ಇತರೆ

ಗ್ರೇಪ್ ಟೋರ್ಟ್ರಿಕ್ಸ್ ಚಿಟ್ಟೆ

Argyrotaenia ljungiana

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳ ಅಸ್ಥಿಪಂಜರೀಕರಣ.
  • ಎಲೆಗಳು ಮತ್ತು ಹಣ್ಣುಗಳು ಬಲೆಯಂತೆ ಆಗಬಹುದು.
  • ಮರಿಹುಳುಗಳು ಮಸುಕಾದ ಹಸಿರು, ಹಳದಿ ಮಿಶ್ರಿತ ಕಂದು ಬಣ್ಣದ ತಲೆಯೊಂದಿಗೆ ಸ್ವಲ್ಪ ಅರೆಪಾರದರ್ಶಕವಾಗಿರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

3 ಬೆಳೆಗಳು
ಸೇಬು
ದ್ರಾಕ್ಷಿ
ಪೇರು ಹಣ್ಣು/ ಮರಸೇಬು

ಇತರೆ

ರೋಗಲಕ್ಷಣಗಳು

ವಸಂತಕಾಲದ ಆರಂಭದಲ್ಲಿ ಮರಿಹುಳುಗಳು ನಾಳಗಳ ನಡುವಿನ ಹೂವಿನ ಮೊಗ್ಗುಗಳು ಮತ್ತು ಕೋಮಲ ಎಲೆ ಅಂಗಾಂಶಗಳನ್ನು ತಿನ್ನುತ್ತವೆ, ಇದರ ಪರಿಣಾಮವಾಗಿ ಅಸ್ಥಿಪಂಜರದಂತಹ ಎಲೆಗಳು ಕಂಡುಬರುತ್ತವೆ. ಆರಂಭಿಕ ಹೂಬಿಡುವ ಸಮಯದಲ್ಲಿ, ಹಳೆಯ ಲಾರ್ವಾಗಳು ಗೊಂಚಲುಗಳನ್ನು ಪ್ರವೇಶಿಸುತ್ತವೆ ಮತ್ತು ಹಣ್ಣುಗಳ ನಡುವೆ ಹಲವಾರು ಎಲೆಗಳನ್ನು ಹೆಣೆದು ಗೂಡುಗಳನ್ನು ಮಾಡುತ್ತವೆ. ಅವು ತೊಗಟೆಯನ್ನು ಕೆರೆಯಬಹುದು ಅಥವಾ ಎಳೆಯ ಕಾಯಿಯನ್ನು ಭೇದಿಸಬಹುದು, ಒಳಗಿನಿಂದ ಆಹಾರವನ್ನು ಪಡೆಯುತ್ತವೆ. ಎಲೆಗಳು ಮತ್ತು ಹಣ್ಣುಗಳಿಗೆ ಗಾಯವಾಗುವುದರ ಜೊತೆಗೆ, ಹಾನಿಯು ಅಂಗಾಂಶಗಳನ್ನು ವಸಾಹತುವನ್ನಾಗಿ ಮಾಡುವ ಅವಕಾಶವಾದಿ ರೋಗಕಾರಕಗಳನ್ನು ಆಕರ್ಷಿಸುತ್ತದೆ, ಇದರ ಪರಿಣಾಮವಾಗಿ ಗಿಡ ಕೊಳೆಯುತ್ತದೆ. ದ್ರಾಕ್ಷಿಹಣ್ಣಿನ ತೋಟವಲ್ಲದೆ, ಇದು ಪಿಯರ್ ಮತ್ತು ಸೇಬು ಮರಗಳ ಮೇಲೆ ಕಾಣುವ ಸಾಮಾನ್ಯ ಕೀಟವಾಗಿದೆ. ಪರ್ಯಾಯ ಆತಿಥೇಯ ಬೆಳೆಗಳು ಮಾಲೋ, ಕರ್ಲಿ ಡಾಕ್, ಸಾಸಿವೆ ಅಥವಾ ಲುಪಿನ್ ಅನ್ನು ಒಳಗೊಂಡಿರುತ್ತವೆ. ಓಟ್ಸ್ ಮತ್ತು ಬಾರ್ಲಿಯ ದ್ರಾಕ್ಷಿತೋಟದ ಹೊದಿಕೆ ಬೆಳೆಗಳು ಸಹ ಈ ಕೀಟಕ್ಕೆ ಆಕರ್ಷಕವಾಗಿವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಪರಾವಲಂಬಿ ಕಣಜಗಳು, ಉದಾಹರಣೆಗೆ ಟ್ರೈಕೊಗ್ರಾಮ ಮತ್ತು ಎಕ್ಸೊಚುಸ್ನಿಗ್ರಿಪಾಲ್ಪುಸುಬೊಬ್ಸ್ಕುರಸ್, ಮತ್ತು ಹಲವಾರು ಜಾತಿಯ ಜೇಡಗಳು ಲಾರ್ವಾಗಳನ್ನು ತಿನ್ನುತ್ತವೆ. ಬ್ಯಾಸಿಲಸ್ ಥುರಿಂಜಿಯೆನ್ಸಿಸ್ ಮತ್ತು ಸ್ಪಿನೋಸಾಡ್ ಆಧಾರಿತ ಸಾವಯವ ಸೂತ್ರೀಕರಣಗಳನ್ನು ಸಿಂಪಡಿಸುವುದು ಜೈವಿಕವಾಗಿ ಸ್ವೀಕಾರಾರ್ಹ ನಿರ್ವಹಣಾ ಸಾಧನಗಳಾಗಿವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಟಾರ್ಟ್ರಿಕ್ಸ್ ಪತಂಗಗಳ ವಿರುದ್ಧ ಮೆಥಾಕ್ಸಿಫೆನೋಜೈಡ್, ಕ್ಲೋರಾಂಟ್ರಾನಿಲಿಪ್ರೊಲ್, ಕ್ರಯೋಲೈಟ್ ಮತ್ತು ಸ್ಪಿನೆಟೊರಾಮ್ ಸಕ್ರಿಯ ಪದಾರ್ಥಗಳಲ್ಲಿ ಒಂದನ್ನು ಹೊಂದಿರುವ ದ್ರವೌಷಧಗಳು ಪರಿಣಾಮಕಾರಿ.

ಅದಕ್ಕೆ ಏನು ಕಾರಣ

ಎಲೆಗಳು ಮತ್ತು ಹಣ್ಣುಗಳ ಮೇಲಿನ ಲಕ್ಷಣಗಳು ಪಾಲಿಫಾಗಸ್ ಪ್ರಭೇದಗಳಾದ ಆರ್ಗಿರೊಟೆನಿಯಲ್ಜುಂಗಿಯಾನಾದ ಆಹಾರ ಚಟುವಟಿಕೆಯಿಂದ ಉಂಟಾಗುತ್ತವೆ. ವಯಸ್ಕ ಕೀಟವು ಸುಮಾರು 15 ಮಿ.ಮೀ ರೆಕ್ಕೆಗಳನ್ನು ಹೊಂದಿರುತ್ತದೆ ಮತ್ತು ಕೆಲವು ಗಾಢವಾದ ಪಾರ್ಶ್ವ ರೆಕ್ಕೆಗಳು ಮತ್ತು ಒಣಹುಲ್ಲಿನ ಬಣ್ಣದ ರೆಕ್ಕೆಗಳೊಂದಿಗೆ ತಿಳಿ ಕಂದು ಮುಂದಿನ ರೆಕ್ಕೆಗಳನ್ನು ಹೊಂದಿರುತ್ತದೆ. ಲಾರ್ವಾಗಳು ಚಳಿಗಾಲವನ್ನು ಪ್ಯುಪಲ್ ಸ್ಥಿತಿಯಲ್ಲಿ ಬಳ್ಳಿಯ ತೊಗಟೆಯ ಅನ್‌ಫ್ರಾಕ್ಟ್ಯುಯೊಸಿಟಿಗಳಲ್ಲಿ, ನೆಲದ ಮೇಲೆ ಅಥವಾ ಬಲೆಯಂತಹ ಎಲೆಗಳಲ್ಲಿ ಉಳಿದುಕೊಂಡಿರುತ್ತವೆ. ಪರ್ಯಾಯವಾಗಿ, ಚಳಿಗಾಲದಲ್ಲಿ ಪರ್ಯಾಯ ಆತಿಥೇಯಗಳಲ್ಲಿ ಇರುತ್ತವೆ. ವಸಂತ, ಋತುವಿನಲ್ಲಿ, ಹೆಣ್ಣು ಎಲೆಗಳ ಮೇಲಿನ ಮೇಲ್ಮೈಯಲ್ಲಿ ಸುಮಾರು 50 ಮೊಟ್ಟೆಗಳ ರಾಶಿಗಳನ್ನು ಇಡುತ್ತವೆ. ಮರಿಹುಳುಗಳು ಮಸುಕಾದ ಹಸಿರು, ಸ್ವಲ್ಪ ಅರೆಪಾರದರ್ಶಕ ಮತ್ತು ಹಳದಿ ಮಿಶ್ರಿತ ಕಂದು ಬಣ್ಣದ ತಲೆಯನ್ನು ಹೊಂದಿರುತ್ತವೆ. ಅವು ಮೊದಲು ನಾಳಗಳ ನಡುವಿನ ಕೋಮಲ ಎಲೆ ಅಂಗಾಂಶಗಳನ್ನು ಆಹಾರವಾಗಿ ತಿನ್ನುತ್ತವೆ, ಎಲೆಯನ್ನು ಅಸ್ಥಿಪಂಜರಗೊಳಿಸುತ್ತವೆ. ಗೂಡಿಗಾಗಿ ಹಳೆಯ ಲಾರ್ವಾಗಳು ಎಲೆಗಳನ್ನು ಸುರುಳಿ ಮಾಡುತ್ತವೆ ಅಥವಾ ಬಲೆಯಾಗಿಸುತ್ತವೆ ಮತ್ತು ಮೊಗ್ಗುಗಳು ಮತ್ತು ಹಣ್ಣುಗಳನ್ನು ಸಹ ತಿನ್ನುತ್ತವೆ. ವರ್ಷಕ್ಕೆ ಮೂರು ಅತಿಕ್ರಮಿಸುವ ತಲೆಮಾರುಗಳ ಟಾರ್ಟ್ರಿಕ್ಸ್ ಪತಂಗಗಳಿರುತ್ತವೆ ಮತ್ತು ಈ ಕೀಟಗಳ ಎಲ್ಲಾ ಬೆಳವಣಿಗೆಯ ಹಂತಗಳು ಬೆಳೆ ಋತುವಿನ ಉದ್ದಕ್ಕೂ ಕಂಡುಬರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಕೀಟಗಳ ಚಿಹ್ನೆಗಳಿಗಾಗಿ ದ್ರಾಕ್ಷಿತೋಟವನ್ನು ನಿಯಮಿತವಾಗಿ ನಿರ್ವಹಣೆ ಮಾಡಿ.
  • ಸಂಖ್ಯಾ ಮಟ್ಟವನ್ನು ನಿಯಂತ್ರಿಸಲು ಫೆರೋಮೋನ್ ಬಲೆಗಳನ್ನು ಬಳಸಿ.
  • ಜಡ ಅವಧಿಯಲ್ಲಿ ದ್ರಾಕ್ಷಿತೋಟವನ್ನು ಸ್ವಚ್ಛಗೊಳಿಸಿ.
  • ಬಳ್ಳಿಗಳ ಮೇಲಿನ ಒಣಗಿದ ದ್ರಾಕ್ಷಿ ಗೊಂಚಲುಗಳನ್ನು ತೆಗೆದುಹಾಕಿ, ಮತ್ತು ನೆಲದ ಮೇಲೆ ಡಿಸ್ಕ್ ಕಳೆಗಳು ಮತ್ತು ಗೊಂಚಲುಗಳನ್ನು ತೆಗೆದುಹಾಕಿ.
  • ಹೆಚ್ಚುವರಿಯಾಗಿ, ಮುತ್ತಿಕೊಳ್ಳುವಿಕೆಯು ಸಣ್ಣ ಮಟ್ಟದಲ್ಲಿದ್ದರೆ, ಮುತ್ತಿಕೊಂಡಿರುವ ದ್ರಾಕ್ಷಿ ಮತ್ತು ಎಲೆಗಳನ್ನು ತೆಗೆದುಹಾಕಿ.
  • ವಸಂತಕಾಲದಲ್ಲಿ ಚಿಗುರುಗಳು ಬೆಳೆಯಲು ಪ್ರಾರಂಭವಾಗುವ ಮೊದಲು ಕನಿಷ್ಠ ಒಂದು ತಿಂಗಳಾದರೂ ಈ ಕೆಲಸವನ್ನು ಮಾಡಿ.
  • ಆದಷ್ಟು ಬೇಗನೆ ಕೊಯ್ಲು ಮಾಡುವುದರಿಂದ ಹಾನಿಯನ್ನು ಭಾಗಶಃ ತಡೆಯಬಹುದು.
  • ವಿಶಾಲ ಶ್ರೇಣಿ ಕೀಟನಾಶಕಗಳನ್ನು ಬಳಸಿ ನೈಸರ್ಗಿಕ ಶತ್ರುಗಳನ್ನು ಕುಂದಿಸದಂತೆ ನೋಡಿಕೊಳ್ಳಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ