ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಕಾಟೋನಿ ಕುಷನ್ ಸ್ಕೇಲ್

Icerya purchasi

ಕೀಟ

ಸಂಕ್ಷಿಪ್ತವಾಗಿ

  • ದೊಡ್ಡ ಹುಳುಗಳು ಮತ್ತು ಮರಿ ಹುಳುಗಳು ಸಸ್ಯದ ರಸವನ್ನು ಗುಂಪಾಗಿ ತಿನ್ನುತ್ತವೆ ಮತ್ತು ಹೇರಳ ಪ್ರಮಾಣದಲ್ಲಿ ಅಂಟನ್ನು ಉತ್ಪತ್ತಿ ಮಾಡುತ್ತವೆ.
  • ಎಲೆಗಳು ಸೊರಗುವುದು ಮತ್ತು ರೆಂಬೆಗಳು ನಿರ್ಜೀವಗೊಳ್ಳುವುದನ್ನು ಕಾಣಬಹುದು.
  • ಹೆಚ್ಚಿನ ಪ್ರಮಾಣದಲ್ಲಿ ಅಂಟು ಉತ್ಪತ್ತಿಯಾದರೆ ಕಪ್ಪು ಮಸಿ ರೀತಿಯ ಬೂಷ್ಟು ಬೆಳೆಯುತ್ತದೆ.
  • ಮರದ ಚಟುವಟಿಕೆ ಕಡಿಮೆಯಾಗುತ್ತದೆ ಮತ್ತು ಹಣ್ಣಿನ ಗುಣಮಟ್ಟ ಮತ್ತು ಇಳುವರಿಯಲ್ಲಿ ಗಮನಾರ್ಹವಾದ ಕಡಿತವುಂಟಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ದೊಡ್ಡ ಹುಳುಗಳು ಮತ್ತು ಮರಿ ಹುಳುಗಳು ಸಸ್ಯದ ರಸವನ್ನು ಗುಂಪಾಗಿ ತಿನ್ನುತ್ತವೆ ಮತ್ತು ಹೇರಳ ಪ್ರಮಾಣದಲ್ಲಿ ಅಂಟನ್ನು ಉತ್ಪತ್ತಿ ಮಾಡುತ್ತವೆ. ಅವು ರೋಗಕ್ಕೆ ಬೇಗ ತುತ್ತಾಗುವ ಸಸ್ಯಗಳಲ್ಲಿ ಕಾಂಡಗಳು, ಎಲೆಗಳು, ಹೂವುಗಳು ಮತ್ತು ಚಿಗುರುಗಳನ್ನು ಆವರಿಸಿರುವುದನ್ನು ನೋಡಬಹುದು. ರಸದ ಸವಕಳಿಯು ಎಲೆಗಳನ್ನು ಸೊರಗಿ ಉದುರುವಂತೆ ಮಾಡುತ್ತದೆ ಮತ್ತು ಕೊಂಬೆಗಳು ನಿರ್ಜೀವಗೊಳ್ಳುತ್ತವೆ. ತಿನ್ನುವಾಗ, ಇದು ಅಂಟನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತದೆ ಮತ್ತು ಅದು ಎಲೆಗಳ ಮೇಲೆಲ್ಲಾ ಆವರಿಸುತ್ತದೆ ಮತ್ತು ಕಪ್ಪು ಮಸಿ ರೀತಿಯ ಬೂಷ್ಟು ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ. ಸೋಂಕು ತೀವ್ರವಾದ ಸಮಯದಲ್ಲಿ, ವಿಪರ್ಣನವಾಗುತ್ತದೆ ಮತ್ತು ಕೊಂಬೆ ನಿರ್ಜೀವಗೊಳ್ಳುತ್ತದೆ, ಅಷ್ಟೇ ಅಲ್ಲದೆ ದ್ಯುತಿಸಂಶ್ಲೇಷಕ ಪ್ರಮಾಣ ಕಡಿಮೆಯಾಗಿ ಮರದ ಚಟುವಟಿಕೆಯನ್ನು ಮತ್ತು ಹಣ್ಣಿನ ಗುಣಮಟ್ಟ ಮತ್ತು ಇಳುವರಿಯಲ್ಲಿ ಗಮನಾರ್ಹವಾದ ಇಳಿಕೆಗೆ ದಾರಿ ಮಾಡಿಕೊಡುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಅತ್ಯಂತ ಗಮನಾರ್ಹ ಪರಭಕ್ಷಕಗಳೆಂದರೆ ಲೇಡಿ ಬರ್ಡ್ ಗಳು ಮತ್ತು ಲೇಸ್ವಿಂಗ್ ಗಳು. ನಿರ್ದಿಷ್ಟವಾದ ನೈಸರ್ಗಿಕ ಶತ್ರುಗಳಲ್ಲಿ ವೇದಾಲಿಯಾ ಬೀಟಲ್, ರೊಡೋಲಿಯಾ ಕಾರ್ಡಿನಾಲಿಸ್ ಸೇರಿವೆ, ಇವುಗಳ ಲಾರ್ವಾಗಳು ಸ್ಕೇಲ್ ಗಳ ಮೊಟ್ಟೆಗಳನ್ನು ತಿನ್ನುತ್ತವೆ ಮತ್ತು ದೊಡ್ಡ ಕೀಟಗಳು ಸ್ಕೇಲ್ ನ ಎಲ್ಲಾ ಹಂತಗಳನ್ನು ತಿನ್ನುತ್ತವೆ. ಪರಾವಲಂಬಿ ನೊಣವಾದ, ಕ್ರಿಪ್ಟೋಚೆಟಮ್ ಐಸ್ರೀಯಾ, ಈ ಸ್ಕೇಲ್ ನ ಅತ್ಯಂತ ಪರಿಣಾಮಕಾರಿ ಪರಾವಲಂಬಿಯಾಗಿದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸ್ಕೇಲ್ ಗಳು ಮತ್ತು ಕ್ರಾಲರ್ಗಳ ದೇಹದ ಮೇಲೆ ದಪ್ಪ ಮೇಣದ ಲೇಪನವಿರುತ್ತದೆ, ಈ ಕಾರಣದಿಂದ ಇವುಗಳಿಗೆ ರಾಸಾಯನಿಕ ಕೀಟನಾಶಕಗಳನ್ನು ಹಾಕಿ ಚಿಕಿತ್ಸೆ ನೀಡುವುದು ಕಷ್ಟವಾಗುತ್ತದೆ. ಸಕ್ರಿಯ ಪದಾರ್ಥಗಳಾದ ಅಸೆಟಾಮಿಪ್ರಿಡ್ ಮತ್ತು ಮ್ಯಾಲಥಿಯಾನ್ಗಳನ್ನು ಆಧರಿಸಿದ ಉತ್ಪನ್ನಗಳ ಸಮರ್ಪಕ ಅನ್ವಯಿಕೆಗಳನ್ನು ಈ ಕೀಟದ ವಿರುದ್ಧ ಸೂಚಿಸಲಾಗುತ್ತದೆ. ಮೊಟ್ಟೆಗಳು ಒಡೆದ ತಕ್ಷಣ ಪೆಟ್ರೋಲಿಯಂ ಸಿಂಪರಿಕೆ ತೈಲಗಳನ್ನು ಬಳಸಿದರೆ ಕ್ರಾಲ್ಲರ್ಗಳನ್ನು ನಿವಾರಿಸಬಹುದು ಮತ್ತು ಸಸ್ಯ ಅಂಗಾಂಶಗಳ ಮೇಲೆ ಆಹಾರ ಹಾನಿಯಾಗುವುದನ್ನು ತಡೆಗಟ್ಟಬಹುದು.

ಅದಕ್ಕೆ ಏನು ಕಾರಣ

ಇಸೆರಿಯಾ ಪರ್ಚಾಸಿ ಎಂಬ ಕಾಟೋನಿ ಕುಶನ್ ಸ್ಕೇಲ್ ಗಳು ಫ್ಲೋಯೆಮ್ ಸಾಪ್ ಅನ್ನು ಹೀರುವುದರಿಂದ ಈ ರೋಗಲಕ್ಷಣಗಳು ಮರಗಳಲ್ಲಿ ಕಂಡುಬರುತ್ತವೆ. ಕೆಲವು ಭೌಗೋಳಿಕ ಪ್ರದೇಶಗಳಲ್ಲಿ ಇತರ ಪ್ರಭೇದಗಳು ಪ್ರಧಾನವಾಗಿರುತ್ತವೆ, ಉದಾಹರಣೆಗೆ ಪ್ಲೋನೋಕೋಕಸ್ ಸಿಟ್ರಿ. ಈ ಸ್ಕೇಲ್ ಗಳು 10-15 ಮಿಮೀ ಉದ್ದವಿರುತ್ತವೆ ಮತ್ತು ಪರಿಸ್ಥಿತಿಗಳು ಅನುಕೂಲಕರವಾಗಿದ್ದಾಗ ಸುಮಾರು 2 ತಿಂಗಳುಗಳಲ್ಲಿ ಅವು ತಮ್ಮ ಜೀವನಚಕ್ರವನ್ನು ಪೂರ್ಣಗೊಳಿಸಬಹುದು. ಹೆಣ್ಣು ಹುಳುಗಳು 1000 ಮೊಟ್ಟೆಗಳನ್ನು ಉತ್ಪಾದಿಸಬಲ್ಲವು ಮತ್ತು ಅವುಗಳನ್ನು ಹೊಟ್ಟೆಯೊಳಗೆ ಒಂದು ಕಾಟನಿ ಮೊಟ್ಟೆಯ ಚೀಲದಲ್ಲಿ ಒಯ್ಯುತ್ತವೆ ಮತ್ತು ಎಲೆಗಳ ಮೇಲೆ ಇರಿಸುತ್ತವೆ. ಹೊಸದಾಗಿ ಮೊಟ್ಟೆಯೊಡೆದ ಮರಿಹುಳುಗಳು (ಅಥವಾ ಕ್ರಾಲರ್ಗಳು) ಎಲೆಗಳನ್ನು, ಸಾಮಾನ್ಯವಾಗಿ ಸಿರೆಗಳ ಉದ್ದಕ್ಕೂ, ಮತ್ತು ಎಳೆ ಕೊಂಬೆಗಳನ್ನು ತಿನ್ನುತ್ತವೆ. ಅವು ದೊಡ್ಡದಾದಂತೆ, ಶಾಖೆಗಳು ಮತ್ತು ಕಾಂಡಗಳ ಮೇಲೆ ಮತ್ತು ಕೆಲವೊಮ್ಮೆ ಹಣ್ಣುಗಳ ಮೇಲೂ ಕಂಡುಬರಬಹುದು. ಅವು ತೇವಭರಿತ, ತಂಪಾದ ಪರಿಸ್ಥಿತಿಗಳನ್ನು ಇಷ್ಟಪಡುತ್ತವೆ ಮತ್ತು ದಟ್ಟವಾದ ಕ್ಯಾನೊಪಿಯಿರುವ ಸಿಟ್ರಸ್ ಮರಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಅವು ಬೆಳೆದಂತೆ, ಅವುಗಳನ್ನು ರಕ್ಷಿಸುವ ದಪ್ಪವಾದ, ಕಾಟೊನಿ ಮೇಣದಂಥ ಕೋಟ್ ಅವುಗಳ ದೇಹವನ್ನು ಆವರಿಸುತ್ತದೆ. ಅಂಟನ್ನು ತಿನ್ನುವ ಇರುವೆಗಳು ಸ್ಕೇಲ್ ಗಳು ಮತ್ತು ಮರಿ ಹುಳುಗಳನ್ನು ಆಕರ್ಷಿಸಿ ನೈಸರ್ಗಿಕ ಶತ್ರುಗಳ ಚಟುವಟಿಕೆಯನ್ನು ಅಡ್ಡಿಪಡಿಸುತ್ತವೆ. ಮೊರಾ, ಅಕೇಶಿಯ ಮತ್ತು ರೋಸ್ಮರಿನಸ್ ಪ್ರಭೇದಗಳು ಗಮನಾರ್ಹವಾದ ಪರ್ಯಾಯ ಹೋಸ್ಟ್ ಗಳಾಗಿವೆ ಆದರೆ ಇದು ಹಲವು ವಿಧದ ಹಣ್ಣಿನ ಮತ್ತು ಅರಣ್ಯ ಮರಗಳಿಗೆ ಹಾನಿ ಮಾಡುತ್ತದೆ, ಜೊತೆಗೆ ಅಲಂಕಾರಿಕ ಪೊದೆಸಸ್ಯಗಳಿಗೂ ಸಹ ಹಾನಿ ಮಾಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸ್ಕೇಲ್ ನ ಉಪಸ್ಥಿತಿಗಾಗಿ ಹಣ್ಣಿನ ತೋಟವನ್ನು ಆಗಾಗ್ಗೆ ಪರಿಶೀಲಿಸಿ.
  • ಪ್ರತಿ ಮರಕ್ಕೆ ಹಲವಾರು ಹಸಿರು ಕೊಂಬೆಗಳನ್ನು ಆಯ್ಕೆ ಮಾಡಿ ಮತ್ತು ಪ್ರತಿ ಕೊಂಬೆಯಲ್ಲಿ ಮೊಟ್ಟೆಯ ಚೀಲವನ್ನು ಹೊಂದಿರುವ ಪ್ರೌಢ ಸ್ಕೇಲ್ ಗಳು ಇವೆಯೇ ಎಂಬುದನ್ನು ಪರೀಕ್ಷಿಸಿ.
  • ಕೀಟನಾಶಕಗಳನ್ನು ವಿಪರೀತವಾಗಿ ಬಳಸಬೇಡಿ, ಇದು ನೈಸರ್ಗಿಕ ಶತ್ರುಗಳ ಸಂಖ್ಯೆಯ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರಬಹುದು.
  • ಕ್ಯಾನೋಪಿಯಲ್ಲಿ ಉತ್ತಮ ಗಾಳಿ ಅನುಮತಿಸುವ ರೀತಿಯಲ್ಲಿ ಮರಗಳನ್ನು ಕತ್ತರಿಸಿ.
  • ಮರಗಳಿಂದ ಬೇರು ಮೊಳಕೆಗಳನ್ನು ಮತ್ತು ನೆಲದಿಂದ ಸತ್ತ ಬೆಳೆ ಉಳಿಕೆಗಳನ್ನು ತೆಗೆದುಹಾಕಿ.
  • ಕಾಟೋನಿ ಕುಶನ್ ಸ್ಕೇಲನ್ನು ಹರಡುವ ಇರುವೆಗಳನ್ನು ನಿಯಂತ್ರಿಸಲು ಅಡೆತಡೆಗಳನ್ನು ಮತ್ತು ಬಲೆಗಳನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ