Lobesia botrana
ಕೀಟ
ವಸಂತ ಋತುವಿನ ಕೊನೆಯಲ್ಲಿ ಅಥವಾ ಬೇಸಿಗೆಯ ಆರಂಭದಲ್ಲಿ ಒಂದೇ ಇರುವ ಹೂವಿನ ಮೊಗ್ಗುಗಳನ್ನು ಮೊದಲ ತಲೆಮಾರಿನ ಲಾರ್ವಾಗಳು ತಿನ್ನಲು ಆರಂಭಿಸುತ್ತವೆ. ನಂತರ, ಪ್ರತಿಯೊಂದು ಲಾರ್ವಾ ಹಲವಾರು ಹೂವಿನ ಮೊಗ್ಗುಗಳನ್ನು ರೇಷ್ಮೆದಾರದಿಂದ ಹೆಣೆಯುತ್ತವೆ. ಇದರಿಂದ "ಗ್ಲೋಮೆರುಲ್ಸ್" ಎಂದು ಕರೆಯಲ್ಪಡುವ ಬರಿಗಣ್ಣಿಗೆ ಕಾಣುವ ರಚನೆಗಳು ಉಂಟಾಗುತ್ತವೆ. ಅವು ತಮ್ಮ ಆಶ್ರಯತಾಣದೊಳಗಿಂದಲೇ ಹೂವುಗಳನ್ನು ತಿನ್ನುತ್ತಿರುವಾಗ, ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಮಲವನ್ನು ಉತ್ಪಾದನೆ ಮಾಡುತ್ತವೆ. ಇದು ಬರಿಗಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಎರಡನೆಯ ತಲೆಮಾರಿನ ಮರಿಗಳು (ಮಧ್ಯ ಬೇಸಿಗೆಯಲ್ಲಿ) ಹಸಿರು ಹಣ್ಣುಗಳನ್ನು ಹೊರಗಿನಿಂದ ಮೊದಲು ತಿನ್ನುತ್ತವೆ. ನಂತರ ಅವುಗಳು ಭೇದಿಸಿಕೊಂಡು ಒಳಹೊಕ್ಕು ಅವುಗಳ ತಿರುಳನ್ನು ತಿಂದು ಮುಗಿಸಿ, ಸಿಪ್ಪೆ ಮತ್ತು ಬೀಜಗಳನ್ನು ಮಾತ್ರ ಉಳಿಸುತ್ತವೆ. ಮೂರನೆಯ ತಲೆಮಾರಿನ ಲಾರ್ವಾಗಳು (ಬೇಸಿಗೆಯ ಕೊನೆಯಲ್ಲಿ) ಹಣ್ಣುಗಳ ಒಳಗೆ ಮತ್ತು ಗೊಂಚಲಿನೊಳಗೆ ತಿಂದು ಅತಿ ಹೆಚ್ಚಿನ ಹಾನಿ ಉಂಟುಮಾಡುತ್ತವೆ. ಇವು ನಂತರ ಕ್ರಮೇಣ ಒಣಗುತ್ತವೆ. ಹಣ್ಣುಗಳು ಬೀಳುವುದನ್ನು ತಡೆಯಲು ರೇಷ್ಮೆ ದಾರಗಳಿಂದ ಹಣ್ಣುಗಳನ್ನು ಪೋಣಿಸಲಾಗಿರುತ್ತದೆ. ತಿನ್ನುವುದರಿಂದ ಆದ ಹಾನಿಯು ಹಲವು ರೀತಿಯ ಅವಕಾಶವಾದಿ ಶಿಲೀಂಧ್ರಗಳ ಅಥವಾ ಕೀಟಗಳ ದಾಳಿಗೆ ಅವುಗಳನ್ನು ಒಡ್ಡುತ್ತದೆ. ಉದಾಹರಣೆಗೆ ರೆಸಿನ್ ಮಾತ್ (ಕ್ಯಾಡ್ರಾ ಫಿಗುಲಿಲೆಲ್ಲಾ), ಹಣ್ಣಿನ ನೊಣೆ ಮತ್ತು ಇರುವೆಗಳು. ಬೆಳೆಯುವ ಸ್ಥಳಗಳು, ಚಿಗುರುಗಳು ಅಥವಾ ಎಲೆಗಳ ಮೇಲೆ ಲಾರ್ವಾಗಳು ಹಾನಿ ಮಾಡುವುದು ಕಡಿಮೆ.
ಈ ಕೀಟವನ್ನು ನಿಯಂತ್ರಿಸಲು ದ್ರಾಕ್ಷಿಯಲ್ಲಿ ಬಳಸಬಹುದಾದ ಹಲವಾರು ಸಾವಯವ ಕೀಟನಾಶಕಗಳನ್ನು ಶಿಫಾರಸು ಮಾಡಲಾಗುತ್ತದೆ. ಇವುಗಳಲ್ಲಿ ನೈಸರ್ಗಿಕ ಕೀಟಗಳ ಬೆಳವಣಿಗೆ ನಿಯಂತ್ರಕಗಳು, ಸ್ಪಿನೊಸೈನ್ಸ್, ಮತ್ತು ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಆಧರಿಸಿದ ದ್ರಾವಣಗಳು ಸೇರಿವೆ. ಟ್ಯಾಚಿನ್ಡ್ ಫ್ಲೈಸ್ ನ ಕೆಲವು ಪ್ರಭೇದಗಳು ಮತ್ತು ಅನೇಕ ರೀತಿಯ ಪರಾವಲಂಬಿ ಕಣಜಗಳು (100 ಕ್ಕಿಂತ ಹೆಚ್ಚು) ಮುಂತಾದ ಪರಭಕ್ಷಕಗಳು ಎಲ್. ಬೊಟ್ರಾನಾ ಸಂಖ್ಯೆಯನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿವೆ. ಕೆಲವು ಜಾತಿಗಳ ಪರಾವಲಂಬಿಗಳು ದ್ರಾಕ್ಷಿ ಹಣ್ಣಿನ ಕೀಟಗಳ ಲಾರ್ವೆಗಳನ್ನು 70% ದಷ್ಚು ಸಾಯಿಸಬಲ್ಲವು. ಈ ಜಾತಿಗಳನ್ನು ದ್ರಾಕ್ಷಿಬಳ್ಳಿಯಲ್ಲಿ ಬಿಡಬಹುದು. ಫೆರೋಮೋನ್ ಹರಡುವ ಮೂಲಕ ಪತಂಗಗಳ ಸೇರುವಿಕೆಯನ್ನು ತಡೆಯಬಹುದು.
ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರವಾದ ಮಾರ್ಗವಿದ್ದರೆ ಅದನ್ನು ಮೊದಲು ಪರಿಗಣಿಸಿ. ಹಲವಾರು ವಿಶಾಲ ರೋಹಿತ ಕೀಟನಾಶಕಗಳನ್ನು (ಆರ್ಗನೋಕ್ಲೋರಿನ್ಸ್, ಕಾರ್ಬಮೇಟ್ಸ್, ಆರ್ಗನೋಫಾಸ್ಫೆಟ್ಸ್ ಮತ್ತು ಪೈರೆಥ್ರಾಯಿಡ್ಸ್) ಎಲ್. ಬೊಟ್ರಾನಾ ಸಂಖ್ಯೆ ನಿಯಂತ್ರಿಸಲು ಬಳಸಬಹುದು. ಆದರೆ ಪತಂಗದ ಮತ್ತು ಅವುಗಳ ಲಾರ್ವೆಯ ಪರಭಕ್ಷಕ ಜಾತಿಗಳನ್ನು ಇದು ಕೊಲ್ಲಬಹುದು. ಈ ಕ್ರಮಗಳನ್ನು ಜೈವಿಕ ಅಥವಾ ರಾಸಾಯನಿಕ ನಿಯಂತ್ರಣದೊಂದಿಗೆ ಸಂಯೋಜಿಸಬೇಕು.
ಪತಂಗವಾದ ಲೊಬೆಸಿಯಾ ಬೊಟ್ರಾನಾದ ಮರಿಹುಳುಗಳ ಆಹಾರ ಚಟುವಟಿಕೆಗಳಿಂದಾಗಿ ಈ ರೋಗಲಕ್ಷಣಗಳು ಉಂಟಾಗುತ್ತವೆ. ಒಣ ಎಲೆಗಳ ಕೆಳಭಾಗದಲ್ಲಿ, ತೊಗಟೆಯ ಅಡಿಯಲ್ಲಿ, ಮಣ್ಣಿನ ಮೇಲಿನ ಬಿರುಕುಗಳಲ್ಲಿ ಅಥವಾ ಬಳ್ಳಿಯ ಉಳಿಕೆಗಳಲ್ಲಿರುವ ರೇಷ್ಮೆಯ ಕೋಶಗಳ ಒಳಗೆ ಇವು ಚಳಿಗಾಲವನ್ನು ಕಳೆಯುತ್ತವೆ. ಬೆಳೆದ ಪತಂಗ ಕಂದು-ಕೆನೆ ಬಣ್ಣದಲ್ಲಿದ್ದು ಅವುಗಳ ಮೇಲೆ ಬೂದು, ಕಂದು, ಮತ್ತು ಕಪ್ಪು ಗೆರೆಗಳಿರುತ್ತವೆ. ಮೊಸಾಯಿಕ್-ಮಾದರಿಯ ಮುಂದಿನ ರೆಕ್ಕೆಗಳಿರುತ್ತವೆ. ಎರಡನೇ ಜೋಡಿ ರೆಕ್ಕೆಗಳು ಬೂದು ಬಣ್ಣದಲ್ಲಿದ್ದು ಅಂಚಿರುವ ತುದಿಯನ್ನು ಹೊಂದಿರುತ್ತವೆ. 10 ರಿಂದ 12 ದಿನಗಳ ಕಾಲ ತಾಪಮಾನವು 10 °C ಗಿಂತ ಹೆಚ್ಚಾಗಿದ್ದರೆ ಮೊದಲ ಪೀಳಿಗೆಯ ಕೀಟಗಳು ಹೊರಹೊಮ್ಮುತ್ತವೆ. ಸೂಕ್ತ ಬೆಳವಣಿಗೆಗೆ ತಕ್ಕ ಪರಿಸ್ಥಿತಿಗಳೆಂದರೆ 40 ರಿಂದ 70% ವರೆಗಿನ ಆರ್ದ್ರತೆ 26-29 °C ಉಷ್ಣತೆ. ಲಾರ್ವಾಗಳು ಹೂವಿನ ಹೊದಿಕೆಗೆ ನುಗ್ಗಿ ಮೊಗ್ಗಿಗೆ ಧಾಳಿ ಇಡುತ್ತವೆ. ಮತ್ತು ದ್ರಾಕ್ಷಿಗಳ ಗೊಂಚಲಿನ ತೊಟ್ಟನ್ನೂ ಪ್ರವೇಶಿಸಬಹುದು. ಇದರಿಂದ ಅದು ಒಣಗಿ ಹೋಗುತ್ತದೆ. ಬೆಳೆದ ಮರಿಹುಳುಗಳು ಹಣ್ಣುಗಳನ್ನು ರೇಷ್ಮೆಯ ಎಳೆಗಳಿಂದ ಒಟ್ಟಿಗೆ ಸೇರಿಸಿ ನಂತರ ಅವುಗಳನ್ನು ಮೆಲ್ಲುತ್ತವೆ ಅಥವಾ ಕೊರೆಯುತ್ತವೆ. ಪ್ರದೇಶದಲ್ಲಿನ ಬೇಸಿಗೆಯ ಕಾಲಾವಧಿಯನ್ನು ಅವಲಂಬಿಸಿ ಈ ಪತಂಗ ವರ್ಷಕ್ಕೆ 2 ರಿಂದ 4 ತಲೆಮಾರುಗಳನ್ನು ಉತ್ಪಾದಿಸಬಹುದು.