ಮೆಕ್ಕೆ ಜೋಳ

ಬೀನ್ ಎಲೆಯ ವೆಬ್ಬರ್

Hedylepta indicata

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳ ಹೊರಭಾಗವನ್ನು ತಿನ್ನುವುದರಿಂದ ಅಸ್ಥಿಪಂಜರೀಕರಣಕ್ಕೆ ಕಾರಣವಾಗುತ್ತದೆ.
  • ಎಲೆಗಳು ರೇಷ್ಮೆ ಎಳೆಗಳಿಂದ ಸುತ್ತಲ್ಪಟ್ಟಿರುತ್ತವೆ ಅಥವಾ ಹೊಲಿಯಲ್ಪಟ್ಟಿರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಮೆಕ್ಕೆ ಜೋಳ

ರೋಗಲಕ್ಷಣಗಳು

ಈ ಕಂಬಳಿ ಹುಳ(ಕ್ಯಾಟರ್ಪಿಲ್ಲರ್)ಗಳು ಮುಖ್ಯವಾಗಿ (ಆದರೆ ಅದನ್ನು ಮಾತ್ರವೇ ಅಲ್ಲ) ದ್ವಿದಳ ಧಾನ್ಯಗಳ ಕುಟುಂಬಕ್ಕೆ ಸೇರಿದ ಸಸ್ಯಗಳನ್ನು ಆಕ್ರಮಿಸುತ್ತವೆ. ಹಸಿರು ಲಾರ್ವಾಗಳು ಸುತ್ತಿಕೊಂಡ ಒಂದು ಎಲೆ ಅಥವಾ ರೇಷ್ಮೆಯ ಎಳೆಗಳ ಸಹಾಯದಿಂದ ಹೆಣೆಯಲ್ಪಟ್ಟ ಎರಡು ಎಲೆಗಳಲ್ಲಿ ವಾಸಿಸುತ್ತವೆ. ನಂತರದ ಹಂತಗಳಲ್ಲಿ, ಅವು ಭಾಗಷಹ ತಿನ್ನಲ್ಪಟ್ಟ ಹಲವಾರು ಎಲೆಗಳನ್ನು ಒಟ್ಟಿಗೆ ಸೇರಿಸಿ ಎಲೆಗಳ ಸಮೂಹವನ್ನು ರಚಿಸಬಹುದು. ಅವು ನಾಳಗಳ ನಡುವೆ ಇರುವ ಮೃದುವಾದ ಎಲೆಯ ಅಂಗಾಂಶಗಳನ್ನು ತಿನ್ನುತ್ತವೆ ಮತ್ತು ಹಾನಿಗೊಳಗಾದ ಎಲೆಗಳು ಹೊರಗಿನ ಹೊರಪೊರೆ(ಎಪಿಡರ್ಮಿಸ್) ಇಲ್ಲದ ಪ್ರದೇಶಗಳನ್ನು ತೋರುತ್ತವೆ ಮತ್ತು ಕಂದು ಬಣ್ಣಕ್ಕೆ ತಿರುಗಬಹುದು ಅಥವಾ ಸಾಯಬಹುದು. ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಎಲೆಗಳ ಗಟ್ಟಿ ಭಾಗಗಳು ಮಾತ್ರ ಉಳಿದು ಅಸ್ಥಿಪಂಜರದಂತೆ ಆಗಬಹುದು. ತೀವ್ರತರವಾದ ಪ್ರಕರಣಗಳಲ್ಲಿ ಎಲೆಯ ಪ್ರದೇಶಗಳಲ್ಲಿ ಆಗುವ ನಾಟಕೀಯ ಕಡಿತವು, ಸಣ್ಣ ಬೀಜಕೋಶಗಳಿಗೆ ಕಾರಣವಾಗುತ್ತದೆ ಮತ್ತು ಇಳುವರಿಯ ಮೇಲೂ ಸಹ ಪರಿಣಾಮ ಬೀರುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಮುತ್ತಿಗೆಯ ನಂತರ ಟ್ರೈಕೊಗ್ರಾಮಾದ ಪರಾವಲಂಬಿ ಕಣಜ ಜಾತಿಗಳನ್ನು ಜೈವಿಕ ನಿಯಂತ್ರಣ ವಿಧಾನವಾಗಿ ಬಳಸಬಹುದು. ಲಾರ್ವಾದ ಇತರ ಪ್ಯಾರಾಸಿಟಾಯ್ಡ್ ಪ್ರಭೇದಗಳೆಂದರೆ ಬ್ರಾಚಿಮೆರಿಯಾ ಒವಟಾ, ಗ್ರ್ಯಾಟಿಯೋಸೋಮಿಯಾ ನಿಗ್ರಿಕನ್ಸ್, ಸ್ಟರ್ಮಿಯಾ ಅಲ್ಬಿನ್ಸಿಸಾ, ನೆಮೊರಿಲ್ಲಾ ಮ್ಯಾಕ್ಯುಲೋಸಾ ಮತ್ತು ಅಪಾಂಟೆಲೀಸ್ ಮತ್ತು ಟೊಕ್ಸೊಫ್ರಾಯಿಡ್ ಗಳ ಜಾತಿಗಳು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಇರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. 0,02% ಸೈಪರ್ಮೆಥ್ರಿನ್, 0,02% ಡಿಕಾಮೆಥ್ರೈನ್ ಅನ್ನು ಹೊಂದಿರುವ ಕೀಟನಾಶಕ ಸಂಯುಕ್ತಗಳನ್ನು ಹದಿನೈದು ದಿನಗಳ ಅಂತರಗಳಲ್ಲಿ ಹಾಕಬಹುದು.

ಅದಕ್ಕೆ ಏನು ಕಾರಣ

ಹೆಡೆಲೆಪ್ಟಾ ಇಂಡಿಕಾಟಾದ ಲಾರ್ವಾ ದಿಂದ ಹಾನಿ ಉಂಟಾಗುತ್ತದೆ. ವಯಸ್ಕ ಕೀಟಗಳು ಸುಮಾರು 20 ಮಿಮೀ ಉದ್ದದ ರೆಕ್ಕೆಗಳನ್ನು ಹೊಂದಿದ್ದು ತೆಳು ಕಂದು ಬಣ್ಣದಲ್ಲಿರುತ್ತವೆ. ಅವುಗಳು ಹಳದಿ ಬಣ್ಣದಿಂದ ಕಂದು ಬಣ್ಣದ ಮುಂದಿನ ರೆಕ್ಕೆಗಳನ್ನು ಹೊಂದಿರುತ್ತವೆ. ಗಾಢವಾದ ಕೆಲವು ತೇಪೆಗಳೊಂದಿಗೆ ಮೂರು ಅಡ್ಡಾದಿಡ್ಡಿ ಗಾಢ ಬಣ್ಣದ ಗೆರೆಗಳು ಇರುತ್ತವೆ. ಹಿಂದಿನ ರೆಕ್ಕೆಗಳ ಮೇಲೆ, ಅಡ್ಡ ಗೆರೆಗಳ ಸಂಖ್ಯೆ ಎರಡಕ್ಕೆ ಇಳಿಯುತ್ತದೆ. ಹೆಣ್ಣು ಪತಂಗಗಳು ಎಳೆಯ ಎಲೆಗಳ ಮೇಲೆ ಅಥವಾ ಆಶ್ರಯದಾತ ಸಸ್ಯಗಳ ಚಿಗುರುಗಳ ಮೇಲೆ ಒಂದೇ ಮೊಟ್ಟೆಯನ್ನು ಇಡುತ್ತವೆ. ಮರಿಹುಳುಗಳು ತಿಳಿ ಕಂದು ಬಣ್ಣದ ತಲೆಯೊಂದಿಗೆ ತಿಳಿ ಹಸಿರು ಬಣ್ಣವನ್ನು ಹೊಂದಿರುತ್ತವೆ. ಅವು ರೇಷ್ಮೆ ಎಳೆಯಿಂದ ಜೊತೆಯಾಗಿ ಮಡಿಸಿ ನೇಯ್ದ ಎಲೆಗಳ ನಡುವೆ ವಾಸಿಸುತ್ತವೆ ಮತ್ತು ಆಹಾರ ಸೇವಿಸುತ್ತವೆ. ಮಣ್ಣಿನ ಮೇಲ್ಮೈ ಮೇಲೆ ಕಸದ ಮಧ್ಯೆ ಕೋಶಾವಸ್ಥೆ ಸಂಭವಿಸುತ್ತದೆ. ಬೀನ್ ಎಲೆ ವೆಬ್ಬರ್ ದ್ವಿದಳ ಧಾನ್ಯ ಕುಟುಂಬ, ಕೆಂಪು ಬೀಟ್ ಮತ್ತು ಮೆಕ್ಕೆ ಜೋಳದ ಸಸ್ಯಗಳು ಸೇರಿದಂತೆ ಹಲವಾರು ಆಶ್ರಯದಾತ ಸಸ್ಯಗಳನ್ನು ಹೊಂದಿವೆ. ಇದು ಒಂದು ಪ್ರಮುಖ ಕೀಟ ಎಂದು ಪರಿಗಣಿಸಲ್ಪಟ್ಟಿಲ್ಲ ಮತ್ತು ಆದ್ದರಿಂದ ಚಿಕಿತ್ಸೆ ಅಗತ್ಯವಿಲ್ಲ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಪ್ರಭೇದಗಳನ್ನು ನೆಡಿ.
  • ನಿಮ್ಮ ಸಸ್ಯಗಳನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಿ ಮತ್ತು ಸಸ್ಯಗಳು ಗಣನೀಯ ಮಟ್ಟದಲ್ಲಿ ರೋಗಲಕ್ಷಣಗಳನ್ನು ತೋರಿಸಿದರೆ, ರೋಗ ನಿರ್ವಹಣೆ ಕ್ರಮಗಳನ್ನು ಜಾರಿಗೊಳಿಸಿ.
  • ಬೆಳೆ ಸರದಿ ಮಾಡಿ.
  • ಕೃಷಿ ಭೂಮಿಯಿಂದ ಕಳೆಗಳನ್ನು ತೆಗೆದುಹಾಕಿ.
  • ನೈಸರ್ಗಿಕ ಪರಭಕ್ಷಕಗಳನ್ನು ಬೆಂಬಲಿಸಲು ಹೊಲದ ಸುತ್ತಲೂ ಮಕರಂದ ಉತ್ಪಾದಿಸುವ ಸಸ್ಯಗಳನ್ನು ಬಿತ್ತಿ.
  • ಫೆರೋಮೋನ್ ಬಲೆಗಳನ್ನು ಸಂಖ್ಯೆಯನ್ನು ಕಂಡು ಹಿಡಿಯಲು ಮತ್ತು ಅವುಗಳ ಸಂಯೋಗಕ್ಕೆ ಅಡ್ಡಿಪಡಿಸಲು ಬಳಸಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ