ತೊಗರಿ ಬೇಳೆ & ಮಸೂರ್ ಬೇಳೆ

ಲೀಫ್ ವೆಬ್ಬರ್ (ಎಲೆ ಬಲೆ ರೋಗ)

Eucosma critica

ಕೀಟ

ಸಂಕ್ಷಿಪ್ತವಾಗಿ

  • ಬಲೆಯಾಗಿರುವ ಕಿರು ಎಲೆಗಳು.
  • ಹೂವುಗಳು ಮತ್ತು ಕಾಯಿಗಳ ಮೇಲೆ ಪರಿಣಾಮ ಬೀರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ತೊಗರಿ ಬೇಳೆ & ಮಸೂರ್ ಬೇಳೆ

ರೋಗಲಕ್ಷಣಗಳು

ಕಿರು ಎಲೆಗಳು ಒಟ್ಟಾಗಿ ಬಲೆಯಂತಾಗಿರುತ್ತದೆ. ತುದಿ ಮೊಗ್ಗುಗಳು ಹೆಚ್ಚಾಗಿ ಬಲೆಯೊಳಗೆ ಇರುತ್ತವೆ. ಇದು ಚಿಗುರಿನ ಬೆಳವಣಿಗೆಯನ್ನು ತಡೆಯುತ್ತದೆ. ಎಲೆಗಳು ಬಿಳಿಯಾಗುತ್ತವೆ ಮತ್ತು ಒಣಗುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಇಂದಿಗೂ, ಈ ರೋಗದ ವಿರುದ್ಧ ಲಭ್ಯವಿರುವ ಯಾವುದೇ ಜೈವಿಕ ನಿಯಂತ್ರಣ ವಿಧಾನದ ಬಗ್ಗೆ ನಮಗೆ ತಿಳಿದಿಲ್ಲ. ರೋಗಲಕ್ಷಣಗಳ ಸಂಭವನೀಯತೆ ಅಥವಾ ಗುರುತ್ವವನ್ನು ಕಡಿಮೆ ಮಾಡಲು ಯಾವುದೇ ಯಶಸ್ವಿ ವಿಧಾನ ನಿಮಗೆ ತಿಳಿದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ವಿಶಾಲ ಶ್ರೇಣಿಯ ಕೀಟನಾಶಕಗಳನ್ನು ತಪ್ಪಿಸಬೇಕು. ಏಕೆಂದರೆ ಅವು ಪ್ರಯೋಜನಕಾರಿ ಕೀಟಗಳನ್ನು ಕೊಲ್ಲುತ್ತವೆ. ಹೆಲಿಕೋವರ್ಪಾ ಕ್ಯಾಟರ್ಪಿಲ್ಲರ್, ಮಚ್ಚೆಯುಳ್ಳ ಕಾಯಿ ಕೊರಕ ಅಥವಾ ಪ್ಲಮ್ ಚಿಟ್ಟೆಯನ್ನು ನಿಯಂತ್ರಿಸುವ ರಾಸಾಯನಿಕಗಳು ಎಲೆ ಬಲೆ ಹುಳುಗಳನ್ನು ನಿಯಂತ್ರಿಸುತ್ತವೆ.

ಅದಕ್ಕೆ ಏನು ಕಾರಣ

ಯುಕೋಸ್ಮಾ ಕ್ರಿಟಿಕಾ (ಹಿಂದೆ ಗ್ರಾಫಲೋಥಾ ಕ್ರಿಟಿಕಾ) ಲಾರ್ವಾಗಳಿಂದ ಈ ಹಾನಿಯಾಗುತ್ತದೆ. ಕಂದು ಬಣ್ಣದ ಹೆಣ್ಣು ಪತಂಗಗಳು, ಎಲೆಗಳ ಮೊಗ್ಗುಗಳು ಮತ್ತು ಎಳೆಯ ಎಲೆಗಳ ಮೇಲೆ ತಮ್ಮ ಮೊಟ್ಟೆಗಳನ್ನು ಇಡುತ್ತವೆ. ಕೆನೆ-ಹಳದಿ ಲಾರ್ವಾಗಳು ನಂತರ ಎಲೆಗಳನ್ನು ಒಟ್ಟಿಗೆ ಜೋಡಿಸಿ, ಬಲೆಯೊಳಗೆ ಉಳಿದುಕೊಂಡು ಕೋಮಲ ಚಿಗುರುಗಳನ್ನು ತಿನ್ನುತ್ತವೆ. ಕೋಶಾವಸ್ಥೆ ಎಲೆ ಬಲೆಯೊಳಗೆ ಸಂಭವಿಸುತ್ತದೆ. ಋತುವಿನ ಉದ್ದಕ್ಕೂ ಸಸ್ಯಗಳ ಮೇಲೆ ಪರಿಣಾಮ ಬೀರುತ್ತವೆ. ಮೊಳಕೆಯ ಹಂತದಲ್ಲಿ ಕೀಟಬಾಧೆ ಪ್ರಾರಂಭವಾದರೆ ಬೆಳೆ ತೀವ್ರವಾಗಿ ಹಾನಿಗೊಳಗಾಗುತ್ತದೆ. ಕೀಟಗಳಿಗೆ 23 °C ಮತ್ತು 30 °C ನಡುವಿನ ತಾಪಮಾನ ಅನುಕೂಲಕರವಾಗಿರುತ್ತದೆ. ಇದು ಚಿಕ್ಕ ಕೀಟವಾಗಿದ್ದು, ಹೆಚ್ಚಿನ ಆರ್ಥಿಕ ಹಾನಿಯನ್ನುಂಟು ಮಾಡುವುದಿಲ್ಲ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳನ್ನು ನೆಡಬೇಕು.
  • ಚೆಂಡು ಹೂವು ಅಥವಾ ಹರಳಿನಂತಹ ಅಂತರ ಬೆಳೆಗಳನ್ನು ಬೆಳೆಯಿರಿ.
  • ಬಲೆಯಂತಿರುವ ಎಲೆಗಳಿಗಾಗಿ ನಿಮ್ಮ ಜಮೀನಿನ ಮೇಲ್ವಿಚಾರಣೆ ಮಾಡಿ.
  • ಸೋಂಕಿತ ಸಸ್ಯದ ಭಾಗಗಳನ್ನು ಸಂಗ್ರಹಿಸಿ ನಾಶಮಾಡಿ.
  • ಕೀಟ ಸಂಖ್ಯೆಯನ್ನು ನಿರ್ವಹಿಸಲು ಸಹಾಯ ಮಾಡುವ ನೈಸರ್ಗಿಕ ಪರಭಕ್ಷಕ ಮತ್ತು ಪರಾವಲಂಬಿಗಳನ್ನು ಸಂರಕ್ಷಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ