ಆಲಿವ್

ಆಲಿವ್ ತೊಗಟೆ ಜೀರುಂಡೆ

Phloeotribus scarabaeoides

ಕೀಟ

ಸಂಕ್ಷಿಪ್ತವಾಗಿ

  • ಮರದ ತೊಗಟೆಯ ಮೇಲೆ ಕೀಟ ಪ್ರವೇಶ ಬಿಂದುಗಳು.
  • ತೊಗಟೆಯ ಕೆಳಗೆ ಅಡ್ಡ ಸುರಂಗಗಳು.
  • ಕೊಂಬೆಗಳು ಮತ್ತು ರೆಂಬೆಗಳ ಮೇಲೆ ಆವರಿಸುವಿಕೆ ಮತ್ತು ಅವುಗಳ ಒಣಗುವಿಕೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಆಲಿವ್

ಆಲಿವ್

ರೋಗಲಕ್ಷಣಗಳು

ವಯಸ್ಕ ಹೆಣ್ಣು ಕೀಟಗಳು ಕಾರ್ಟೆಕ್ಸ್ ಮೂಲಕ ಬಹುಸಂಖ್ಯೆಯ ರಂಧ್ರಗಳನ್ನು ಕೊರೆಯುತ್ತವೆ ಮತ್ತು ಪ್ರವೇಶ ಬಿಂದುವಿನ ಎರಡೂ ಬದಿಯಲ್ಲಿ ನೇರವಾಗಿ ತೊಗಟೆಯ ಅಡಿಯಲ್ಲಿ ಒಂದು ಅಡ್ಡ ಸುರಂಗವನ್ನು ಅಗೆಯುತ್ತವೆ. ರೆಂಬೆ ಅಥವಾ ಕೊಂಬೆಯ ಒಳಗೆ, ಹೆಣ್ಣು 60 ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಯೊಡೆದು ಲಾರ್ವಾಗಳು ಹೊರಬರುತ್ತಿದ್ದಂತೆ, ಅವು ಸ್ಯಾಪ್ ವುಡ್ ನ ಮೇಲಕ್ಕೆ ಅಥವಾ ಕೆಳಕ್ಕೆ ಕೊರೆಯಲು ಪ್ರಾರಂಭಿಸುತ್ತವೆ. ಪ್ರವೇಶ ರಂಧ್ರಗಳ ಹತ್ತಿರ ತೊಗಟೆಯನ್ನು ಕತ್ತರಿಸಿ ತೆಗೆದಾಗ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಆಹಾರ ಚಟುವಟಿಕೆಯ ಹಾಸಿ ರೆಂಬೆ ಅಥವಾ ಕೊಂಬೆಯನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಆವರಿಸುತ್ತದೆ. ರಚನಾತ್ಮಕವಾಗಿ ದುರ್ಬಲಗೊಳಿಸುತ್ತದೆ ಮತ್ತು ನಾಳೀಯ ಅಂಗಾಂಶಗಳನ್ನು ಹಾನಿಗೊಳಿಸುತ್ತದೆ. ಲಾರ್ವಾಗಳು ಆಹಾರ ಗ್ಯಾಲರಿಗಳ ಒಳಗೆ ಕೋಶಾವಸ್ಥೆಗೆ ಹೋಗುತ್ತವೆ. ಆಲಿವ್ ಮರಗಳ ಜೊತೆಗೆ, ಜೀರುಂಡೆಗಳು ಒಲಿಯಾಂಡರ್ (ನೆರಿಯಮ್ ಒಲಿಯಾಂಡರ್), ಕೆಲವೊಮ್ಮೆ ಆ್ಯಶ್ (ಫ್ರಾಕ್ಸಿನಸ್ ಎಕ್ಸೆಲ್ಸಿಯರ್) ಮತ್ತು ಲೈಲಾಕ್ (ಸಿರಿಂಗಾ ವಲ್ಗ್ಯಾರಿಸ್) ಗಳನ್ನೂ ತಿನ್ನುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಹಲವಾರು ಕುಟುಂಬಗಳಿಗೆ ಸೇರಿದ ಅಸಂಖ್ಯಾತ ಪರಾವಲಂಬಿ ಕಣಜಗಳು ಜೀರುಂಡೆಗಳ ಮೇಲೆ ದಾಳಿಮಾಡುತ್ತದೆ. ಇಂತಹ ಜಾತಿಗಳಲ್ಲಿ ಒಂದನ್ನು ತೋಟದೊಳಗೆ ಪರಿಚಯಿಸುವ ಮತ್ತು ನಿಯಂತ್ರಿಸುವ ಪರಿಣಾಮಗಳು ವರ್ಷದಿಂದ ವರ್ಷಕ್ಕೆ ಬದಲಾಗಬಹುದು. ಆಲಿವ್ ತೊಗಟೆ ಜೀರುಂಡೆಗಳ ಪ್ರಬಲ ನೈಸರ್ಗಿಕ ಶತ್ರುವೆಂದರೆ ಪರಾವಲಂಬಿ ಕಣಜ ಚೀರೋಪಾಕಸ್ ಕ್ವಾಡ್ರಮ್. ಇದು ಕೀಟಗಳ ಸಂಖ್ಯೆಯನ್ನು 30-50% ರಷ್ಟು ಕಡಿಮೆ ಮಾಡುತ್ತದೆ. ಪೈರೆಥ್ರಾಯ್ಡ್‌ಗಳನ್ನು ಆಧರಿಸಿದ ಕೀಟನಾಶಕಗಳ ಬಳಕೆಯಿಂದ ನೈಸರ್ಗಿಕ ಶತ್ರುಗಳು ಪ್ರತಿಕೂಲ ಪರಿಣಾಮ ಬೀರಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಎಥಿಲೀನ್ ಆಧಾರಿತ ಫೆರೋಮೋನ್ ಬಲೆಗಳನ್ನು ಬಳಸಿಕೊಂಡು ಜೀರುಂಡೆಗಳನ್ನು ಆಕರ್ಷಿಸಲು ಶಿಫಾರಸು ಮಾಡಲಾಗಿದೆ. ಡೆಲ್ಟಾಮೆಥ್ರಿನ್‌ನಂತಹ ಪೈರೆಥ್ರಾಯ್ಡ್‌ಗಳನ್ನು ಆಧರಿಸಿದ ಕೀಟನಾಶಕಗಳ ಬಳಕೆಯು ಜೀರುಂಡೆಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ. ಸಂಯೋಜಿತ ವಿಧಾನದ ಭಾಗವಾಗಿ ಬಳಸಲಾಗುವ ಈ ಎರಡೂ ವಿಧಾನಗಳು ಉತ್ತಮ ಫಲಿತಾಂಶಗಳನ್ನು ತೋರಿಸುತ್ತವೆ.

ಅದಕ್ಕೆ ಏನು ಕಾರಣ

ಆಲಿವ್ ತೊಗಟೆ ಜೀರುಂಡೆಯಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಪರಿಸರದ ಪರಿಸ್ಥಿತಿಗಳನ್ನು ಆಧರಿಸಿ ವರ್ಷಕ್ಕೆ 2 ರಿಂದ 4 ತಲೆಮಾರುಗಳನ್ನು ಹೊಂದಿರುತ್ತದೆ. ವಸಂತಕಾಲ ಮತ್ತು ಬೇಸಿಗೆಯ ಆರಂಭದಲ್ಲಿ ವಯಸ್ಕ ಕೀಟಗಳು ಸಮರಿದ ಕೊಂಬೆಗಳಲ್ಲಿ ಮತ್ತು ಜೀವಂತ ಮರಗಳ ಬದಲಿಗೆ ಉರುವಲುಗಳಂತೆ ಜೋಡಿಸಲಾದ ಆಲಿವ್ ಮರಗಳ ಮೇಲೆ ಮೊಟ್ಟೆಗಳನ್ನು ಇಡುತ್ತವೆ. ಲಾರ್ವಾಗಳು ಕ್ಸೈಲೋಫಾಗಸ್ ಆಗಿರುತ್ತವೆ. ಅಂದರೆ ಅವು ಮರವನ್ನು ವಿಶೇಷವಾಗಿ ತಿನ್ನುತ್ತವೆ. ಕೀಟವು ಸ್ಥಳೀಯವಾಗಿ ಹೊಸ ಕೃಷಿ ಭೂಮಿಗೆ ಹಾರುವ ಸಾಧ್ಯತೆ ಇದೆ. ಸೋಂಕಿತ ಮರ ಅಥವಾ ಜೀವಂತ ಸಸ್ಯ ವಸ್ತುಗಳನ್ನು ಸಾಗಿಸುವಾಗಲೂ ಅದನ್ನು ದೂರದವರೆಗೆ ಸಾಗಿಸುವ ಸಾಧ್ಯತೆ ಇದೆ. ತೀವ್ರವಾದ ಮುತ್ತಿಕೊಳ್ಳುವಿಕೆಗಳು ಹೂವುಗಳು ಮತ್ತು ಆಲಿವ್ ಹಣ್ಣುಗಳ ಸಂಖ್ಯೆಯನ್ನು ಕಡಿಮೆಗೊಳಿಸಬಹುದು ಮತ್ತು ಪರಿಣಾಮವಾಗಿ ಹಾನಿಯು 70% ಬೆಳೆಯನ್ನು ಮುಟ್ಟಬಹುದು. ಅಂತಹ ಮುತ್ತಿಕೊಳ್ಳುವಿಕೆಯ 5 ವರ್ಷಗಳಲ್ಲಿ ಇಡೀ ಆಲಿವ್ ತೋಟಗಳೇ ಸಂಪೂರ್ಣವಾಗಿ ಅನುತ್ಪಾದಕವಾಗಬಹುದು. ಎಳೆಯ ಮರಗಳು ಹೆಚ್ಚು ಸೋಂಕಿಗೆ ಒಳಗಾಗುತ್ತವೆ. ಏಕೆಂದರೆ ಹಾನಿ ಕಾಂಡವನ್ನು ಆವರಿಸಿ ಹಿಚುಕುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸೋಂಕಿತ ಶಾಖೆಗಳನ್ನು ತೆಗೆದುಹಾಕಬೇಕು ಮತ್ತು ಸುಡಬೇಕು ಅಥವಾ ತೋಟಕ್ಕೆ ದೂರದಲ್ಲಿ ಆಳವಾಗಿ ಹೂಳಬೇಕು.
  • ಮರದ ಅವಶೇಷಗಳು ಮತ್ತು ಸಮರುವಿಕೆ ನಂತರದ ಉಳಿಕೆಗಳಿಗೂ ಇದೇ ವಿಧಾನವನ್ನು ಅನ್ವಯಿಸಬೇಕಾಗಿದೆ.
  • ಕೀಟಗಳ ಚಿಹ್ನೆಗಳಿಗಾಗಿ ಆಲಿವ್ ಮರಗಳನ್ನು ಮೇಲ್ವಿಚಾರಣೆ ಮಾಡಿ.
  • ಕೊಂಬೆಯ ಪ್ರತಿ ಮೀಟರ್‌ಗೆ 3 ಕ್ಕಿಂತ ಹೆಚ್ಚು ಕೀಟ ಇರುವಿಕೆಯ ಗುರುತು ಇದ್ದಾಗ, ಆಲಿವ್ ಇಳುವರಿಯಲ್ಲಿ ಇಳಿಕೆಯನ್ನು ನಿರೀಕ್ಷಿಸಬಹುದು.
  • ಆಲಿವ್ ತೊಗಟೆ ಜೀರುಂಡೆಯ ಪರ್ಯಾಯ ಆಶ್ರಯದಾತ ಸಸ್ಯಗಳು ಹಣ್ಣಿನ ತೋಟದ ಸಮೀಪದಲ್ಲಿ ಇಲ್ಲ ಎಂದು ಖಚಿತಪಡಿಸಿಕೊಳ್ಳಿ.
  • ತೊಗಟೆ ಜೀರುಂಡೆಗಳ ಕಡೆಗೆ ಮರದ ನೈಸರ್ಗಿಕ ಪ್ರತಿರೋಧವನ್ನು ಹೆಚ್ಚಿಸಲು ಸಮತೋಲಿತ ಫಲವತ್ತತೆಯನ್ನು ಅನುಸರಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ