ಹುರುಳಿ

ಹುರುಳಿ ಎಲೆಯ ಜೀರುಂಡೆ

Cerotoma trifurcata

ಕೀಟ

ಸಂಕ್ಷಿಪ್ತವಾಗಿ

  • ಬೇರುಗಳು ಮತ್ತು ಬೇರು ಗಂಟುಗಳಲ್ಲಿ ಕೀಟ ತಿನ್ನುವುದರಿಂದ ಹಾನಿ ಉಂಟಾಗುತ್ತದೆ.
  • ಎಲೆಗಳು ಮತ್ತು ಬೆಳೆಯುತ್ತಿರುವ ಬೀಜಕೋಶಗಳ ಮೇಲೂ ಕೀಟ ತಿನ್ನುವುದರಿಂದ ಆದ ಹಾನಿ ಕಾಣುತ್ತದೆ.
  • ವೈರಸ್ ಗಳ ವಾಹಕವಾಗಿದೆ.

ಇವುಗಳಲ್ಲಿ ಸಹ ಕಾಣಬಹುದು

3 ಬೆಳೆಗಳು

ಹುರುಳಿ

ರೋಗಲಕ್ಷಣಗಳು

ಮರಿಹುಳುಗಳು ಮತ್ತು ವಯಸ್ಕ ಹುಳುಗಳು ಬೇರುಗಳು, ಬೇರಿನ ಗಂಟುಗಳು, ಕಾಟಿಲೆಡಾನ್ ಗಳು, ಎಲೆಗಳು (ಸಾಮಾನ್ಯವಾಗಿ ಕೆಳಭಾಗ) ಮತ್ತು ಬೀಜಕೋಶಗಳನ್ನು ತಿನ್ನುತ್ತವೆ. ಬೇರು ಮತ್ತು ನಾಳೀಯ ಅಂಗಾಂಶಗಳ ಛಿದ್ರಗೊಳ್ಳುವುದು ಸಾರಜನಕ ಸ್ಥಿರೀಕರಣವನ್ನು ಕಡಿಮೆ ಮಾಡುತ್ತದೆ. ಎಲೆಯ ಮೇಲ್ಮೈ ಯಲ್ಲಿನ ಹಾನಿ ಎಲೆಯ ಮೇಲೆ ಚದುರಿದ ಸಣ್ಣ, ಬಹುತೇಕ ದುಂಡನೆಯ ರಂಧ್ರಗಳಾಗಿ ಕಂಡುಬರುತ್ತದೆ. ತಿನ್ನಲ್ಪಟ್ಟ ಬೀಜಕೋಶಗಳು ಸುಟ್ಟಂತೆ ಕಾಣುತ್ತವೆ. ಬೀಜಕೋಶಗಳ ಮೇಲಿನ ಹಾನಿಯಿಂದ ಇಳುವರಿ ಮತ್ತು ಬೀಜ ಗುಣಮಟ್ಟ ಕಡಿಮೆಯಾಗುತ್ತದೆ. ಹಾನಿಗೊಳಗಾದ ಬೀಜಗಳು ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳಂತಹ ಸೂಕ್ಷ್ಮಜೀವಿಗಳಿಗೆ ಪ್ರವೇಶವನ್ನು ಒದಗಿಸುತ್ತವೆ. ಋತುವಿನ ಆರಂಭದಲ್ಲಿ ಸಿರೊಟೋಮಾ ಟ್ರೈಫುರ್ಕಾಟಾ ಸಂಭವಿಸಿದರೆ, ಅದು ಸಸಿಗೆ ಗಾಯ, ಎಲೆ ಉದುರುವಿಕೆ ಮತ್ತು ಬೀಜ ಬಣ್ಣ ಕಳೆದುಕೊಳ್ಳುವುದಕ್ಕೆ ಕಾರಣವಾಗಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಈ ಸಮಯದಲ್ಲಿ, ಕೀಟದ ವಿರುದ್ಧ ಯಾವುದೇ ಪರಿಣಾಮಕಾರಿ ಜೈವಿಕ ನಿಯಂತ್ರಣ ತಿಳಿದು ಬಂದಿಲ್ಲ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರ ವಿಧಾನ ಇದ್ದರೆ ಅದನ್ನು ಯಾವಾಗಲೂ ಮೊದಲು ಪರಿಗಣಿಸಿ. ಹಾನಿ, ಗಮನಾರ್ಹ ಮಟ್ಟದಲ್ಲಿ ಇಳುವರಿ ಇಳಿಕೆಗೆ ಕಾರಣವಾಗುವಂತಿದ್ದರೆ, ರಾಸಾಯನಿಕಗಳ ಬಳಕೆಯನ್ನು ಪರಿಗಣಿಸಿ. ಪೈರೆಥ್ರಾಯ್ಡ್ ಗುಂಪಿನ ಕೀಟನಾಶಕಗಳು, ಲ್ಯಾಂಬ್ಡಾ-ಸೈಹಲೋಥರಿನ್ ಅಥವಾ ಡಿಮೆಥೊಯೇಟ್, ಕೀಟಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

ಅದಕ್ಕೆ ಏನು ಕಾರಣ

ವಯಸ್ಕ ಹುಳುಗಳು ಸುಮಾರು 6 ಮಿಮೀ ಉದ್ದ ಮತ್ತು ಗಾಢ ಹಳದಿ ಬಣ್ಣದಿಂದ ಕೆಂಪು ಬಣ್ಣದಲ್ಲಿರುತ್ತವೆ. ಅವುಗಳ ರೆಕ್ಕೆಗಳು ವಿಶಿಷ್ಟವಾದ ಆಯತಾಕಾರದ ಗುರುತುಗಳಿಂದ ಆವರಿಸಿರುತ್ತವೆ ಮತ್ತು ಅವುಗಳು ಕುತ್ತಿಗೆಯ ಪ್ರದೇಶದಲ್ಲಿ ಕಪ್ಪು ತ್ರಿಕೋನವನ್ನು ಹೊಂದಿರುತ್ತವೆ. ವಯಸ್ಕ ಹೆಣ್ಣು ಹುಳುಗಳು ಸಸ್ಯದ ಕಾಂಡಗಳಿಗೆ ಹತ್ತಿರದಲ್ಲಿ, ಮಣ್ಣಿನ ಎರಡು ಇಂಚುಗಳಷ್ಟು ಆಳದಲ್ಲಿ ಮಣ್ಣಿನಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಒಂದು ಹೆಣ್ಣು ತನ್ನ ಜೀವತಾವಧಿಯಲ್ಲಿ 125 ರಿಂದ 250 ಮೊಟ್ಟೆಗಳನ್ನು ಇಡುತ್ತದೆ. ಮಣ್ಣಿನ ಉಷ್ಣಾಂಶವನ್ನು ಅವಲಂಬಿಸಿ ಮೊಟ್ಟೆಗಳು ನಾಲ್ಕರಿಂದ 14 ದಿನಗಳಲ್ಲಿ ಒಡೆಯುತ್ತವೆ. ಮರಿಹುಳುಗಳು ಗಾಢ ಕಂದು ಅಥವಾ ಕಪ್ಪು ತಲೆಯೊಂದಿಗೆ ಬಿಳಿ ಬಣ್ಣದಲ್ಲಿರುತ್ತವೆ. ಸೋಯಾಬೀನ್ ಹೊಲಗಳ ಸುತ್ತಲಿನ ವಿವಿಧ ಆವಾಸಸ್ಥಾನಗಳಲ್ಲಿ ವಯಸ್ಕ ಹುಳುಗಳು ಚಳಿಗಾಲವನ್ನು ಕಳೆಯುತ್ತವೆ. ಹುರುಳಿ ಎಲೆಯ ಜೀರುಂಡೆ ಹಲವಾರು ವಿಧದ ವೈರಸ್ ಗಳಿಗೆ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ಹಾನಿಯನ್ನು ಕಡಿಮೆ ಮಾಡಲು ನಿಧಾನವಾಗಿ ನೆಡಿ.
  • ಕೀಟಗಳನ್ನು ಎಣಿಸಿ ಮತ್ತು ಋತುವಿನ ಆರಂಭದಲ್ಲೇ ಸಸ್ಯ ಹಾನಿಯನ್ನು ಅಂದಾಜಿಸಿ.
  • ಸಾಲುಗಳನ್ನು ಮುಚ್ಚುವುದರಿಂದ ಈ ಕೀಟಗಳಿಗೆ ಹೊರಗಿನಿಂದ ತಡೆ ಒಡ್ಡಬಹುದು.
  • ಆಳವಾಗಿ ಉಳುಮೆ ಮಾಡಿ ಮತ್ತು ಹತ್ತಿರದಲ್ಲಿ ಇತರ ದ್ವಿದಳ ಧಾನ್ಯಗಳನ್ನು ನೆಡುವುದನ್ನು ತಪ್ಪಿಸಿ.
  • ದೊಡ್ಡ ಬೆಳೆ ಸರದಿ ಯೋಜನೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ