Nilaparvata lugens
ಕೀಟ
ಮರಿ ಹುಳುಗಳು ಮತ್ತು ಪ್ರೌಢ ಕೀಟಗಳೆರೆಡೂ ಸಸ್ಯದ ತಳದಲ್ಲಿ ಆಶ್ರಯ ಪಡೆದುಕೊಳ್ಳುತ್ತವೆ ಮತ್ತು ಕಾಂಡಗಳು ಮತ್ತು ಎಲೆಗಳಿಂದ ರಸವನ್ನು ಹೀರುತ್ತವೆ. ಸಸ್ಯಗಳು ಸೊರಗುತ್ತವೆ ಮತ್ತು ಹಸಿರು ಬಣ್ಣ ಕಳೆದುಕೊಳ್ಳುತ್ತವೆ. ಕೀಟವು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ ಎಲೆಗಳು ಕಿತ್ತಳೆ-ಹಳದಿ ಬಣ್ಣಕ್ಕೆ ತಿರುಗುತ್ತವೆ, ನಂತರ ಕಂದು ಬಣ್ಣಕ್ಕೆ ತಿರುಗಿ ಒಣಗುತ್ತವೆ (ಹಾಪರ್ ಬರ್ನ್) ಮತ್ತು ಅಂತಿಮವಾಗಿ ಸಸ್ಯವು ಒಣಗಿ ಸಾಯುತ್ತದೆ. ಕೃಷಿ ಭೂಮಿಯಲ್ಲಿ, ರೋಗಲಕ್ಷಣಗಳು ಮೊದಲಿಗೆ ಸಣ್ಣ ತೇಪೆಗಳಾಗಿ ಗೋಚರಿಸುತ್ತವೆ ಆದರೆ ಜಿಗಿ ಹುಳುಗಳು ಹರಡಿದಂತೆ ಅವು ವೇಗವಾಗಿ ಬೆಳೆಯುತ್ತವೆ. ಹೆಣ್ಣು ಕೀಟಗಳು ಕಾಂಡಗಳಲ್ಲಿ ಮತ್ತು ಎಲೆಗಳ ನಡುದಿಂಡಿನಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಇದರಿಂದಾಗಿ ಹೆಚ್ಚುವರಿ ಹಾನಿಯಾಗುತ್ತದೆ. ಸಿಹಿ ಅಂಟಿನ ಉತ್ಪಾದನೆಯು ಬೂದು ಬಣ್ಣದ ಮೋಲ್ಡುಗಳ (ಬೂಶ್ಟು) ಬೆಳವಣಿಗೆಗೆ ಕಾರಣವಾಗುತ್ತದೆ. ಸಸ್ಯಗಳಲ್ಲಿ ಸಣ್ಣ ಹೂಗೊಂಚಲುಗಳು, ಬಲಿತ ಧಾನ್ಯಗಳು ಮತ್ತು ಧಾನ್ಯದ ತೂಕ ಕಡಿಮೆಯಿರುತ್ತದೆ.
ಕೀಟಗಳ ಸಂಖ್ಯೆ ಕಡಿಮೆ ಇದ್ದಾಗ ಜೈವಿಕ ಚಿಕಿತ್ಸೆಯನ್ನು ಬಳಸಬಹುದು. ಕಂದು ಸಸ್ಯ ಜಿಗಿಹುಳುಗಳ ನೈಸರ್ಗಿಕ ವೈರಿಗಳೆಂದರೆ ನೀರಿನ ಸ್ಚ್ರೈಡರ್ಸ್ ಗಳು, ಮಿರಿಡ್ ಬಗ್ಸ್, ಜೇಡಗಳು, ಮತ್ತು ವಿವಿಧ ಎಗ್ ಪ್ಯಾರಾಸಿಟೈಡ್ಸ್ ಕಣಜಗಳು ಮತ್ತು ನೊಣಗಳು. ಒಂದು ದಿನದ ಮಟ್ಟಿಗೆ ಮೊಳಕೆಗಳ ತುದಿ ಹೊರಕಾಣುವಂತೆ (ಮುಳುಗುವಂತೆ) ಬೀಜದಮಡಿಗೆ ನೀರು ಹಾಯಿಸಬಹುದು ಇದರ ಮೂಲಕ ಕೀಟಗಳನ್ನು ನಿಯಂತ್ರಿಸಬಹುದು. ಪರ್ಯಾಯವಾಗಿ ಕೀಟವನ್ನು ಸೆರೆಹಿಡಿಯಲು ಸಣ್ಣ ಬೀಜಮಡಿಗಳಿಗೆ ಬಲೆಯನ್ನು ಹಾಸಬಹುದು.
ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಕೀಟಗಳ ಸಂಖ್ಯೆ ನಿರ್ಣಾಯಕ ಮಟ್ಟದಲ್ಲಿ ಕಂಡುಬಂದರೆ ಅಥವಾ ನೈಸರ್ಗಿಕ ಶತ್ರುಗಳಿಗಿಂತ ಹೆಚ್ಚಾದ ಸಂಖ್ಯೆಯಲ್ಲಿ ಸಸ್ಯಗಳ ಜಿಗಿಹುಳುಗಳನ್ನು ಗಮನಿಸಿದರೆ ಮಾತ್ರ ಕೀಟನಾಶಕಗಳನ್ನು ಸೂಚಿಸಲಾಗುತ್ತದೆ . ಕೀಟಗಳ ವಿರುದ್ಧ ಬಳಸಬಹುದಾದ ಕೀಟನಾಶಕಗಳೆಂದರೆ ಬುಪ್ರೊಫೆಸಿನ್, ಪೈರೋಮೆಟ್ರೋಜಿನ್ ಅಥವಾ ಎಟೊಫೆನ್ಪ್ರಾಕ್ಸ್ ಮತ್ತು ಪರ್ಯಾಯವಾದ ಸಂಯೋಜನೆಗಳಾಗಿವೆ. ಕೀಟದ ಪ್ರತಿರೋಧಕತೆಯನ್ನು ಹೆಚ್ಚಿಸುವ ಮತ್ತು ಕೀಟಗಳು ಮರುಕಳಿಸುವಂತೆ ಮಾಡಲು ಅನುಕೂಲಕರವಾದ ರಾಸಾಯನಿಕಗಳಾದ ಕ್ವಿನಾಲ್ಫೋಸ್, ಕ್ಲೋರೋಪೈರಿಫೋಸ್ ಅಥವಾ ಲಾಮ್ಡಾ ಸೈಹಾಲೋಥ್ರಿನ್ ಅಥವಾ ಇತರ ಸಂಶ್ಲೇಷಿತ ಪೈರೆಥ್ರಾಯ್ಡ್ ಸಂಯೋಜನೆಗಳ ಬಳಕೆಯನ್ನು ತಪ್ಪಿಸಿ.
ನೀಲಪರ್ವತ ಲುಗೆನ್ಸ್ ಎಂಬ ಕಂದು ಸಸ್ಯ ಜಿಗಿ ಹುಳುವಿನಿಂದ ಹಾನಿ ಉಂಟಾಗುತ್ತದೆ. ಮಳೆ ಬೀಳುವ, ನೀರಾವರಿ ಒದ್ದೆ ಜಮೀನುಗಳಲ್ಲಿ, ಹೊಲಗಳು ನಿರಂತರವಾಗಿ ನೀರಿನಲ್ಲಿ ಮುಳುಗಲ್ಪಟ್ಟ ಪರಿಸ್ಥಿತಿಗಳಲ್ಲಿ, ಅತಿಯಾದ ನೆರಳು ಮತ್ತು ಆರ್ದ್ರತೆಗಳಲ್ಲಿ ಇದು ಸಮಸ್ಯೆಯಾಗಬಹುದು. ಭತ್ತದ ಸಸ್ಯಗಳ ಮುಚ್ಚಲ್ಪಟ್ಟ ಕ್ಯಾನೊಪಿ, ದಟ್ಟವಾಗಿ ಬಿತ್ತಲಾಗಿರುವ ಬೆಳೆಗಳು, ಸಾರಜನಕದ ಅತಿಯಾದ ಬಳಕೆ ಮತ್ತು ಋತುವಿಗೆ ಮುನ್ನವೇ ಕೀಟನಾಶಕಗಳ ಸಿಂಪಡಿಕೆ (ನೈಸರ್ಗಿಕ ಶತ್ರುಗಳನ್ನು ನಾಶಮಾಡುವ) ಸಹ ಕೀಟದ ಬೆಳವಣಿಗೆಗೆ ಅನುಕೂಲಕರವಾಗಿವೆ. ಆರ್ದ್ರ ಋತುವಿಗಿಂತ ಹೆಚ್ಚಾಗಿ ಒಣ ಋತುವಿನಲ್ಲಿ ಕಂದು ಜಿಗಿಹುಳುಗಳು ಸಾಮಾನ್ಯವಾಗಿ ಹೇರಳವಾಗಿರುತ್ತವೆ. ಜಿಗಿಹುಳುಗಳು ನೀರಿನ ಮೇಲ್ಮೈ ಮೇಲೆ ಬೀಳುತ್ತವೆಯೇ ಎಂದು ನೋಡಲು ಸಸ್ಯಗಳನ್ನು ಬಗ್ಗಿಸುವುದರ ಮೂಲಕ ಮತ್ತು ಮೃದುವಾಗಿ ಸಸ್ಯಗಳ ತಳಕ್ಕೆ ತಟ್ಟುವುದರಿಂದ ಕೀಟಗಳನ್ನು ಪರಿಶೀಲಿಸಬಹುದು.