ಆಲಿವ್

ಆಲಿವ್ ಚಿಟ್ಟೆ

Prays oleae

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಕೊರೆತ ಮತ್ತು ಎಲೆಗಳ ಕೆಳಭಾಗದಲ್ಲಿ ವಿಸರ್ಜನೆ ಹೊರಹಾಕಲ್ಪಟ್ಟಿರುತ್ತವೆ.
  • ಹೂಗೊಂಚಲುಗಳು ರೇಷ್ಮೆಎಳೆಯೊಂದಿಗೆ ಒಟ್ಟಾಗೆ ಸುತ್ತಲ್ಪಟ್ಟಿರುತ್ತವೆ.
  • ಲಾರ್ವಾಗಳು ಹಣ್ಣುಗಳನ್ನು ಪ್ರವೇಶಿಸಿ ತಿನ್ನುವುದರಿಂದ ಹಣ್ಣುಗಳು ಅಕಾಲಿಕವಾಗಿ ಉದುರಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಆಲಿವ್

ಆಲಿವ್

ರೋಗಲಕ್ಷಣಗಳು

ರೋಗಲಕ್ಷಣಗಳು ವರ್ಷದ ಅವಧಿಯನ್ನು ಅವಲಂಬಿಸಿರುತ್ತದೆ. ಎಲೆ-ತಿನ್ನುವ ಪೀಳಿಗೆಯು ಎರಡು ಎಲೆಗಳ ಹೊರಪದರದ ನಡುವೆ ಸುರಂಗಗಳನ್ನು ಕೊರೆಯುತ್ತದೆ ಮತ್ತು ಎಲೆಗಳ ಕೆಳಭಾಗದಲ್ಲಿ ಸುರಂಗಗಳನ್ನು ಮತ್ತು ಹೇರಳವಾದ ವಿಸರ್ಜನೆಯನ್ನು ಉಳಿಸುತ್ತದೆ. ವಿಂಡೋ-ಫೀಡಿಂಗ್ ಮಾದರಿಯನ್ನು ಕೆಲವೊಮ್ಮೆ ಗಮನಿಸಬಹುದು. ಹೂವುಗಳನ್ನು ತಿನ್ನುವ ಪೀಳಿಗೆಯು ರೇಷ್ಮೆ ದಾರಗಳೊಂದಿಗೆ ಹಲವಾರು ಹೂಗೊಂಚಲುಗಳನ್ನು ಒಟ್ಟಿಗೆ ಸೇರಿಸಿ ಗೂಡು ಮಾಡುತ್ತದೆ. ಕೀಟಗಳ ಆಹಾರ ಚಟುವಟಿಕೆಯನ್ನು ಹೇರಳವಾಗಿರುವ ಹಿಕ್ಕೆಗಳ ಮೂಲಕ ನೋಡಬಹುದು. ಹಣ್ಣು-ತಿನ್ನುವ ಪೀಳಿಗೆಯಲ್ಲಿ, ಲಾರ್ವಾಗಳು ಬೇಸಿಗೆಯ ಆರಂಭದಲ್ಲಿ ಆಲಿವ್ ಮರದ ಸಣ್ಣ ಹಣ್ಣುಗಳನ್ನು ಕೊರೆಯುತ್ತವೆ ಮತ್ತು ಶರತ್ಕಾಲದ ಆರಂಭದಲ್ಲಿ ಅವು ಸಂಪೂರ್ಣವಾಗಿ ಬೆಳೆದಾಗ, ಮಣ್ಣಿನಲ್ಲಿ ಕೋಶಾವಸ್ಥೆ ಕಳೆಯಲು ಆಶ್ರಯದಾತ ಸಸ್ಯಗಳಿಂದ ನಿರ್ಗಮಿಸುತ್ತವೆ. ಅಕಾಲಿಕ ಹಣ್ಣಿನ ಉದುರುವಿಕೆ ಹಣ್ಣುಗಳಿಗೆ ಉಂಟಾಗುವ ಹಾನಿಯ ನೇರ ಪರಿಣಾಮವಾಗಿದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಪರಭಕ್ಷಕಗಳು ಹಲವಾರು ಮತ್ತು ಕೆಲವು ಜಾತಿಯ ಇರುವೆಗಳು, ಕ್ರೈಸೋಪಿಡ್‌ಗಳು ಮತ್ತು ಜೀರುಂಡೆಗಳನ್ನು ಒಳಗೊಂಡಿರುತ್ತವೆ. ಅವು ಒಂದು ಅಥವಾ ಹಲವಾರು ತಲೆಮಾರುಗಳ ಮೊಟ್ಟೆಗಳನ್ನು ತಿನ್ನುತ್ತವೆ. ಪ್ಯಾರಾಸಿಟಾಯ್ಡ್‌ಗಳು ಹಲವಾರು ಜಾತಿಯ ಕಣಜಗಳನ್ನು ಒಳಗೊಂಡಿವೆ, ಅವುಗಳಲ್ಲಿ ಟ್ರೈಕೊಗ್ರಾಮಾ ಇವಾನೆಸೆನ್ಸ್ ಮತ್ತು ಅಜೆನಿಯಾಸ್ಪಿಸ್ ಫ್ಯೂಸಿಕೋಲಿಸ್. ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಕುರ್ಸ್ತಾಕಿಯನ್ನು ಆಧರಿಸಿದ ದ್ರಾವಣಗಳು ಆಲಿವ್ ಪತಂಗಗಳ ಸಂಖ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ತೋರಿಸಲಾಗಿದೆ. ವಯಸ್ಕ ಪತಂಗಗಳನ್ನು ಹಿಡಿಯುವಲ್ಲಿ ಫೆರೋಮೋನ್ ಬಲೆಗಳು ಬಹಳ ಪರಿಣಾಮಕಾರಿ ಮತ್ತು ವಸಂತಕಾಲದ ಆರಂಭದಲ್ಲಿ ಅಳವಡಿಸಬೇಕು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಸಂಯೋಗ ಅಡೆತಡೆಗಳು ಅಥವಾ ಎಥಿಲೀನ್ ಬಳಕೆ ಕೀಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಹೂವುಗಳನ್ನು ತಿನ್ನುವ (ಮೊದಲ ಪೀಳಿಗೆ) ಲಾರ್ವಾ ಹಂತದ ವಿರುದ್ಧ ಬಳಸಲಾಗುವ ಆರ್ಗನೊಫಾಸ್ಫೇಟ್ ಸಂಯುಕ್ತಗಳು ಉತ್ತಮ ನಿಯಂತ್ರಣವನ್ನು ಒದಗಿಸಬಹುದು.

ಅದಕ್ಕೆ ಏನು ಕಾರಣ

ಮೊಗ್ಗುಗಳು, ಎಲೆಗಳು ಮತ್ತು ಹಣ್ಣುಗಳಿಗೆ ಉಂಟಾಗುವ ಹಾನಿಯು ಮೂರು ವಿಭಿನ್ನ ತಲೆಮಾರುಗಳ ಲಾರ್ವಾ ಜಾತಿಯ ಪ್ರೇಸ್ ಓಲಿಯಾಗಳಿಂದ ಉಂಟಾಗುತ್ತದೆ. ವಯಸ್ಕ ಪತಂಗಗಳು ಬೂದುಬಣ್ಣದ ಮುಂಭಾಗದ ರೆಕ್ಕೆಗಳನ್ನು ಹೊಂದಿದ್ದು, ಬೆಳ್ಳಿಯ ಲೋಹೀಯ ಟೋನ್ ಗಳು ಮತ್ತು ಹಲವಾರು ಕಪ್ಪು ಚುಕ್ಕೆಗಳನ್ನು ಹೊಂದಿರುತ್ತವೆ. ಕೆಲವು ಮಾದರಿಗಳಲ್ಲಿ ಅವು ಕಾಣೆಯಾಗಿರಬಹುದು. ಹಿಂಭಾಗದ ರೆಕ್ಕೆಗಳು ಏಕರೂಪದ ಬೂದು ಬಣ್ಣದಲ್ಲಿರುತ್ತವೆ. ಪೀಳಿಗೆಯನ್ನು ಅವಲಂಬಿಸಿ ಲಾರ್ವಾಗಳ ಬಣ್ಣ ಮತ್ತು ಗಾತ್ರದಲ್ಲಿ ಬದಲಾವಣೆಯಾಗುತ್ತವೆ. ಇವುಗಳಲ್ಲಿ ಪ್ರತಿಯೊಂದೂ ಆಲಿವ್ ಮರದ ನಿರ್ದಿಷ್ಟ ಭಾಗದಲ್ಲಿ ಪರಿಣತಿಯನ್ನು ಹೊಂದಿದೆ. ಮೊದಲ ಗುಂಪಿನ ಲಾರ್ವಾಗಳು (ಎಲೆಗಳ ಪೀಳಿಗೆ) ವಸಂತಕಾಲದ ಮಧ್ಯದಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಮೊಗ್ಗುಗಳೊಳಗೆ ತಿನ್ನುತ್ತವೆ ಮತ್ತು ನಂತರದ ಹಂತದಲ್ಲಿ ಹೂವುಗಳನ್ನು ತಿನ್ನುತ್ತವೆ. ಲಾರ್ವಾಗಳ ಎರಡನೇ ಬ್ಯಾಚ್ (ಹೂವಿನ ಪೀಳಿಗೆ) ಬೇಸಿಗೆಯ ಆರಂಭದಲ್ಲಿ ಹೊರಹೊಮ್ಮುತ್ತದೆ ಮತ್ತು ಇದು ಅತ್ಯಂತ ವಿನಾಶಕಾರಿಯಾಗಿದೆ. ಹೆಣ್ಣುಗಳು ಕಾಂಡದ ಹತ್ತಿರವಿರುವ ಸಣ್ಣ ಹಣ್ಣಿನ ಮೇಲೆ ಮೊಟ್ಟೆಗಳನ್ನು ಇಡುತ್ತವೆ, ಮತ್ತು ಎಳೆಯ ಲಾರ್ವಾಗಳು ಆಲಿವ್ ಅನ್ನು ಕೊರೆದು ಅದನ್ನು ತಿನ್ನುತ್ತವೆ. ಇದರಿಂದಾಗಿ ಹಣ್ಣುಗಳು ಅತಿಯಾಗಿ ಉದುರುತ್ತವೆ. ಅಂತಿಮವಾಗಿ, ಹಣ್ಣುಗಳಲ್ಲಿ ಹುಟ್ಟುವ ಪೀಳಿಗೆಯು ಎಲೆಗಳಿಗೆ ವಲಸೆ ಹೋಗುತ್ತದೆ, ಅಲ್ಲಿ ಅವರು ಎಲೆ ಕೊರಕೆಗಳಂತೆಯೇ ಎಪಿಡರ್ಮಿಸ್ ನಡುವೆ ಸುರಂಗಗಳನ್ನು ಕೊರೆಯುತ್ತವೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ದೇಶದಲ್ಲಿರಬಹುದಾದ ಸಂಭವನೀಯ ಕ್ವಾರಂಟೈನ್ ನಿಯಮಗಳಿಗಾಗಿ ಪರಿಶೀಲಿಸಿ.
  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ನಿರೋಧಕ ಅಥವಾ ಚೇತರಿಸಿಕೊಳ್ಳುವ ಪ್ರಭೇದಗಳನ್ನು ನೆಡಿರಿ.
  • ಆಲಿವ್ ಮರಗಳನ್ನು ನಿಯಮಿತವಾಗಿ ಪಿ.
  • ಓಲಿಯ ಸೋಂಕಿನ ಚಿಹ್ನೆಗಳಿಗಾಗಿ ಮೇಲ್ವಿಚಾರಣೆ ಮಾಡಿ.
  • ಇರುವ ಪತಂಗಗಳ ಸಂಖ್ಯೆಯನ್ನು ನಿರ್ಧರಿಸಲು ಫೆರೋಮೋನ್ ಬಲೆಗಳನ್ನು ಬಳಸಿ.
  • ಪರಭಕ್ಷಕ ಜಾತಿಗಳನ್ನು ಕೊಲ್ಲುವ ವಿಶಾಲ-ಶ್ರೇಣಿಯ ಕೀಟನಾಶಕಗಳ ಬಳಕೆಯನ್ನು ತಪ್ಪಿಸಿ.
  • ಯಾವುದೇ ಸೋಂಕಿತ ಸಸ್ಯ ವಸ್ತುಗಳನ್ನು ತೋಟಗಳ ನಡುವೆ ಸಾಗಿಸಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ