ದ್ರಾಕ್ಷಿ

ದ್ರಾಕ್ಷಿಯ ಮೊಗ್ಗು ಪತಂಗ

Eupoecilia ambiguella

ಕೀಟ

ಸಂಕ್ಷಿಪ್ತವಾಗಿ

  • ಲಾರ್ವಾಗಳು ಮೊಗ್ಗುಗಳು ಮತ್ತು ಹಣ್ಣುಗಳನ್ನು ತಿನ್ನುತ್ತವೆ.
  • ಇದರಿಂದ ಗಣನೀಯ ಹಾನಿ ಉಂಟಾಗುತ್ತದೆ.
  • ಮೊಗ್ಗುಗಳು ಅಥವಾ ಹಣ್ಣುಗಳು ರೇಷ್ಮೆ ದಾರಗಳಿಂದ ಜೋಡಿಸಲ್ಪಟ್ಟಿರುತ್ತವೆ.
  • ತಿಂದ ಸ್ಥಳಗಳಲ್ಲಿ ಬೂದು ಅಥವಾ ಕಂದು ಬಣ್ಣದ ಮೋಲ್ಡ್ ಇರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ದ್ರಾಕ್ಷಿ

ರೋಗಲಕ್ಷಣಗಳು

ಸಣ್ಣ ಮರಿಗಳು ಹೂವಿನ ಮೊಗ್ಗುಗಳ ಒಳಗೆ ಕೊರೆದು ಒಳಗಿಂದಲೇ ಅವುಗಳನ್ನು ತಿನ್ನುತ್ತವೆ. ಇದರಿಂದ ದ್ರಾಕ್ಷಿಗಳು ಮಾರಾಟ ಮಾಡಲಾಗದಂತೆ ಹಾನಿಗೆ ಒಳಗಾಗುತ್ತವೆ. ಆಹಾರ ಕಬಳಿಸುವ ಸಮಯದಲ್ಲಿ, ಅವು ಹಲವಾರು ಮೊಗ್ಗುಗಳನ್ನು ಒಟ್ಟಾಗಿ ರೇಷ್ಮೆ ತಂತುಗಳಿಂದ ಜೋಡಿಸಿ, ಅಂತಿಮವಾಗಿ ದಪ್ಪ ಬಲೆಯಂತಹ ಮನೆಯನ್ನು ಕಟ್ಚುತ್ತವೆ. ಎರಡನೇ ತಲೆಮಾರಿನ ಹುಳಗಳು ಹೆಚ್ಚು ತೊಂದರೆ ಕೊಡುತ್ತವೆ ಏಕೆಂದರೆ, ಅವು ತಮ್ಮ ಆಶ್ರಯತಾಣದ ಸುತ್ತ ಬೆಳೆದಿರುವ ಹಣ್ಣುಗಳನ್ನು ತಿಂದು ಹೇರಳವಾಗಿ ಹಿಕ್ಕೆಯನ್ನು ಉಳಿಸುತ್ತವೆ. ಒಂದು ಲಾರ್ವಾವು ಹನ್ನೆರಡು ಹಣ್ಣುಗಳನ್ನು ತಿನ್ನಬಹುದು ಮತ್ತು ಇದರಿಂದಾಗಿ ಗಮನಾರ್ಹ ಹಾನಿ ಉಂಟುಮಾಡಬಹುದು. ತಿನ್ನುವ ಜಾಗಗಳಲ್ಲಿ ಬೂದು ಮೋಲ್ಡ್ ಆದ ಬಾಟ್ರಿಟಿಸ್ ಸಿನಿರಿಯಾದಿಂದಾಗಿ ಉಂಟಾಗುವ ಎರಡನೇ ಹಂತದ ಸೋಂಕಿನಿಂದ ಪರಿಸ್ಥಿತಿ ಹದಗೆಡುತ್ತದೆ. ಹಾನಿಗೊಳಗಾಗದ ಅಕ್ಕಪಕ್ಕದ ಹಣ್ಣುಗಳು ಕೂಡ, ಸೋಂಕಿಗೆ ತುತ್ತಾಗಿ ಕಂದು ಬಣ್ಣಕ್ಕೆ ತಿರುಗುತ್ತವೆ ಮತ್ತು ಬೂದುಬಣ್ಣದ ಮೋಲ್ಡ್ ಬೆಳೆಯುತ್ತದೆ. ಯುರೋಪ್ ಮತ್ತು ಏಷ್ಯಾದ ಅನೇಕ ದ್ರಾಕ್ಷಿ ಉತ್ಪಾದಿಸುವ ಪ್ರದೇಶಗಳಲ್ಲಿ ಈ ಕೀಟದ ಹಾವಳಿಯನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಟ್ರೈಕೋಗ್ರಾಮಾ ಕಕೋಸಿಯಾ ಮತ್ತು ಟಿ. ಇವಾನಸೆನ್ಸ್ ಪರಾವಲಂಬಿ ಕಣಜಗಳು ಈ ಕೀಟಗಳ ಮೊಟ್ಟೆಗಳ ಒಳಗೆ ಮೊಟ್ಟೆಗಳನ್ನಿಡುತ್ತವೆ. ಹಾಗಾಗಿ ದ್ರಾಕ್ಷಿತೋಟಗಳಲ್ಲಿನ ದ್ರಾಕ್ಷಿ ಮೊಗ್ಗು ಪತಂಗದ ಸೋಂಕನ್ನು ಕಡಿಮೆ ಮಾಡಬಹುದು. ವಿಶಾಲ-ರೋಹಿತ ಕೀಟನಾಶಕಗಳ ವಿಪರೀತ ಬಳಕೆಯಿಂದ ಈ ನೈಸರ್ಗಿಕ ಶತ್ರುಗಳ ಸಂಖ್ಯೆಯನ್ನು ಕಡಿಮೆಯಾಗದಂತೆ ನೋಡಿಕೊಳ್ಳಿ. ಇ.ಅಂಬಿಗುಯಲ್ಲಾ ವಿರುದ್ಧ ಪರಿಣಾಮಕಾರಿ ಸಾವಯವ ಕೀಟನಾಶಕಗಳೆಂದರೆ ಸ್ಪಿನೋಸಾಡ್ ಮತ್ತು ನೈಸರ್ಗಿಕ ಪೈರೆಥ್ರೈನ್ ಆಧಾರಿತ ಉತ್ಪನ್ನಗಳು. ಎಷ್ಚು ಸಿಂಪಡಿಸಬೇಕು ಎಂಬುದು ಸೋಂಕಿತ ಹಣ್ಣುಗಳ ಪ್ರಮಾಣವನ್ನು ಅವಲಂಬಿಸಿರುತ್ತದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಮೊದಲು ಪರಿಗಣಿಸಿ. ಇ ಅಂಬಿಗುಯೆಲ್ಲಾ ವಿರುದ್ಧ ಪರಿಣಾಮಕಾರಿ ಕೀಟನಾಶಕಗಳೆಂದರೆ ಸಿಂಥೆಟಿಕ್ ಪೈರೆಥ್ರೈನ್ ಮತ್ತು ಕಾರ್ಬರಿಲ್. ಇದು ಮರುಕಳಿಸುವ ಸಮಸ್ಯೆಯಾಗಿದ್ದರೆ, ಹೂವು ಅರಳಿದ ನಂತರ ಮತ್ತೊಮ್ಮೆ ಸಿಂಪಡಣೆಯ ಅಗತ್ಯವಿರುತ್ತದೆ. ಎರಡನೆಯ ಪೀಳಿಗೆಯನ್ನು ನಿಯಂತ್ರಿಸಲು ಮತ್ತೊಮ್ಮೆ ಬೇಸಿಗೆಯ ಕೊನೆಯಲ್ಲಿ ಸಿಂಪಡಣೆಯ ಅಗತ್ಯವಿರುತ್ತದೆ. ಸಿಂಪಡಣೆಯ ಸಂಖ್ಯೆಯು ಸೋಂಕಿತ ಹಣ್ಣುಗಳ ಪ್ರಮಾಣವನ್ನು ಅವಲಂಬಿಸಿರುತ್ತದೆ. ಎರಡನೇ ಪೀಳಿಗೆಯ ಮರಿಹುಳುಗಳ ಬೆಳವಣೆಗೆಯಲ್ಲಿ ಉಷ್ಣತೆ ಮತ್ತು ತೇವಾಂಶ ನಿರ್ಣಾಯಕ ಅಂಶಗಳಾಗಿವೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ದ್ರಾಕ್ಷಿ ಮೊಗ್ಗು ಪತಂಗವಾದ ಯುಪೋಯಿಸಿಲ್ಲಾ ಆಂಬಿಗ್ವೆಲ್ಲಾದ ಮರಿಹುಳುಗಳ ಆಹಾರ ಚಟುವಟಿಕೆಯಿಂದಾಗಿ ಮತ್ತು ಶಿಲೀಂಧ್ರವಾದ ಬಾಟ್ರೈಟಿಸ್ ಸಿನೆರಿಯಾ ಅಂಗಾಂಶಗಳಿಗೆ ಮಾಡುವ ಹಾನಿಯಿಂದಾಗಿ ಉಂಟಾಗುತ್ತವೆ. ಬೆಳೆದ ಪತಂಗವು ಹಳದಿ ಮತ್ತು ಕಂದು ಬಣ್ಣದ ಮುಂದಿನ ರೆಕ್ಕೆಗಳನ್ನು ಹೊಂದಿರುತ್ತವೆ. ಅವುಗಳ ಹಿಂದಿನ ರೆಕ್ಕೆಗಳು ಎದ್ದು ಕಾಣುವ ಗಾಢ ಕಂದುಬಣ್ಣದ ಪಟ್ಟಿ ಹೊಂದಿದ್ದು ಬೂದು ಬಣ್ಣದ್ದಾಗಿರುತ್ತವೆ. ಮಧ್ಯ ಬೇಸಿಗೆಯಲ್ಲಿ ದ್ರಾಕ್ಷಿಯ ಹಣ್ಣುಗಳ ಮೇಲೆ ಅಥವಾ ಹೂವಿನ ಮೊಗ್ಗು ಹಾಗು ಬಣ್ಣದೆಲೆಗಳ ಮೇಲೆ ಹೆಣ್ಣು ಹುಳುಗಳು ಮೊಟ್ಟೆ ಇಡುತ್ತವೆ (ಪ್ರತಿ ಹೆಣ್ಣು ಹುಳು 100 ರವರೆಗೆ). 8-12 ದಿನಗಳ ನಂತರ ಲಾರ್ವಾ ಹೊರಬರುತ್ತದೆ. ಅವುಗಳು ಕಂದು-ಹಳದಿ ಬಣ್ಣದ್ದಾಗಿದ್ದು 12 ಮಿಮೀ ಉದ್ದವಿರುತ್ತವೆ. ಇಡೀ ದೇಹದಲ್ಲಿ ಚದುರಿದಂತೆ ಕೂದಲು ಇರುತ್ತವೆ. ತೊಗಟೆಯಲ್ಲಿನ ಬಿರುಕು ಅಥವಾ ಇತರ ಸೂಕ್ತವಾದ ಸ್ಥಳಗಳಲ್ಲಿ ಎರಡನೇ ಪೀಳಿಗೆಯ ಕೋಶವಾಸ್ಥೆಯಲ್ಲಿ ಚಳಿಗಾಲವನ್ನು ಕಳೆಯುತ್ತವೆ. ಪತಂಗದ ಜೀವನ ಚಕ್ರವು ಉಷ್ಣಾಂಶ ಮತ್ತು ತೇವಾಂಶವನ್ನು ಅವಲಂಬಿಸಿರುತ್ತದೆ. ಇದು ಸಾಮಾನ್ಯವಾಗಿ ತಂಪಾದ ಮತ್ತು ಆರ್ದ್ರ ಪ್ರದೇಶಗಳಲ್ಲಿ ಕಂಡುಬರುತ್ತದೆ ಮತ್ತು ವರ್ಷಕ್ಕೆ ಕೇವಲ ಎರಡು ತಲೆಮಾರುಗಳನ್ನು ಮಾತ್ರ ಹೊಂದಿರುತ್ತದೆ. ಇವುಗಳಿಗೆ ಅನುಕೂಲಕರವಾದ ಗರಿಷ್ಟ ಸಾಪೇಕ್ಷ ಆರ್ದ್ರತೆಯೆಂದರೆ 70% ಅಥವಾ ಅದಕ್ಕಿಂತ ಹೆಚ್ಚು. ಮತ್ತು 18 ರಿಂದ 25 ಡಿಗ್ರಿ ಸೆಲ್ಶಿಯಸ್ ನಡುವಿನ ತಾಪಮಾನ. ಕಡಿಮೆ ಸಾಪೇಕ್ಷ ತೇವಾಂಶ ಮಟ್ಟವಿದ್ದರೆ ಮತ್ತು ಕಡಿಮೆ ತಾಪಮಾನದಲ್ಲಿ ಮೊಟ್ಟೆಗಳು ಒಡೆಯುವಲ್ಲಿ ವಿಫಲಗೊಳ್ಳುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ದೇಶದಲ್ಲಿ ಸಂಪರ್ಕ ತಡೆ ನಿಬಂಧನೆಗಳಿಗಾಗಿ ಪರಿಶೀಲಿಸಿ ಮತ್ತು ಅನುಮಾನವಿದ್ದರೆ ಸಮರ್ಥ ಅಧಿಕಾರಿಗಳನ್ನು ಸಂಪರ್ಕಿಸಿ.
  • ಸೋಂಕಿತ ಮೊಗ್ಗುಗಳು ಅಥವಾ ಹಣ್ಣುಗಳಿಗಾಗಿ ದ್ರಾಕ್ಷಿತೋಟಗಳನ್ನು ನಿಯಮಿತವಾಗಿ ಪರಿಶೀಲಿಸಿ.
  • ಸಂಖ್ಯೆಯನ್ನು ನಿರ್ಣಯಿಸಲು ಫೆರೋಮೋನ್ ಬಲೆಗಳನ್ನು ಬಳಸಿ.
  • ಪತಂಗ ನೆಲದ ಮೇಲಿನ ಎಲೆಯ ಕಸಕಡ್ಡಿಗಳಲ್ಲಿ ಕೋಶಾವಸ್ಥೆಯಲ್ಲಿದ್ದು ಚಳಿಗಾಲವನ್ನು ಕಳೆಯುವುದರಿಂದ, ವಸಂತಕಾಲದಲ್ಲಿ ಅವುಗಳು ಹುಟ್ಟದಂತೆ ತಡೆಯಲು ದ್ರಾಕ್ಷಿತೋಟದಲ್ಲಿನ ಉಳಿಕೆಗಳನ್ನು ನಾಶಮಾಡಿ.
  • ಪರ್ಯಾಯವಾಗಿ, ಸಾಂದ್ರೀಕರಿಸಿದ ಮಣ್ಣಿನೊಂದಿಗೆ ಎಲೆಯ ಕಸವನ್ನು ಮುಚ್ಚುವುದರಿಂದಲೂ ರೋಗಕಾರಕಗಳ ಬೆಳವಣಿಗೆಯನ್ನು ತಡೆಯಬಹುದು.
  • ಈ ಎರಡೂ ಆಯ್ಕೆಗಳನ್ನು ಹೂವರಳುವ ಮೂರು ವಾರಗಳ ಮುಂಚೆಯೇ ಪೂರ್ಣಗೊಳಿಸಬೇಕು.
  • ಕಡಿಮೆ ಸೋಂಕು ಇದ್ದಾಗ, ಗಾಯಗೊಂಡ ಹಣ್ಣುಗಳನ್ನು ಕೈಯಿಂದಲೇ ಹೆಕ್ಕಿ ತೆಗೆದುಹಾಕಿ.
  • ಸೋಂಕಿಗೊಳಗಾಗಿರುವ ಸಂಭಾವ್ಯತೆ ಇರುವ ವಸ್ತುಗಳನ್ನು ಇತರ ತೋಟಗಳಿಗೆ ಅಥವಾ ಜಮೀನಿಗೆ ಸಾಗಿಸಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ