ಕಬ್ಬು

ಕಬ್ಬಿನ ಬಿಳಿ ಗ್ರಬ್

Lepidiota stigma

ಕೀಟ

ಸಂಕ್ಷಿಪ್ತವಾಗಿ

  • ಬೇರನ್ನು ಕೀಟಗಳು ತಿನ್ನುವುದರಿಂದ ಆದ ಹಾನಿ ಪೌಷ್ಟಿಕಾಂಶ ಮತ್ತು ನೀರಿನ ಪೂರೈಕೆಯನ್ನು ಕಡಿಮೆ ಮಾಡುತ್ತದೆ.
  • ಕಾಲಾನಂತರದಲ್ಲಿ, ಎಲೆಗಳು ಕಂದು ಬಣ್ಣಕ್ಕೆ ತಿರುಗುತ್ತವೆ ಮತ್ತು ಬೆಳೆದ ಕಾಂಡಗಳು ಹಾಳಾಗುತ್ತವೆ.
  • ಕೆಟ್ಟ ಹವಾಮಾನದ ಸಮಯದಲ್ಲಿ ಸಸ್ಯಗಳು ನೆಲಕ್ಕೆ ಬಾಗಬಹುದು.
  • ಲಾರ್ವಾಗಳು ಕಬ್ಬಿನ ಕಾಂಡದೊಳಗೆ ಸುರಂಗ ತೋಡಬಹುದು.

ಇವುಗಳಲ್ಲಿ ಸಹ ಕಾಣಬಹುದು

3 ಬೆಳೆಗಳು

ಕಬ್ಬು

ರೋಗಲಕ್ಷಣಗಳು

ಮರಿಹುಳುಗಳು ಬೇರುಗಳನ್ನು ತಿಂದು ಹಾಳುಮಾಡುತ್ತವೆ ಮತ್ತು ಸಸ್ಯಕ್ಕೆ ನೀರು ಮತ್ತು ಪೌಷ್ಟಿಕಾಂಶ ಪೂರೈಕೆಯನ್ನು ಕಡಿಮೆ ಮಾಡುತ್ತವೆ. ಆರಂಭಿಕ ಹಂತದಲ್ಲಿ ಹಳದಿ ಮತ್ತು ಎಲೆಗಳ ಒಣಗುವಿಕೆಯಿಂದ, ರೋಗಲಕ್ಷಣಗಳು ಬರದಿಂದಾದ ಹಾನಿಯಂತೆ ಕಾಣಿಸುತ್ತವೆ. ಕಾಲಾನಂತರದಲ್ಲಿ, ಎಲೆಗಳು ಕಂದು ಬಣ್ಣಕ್ಕೆ ತಿರುಗಿ, ಬೆಳೆಯುತ್ತಿರುವ ಕಾಂಡಗಳು ಹಾಳಾಗುತ್ತವೆ. ವಿಪರೀತ ಸಂದರ್ಭಗಳಲ್ಲಿ, ಗ್ರಬ್ ಗಳು ಬೇರುಗಳು ಮತ್ತು ಕಬ್ಬಿನ ಜಲ್ಲೆಗಳನ್ನು ತಿನ್ನುತ್ತವೆ. ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿ ಅಥವಾ ಅದರ ಸ್ವಂತ ತೂಕದಿಂದಾಗಿ ಗಿಡ ನೆಲಕ್ಕೆ ಬಾಗಬಹುದು. ಗ್ರಬ್ ಗಳು ಕಬ್ಬಿನ ಜಲ್ಲೆಯೊಳಗೆ ಸುರಂಗ ತೋಡಿರುವುದನ್ನು ಸಹ ಕಾಣಬಹುದು. ತೀವ್ರ ಮುತ್ತುವಿಕೆ ಮತ್ತು ಕಬ್ಬಿನ ಬೆಳವಣಿಗೆಯ ಆರಂಭಿಕ ಹಂತಗಳಲ್ಲಿ, ಗಿಡಗಳನ್ನು ಮತ್ತೆ ನೆಡುವುದು ಅಗತ್ಯವಾಗಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಜೀರುಂಡೆಗಳನ್ನು ಆಕರ್ಷಿಸಲು ಮತ್ತು ಅವುಗಳನ್ನು ಸುಲಭವಾಗಿ ನಾಶಮಾಡಲು ಬಲೆ ಮರಗಳನ್ನು ಬಳಸಬಹುದು. ಹತ್ತಿರವಿರುವ ಕಬ್ಬಿನ ಗದ್ದೆಗಳಲ್ಲಿ ಬಿಳಿ ಗ್ರಬ್ ಗಳ ಸೋಂಕು ತಗ್ಗಿಸಲು ಇದು ಸಹಕಾರಿ. ಜಯಂತಿ (ಸೆಸ್ಬಾನಿಯ ಸೆಸ್ಬಾನ್), ತುರಿ (ಸೆಸ್ಬಾನಿಯ ಗ್ರ್ಯಾಂಡಿಫ್ಲೋರಾ), ಅಕೇಶಿಯ ಟೊಮೆಂಟೋಸಾ, ಆಸಾಮ್ (ಟಾಮರಿಂಡಸ್ ಇಂಡಿಕಾ), ಜೆಂಗ್ಕೊಲ್ (ಪಿಥೆಸೆಲೋಬಿಯಮ್ ಜಿರಿಂಗಾ), ಮತ್ತು ಗೋಡಂಬಿ (ಅನಾಕಾರ್ಡಿಯಮ್ ಆಕ್ಸಿಡೆಂಟೇಲ್) ಅನ್ನು ಬಳಸಬಹುದು. ಗೋಡಂಬಿ ಸೂಕ್ತವಾಗಿದೆ. ಏಕೆಂದರೆ ಇದು ಉತ್ತಮಲ್ಲದ ಮಣ್ಣಿನಲ್ಲಿ ಬೆಳೆದು ಬೀಜಗಳನ್ನು ಉತ್ಪಾದಿಸುತ್ತದೆ. ಮುತ್ತುವಿಕೆಯನ್ನು ನಿಯಂತ್ರಿಸಲು ಬಯೋವೆರಿಯಾ ಸ್ಪೀಷೀಸ್ ಹೊಂದಿರುವ ಜೈವಿಕ ಕೀಟನಾಶಕಗಳನ್ನು ಪ್ರಯತ್ನಿಸಿ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ತಡೆಗಟ್ಟುವ ಕ್ರಮಗಳನ್ನು ಸೇರಿಸಿ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ರಾಸಾಯನಿಕ ನಿಯಂತ್ರಣವನ್ನು ಸಾಮಾನ್ಯವಾಗಿ ಮಣ್ಣಿನ ಕೀಟನಾಶಕಗಳನ್ನು ಬಳಸಿ ಮಾಡಲಾಗುತ್ತದೆ. ಕ್ಲೋರಿಪಿರಿಫೋಸ್ ಅಥವಾ ಕ್ಲೋರಿಪಿರಫೋಸ್-ಮಿಥೈಲ್ ನಂತಹ ನಿಧಾನವಾಗಿ ಮಣ್ಣಿಗೆ ಬಿಡುಗಡೆಯಾಗುವ ಮಣ್ಣಿನ ಕೀಟನಾಶಕಗಳನ್ನು ಒಳಗೊಂಡಿರುವ ಉತ್ಪನ್ನಗಳು ಈ ಗ್ರಬ್ ಗಳ ವಿರುದ್ಧ ಬಳಸಬಹುದು. ನೇರವಾಗಿ ಬೇರಿನ ವಲಯಕ್ಕೆ ಹಾಕಿದಾಗ ಪರಿಣಾಮಕಾರಿಯಾಗುತ್ತವೆ. ಆದಾಗ್ಯೂ, ರೇಟೂನ್ ಸ್ಥಳಗಳಲ್ಲಿ ಬಳಕೆ ಸಾಧ್ಯವಿಲ್ಲ.

ಅದಕ್ಕೆ ಏನು ಕಾರಣ

ಹಾನಿ ಹಲವಾರು ವಿಧದ ಜೀರುಂಡೆಗಳಿಂದ ಉಂಟಾಗುತ್ತದೆ. ಅದರಲ್ಲಿ ಪ್ರಮುಖವೆಂದರೆ ಲೆಪಿಡಿಯೋಟಾ ಸ್ಟಿಗ್ಮಾ. ಫಿಲೋಫಾಗಾ ಹೆಲೆರಿ, ಪ್ಯಾಚ್ನೆಸ್ ನಿಕೊಬಾರಿಕಾ, ಲ್ಯುಕೊಪೊಲಿಸ್ ಸ್ಪೀಶೀಸ್ ಮತ್ತು ಸೈಲೊಪೊಲಿಸ್ ಸ್ಪೀಶೀಸ್ ಮುಂತಾದ ಇತರ ಜಾತಿಗಳು ಕಂಡುಬರುತ್ತವೆ. ಗ್ರಬ್ ಗಳು ಕೆನೆ ಬಿಳಿ ಬಣ್ಣದಲ್ಲಿದ್ದು ಸಿ-ಆಕಾರದ ದೇಹ ಹೊಂದಿರುತ್ತವೆ. ಅವು ವಯಸ್ಸಾದಂತೆ ಹೆಚ್ಚು ಆಕ್ರಮಕಾರಿಯಾಗಿ ತಿನ್ನುತ್ತವೆ. ಅವನ್ನು ನಿಯಂತ್ರಿಸದೇ ಇದ್ದರೆ ತೀವ್ರ ಹಾನಿ ಉಂಟುಮಾಡುತ್ತದೆ. ಹಾನಿ ಪ್ರಮಾಣವು ಅವುಗಳ ಸಂಖ್ಯೆ, ಅವುಗಳ ವಯಸ್ಸು, ಕಬ್ಬಿನ ಪ್ರಭೇದ ಮತ್ತು ದಾಳಿ ಮಾಡಿದಾಗ ಗಿಡದ ಬೆಳವಣಿಗೆಯ ಹಂತ ಇವುಗಳನ್ನು ಅವಲಂಬಿಸಿರುತ್ತದೆ. ಹಳೆಯ ಕಬ್ಬಿನ ಮೇಲಿನ ದಾಳಿಗಳು ಇಳುವರಿ ಕಡಿತಕ್ಕೆ ಕಾರಣವಾಗುತ್ತವೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ಹೆಚ್ಚು ಸಹಿಷ್ಣು ಪ್ರಭೇದಗಳನ್ನು ಬೆಳೆಸಿ.
  • ನಿಯಮಿತವಾಗಿ ಬಿಳಿ ಗ್ರಬ್ ಮತ್ತು ಜೀರುಂಡೆಗಳ ಇರುವಿಕೆಗಾಗಿ ಹೊಲದ ಮೇಲ್ವಿಚಾರಣೆ ಮಾಡಿ.
  • ಕೀಟ ಸಂಖ್ಯೆಯನ್ನು ಅರಿಯಲು ಬಲೆಗಳನ್ನು ಬಳಸಿ ಅಥವಾ ಅವುಗಳನ್ನು ಹಿಡಿಯಿರಿ.
  • ಅಥವಾ ಸರಳವಾಗಿ ಕೈಯಿಂದ ಜೀರುಂಡೆಗಳು ಅಥವಾ ಗ್ರಬ್ ಗಳನ್ನು ಸಂಗ್ರಹಿಸಿ.
  • ಪರ್ಯಾಯ ಮಾರ್ಗವಾಗಿ, ಸಸ್ಯಗಳನ್ನು ಅಲುಗಾಡಿಸಿ ಮತ್ತು ಒಂದು ಬಟ್ಟೆ ತುಂಡಿನ ಮೇಲೆ ಅವುಗಳನ್ನು ಸಂಗ್ರಹಿಸಿ.
  • ವಯಸ್ಕ ಕೀಟಗಳನ್ನು ಆಕರ್ಷಿಸಲು ಬಲೆ ಮರಗಳನ್ನು ಬಳಸಿ ಮತ್ತು ಕೈಯಿಂದ ಅವುಗಳನ್ನು ತೆಗೆಯಿರಿ.
  • ಜೇಡಿ ಮಣ್ಣಿನಲ್ಲಿ ಕಬ್ಬು ಬೆಳೆಯುವುದನ್ನು ತಪ್ಪಿಸಿ.
  • ಸಮತೋಲಿತ ಗೊಬ್ಬರದೊಂದಿಗೆ ಮಣ್ಣಿನ ಫಲವತ್ತತೆಯನ್ನು ಖಚಿತಪಡಿಸಿಕೊಳ್ಳಿ.
  • ಪ್ರಯೋಜನಕಾರಿ ಕೀಟಗಳನ್ನು ಕೊಲ್ಲುವ ವಿಶಾಲ-ರೋಹಿತ ಕೀಟನಾಶಕಗಳನ್ನು ಬಳಸಬೇಡಿ.
  • ಸಸ್ಯ ಅವಶೇಷಗಳನ್ನು ಅಗೆಯಲು ಆಳವಾಗಿ ಉಳುಮೆ ಮಾಡಿ.
  • ಅವುಗಳ ವಿಭಜನೆಗೆ ಅನುವುಮಾಡಿ ಮತ್ತು ಪರಭಕ್ಷಕಗಳನ್ನು ಗ್ರಬ್ ಗಳಿಗೆ ಒಡ್ಡಿ.
  • ಪರ್ಯಾಯವಾಗಿ, ಸುಗ್ಗಿಯ ನಂತರ ಅವಶೇಷಗಳನ್ನು ಮತ್ತು ಕಸವನ್ನು ತೆಗೆದುಹಾಕಿ ಅವುಗಳನ್ನು ಸುಟ್ಟು ಬಿಡಿ.
  • ದ್ವಿದಳ ಧಾನ್ಯದಂತಹ ಆಶ್ರಯದಾತವಲ್ಲದ ಬೆಳೆಗಳೊಂದಿಗೆ ಬೆಳೆ ಸರದಿ ಮಾಡಿ.
  • ಗ್ರಬ್ ಗಳ ಜೀವನ ಚಕ್ರವನ್ನು ಮುರಿಯಲು ಸುಗ್ಗಿಯ ನಂತರ ಕೆಲವು ವಾರಗಳ ಕಾಲ ಹೊಲವನ್ನು ಖಾಲಿ ಬಿಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ