Euphyllura olivina
ಕೀಟ
ಆಲಿವ್ ಸೈಲಿಡ್ ಗಳು ಆಲಿವ್ ಮರಗಳ ಮೇಲೆ ಮೂರು ವಿಧಗಳಲ್ಲಿ ಪರಿಣಾಮ ಬೀರುತ್ತವೆ: ಮೊದಲನೆಯದಾಗಿ ಮೊಗ್ಗುಗಳು, ಹೂವುಗಳು, ಕೋಮಲ ಚಿಗುರುಗಳು ಮತ್ತು ಸಣ್ಣ ಹಣ್ಣುಗಳನ್ನು ನೇರವಾಗಿ ತಿನ್ನುವ ಮೂಲಕ; ಎರಡನೆಯದಾಗಿ, ಈ ಅಂಗಾಂಶಗಳ ಸಕ್ಕರೆಯ ರಸಸಾರವನ್ನು ಹೀರುವಾಗ ಅವು ಹೇರಳವಾಗಿ ಸಿಹಿಯ ಅಂಟಾದ ದ್ರವ್ಯವನ್ನು ಉತ್ಪಾದಿಸುತ್ತವೆ. ಇದರ ಪರಿಣಾಮವಾಗಿ ಮಸಿಕಪ್ಪು ಶಿಲೀಂಧ್ರಜ ಬೆಳವಣಿಗೆಯಾಗುತ್ತದೆ ಮತ್ತು ಎಲೆಗಳ ದ್ಯುತಿಸಂಶ್ಲೇಷಕ ಚಟುವಟಿಕೆಯು ಕಡಿಮೆಯಾಗುತ್ತದೆ. ಅಂತಿಮವಾಗಿ, ಆಲಿವ್ ಹೂಬಿಡುವ ಮತ್ತು ಹಣ್ಣು ಹಿಡಿಯುವ ಸಮಯದಲ್ಲಿ, ಮರಿಹುಳುಗಳ ಮೇಣದಂಥ ಸ್ರವಿಸುವಿಕೆಯು ಹೂವುಗಳು ಮತ್ತು ಸಣ್ಣ ಹಣ್ಣುಗಳ ಅಕಾಲಿಕ ಉದುರುವಿಕೆಗೆ ಕಾರಣವಾಗುತ್ತದೆ. ಕೀಟಗಳ ದೊಡ್ಡ ಸಂಖ್ಯೆಯು ಎಳೆಯ ಮರಗಳ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು ಮತ್ತು ಗಮನಾರ್ಹ ಇಳುವರಿ ಕಡಿತವನ್ನು ಉಂಟುಮಾಡಬಹುದು. ಹೆಚ್ಚು ಸೋಂಕಿಗೆ ಒಳಗಾದ ಮರಗಳು 30 ರಿಂದ 60% ದಷ್ಟು ಇಳುವರಿ ನಷ್ಟವನ್ನು ಹೊಂದಬಹುದು.
ಪರಭಕ್ಷಕ ಕೀಟಗಳು ಉದಾ. ಪರಾವಲಂಬಿ ಕಣಜ ಸೈಲೆಫಾಗಸ್ ಯೂಫಿಲ್ಯುರೇ, ಪೈರೇಟ್ ಬಗ್ ಆಂಥೋಕೊರಿಸ್ ನೆಮೊರಾಲಿಸ್, ಲೇಸ್ವಿಂಗ್ ಕ್ರಿಸೊಪರ್ಲಾ ಕಾರ್ನಿಯಾ ಮತ್ತು ಲೇಡಿ ಬೀಟಲ್ ಕೊಕ್ಸಿನೆಲ್ಲಾ ಸೆಪ್ಟೆಂಪಂಕ್ಟಾಟಾ ಆಲಿವ್ ಸೈಲಿಡ್‌ನ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಸಾಮಾನ್ಯವಾಗಿ, ವಿಶಾಲ ಶ್ರೇಣಿಯ ಕೀಟನಾಶಕಗಳನ್ನು ಬಳಸಿಕೊಂಡು ಈ ಜಾತಿಗಳನ್ನು ನಿರ್ಮೂಲನೆ ಮಾಡದಂತೆ ಖಚಿತಪಡಿಸಿಕೊಳ್ಳಿ. ಸೈಲಿಡ್‌ಗಳ ವಿರುದ್ಧ ಕೆಲಸ ಮಾಡುವ ಉಳಿಕೆ ಬಿಡದ, ಸಾವಯವ ಸಂಪರ್ಕ ಕೀಟನಾಶಕಗಳೆಂದರೆ ಬೇವಿನ ಎಣ್ಣೆ ಮತ್ತು ತೋಟಗಾರಿಕಾ ಎಣ್ಣೆಯನ್ನು ಆಧರಿಸಿದ ಕೀಟನಾಶಕ ಸಾಬೂನುಗಳಾಗಿವೆ. ಕೀಟಗಳು ತಮ್ಮ ರಕ್ಷಣಾತ್ಮಕ ಮೇಣವನ್ನು ಸ್ರವಿಸುವ ಮೊದಲು ಇದನ್ನು ಬಳಸಬೇಕು. ಮೇಲಾವರಣದಲ್ಲಿ ಗಾಳಿಯ ಪ್ರಸರಣವನ್ನು ಹೆಚ್ಚಿಸಲು ಮತ್ತು ಆಲಿವ್ ಸೈಲಿಡ್‌ಗಳಿಗೆ ಶಾಖದ ಒಡ್ಡುವಿಕೆಯನ್ನು ಹೆಚ್ಚಿಸಲು ಸೋಂಕಿತ ಪ್ರದೇಶಗಳನ್ನು ಸಮರಬಹುದು.
ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಕೀಟನಾಶಕಗಳ ಸಮಯೋಚಿತ ಸಿಂಪಡಣೆಗಳು ಸೈಲಿಡ್‌ಗಳ ವಿರುದ್ಧ ಪರಿಣಾಮಕಾರಿಯಾಗಿರುತ್ತವೆ. ಆದರೆ ಇದನ್ನು ಕೊನೆಯ ಉಪಾಯವಾಗಿ ಮಾತ್ರ ಬಳಸಬೇಕು. ಕೀಟಗಳು ತಮಗೆ ಸ್ವಲ್ಪಮಟ್ಟಿನ ಪ್ರತಿರೋಧ ನೀಡುವ ತಮ್ಮ ರಕ್ಷಣಾತ್ಮಕ ಮೇಣವನ್ನು ಸ್ರವಿಸುವ ಮೊದಲು ಈ ಉತ್ಪನ್ನಗಳನ್ನು ಬಳಸಬೇಕು.
ಆಲಿವ್ ಸೈಲಿಡ್, ಯೂಫಿಲುರಾ ಒಲಿವಿನಾ ಆಹಾರದ ಚಟುವಟಿಕೆಯಿಂದ ರೋಗಲಕ್ಷಣಗಳು ಉಂಟಾಗುತ್ತವೆ. ವಯಸ್ಕ ಕೀಟಗಳು ಆಲಿವ್ ಕಾಂಡದ ಆಶ್ರಯ ಪ್ರದೇಶಗಳಲ್ಲಿ ಚಳಿಗಾಲವನ್ನು ಕಳೆಯುತ್ತವೆ. ಅವುಗಳು ತಿಳಿ ಕಂದು ಬಣ್ಣದ ದೇಹವನ್ನು ಹೊಂದಿದ್ದು, ಸುಮಾರು 2.5 ಮಿಮೀ ಉದ್ದ ಮತ್ತು ಮುಂಭಾಗದ ರೆಕ್ಕೆಗಳಲ್ಲಿ ಕೆಲವು ಸಣ್ಣ ಕಪ್ಪು ಕಲೆಗಳನ್ನು ಹೊಂದಿರುತ್ತವೆ. ಹೆಣ್ಣುಗಳು ವಸಂತಕಾಲದಲ್ಲಿ ಹೊಸ ಚಿಗುರುಗಳು ಮತ್ತು ಮೊಗ್ಗುಗಳ ಮೇಲೆ 1000ದವರೆಗೆ ಮೊಟ್ಟೆಗಳನ್ನುಾ ಇಡಬಹುದು. ಮರಿಹುಳುಗಳು ಚಪ್ಪಟೆಯಾಗಿರುತ್ತವೆ, ಹಸಿರು ಬಣ್ಣದಿಂದ ಕಂದು ಬಣ್ಣದಲ್ಲಿರುತ್ತವೆ ಮತ್ತು ಅವುಗಳನ್ನು ರಕ್ಷಿಸುವ ಬಿಳಿ ಮೇಣದ ಲೇಪನವನ್ನು ಸ್ರವಿಸುತ್ತದೆ. 20° ಮತ್ತು 25°C ನಡುವಿನ ತಾಪಮಾನದಲ್ಲಿ, ಅವು ತಮ್ಮ ಜೀವನ ಚಕ್ರವನ್ನು ಸುಮಾರು ಮೂರು ತಿಂಗಳಲ್ಲಿ ಪೂರ್ಣಗೊಳಿಸಬಹುದು ಮತ್ತು ಈ ಪರಿಸ್ಥಿತಿಗಳಲ್ಲಿ ವರ್ಷಕ್ಕೆ ಮೂರು ತಲೆಮಾರುಗಳವರೆಗೂ ಸಂತಾನೋತ್ಪತ್ತಿ ಮಾಡಬಹುದು. ಬೆಚ್ಚಗಿನ ತಾಪಮಾನದಲ್ಲಿ (27 °C ಗಿಂತ ಹೆಚ್ಚು), ಸೈಲಿಡ್‌ಗಳು ಕಡಿಮೆ ಸಕ್ರಿಯವಾಗಿರುತ್ತವೆ ಮತ್ತು 32 °C ಗಿಂತ ಹೆಚ್ಚು ತಾಪಮಾನದಲ್ಲಿ ಅವುಗಳ ಮರಣ ಪ್ರಮಾಣ ಹೆಚ್ಚಾಗುತ್ತದೆ. ಮರಿಹುಳುಗಳು ಮತ್ತು ವಯಸ್ಕ ಹುಳುಗಳು ಆಹಾರ ಚಟುವಟಿಕೆಂಯಿದ ಸಸ್ಯದ ಅಂಗಾಂಶಗಳನ್ನು ಛಿದ್ರಗೊಳಿಸುತ್ತವೆ ಮತ್ತು ಎಲ್ಲಾ ಭಾಗಗಳಿಗೆ ಪೋಷಕಾಂಶಗಳನ್ನು ವಿತರಿಸುವ ಸಸ್ಯದ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಆಲಿವ್ ಸೈಲಿಡ್‌ಗಳು ಹೂಗೊಂಚಲುಗಳ ಮೇಲೆ ಇರುವಾಗ ಇದು ಸಮಸ್ಯೆಯಾಗುತ್ತದೆ. ಅಂತಿಮವಾಗಿ ಹಣ್ಣು ಹಿಡಿಯುವಿಕೆಗೆ ಮತ್ತು ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ.