Ostrinia nubilalis
ಕೀಟ
ಲಾರ್ವಾಗಳು ಸಸ್ಯದ ಎಲ್ಲಾ ವೈಮಾನಿಕ ಭಾಗಗಳಿಗೆ ಹಾನಿಮಾಡುತ್ತವೆ. ಅವು ಮೊದಲು ಎಲೆಗಳು ಅಥವಾ ನಡುದಿಂಡುಗಳನ್ನು ತಿನ್ನುತ್ತವೆ ಮತ್ತು ಸಸ್ಯದ ತಳಭಾಗದಿಂದ ಕಾಂಡಕ್ಕೆ ಕೊರೆದುಕೊಂಡು ಹೋಗಿ, ನಂತರ ರೇಷ್ಮೆ ಎಳೆ ಮತ್ತು ಜೊಂಡುಗಳನ್ನು ತಿನ್ನುತ್ತವೆ. ಅವು ನೀರು ಮತ್ತು ಪೋಷಕಾಂಶಗಳನ್ನು ಸಾಗಿಸುವ ಆಂತರಿಕ ಅಂಗಾಂಶಗಳನ್ನು ನಾಶಪಡಿಸುತ್ತವೆ, ಮತ್ತು ಇದರಿಂದ ಕುಂಠಿತಗೊಂಡ ಬೆಳವಣಿಗೆ, ಕಡಿಮೆ ಎಲೆಗಳು ಮತ್ತು ಉತ್ಪಾದಕತೆಯು ಕಡಿಮೆಯಾಗುತ್ತದೆ. ಕಾಂಡದ ತೋಡು ಸಸ್ಯದ ಹಣ್ಣು-ಹೂವು ಬೆಳೆಸುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ ಮತ್ತು ನೀರು ನಿಲ್ಲುವಂತೆ ಮಾಡುತ್ತದೆ. ಜೊಂಡುಗಳಲ್ಲಿ ಗುಂಡಾದ ತೂತುಗಳು, ಒದ್ದೆಯಾದ ಹಿಕ್ಕೆಗಳು ಮತ್ತು ಹಾನಿಗೊಳಗಾದ ಕಾಳುಗಳಿರುತ್ತವೆ ಮತ್ತು ಅವುಗಳು ಉದುರಬಹುದು. ರಂಧ್ರಗಳಲ್ಲಿ ಅವಕಾಶವಾದಿ ಶಿಲೀಂಧ್ರಗಳು ಸೇರಿಕೊಳ್ಳುತ್ತವೆ ಮತ್ತು ಕೊಳೆತವುನ್ನುಂಟುಮಾಡುತ್ತವೆ. ಈ ಶಿಲೀಂಧ್ರಗಳಿಂದ ಉತ್ಪತ್ತಿಯಾಗುವ ಜೀವಾಣುಗಳು ಇಳುವರಿಯ ಗುಣಮಟ್ಟವನ್ನು ಮತ್ತಷ್ಟು ಕೆಡಿಸುತ್ತವೆ.
ಪರಭಕ್ಷಕ, ಪ್ಯಾರಸಿಟಾಯ್ಡ್ ಗಳು ಮತ್ತು ಜೈವಿಕ ಕೀಟನಾಶಕಗಳನ್ನು ಬಳಸಿ ಯುರೋಪಿಯನ್ ಮೇಜ್ ಬೋರರ್ ಸಂಖ್ಯೆಯನ್ನು ನಿಯಂತ್ರಿಸಬಹುದು. ಸ್ಥಳೀಯ ಪರಭಕ್ಷಕಗಳೆಂದರೆ, ಇನ್ಸಿಡಿಯಸ್ ಫ್ಲವರ್ ಬಗ್ಸ್ (ಒರಿಯಸ್ ಇನ್ಸಿಡಿಯಸ್), ಗ್ರೀನ್ ಲೇಸ್ವಿಂಗ್ಸ್ ಮತ್ತು ಹಲವಾರು ಲೇಡಿ ಬರ್ಡ್ ಗಳು. ಚಳಿಗಾಲದಲ್ಲಿ ಅಡಗಿಕೊಳ್ಳುವ ಲಾರ್ವಾಗಳ 20 ರಿಂದ 30% ನಷ್ಟು ಸಂಖ್ಯೆಯನ್ನು ಪಕ್ಷಿಗಳು ಸಹ ತೊಡೆದುಹಾಕುತ್ತವೆ. ಪ್ಯಾರಾಸಿಟಾಯ್ಡ್ ಗಳಾವುವೆಂದರೆ, ಲಿಡೆಲ್ಲಾ ಥಾಂಪ್ಸೋನಿ ಎಂಬ ಟ್ಯಾಚಿನಿಡ್ ನೊಣ ಮತ್ತು ಇರಿಬರಸ್ ಟೆರೆಬ್ರನ್ಸ್ , ಸಿಂಪೈಸಿಸ್ ವಿರಿದುಲಾ ಮತ್ತು ಮ್ಯಾಕ್ರೋಸೆಂಟ್ರಿಸ್ ಗ್ರಾಂಡಿ ಜಾತಿಗಳ ಕಣಜಗಳು. ಸ್ಪೈನೋಸ್ಯಾಡ್ ಅಥವಾ ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಆಧಾರಿತ ಜೈವಿಕ-ಕೀಟನಾಶಕಗಳು ಸಹ ಕೆಲಸ ಮಾಡುತ್ತವೆ.
ಮೇಜ್ ಬೋರರ್ ಗಳ ಸಂಖ್ಯೆಯನ್ನು ನಿಯಂತ್ರಿಸಲು ಹಲವಾರು ಕೀಟನಾಶಕಗಳನ್ನು ಬಳಸಬಹುದು. ಅದನ್ನು ಸಮಯಕ್ಕೆ ಸರಿಯಾಗಿ ಹಾಕಬೇಕಾಗುತ್ತದೆ. ಹರಳು ಮಾದರಿಯ ನಾಶಕಗಳಿಗೆ ಆದ್ಯತೆ ನೀಡಲಾಗುತ್ತದೆ. ಸೈಫ್ಲುಥ್ರೈನ್, ಎಸ್ಫೆನ್ವಾಲೆರೇಟ್, ಹೊಂದಿರುವ ಉತ್ಪನ್ನಗಳನ್ನು ಎಲೆಗಳು ಮತ್ತು ಬೆಳೆಯುತ್ತಿರುವ ಜೊಂಡುಗಳ ಮೇಲೆ ಸಿಂಪಡಿಸಬಹುದು. ಈ ಉದ್ದೇಶಕ್ಕಾಗಿ ಸಂಶ್ಲೇಷಿತ ಪೈರೆಥ್ರಾಯ್ಡ್ಗಳನ್ನು ಸಹ ಬಳಸಬಹುದು.
ಲಾರ್ವಾಗಳು ಮಣ್ಣಿನಲ್ಲಿರುವ ಬೆಳೆಯ ಉಳಿಕೆಗಳಲ್ಲಿ ಚಳಿಗಾಲವನ್ನು ಕಳೆಯುತ್ತವೆ ಮತ್ತು ವಸಂತಕಾಲದಲ್ಲಿ ಹೊರಹೊಮ್ಮುತ್ತವೆ. ಯುರೋಪಿಯನ್ ಮೇಜ್ ಬೋರರ್ ನ ಪ್ರೌಢ ಹುಳುಗಳು ರಾತ್ರಿ ಸಮಯದಲ್ಲಿ ಸಕ್ರಿಯವಾಗಿರುತ್ತವೆ. ಗಂಡು ಹುಳುಗಳಿಗೆ ಕಂದು ನಸುಬಣ್ಣದ ತೆಳುವಾದ ದೇಹವಿರುತ್ತದೆ ಮತ್ತು ಹಳದಿ ಬಣ್ಣದ ದಂತುರ ಮಾದರಿಯ ಕಲೆಗಳೊಂದಿಗೆ ಕಂದು ಬಣ್ಣದ ರೆಕ್ಕೆಗಳಿರುತ್ತವೆ. ಹೆಣ್ಣು ಹುಳುಗಳು ತೆಳುವಾಗಿರುತ್ತವೆ, ಅವು ಹಳದಿ ಮಿಶ್ರಿತ ಕಂದು ಬಣ್ಣದ್ದಾಗಿದ್ದು, ರೆಕ್ಕೆಗಳ ಅಗಲಕ್ಕೂ ಹಲವಾರು ಗಾಢವಾದ ಝಿಗ್ ಝಾಗ್ ಮಾದರಿಯ ಪಟ್ಟೆಗಳು ಇರುತ್ತವೆ. ಸಾಮಾನ್ಯವಾಗಿ ಗಾಳಿಯು ಶಾಂತವಾಗಿದ್ದು ತಾಪಮಾನವು ಬೆಚ್ಚಗಾಗಿದ್ದಾಗ ಅವು ಎಲೆಗಳ ಕೆಳಭಾಗದಲ್ಲಿ ಬಿಳಿ ಮೊಟ್ಟೆಯ ರಾಶಿಯನ್ನು ಇಡುತ್ತವೆ . ಮರಿಹುಳುಗಳು ಗುಲಾಬಿ ಬಣ್ಣ ಅಥವಾ ಕಂದುಬಣ್ಣ ಅಥವಾ ಕೊಳಕಿರುವ ಬಿಳಿ ಬಣ್ಣದ್ದಾಗಿರುತ್ತವೆ ಮತ್ತು ಅವುಗಳಿಗೆ ಮೃದುವಾದ, ಕೂದಲು ಇಲ್ಲದ ಚರ್ಮವಿದ್ದು ಅವುಗಳ ದೇಹದ ಮೇಲೆ ಗಾಢವಾದ ಕಲೆಗಳು ಇರುತ್ತವೆ. ಅವುಗಳ ತಲೆಯು ಕಡು ಕಂದು ಬಣ್ಣದ್ದಾಗಿರುತ್ತವೆ. ಅವು ಕಳೆಗಳನ್ನು ತಿನ್ನುತ್ತವೆ ಮತ್ತು ಸೋಯಾಬೀನ್, ಮೆಣಸು ಮತ್ತು ಟೊಮೆಟೊಗಳಂತಹ ಪರ್ಯಾಯ ಹೋಸ್ಟ್ಗಳನ್ನು ಸಹ ತಿನ್ನುತ್ತವೆ. ಕಡಿಮೆ ತೇವಾಂಶ, ರಾತ್ರಿಯ ವೇಳೆ ಕಡಿಮೆ ತಾಪಮಾನ, ಮತ್ತು ಭಾರೀ ಮಳೆಯು ಮೊಟ್ಟೆ ಇಡುವುದಕ್ಕೆ ಮತ್ತು ಕೊರಕವು ಬದುಕುವುದಕ್ಕೆ ಹಾನಿಕಾರಕವಾದ ಸ್ಥಿತಿಗಳು.