂ ಕರೆಯಲಾಗುತ್ತದೆ. ವಯಸ್ಕ ಪತಂಗಗಳು ನಿಮ್ಮ ಬೆರಳಿನ ಉಗುರಿನ ಉದ್ದವಿರುತ್ತವೆ ಮತ್ತು ರೆಕ್ಕೆಗಳ ಮೇಲೆ ಕಂದು ಝಿಗ್-ಜಾಗ್ ಸಾಲುಗಳನ್ನು ಹೊಂದಿರುತ್ತವೆ. ಮೊಟ್ಟೆಗಳನ್ನು ಸಾಮಾನ್ಯವಾಗಿ ಎಲೆಯ ತುದಿಯಲ್ಲಿ ಇರಿಸಲಾಗುತ್ತದೆ. ಮರಿಹುಳುಗಳು ತಮ್ಮ ಸುತ್ತಲಿರುವ ಅಕ್ಕಿ ಎಲೆಗಳನ್ನು ಪದರಕ್ಕೆ ಇರಿಸುತ್ತದೆ ಮತ್ತು ಎಲೆ ಅಂಚುಗಳನ್ನು ರೇಷ್ಮೆ ಎಳೆಗಳೊಂದಿಗೆ ಜೋಡಿಸುತ್ತವೆ. ನಂತರ ಅವು ಉದ್ದವಾದ, ಕೊಳವೆಯಾಕಾರದ ಮಡಿಸಿದ ಎಲೆಯೊಳಗೆ ಆಹಾರ ಸೇವಿಸುತ್ತ ಎಲೆಗಳ ಮೇಲೆ ಉದ್ದನೆಯ ಬಿಳಿ ಬಣ್ಣದ ಮತ್ತು ಪಾರದರ್ಶಕ ಗೆರೆಗಳನ್ನು ರಚಿಸುತ್ತವೆ.. ಕೆಲವೊಮ್ಮೆ, ಎಲೆಗಳು ತುದಿಯಿಂದ ತಳಭಾಗಕ್ಕೆ ಮಡಿಸಲ್ಪಡುತ್ತವೆ. ಡಿಸ್ಕ್-ಆಕಾರದ ಮೊಟ್ಟೆಗಳು ಒಂಟಿಯಾಗಿ ಇರುವುದು ಅಥವಾ ಅಮೇಧ್ಯವು(ಫೆಕಲ್ ಮ್ಯಾಟರ್) ಸಹ ಸೋಂಕಿನ ಚಿಹ್ನೆಗಳಾಗಿವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ನೆಟ್ಟ ನಂತರ 15 ದಿನಗಳ ನಂತರ ಪ್ರಾರಂಭಮಾಟಿ ಮೊಟ್ಟೆಯ ಪ್ಯಾರಾಸಿಟಾಯಿಡ್ ಆದ ಟ್ರೈಕೊಗ್ರಾಮ ಚಿಲೊನಿಸ್ (100,000 ವಯಸ್ಕ ಕೀಟಗಳು/ ಹೆ)ಅನ್ನು ಐದರಿಂದ ಆರು ಬಾರಿ ಬಿಡುಗಡೆ ಮಾಡಿದರೆ ಅದು ಪರಿಣಾಮಕಾರಿ ಮತ್ತು ಆರ್ಥಿಕವಾಗಿರುತ್ತವೆ. ನೈಸರ್ಗಿಕ ಶತ್ರುಗಳು ಉದಾಹರಣೆಗೆ, ಜೇಡಗಳು, ಪರಭಕ್ಷಕ ಜೀರುಂಡೆಗಳು, ಕಪ್ಪೆಗಳು ಮತ್ತು ಡ್ರ್ಯಾಗನ್ ನೊಣಗಳನ್ನು ರಕ್ಷಿಸುವುದು. ರೋಗಕಾರಕ ಶಿಲೀಂಧ್ರಗಳು ಅಥವಾ ಬ್ಯಾಕ್ಟೀರಿಯಾಗಳು ಮತ್ತು ಕೆಲವು ವೈರಸ್ಗಳು ಉತ್ತಮ ಸಂಖ್ಯಾ ನಿಯಂತ್ರಣವನ್ನು ಒದಗಿಸುತ್ತದೆ. ಬೇವಿನ ಎಲೆಗಳನ್ನು ಹೊಲದಲ್ಲಿ ಅಲ್ಲಲ್ಲೆ ಹರಡಿದರೆ, ಅದು ಪ್ರೌಢ ಕೀಟಗಳು ಮೊಟ್ಟೆ ಇಡುವುದನ್ನು ಕಡಿಮೆ ಮಾಡಿತ್ತದೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಬೂಟಿಂಗ್ ಹಂತದಲ್ಲಿ ರೋಗದ ಸೋಂಕು (> 50%) ಹೆಚ್ಚು ಇದ್ದರೆ, 1 ಲೀಟರ್ ನೀರಿಗೆ 0.1 ಮಿಲೀ ಫ್ಲಬೆನ್ಡಿಯಮೈಡ್ ಅಥವಾ 0.3ಮಿಲೀ ಕ್ಲೋರಾನ್ಥ್ರಾನಿಲಿಪೋಲ್ ಸಿಂಪಡಿಸಿ. ಕ್ಲೊಪ್ಪಿರಿಫೊಸ್, ಕ್ಲೋರಂಟ್ರಾನಿಲಿಪೊರೊಲ್, ಇಂಡೋಕ್ಸಾಕಾರ್ಬ್, ಅಜಾಡಿರಾಚ್ಟಿನ್, ಗಾಮ- ಅಥವಾ ಲ್ಯಾಮ್ಡಾ- ಸೈಹಾಲೋಥ್ರಿನ್ ಅನ್ನು ಆಧರಿಸಿದ ಇತರ ಕೀಟನಾಶಕಗಳು ಸಹ ಸಹಕಾರಿಯಾಗಿವೆ ವಿಶೇಷವಾಗಿ ಸೋಂಕು ತೀವ್ರವಾಗಿದ್ದರೆ. ಲಾರ್ವಾಗಳನ್ನು ಕೊಲ್ಲಲು ಆಲ್ಫಾ-ಸೈಪರ್ಮೆಥರಿನ್, ಅಲಾಮೆಕ್ಟಿನ್ 2% ನಂತಹ ಇತರ ಕೀಟನಾಶಕಗಳನ್ನೂ ಬಳಸಬಹುದು. ಕೀಟಗಳು ಮತ್ತೆ ಉಂಟಾಗುವಂತೆ ಮಾಡುವ ರಾಸಾಯನಿಕಗಳನ್ನು ಬಳಸದಂತೆ ಎಚ್ಚರಿಕೆವಹಿಸಬೇಕು.

ಅದಕ್ಕೆ ಏನು ಕಾರಣ

ಅಕ್ಕಿಯ ಎಲೆ ಮಡಚುವಿಕೆ ಎಲ್ಲಾ ಅಕ್ಕಿ ಪರಿಸರದಲ್ಲಿ ಸಂಭವಿಸುತ್ತವೆ ಮತ್ತು ಮಳೆಯ ಋತುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಹೆಚ್ಚಿನ ತೇವಾಂಶ, ಗದ್ದೆಯ ನೆರಳಿನ ಪ್ರದೇಶಗಳು, ಮತ್ತು ಅಕ್ಕಿ ಗದ್ದೆಯಿಂದ ಮತ್ತು ಸುತ್ತಮುತ್ತಲಿನ ಗಡಿಗಳಲ್ಲಿರುವ ಹುಲ್ಲುಗಾವಲಿನ ಕಳೆಗಳು ಕೀಟದ ಬೆಳವಣಿಗೆಗೆ ಅನುಕೂಲಕರವಾಗಿವೆ. ನೀರಾವರಿ ವ್ಯವಸ್ಥೆಗಳೊಂದಿಗೆ ವಿಸ್ತರಿಸಿದ ಅಕ್ಕಿ ಪ್ರದೇಶಗಳು, ಅನೇಕ ಅಕ್ಕಿ ಬೆಳೆಗಳು ಮತ್ತು ಕೀಟನಾಶಕ ಪ್ರೇರಿತ ಮರುಕಳಿಸುವ ಪರಿಣಾಮಗಳು ಕೀಟದ ಸಮೃದ್ಧಿಗೆ ಕಾರಣವಾಗುವ ಪ್ರಮುಖ ಅಂಶಗಳಾಗಿವೆ. ರಸಗೊಬ್ಬರದ ಭಾರೀ ಬಳಕೆ ಕೀಟಗಳ ತ್ವರಿತ ವೃದ್ಧಿಯನ್ನು ಪ್ರೋತ್ಸಾಹಿಸುತ್ತದೆ. ಉಷ್ಣವಲಯದ ಅಕ್ಕಿ ಪ್ರದೇಶಗಳಲ್ಲಿ, ಅವು ವರ್ಷಪೂರ್ತಿ ಸಕ್ರಿಯವಾಗಿವೆ, ಆದರೆ ಸಮಶೀತೋಷ್ಣ ದೇಶಗಳಲ್ಲಿ ಅವು ಮೇ ನಿಂದ ಅಕ್ಟೋಬರ್ ವರೆಗೆ ಸಕ್ರಿಯವಾಗಿವೆ. ಗರಿಷ್ಠ ತಾಪಮಾನ ಮತ್ತು ಆರ್ದ್ರತೆಯು ಕ್ರಮವಾಗಿ 25-29 ° C ಮತ್ತು 80% ನಷ್ಟಿರುತ್ತದೆ. ಎಳೆಯ ಮತ್ತು ಹಸಿರು ಅಕ್ಕಿ ಸಸ್ಯಗಳು ತೀವ್ರವಾಗಿ ಸೋಂಕುಗೊಂಡಿರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಕೀಟವು ಏಕಾಏಕಿ ಹೊರಹೊಮ್ಮುವುದನ್ನು ತಡೆಗಟ್ಟಲು ನಿರೋಧಕ ಪ್ರಭೇದಗಳನ್ನು ಬಳಸಿ.
  • ಕೀಟದ ಚಿಹ್ನೆಗಳಿಗಾಗಿ ಹೊಲವನ್ನು ಮೇಲ್ವಿಚಾರಣೆ ಮಾಡಿ.
  • ನಾಟಿ ಮಾಡುವ ಸಮಯದಲ್ಲಿ ಬಿತ್ತನೆ ಪ್ರಮಾಣವನ್ನು ಕಡಿಮೆ ಮಾಡಿ.
  • ಋತುವಿನಲ್ಲಿ ಅಕ್ಕಿ ಸಸ್ಯಗಳಿಗೆ ಸಾಕಷ್ಟು ನೀರು ಸಿಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ವಿಭಜಿತ ಸಾರಜನಕ ಅನ್ವಯಿಕೆಗಳನ್ನು ಬಳಸಿಕೊಂಡು ಸಮತೋಲಿತ ಫಲವತ್ತತೆಯನ್ನು ಯೋಜಿಸಿ.
  • ಪ್ರೌಢ ಹುಳುಗಳನ್ನು ಆಕರ್ಷಿಸಲು ಮತ್ತು ಸಂಗ್ರಹಿಸಲು ಬೆಳಕಿನ ಬಲೆಗಳು ಅಥವಾ ಜಿಗುಟಾದ ಬಲೆಗಳನ್ನು ಬಳಸಿಕೊಳ್ಳಿ.
  • ಹೊಲ ಮತ್ತು ಗಡಿಗಳಿಂದ ಹುಲ್ಲಿನ ರೀತಿಯ ಕಳೆಗಳನ್ನು ತೆಗೆದುಹಾಕಿ.
  • ಕೀಟಗಳನ್ನು ದೂರ ಓಡಿಸಲು ಎಲೆಗಳ ಮೇಲೆ ಮುಳ್ಳಿರುವ ಮರವನ್ನು ಬಳಸಿ.
  • ರಾಟೂನಿಂಗ್, ಅಂದರೆ, ಮುಂದಿನ ಋತುವಿಗೆ ಕತ್ತರಿಸಿದ ಟಿಲ್ಲರ್ ಗಳನ್ನು ಬಿಡಬೇಡಿ.
  • ಕೀಟನಾಶಕದ ಬಳಕೆಯನ್ನು ನಿಯಂತ್ರಿಸಿ ಇದರಿಂದ ಪರಭಕ್ಷಕಗಳು (ಜೇಡಗಳು, ಪರಾವಲಂಬಿ ಕಣಜಗಳು, ಪರಭಕ್ಷಕ ಜೀರುಂಡೆಗಳು, ಕಪ್ಪೆಗಳು ಮತ್ತು ಡ್ರ್ಯಾಗನ್ ನೊಣಗಳು) ರೈಸ್ ಲೀಫ್ ರೋಲರ್ ನ ಸಂಖ್ಯೆಯನ್ನು ನಿಯಂತ್ರಿಸುತ್ತವೆ.
  • ಉತ್ತಮವಾಗಿ ಯೋಜಿಸಿ, ಬೇರೆ ಬೆಳೆ ಅಥವಾ ಪಾಳುಭೂಮಿ ಅವಧಿಯೊಂದಿಗೆ ಪರ್ಯಾಯವಾಗಿ ಅಕ್ಕಿಯ ಬೆಳೆ ಸರದಿ ಮಾಡಿ.
  • ಬೆಳೆ ಉಳಿಕೆಗಳನ್ನು ತೆಗೆದುಹಾಕಲು ಸುಗ್ಗಿಯ ನಂತರ ನೆಲವನ್ನು ಉಳುಮೆ ಮಾಡಿ.
  • ಸುಗ್ಗಿಯ ನಂತರ ಹಲವಾರು ವಾರಗಳು, ತಿಂಗಳುಗಳವರೆಗೆ ನೆಲವನ್ನು ಬೇಸಾಯ ಮಾಡದೆ ಖಾಲಿ ಬಿಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ