ಮೆಕ್ಕೆ ಜೋಳ

ಸೌತೆಕಾಯಿ ಬೀಟಲ್

Diabrotica spp.

ಕೀಟ

ಸಂಕ್ಷಿಪ್ತವಾಗಿ

  • ಬೇರು ಮತ್ತು ಕಾಂಡಗಳ ಮೇಲೆ ತಿಂದು ಬಿಟ್ಟಿರುವ ಹಾನಿ.
  • ಕಾಂಡವನ್ನು ದುರ್ಬಲಗೊಳಿಸುತ್ತದೆ ಮತ್ತು ಸಸ್ಯದ ಬಾಗುವಿಕೆಗೆ ಕಾರಣವಾಗಬಹುದು.
  • ಹಾನಿ ಅವಕಾಶವಾದಿ ರೋಗಕಾರಕಗಳನ್ನು ಬೆಂಬಲಿಸುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

16 ಬೆಳೆಗಳು

ಮೆಕ್ಕೆ ಜೋಳ

ರೋಗಲಕ್ಷಣಗಳು

ವಯಸ್ಕ ಕೀಟಗಳು ಎಲೆಗಳು ಮತ್ತು ಹೂವುಗಳನ್ನು ತಿನ್ನುವ ಮೂಲಕ, ಪರಾಗಸ್ಪರ್ಶ ಮತ್ತು ಧಾನ್ಯ / ಬೀಜಕೋಶ / ಹಣ್ಣಿನ ಅಭಿವೃದ್ಧಿಯಲ್ಲಿ ಮಧ್ಯಪ್ರವೇಶಿಸುತ್ತವೆ. ಬೇರಿನ ರೋಮಗಳು, ಬೇರುಗಳು ಮತ್ತು ಕಾಂಡಗಳನ್ನು ಮರಿಗಳು ತಿನ್ನುವ ಮೂಲಕ ಮಣ್ಣಿನಿಂದ ನೀರು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವ ಸಸ್ಯದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತವೆ. ಬೇರಿನ ತುದಿಗಳನ್ನು ಸಸ್ಯದ ತಳಭಾಗದವರೆಗೂ ಜಗಿಯಬಹುದು ಅಥವಾ ಕಂದು ಬಣ್ಣಕ್ಕೆ ತಿರುಗಬಹುದು ಮತ್ತು ಸುರಂಗಗಳನ್ನು ಕೊರೆದಿರುವುದು ಕಂಡು ಬರಬಹುದು. ಲಕ್ಷಣಗಳು ಬರ ಅಥವಾ ಪೋಷಕಾಂಶಗಳ ಕೊರತೆಯಂತೆ ತೋರುತ್ತವೆ. ಸಸ್ಯದ ಬೆಳವಣಿಗೆಯ ನಂತರದ ಹಂತಗಳಲ್ಲಿ, ಬೇರಿಗೆ ಆದ ಹಾನಿ ಕಾಂಡವನ್ನು ದುರ್ಬಲಗೊಳಿಸುತ್ತದೆ ಮತ್ತು ಸಸ್ಯದ ಬಾಗುವಿಕೆಗೆ ಕಾರಣವಾಗುತ್ತದೆ. ಇದು ಕೊಯ್ಲು ಮಾಡಲು ತೊಂದರೆ ಒಡ್ಡಬಹುದು. ಮರಿಹುಳುಗಳಿಂದಾದ ಹಾನಿ ಅವಕಾಶವಾದಿ ರೋಗಕಾರಕಗಳಿಗೆ ಸಹ ಅನುಕೂಲ ಉಂಟುಮಾಡುತ್ತದೆ. ಇದಲ್ಲದೆ, ಡಿಯಾಬ್ರೊಟಿಕಾದ ಕೆಲವು ಜಾತಿಗಳು ಮೆಕ್ಕೆ ಜೋಳದ ಕ್ಲೋರೋಟಿಕ್ ಮೊಟಲ್ ವೈರಸ್ ಮತ್ತು ಬ್ಯಾಕ್ಟೀರಿಯ ವಿಲ್ಟ್ ಗೆ ಕಾರಣವಾಗುವ ಬ್ಯಾಕ್ಟೀರಿಯಾದ ವಾಹಕಗಳಾಗಿವೆ. ಇದು ಹೆಚ್ಚು ಇಳುವರಿ ನಷ್ಟಕ್ಕೆ ಕಾರಣವಾಗಬಹುದು

ಶಿಫಾರಸುಗಳು

ಜೈವಿಕ ನಿಯಂತ್ರಣ

ನೆಮಟೋಡ್ಸ್ ನ ಹಲವಾರು ಜಾತಿಗಳು, ಪರಭಕ್ಷಕ (ಹುಳಗಳು, ಕೀಟಗಳು) ಹಾಗು ಪರಾವಲಂಬಿ ನೊಣಗಳು ಮತ್ತು ಕಣಜಗಳನ್ನು ಕೀಟ ಸಂಖ್ಯೆಯನ್ನು ನಿಯಂತ್ರಿಸಲು ಬಳಸಬಹುದು. ಉದಾಹರಣೆಗೆ, ಸೌತೆಕಾಯಿ ಜೀರುಂಡೆಯ ಸಂಖ್ಯೆಯು ಸಣ್ಣದಾಗಿದ್ದಾಗ ಟ್ಯಾಚಿನಿಡ್ ನೊಣ ಸೆಲೋಟೋರಿಯಾ ಡಿಯಾಬ್ರೊಟಿಕೆಯನ್ನು ಸೇರಿಸಬಹುದು. ಬೆವೇರಿಯಾ ಬಾಸ್ಸಿಯಾನ ಮತ್ತು ಮೆಟಾರ್ಜಿಯಾಮ್ ಅನಿಸೊಪ್ಲಿಯಾ ಎಂಬ ಶಿಲೀಂಧ್ರಗಳು ಡೈಯಾಬ್ರಾಟಿಕದ ಕೆಲವು ಪ್ರಭೇದಗಳ ಮೇಲೆ ಸ್ವಾಭಾವಿಕವಾಗಿ ಆಕ್ರಮಣ ಮಾಡುತ್ತವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಮೊದಲು ಪರಿಗಣಿಸಿ. ಹಾನಿಕಾರಕ ಸಂಖ್ಯೆಯಲ್ಲಿರುವ ಸೌತೆಕಾಯಿ ಜೀರುಂಡೆಗಳಿಗೆ ಸಾಮಾನ್ಯವಾಗಿ ಕೀಟನಾಶಕಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಜೀರುಂಡೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರೆ ಮಾತ್ರ ಅಸೆಟಾಮೈಪ್ರಿಡ್ ಅಥವಾ ಫೆಂಡ್ರೋಪಾಥರಿನ್ ಗುಂಪಿನ ಕೀಟನಾಶಕಗಳನ್ನು ಬಳಸಬೇಕು. ಆದರೆ ಪರಿಸರದ ಸಮಸ್ಯೆಗಳನ್ನೂ ಗಣನೆಗೆ ತೆಗೆದುಕೊಳ್ಳಿ. ಪೈರೆಥ್ರಾಯ್ಡ್ ಗಳೊಂದಿಗಿನ ಮಣ್ಣಿನ ಚಿಕಿತ್ಸೆಗಳು ಮತ್ತೊಂದು ಆಯ್ಕೆಯಾಗಿದೆ.

ಅದಕ್ಕೆ ಏನು ಕಾರಣ

ಡಯಾಬ್ರೊಟಿಕಾ ಪ್ರಭೇದ, ಕೀಟಗಳ ಗುಂಪಾಗಿದ್ದು, ಇವು ಸಾಮಾನ್ಯ ಬೀನ್ಸ್ ಮತ್ತು ಮೆಕ್ಕೆ ಜೋಳದಂತಹ ಹಲವಾರು ಪ್ರಮುಖ ಕೃಷಿ ಬೆಳೆಗಳ ಮೇಲೆ ದಾಳಿ ಮಾಡುತ್ತವೆ. ಸೌತೆಕಾಯಿ ಜೀರುಂಡೆಗಳು ಸಾಮಾನ್ಯವಾಗಿ ಹಳದಿ-ಹಸಿರು ಬಣ್ಣದಲ್ಲಿರುತ್ತವೆ ಮತ್ತು ಅವುಗಳ ಅಂಶಗಳನ್ನು ಅವಲಂಬಿಸಿ ಎರಡು ಗುಂಪುಗಳಾಗಿ ಅವುಗಳನ್ನು ವಿಂಗಡಿಸಲಾಗುತ್ತದೆ. ಮೊದಲ ಗುಂಪಿನ ಕೀಟಗಳಲ್ಲಿ ಮೂರು ಕಪ್ಪು ಪಟ್ಟೆಗಳು ಹಿಂಭಾಗದಲ್ಲಿ ಇರುತ್ತವೆ. ಎರಡನೆಯದರಲ್ಲಿ ಹನ್ನೆರಡು ಕಪ್ಪು ಕಲೆಗಳು ಹಿಂಭಾಗದಲ್ಲಿರುತ್ತವೆ. ವಯಸ್ಕ ಕೀಟಗಳು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಳಿಗಾಲವನ್ನು ಕಳೆಯುತ್ತವೆ ಮತ್ತು ಮಧ್ಯ ವಸಂತಕಾಲದಲ್ಲಿ ಉಷ್ಣತೆ ಹೆಚ್ಚಲು ಆರಂಭಿಸಿದಾಗ ಸಕ್ರಿಯವಾಗುತ್ತವೆ. ತಮ್ಮ ಆಶ್ರಯದಾತ ಸಸ್ಯಗಳ ಬಳಿ ಮಣ್ಣಿನ ಬಿರುಕುಗಳಲ್ಲಿ, ಹೆಣ್ಣು ಕೀಟಗಳು ಗುಂಪಾಗಿ ಮೊಟ್ಟೆಗಳನ್ನು ಇಡುತ್ತವೆ. ಮರಿಹುಳುಗಳು ಮೊದಲಿಗೆ ಬೇರುಗಳನ್ನು ತಿನ್ನುತ್ತವೆ, ನಂತರ ಚಿಗುರನ್ನೂ ತಿನ್ನುತ್ತವೆ. ವಯಸ್ಕ ಕೀಟಗಳು ಎಲೆಗಳು, ಪರಾಗ ಮತ್ತು ಹೂವುಗಳನ್ನು ತಿನ್ನುತ್ತವೆ. ಪರಿಸರ ಪರಿಸ್ಥಿತಿಗಳ ಆಧಾರದ ಮೇಲೆ ಮೊಟ್ಟೆಯಿಂದ ವಯಸ್ಕ ಕೀಟದವರೆಗಿನ ಬೆಳವಣಿಗೆಯು ಸುಮಾರು ಒಂದು ತಿಂಗಳು ತೆಗೆದುಕೊಳ್ಳುತ್ತದೆ. ತಾಪಮಾನ ಹೆಚ್ಚಾಗುತ್ತಿದ್ದಂತೆ, ಬೆಳವಣಿಗೆ ಸಮಯ ಕಡಿಮೆಯಾಗುತ್ತದೆ. ಸೌತೆಕಾಯಿ ಜೀರುಂಡೆಗಳು ಉತ್ತಮ ನೀರು ಸರಬರಾಜು ಮತ್ತು ತೇವಾಂಶದ ಪ್ರದೇಶಗಳನ್ನು ಇಷ್ಟಪಡುತ್ತವೆ ಮತ್ತು ಶಾಖವನ್ನು ಇಷ್ಟಪಡುವುದಿಲ್ಲ.


ಮುಂಜಾಗ್ರತಾ ಕ್ರಮಗಳು

  • ತಡವಾಗಿ ನೆಡುವ ಮೂಲಕ ಕೆಟ್ಟ ಹಾನಿಯನ್ನು ತಪ್ಪಿಸಬಹುದು.
  • ಕಲ್ಲಂಗಡಿ, ಕುಂಬಳಕಾಯಿ ಅಥವಾ ಬೀನ್ಸ್ ಗಳಂತಹ ಪರ್ಯಾಯ ಆಶ್ರಯದಾತ ಸಸ್ಯಗಳ ಹತ್ತಿರ ನಿಮ್ಮ ಬೆಳೆಗಳನ್ನು ನಾಟಿ ಮಾಡುವುದನ್ನು ತಪ್ಪಿಸಿ.
  • ಮಣ್ಣುಗಳನ್ನು ಮುಚ್ಚಲು ಮತ್ತು ಜೀರುಂಡೆಯ ಜೀವನ ಚಕ್ರವನ್ನು ಮುರಿಯಲು ಮಲ್ಚ್ ಬಳಸಿ.
  • ಜೀರುಂಡೆಗಳನ್ನು ನಿವಾರಿಸಲು ರಕ್ಷಣಾತ್ಮಕ ಪದರವಾಗಿ ಕಯೋಲಿನ್ ಮಣ್ಣನ್ನು ಬಳಸಿ.
  • ಕೀಟಗಳನ್ನು ನಿಯಂತ್ರಿಸಲು ಮತ್ತು ಅವುಗಳನ್ನು ಗುಂಪಾಗಿ ಹಿಡಿಯಲು ಬಲೆಗಳನ್ನು ಬಳಸಿ.
  • ಸುಗ್ಗಿಯ ನಂತರ ಅವಶೇಷಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ನಾಶಮಾಡಿ.
  • ಆಶ್ರಯದಾತವಲ್ಲದ ಸಸ್ಯಗಳೊಂದಿಗೆ ಬೆಳೆ ಸರದಿ ಯೋಜನೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ