Aspidiotus nerii
ಕೀಟ
ಒಲಿಯಾಂಡರ್ ಸ್ಕೇಲ್ಗಳು ಹೋಸ್ಟ್(ಆಶ್ರಯದಾತ)ಸಸ್ಯದ ಅನೇಕ ಭಾಗಗಳನ್ನು ತಿನ್ನುತ್ತವೆ ಮತ್ತು ಅವುಗಳ ರೋಗಲಕ್ಷಣಗಳು ಸಾಮಾನ್ಯವಾಗಿ ದಾಳಿಯ ತೀವ್ರತೆಗೆ ಸಂಬಂಧಿಸಿರುತ್ತವೆ. ಸೋಂಕುವಿಕೆಯ ಮೊದಲನೆಯ ಚಿಹ್ನೆಗಳೆಂದರೆ ಹೋಸ್ಟ್ ನ ಕಾಂಡಗಳ, ಎಲೆಗಳ ಮತ್ತು ಹಣ್ಣುಗಳ ಮೇಲೆ ಅನೇಕ ಬಿಳಿಯ ಸ್ಕೇಲ್ಗಳ ಕವಚಗಳ (ಸುಮಾರು 2 ಎಂಎಂ ವ್ಯಾಸದ) ಉಪಸ್ಥಿತಿ. ಅವು ತಿನ್ನುವಾಗ, ಸಿಹಿ ಅಂಟನ್ನು ಉತ್ಪಾದಿಸುತ್ತವೆ, ಇದು ಹಣ್ಣುಗಳು ಮತ್ತು ಎಲೆಗಳ ಮೇಲೆ ಬಿದ್ದು, ಬೂದಿಯಾದ ಮೋಲ್ದಿನ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ. ತೀವ್ರ ತೆರನಾದ ಸೋಂಕುವಿಕೆಗಳಲ್ಲಿ, ಎಲೆಗಳು ಬಾಡುತ್ತಿರುವ ಚಿಹ್ನೆಗಳನ್ನು ತೋರಿಸಬಹುದು ಮತ್ತು ಅಕಾಲಿಕವಾಗಿ ಉದುರಬಹುದು. ಚಿಗುರುಗಳು ಒಣಗಬಹುದು ಮತ್ತು ಹಣ್ಣುಗಳು ವಿರೂಪಗೊಳ್ಳಬಹುದು, ಇದು ಟೇಬಲ್ ಆಲಿವ್ ಗಳಲ್ಲಿ ಸಾಮಾನ್ಯವಾಗಿದೆ. ಒಟ್ಟಾರೆ, ಮರವು ಕಳಪೆ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು ಇಳುವರಿ ಹಾಗು ಗುಣಮಟ್ಟದ ಮೇಲೆ ಪರಿಣಾಮವಾಗಬಹುದು.
ಎ. ನೆರಿಯ ಸ್ವಾಭಾವಿಕ ಶತ್ರುಗಳೆಂದರೆ, ಪ್ಯಾರಾಸಿಟಾಯಿಡ್ ಕಣಜಗಳಾದ ಅಫಿಟಸ್ ಮೇಲಿನಸ್ ಮತ್ತು ಅಫಿಟಸ್ ಚಿಲೆನ್ಸಿಸ್ ಹಾಗು ಕಾಕಿನೆಲಿಸ್ ಪರಭಕ್ಷಕಗಳಾದ ಚಿಲೋಕೋರಸ್ ಬೈಪುಸ್ತುಲೆಟಸ್, ರೈಝೋಬಿಯಾಸ್ ಲೊಫಾಂಟೆ, ಚಿಲೋಕೋರಸ್ ಕುವೆನೆ. ಅತಿ ಬಿಸಿಲಿರುವ ಸ್ಥಳಗಳಲ್ಲಿನ, ದೊಡ್ಡ ಪ್ರಮಾಣದ ಸ್ಕೇಲ್ ಸೋಂಕುವಿಕೆಗಳನ್ನು ನಿಯಂತ್ರಿಸುವಲ್ಲಿ ಚಿಲೋಕೋರಸ್ ಕುವೆನೆ ಅತಿ ಯಶಸ್ವಿಯಾಗಿದೆ. ಸಸ್ಯ ತೈಲಗಳು, ಸಸ್ಯ ಸಾರಗಳು, ಕೊಬ್ಬಿನಾಮ್ಲಗಳು ಮತ್ತು ಪೈರಿಥ್ರಿನ್ಗಳನ್ನು ಆಧರಿದ ಕಡಿಮೆ ಸಾಮರ್ಥ್ಯವುಳ್ಳ ಸಾವಯವ ಕೀಟನಾಶಕಗಳನ್ನೂ ಸಹ ಬಳಸಬಹುದು. ಇವುಗಳನ್ನು ಆಗಾಗ್ಗೆ ಹಾಕಬೇಕಾಗಬಹುದು ಮತ್ತು ಇವನ್ನು ಎಲೆಗಳ ಕೆಳಭಾಗಕ್ಕೆ ಹಾಕಬೇಕಾಗುತ್ತದೆ.
ಯಾವಾಗಲೂ ಲಭ್ಯವಿದ್ದಲ್ಲಿ, ಜೈವಿಕ ನಿಯಂತ್ರಣದ ಜೊತೆ, ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸಕ್ರಿಯ ಪದಾರ್ಥಗಳಾದ ಡೆಲ್ಟಾಮೆತ್ರಿನ್, ಲ್ಯಾಂಬ್ಡಾ-ಸೈಹಾಲೋಥ್ರಿನ್ ಅಥವಾ ಸೈಪರ್ಮೆತ್ರಿನ್ ಇರುವ ಸಂಪರ್ಕ ಸಿಂಪರಣೆಗಳನ್ನು ಎಲೆಗಳ ಕೆಳಭಾಗಕ್ಕೆ ಚೆನ್ನಾಗಿ ಹಾಕಿದಲ್ಲಿ ಅವು ಸ್ವಲ್ಪ ಮಟ್ಟಿಗೆ ನಿಯಂತ್ರಣವನ್ನು ಮಾಡಬಲ್ಲವು. ವ್ಯವಸ್ಥಿತ ಕೀಟನಾಶಕವಾದ ಅಸಿಟಾಮಿಪ್ರಿಡ್, ಸಸ್ಯದ ಅಂಗಾಶಗಳಿಂದ ಹೀರಲ್ಪಡುತ್ತದೆ ಮತ್ತು ಸ್ಕೇಲ್ಗಳು ಆಹಾರ ಸೇವನೆ ಮಾಡಿದಂತೆ ಅವು ಇದನ್ನು ಒಳಗೆ ತೆಗೆದುಕೊಳ್ಳುತ್ತವೆ. ಸತ್ತ ಸ್ಕೇಲ್ಗಳು ಎಲೆಗಳಿಗೆ ಮತ್ತು ಕಾಂಡಗಳಿಗೆ ಗಟ್ಟಿಯಾಗಿ ಕಚ್ಚಿಕೊಂಡು ಇರಬಹುದೆಂಬುದನ್ನು ಗಮನಿಸಿ.
ರೋಗಲಕ್ಷಣಗಳು ಅಸ್ಪಿಡಿಯೋಟೇಸ್ ನೆರಿ ಎಂಬ ಒಲಿಯಾಂಡರ್ ಸ್ಕೇಲ್ನ ಆಹಾರ ಸೇವನೆಯ ಚಟುವಟಿಕೆಯಿಂದ ಉಂಟಾಗುತ್ತವೆ. ಪ್ರೌಢ ಸ್ಕೇಲ್ಗಳು ಚಪ್ಪಟೆಯಾಗಿರುತ್ತವೆ ಮತ್ತು ಅಂಡಾಕಾರದ್ದಾಗಿರುತ್ತವೆ. ಅವು ಸುಮಾರು 2 ಎಂಎಂ ಉದ್ದವಿರುತ್ತವೆ ಮತ್ತು ದ್ರವ್ಯಗಳನ್ನು ಹಿಮ್ಮೆಟ್ಟಿಸುವ ಬಿಳಿಯ, ಮೇಣದಂತಹ ಹೊದಿಕೆಯನ್ನು ಹೊಂದಿರುತ್ತವೆ. ಅಪ್ರೌಢ ಹಂತದಲ್ಲಿನವು (ತೆವಳುವವು) ಬಹು ಸಣ್ಣದಾಗಿರುತ್ತವೆ. ಇವೆರಡೂ ಎಲೆಗಳ ಕೆಳಭಾಗದಲ್ಲಿ ಮತ್ತು ಕಾಂಡಗಳ ಮೇಲೆ ಸಸ್ಯರಸವನ್ನು ಹೀರುತ್ತಾ ಹಕ್ಕಳೆ ಕಟ್ಟಿರುವುದನ್ನು ಕಾಣಬಹುದು. ಬಹು ದೂರದವರೆಗೂ ಸ್ಕೇಲ್ಗಳ ಚದುರುವಿಕೆಯು ಪ್ರಮುಖವಾಗಿ ಸೋಂಕಿತ ನಾಟಿ ವಸ್ತುವಿನ ಮೂಲಕ ಉಂಟಾಗುತ್ತದೆ. ಸ್ಥಳೀಯವಾಗಿ, ತೆವಳುವವು ಬಹು ಸಕ್ರಿಯವಾಗಿರುತ್ತವೆ ಮತ್ತು ಚಲಿಸುತ್ತಿರುತ್ತವೆ, ಅಕ್ಕ ಪಕ್ಕದ ರೆಂಬೆಗಳ ಮೂಲಕ ಮರಗಳು ಒಂದಕ್ಕೊಂದು ಸಂಪರ್ಕದಲ್ಲಿದ್ದಾಗ ಇವು ಒಂದು ಮರದಿಂದ ಮತ್ತೊಂದು ಮರಕ್ಕೆ ವಲಸೆ ಹೋಗುತ್ತವೆ. ಅವುಗಳ ಜೀವನ ಚಕ್ರದ ಮೇಲೆ ತಾಪಮಾನ ಮತ್ತು ಆರ್ದ್ರತೆಯು ಮುಖ್ಯವಾದ ಪರಿಣಾಮವನ್ನು ಹೊಂದಿವೆ. 30 ° ಸಿ ಯಲ್ಲಿ ತೆವಳುವ ಸ್ಕೇಲ್ಗಳ ಬೆಳವಣಿಗೆಗೆ ಸಂಪೂರ್ಣವಾಗಿ ಅಡ್ಡಿಯಾಗುತ್ತದೆ. ಆಲಿವ್ ಹಣ್ಣಿನ ತೋಟಗಳಲ್ಲಿ ಸಾಮಾನ್ಯವಾಗಿ ಎ. ನೆರಿ ಅನ್ನು ಸಣ್ಣ ಪ್ರಮಾಣದ ಕೀಟವೆಂದು ಪರಿಗಣಿಸಲಾಗುತ್ತದೆ. ಇನ್ನಿತರ ಹೋಸ್ಟ್ ಗಳೆಂದರೆ, ಸೇಬು, ಮಾವು, ತಾಳೆ ಮರ, ಒಲಿಯಾಂಡರ್ ಮತ್ತು ನಿಂಬೆ.