ಕಬ್ಬು

ಕಬ್ಬು ಕೊರಕ

Diatraea saccharalis

ಕೀಟ

ಸಂಕ್ಷಿಪ್ತವಾಗಿ

  • ಕಬ್ಬು ಕೊರಕವು ಕಬ್ಬಿನ ಕಾಂಡಗಳ ಅಂಗಾಂಶಗಳನ್ನು ತಿನ್ನುತ್ತದೆ.
  • ರಂಧ್ರಗಳು ಅಂತಿಮವಾಗಿ ಸಸ್ಯದ ಎಲ್ಲಾ ಭಾಗಗಳಲ್ಲಿ ಕಂಡುಬರುತ್ತವೆ.
  • ಬಲಿತ ಸಸ್ಯಗಳು ಬಾಗುತ್ತವೆ ಅಥವಾ ಮುರಿದು ಬೀಳುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಕಬ್ಬು

ರೋಗಲಕ್ಷಣಗಳು

ಕಾಂಡಗಳ ಮೇಲೆ ಲಾರ್ವಾಗಳ ಆಹಾರ ಚಟುವಟಿಕೆಯಿಂದ "ಪಿನ್ ರಂಧ್ರಗಳ" ರೀತಿಯ ತೂತುಗಳು ಮತ್ತು ಹಾನಿ ಉಂಟಾಗುತ್ತವೆ. ಎಳೆ ಸಸ್ಯಗಳಲ್ಲಿ ಕಾಂಡಗಳ ಆಂತರಿಕ ಅಂಗಾಂಶವನ್ನು ತಿನ್ನಲಾಗುತ್ತದೆ, ಇದರಿಂದ ಡೆಡ್ ಹಾರ್ಟ್ ಎಂಬ ರೋಗಲಕ್ಷಣ ಉಂಟಾಗುತ್ತದೆ. ಹಳೆಯ ಸಸ್ಯಗಳ ಮೇಲೆ ಮರಿ ಲಾರ್ವಾಗಳು ಎಲೆಯ ಪೊರೆ ಮತ್ತು ಆಕ್ಸಿಲ್ ಒಳಗೆ ಕೊರೆದುಕೊಂಡು ಹೋಗುತ್ತವೆ. ಲಾರ್ವಾಗಳು ಬೆಳೆದಂತೆ, ಅವು ಕಾಂಡದೊಳಗೆ ಸುರಂಗ ಕೊರೆಯಲು ಪ್ರಾರಂಭಿಸುತ್ತವೆ. ತೀವ್ರವಾಗಿ ಸೋಂಕಿತ ಸಸ್ಯಗಳು ದುರ್ಬಲ ಮತ್ತು ಕುಂಠಿತಗೊಳ್ಳುತ್ತವೆ ಮತ್ತು ಹವಾಮಾನ ಪರಿಸ್ಥಿತಿಗಳು ಅಹಿತಕರವಾದಾಗ ಅಂತಿಮವಾಗಿ ಸಸ್ಯಗಳು ಮುರಿದು ಬೀಳುತ್ತವೆ ಅಥವಾ ಬಾಗುತ್ತವೆ. ಅಂತಿಮವಾಗಿ ಸಸ್ಯದ ಮೇಲೆ ರಂಧ್ರಗಳು ಕಂಡುಬರುತ್ತವೆ ಮತ್ತು ರಸದ ಗುಣಮಟ್ಟ ಮತ್ತು ಇಳುವರಿಯು ಕಡಿಮೆಯಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕನಿಷ್ಠ 27-100% ರಷ್ಟು ಕೊರಕದ ಮೊಟ್ಟೆಗಳನ್ನು ಕೊಲ್ಲಲು ಕಬ್ಬಿನ ಸಸಿಗಳನ್ನು 25.6 °C ತಾಪಮಾನದ ನೀರಿನಲ್ಲಿ 72 ಗಂಟೆಗಳ ಕಾಲ ನೆನೆಸಿ. ಈ ಸಂಸ್ಕರಣೆಯ ನಂತರ ಮೊಳಕೆಯೊಡೆಯುವುದಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಮತ್ತು ನೆನೆಸಿದ ಕಬ್ಬು ಚೆನ್ನಾಗಿ ಬೆಳೆದು ನಿಲ್ಲುತ್ತದೆ. D. ಸ್ಯಾಚರಾಲಿಸ್ ಸಂಖ್ಯೆಯನ್ನು ಹಲವಾರು ಪ್ಯಾರಾಸಿಟೈಡ್ ಗಳು ಮತ್ತು ಪರಭಕ್ಷಕಗಳಿಂದ ನಿಯಂತ್ರಿಸಬಹುದು. ಇರುವೆಗಳನ್ನು ಬಳಸಿ, ವಿಶೇಷವಾಗಿ ಕೆಂಪು ಬೆಂಕಿ ಇರುವೆಯಾದ ಸೊಲೆನೋಪ್ಸಿಸ್ ಇನ್ವಿಕ್ಟಾ, ಅಥವಾ ಮೊಟ್ಟೆಯ ಸಂಖ್ಯೆಯನ್ನು ಕಡಿಮೆ ಮಾಡಲು ಪರಾವಲಂಬಿ ಕಣಜವಾದ ಟ್ರೈಕೊಗ್ರಾಮದ ಜಾತಿಗಳನ್ನು ಬಳಸಿಕೊಳ್ಳಿ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಆರ್ಥಿಕ ಹಾನಿಯನ್ನು ಉಂಟುಮಾಡುವಷ್ಟು ಅಧಿಕ ಸಂಖ್ಯೆಯಲ್ಲಿರುವ ಕೀಟಗಳನ್ನು ಗುರುತಿಸಲು ಗದ್ದೆಗಳನ್ನು ಪರಿಶೀಲಿಸಿ. ಕ್ಲೋರಂಟ್ರಾನಿಲಿಪ್ರೋಲ್, ಫ್ಲುಬೆಂಡೈಮೈಡ್ ಅಥವಾ ಕೀಟಗಳ ಬೆಳವಣಿಗೆಯ ನಿಯಂತ್ರಕಗಳನ್ನು ಒಳಗೊಂಡಿರುವ ಕೀಟನಾಶಕಗಳನ್ನು ಹಾಕಿ ಮತ್ತು ದೊಡ್ಡ ಲಾರ್ವಾಗಳು ಕಾಂಡಗಲ ಒಳಗೆ ಕೊರೆದುಕೊಂಡು ಹೋಗುವುದನ್ನು ತಡೆಗಟ್ಟಿ.

ಅದಕ್ಕೆ ಏನು ಕಾರಣ

ಕೀಟಗಳ ಜೀವನ ಚಕ್ರದ ಅವಧಿಯನ್ನು ತಾಪಮಾನವು ನಿರ್ಧರಿಸುತ್ತದೆ. ಲಾರ್ವಾ ಬೆಳವಣಿಗೆಗೆ ಸಾಮಾನ್ಯವಾಗಿ ಬೆಚ್ಚಗಿನ ವಾತಾವರಣದಲ್ಲಿ 25 ರಿಂದ 30 ದಿನಗಳವರೆಗಿನ ಕಾಲ ಬೇಕಾಗುತ್ತದೆ ಮತ್ತು ತಂಪಾದ ವಾತಾವರಣದಲ್ಲಿ ಸುಮಾರು ಐದು ದಿನಗಳ ಕಾಲ ಅಗತ್ಯವಿರುತ್ತದೆ. ಚಳಿಗಾಲದಲ್ಲಿ ಹೆಚ್ಚಿನ ಮಳೆ ಮತ್ತು ಕಡಿಮೆ ಉಷ್ಣತೆ ಕೊರಕದ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಬೆಚ್ಚಗಿನ ತಾಪಮಾನ ಮತ್ತು ಕಡಿಮೆ ಮಳೆಯು ಕೀಟ ಬದುಕುಳಿಯಲು ಮತ್ತು ಅಭಿವೃದ್ಧಿಯಾಗಲು ಅನುಕೂಲಕರ. ಕಡಿಮೆ ಬೇಸಾಯವಿರುವ ಕೃಷಿ ಅಭ್ಯಾಸವು ಸೋಂಕಿತ ಬೆಳೆ ಉಳಿಕೆಗಳಲ್ಲಿ ಕೀಟವು ಚಳಿಗಾಲವನ್ನು ಕಳೆಯಲು ಅನುವು ಮಾಡಿಕೊಡುತ್ತದೆ, ಹಾಗೆಯೇ ನೈಸರ್ಗಿಕ ಪರಭಕ್ಷಕಗಳ ಕೊರತೆಯೂ ಸಹ ಅನುಕೂಲಕರ. ಅತ್ಯಧಿಕ ಮಟ್ಟದ ಸಾರಜನಕ ಫಲೀಕರಣವು ಸಹ ಇವುಗಳ ಉಳಿವಿಗೆ ಅನುಕೂಲಕರವಾಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸಹಿಷ್ಣು ಮತ್ತು ನಿರೋಧಕ ಪ್ರಭೇದಗಳನ್ನು ಬಳಸಿ.
  • ಕೊರೆಕದಿಂದ ಹಾನಿಗೊಳಗಾದ ಕಬ್ಬಿನ ಸಸಿಯನ್ನು ಬಳಸಬೇಡಿ.
  • ಅವುಗಳು ಬದುಕುಳಿಯುವುದನ್ನು ಕಡಿಮೆ ಮಾಡಲು ಮತ್ತು ಕೊರೆತದಿಂದುಂಟಾದ ಗಾಯವನ್ನು ಕಡಿಮೆ ಮಾಡಲು ಸಿಲಿಕಾನ್ ಅನ್ನು ಮಣ್ಣಿಗೆ ಸೇರಿಸಿ.
  • ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕೊಯ್ಲಿಗೆ ಮುಂಚೆ ಕಬ್ಬನ್ನು ಸುಟ್ಟು ಹಾಕಿ.
  • ಕೊಯ್ಲಿನ ನಂತರ ಸುಡುವುದು, ಡಿಸ್ಕಿಂಗ್ ಅಥವಾ ನೀರು ಹರಿಸುವ ಮೂಲಕ ಗದ್ದೆಯಲ್ಲಿರುವ ಬೆಳೆ ಉಳಿಕೆಗಳನ್ನು ತ್ವರಿತವಾಗಿ ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ