ಇತರೆ

ಮೆಡಿಟರೇನಿಯನ್ ಹಣ್ಣಿನ ನೊಣ

Ceratitis capitata

ಕೀಟ

ಸಂಕ್ಷಿಪ್ತವಾಗಿ

  • ಹಣ್ಣುಗಳ ಮೇಲೆ ತೂತುಗಳ ಚಿಹ್ನೆಗಳು.
  • ಇವು ಹೆಣ್ಣು ನೊಣಗಳು ಮೊಟ್ಟೆಯಿಡುವ ಸ್ಥಳಗಳಿಗೆ ಅನುಗುಣವಾಗಿರುತ್ತವೆ.
  • ಸೋಂಕಿತ ಹಣ್ಣುಗಳು ಅಕಾಲಿಕವಾಗಿ ಪಕ್ವವಾಗುತ್ತವೆ ಮತ್ತು ಕೊಳೆಯುತ್ತವೆ ಅಥವಾ ಉದುರುತ್ತವೆ.
  • ತೂತುಗಳ ಸುತ್ತಲೂ ಅಥವಾ ಹಣ್ಣಿನ ರಸಸ್ರಾವದ ಮೇಲೆ ಅವಕಾಶವಾದಿ ಶಿಲೀಂಧ್ರಗಳು ಬೆಳೆಯುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

14 ಬೆಳೆಗಳು
ಬಾದಾಮಿ
ಸೇಬು
ಜಲ್ದರು ಹಣ್ಣು
ಬಾಳೆಹಣ್ಣು
ಇನ್ನಷ್ಟು

ಇತರೆ

ರೋಗಲಕ್ಷಣಗಳು

ನೊಣದಿಂದ ದಾಳಿಗೊಳಗಾದ ಹಣ್ಣುಗಳಲ್ಲಿ ಹೆಣ್ಣು ನೊಣಗಳು ಆಯ್ಕೆ ಮಾಡಿದ ಮೊಟ್ಟೆಯಿಡುವ ಸ್ಥಳಗಳಿಗೆ ಅನುಗುಣವಾಗಿ ತೂತುಗಳ ಚಿಹ್ನೆಗಳನ್ನು ಕಾಣಬಹುದು. ಸೋಂಕಿತ ಹಣ್ಣುಗಳು ಮುಂಚಿತವಾಗಿಯೇ ಪಕ್ವವಾಗುತ್ತವೆ ಮತ್ತು ಕೊಳೆಯುತ್ತವೆ. ಸಕ್ಕರೆ ರಸಸ್ರಾವದ ಹನಿಗಳನ್ನು ಹೊರಹೊಮ್ಮಿಸುತ್ತವೆ ಮತ್ತು ಕೆಲವೊಮ್ಮೆ ಉದುರಿ ಹೋಗಬಹುದು. ಅವಕಾಶವಾದಿ ಶಿಲೀಂಧ್ರಗಳು, ತೂತುಗಳ ಸುತ್ತಲೂ ಅಥವಾ ಹಣ್ಣಿನ ರಸಸ್ರಾವದ ಮೇಲೆ ಬೆಳೆಯುತ್ತವೆ. ನೊಣಗಳಿಗೆ ಕಪ್ಪು ಚುಕ್ಕೆಗಳಿರುವ ಬೆಳ್ಳಿ ಬಣ್ಣದ ಥೋರಾಕ್ಸ್ (ಕೊರಳು ಮತ್ತು ಜಠರದ ನಡುವಿನ ಭಾಗ), ಗಾಢವಾದ ಪಟ್ಟೆಗಳುಳ್ಳ ಕಂದುಬಣ್ಣದ ಹೊಟ್ಟೆ ಮತ್ತು ತಿಳಿ ಕಂದು ಬಣ್ಣದ ಪಟ್ಟೆಗಳು ಮತ್ತು ಬೂದು ಮಚ್ಚೆಗಳಿರುವ ಸ್ಪಷ್ಟವಾದ ರೆಕ್ಕೆಗಳಿರುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಪ್ಯಾರಾಸಿಟಾಯ್ಡ್ ಕೀಟಗಳು ಮತ್ತು ಪರಭಕ್ಷಕಗಳನ್ನು ಬಳಸಿಕೊಂಡು ಕೆಲವು ಜೈವಿಕ ನಿಯಂತ್ರಣಗಳನ್ನು ಸಾಧಿಸಬಹುದು. ಸೆರಾಟೈಟಿಸ್ ಕ್ಯಾಪಿಟಾಟಾ, ಪರಾವಲಂಬಿ ಶಿಲೀಂಧ್ರಗಳ ಒಂದು ಗುಂಪಿಗೆ ( ಇತರವುಗಳ ಜೊತೆ ಬೆವೆರಿಯಾ ಬಾಸ್ಸಿನಾ) ಮತ್ತು ಕೆಲವು ನೆಮಟೋಡ್ಗಳ ಪ್ರಭಾವಕ್ಕೆ ಒಳಗಾಗುತ್ತದೆ. ಚಿಕಿತ್ಸೆಯ ಪರಿಣಾಮವು ಸೋಂಕಿತ ಬೆಳೆಯ (ಅಥವಾ ಹಣ್ಣಿನ) ಮೇಲೆ ಅವಲಂಬಿತವಾಗಿರುತ್ತದೆ. ಬಿಸಿನೀರಿನ ಉಗಿ (ಉದಾಹರಣೆಗೆ 44°C ಯಲ್ಲಿ 8 ಗಂಟೆಗಳ ಕಾಲ), ಬಿಸಿ ನೀರು ಮತ್ತು ರಭಸದಿಂದ ಬಿಟ್ಟ ಬಿಸಿ-ಗಾಳಿ ಮತ್ತು ಶೀತ ಚಿಕಿತ್ಸೆಯನ್ನು ಸೋಂಕಿತ ಪ್ರದೇಶಗಳಿಂದ ಬರುವ ಹಣ್ಣುಗಳ ಮೇಲೆ ಸಮರ್ಥವಾಗಿ ಬಳಸಬಹುದು. ಶೇಖರಣೆ, ಸಾರಿಗೆ ಅಥವಾ ಅವೆರಡರ ಸಮಯದಲ್ಲಿಯೂ ಸಹ ಈ ಚಿಕಿತ್ಸೆಯನ್ನು ಮಾಡಬಹುದು. ಆದರೆ, ಇವೆಲ್ಲಾ ಸಾಮಾನ್ಯವಾಗಿ ಎಲ್ಲಾ ಹಣ್ಣುಗಳ ಬಾಳಿಕೆ ಬರುವ ಅವಧಿಯನ್ನು ಕಡಿಮೆ ಮಾಡುತ್ತವೆ. ಬೆಳೆಗಳನ್ನು ರಕ್ಷಿಸಲು ಸ್ಪಿನೋಸಾಡ್ ಅನ್ನು ಸಹ ಸಕಾಲಿಕ ವಿಧಾನದಲ್ಲಿ ಸಿಂಪಡಿಸಬಹುದಾಗಿದೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಹಣ್ಣುಗಳನ್ನು ರಕ್ಷಿಸಲು ಅವುಗಳನ್ನು ಕೀಟನಾಶಕದೊಳಗೆ ಅದ್ದುವುದು ಒಂದು ಅಂಗೀಕೃತ ವಿಧಾನವಾಗಿದೆ. ಬೆಳೆಗೆ ಕವರ್ ಸ್ಪ್ರೇಗಳನ್ನು ಒಂದು ಮುಂಜಾಗ್ರತಾ ಚಿಕಿತ್ಸೆಗಳಾಗಿಯೂ ಬಳಸಿಕೊಳ್ಳಬಹುದು ಆದರೆ ಅದು ದುಬಾರಿಯಾಗಬಹುದು. ಪ್ರೋಟೀನ್ ಬೇಟ್ ಅನ್ನು ಒಳಗೊಂಡಿರುವ ಬೇಟ್ ಸ್ಪ್ರೇಗಳು, ಗಂಡು ಮತ್ತು ಹೆಣ್ಣು ನೊಣಗಳೆರಡನ್ನೂ ಆಕರ್ಷಿಸುತ್ತವೆ ಮತ್ತು ಇದೇ ಬಲೆಯಲ್ಲಿ ಸೂಕ್ತವಾದ ಕೀಟನಾಶಕವನ್ನು (ಮ್ಯಾಲಾಥಿಯಾನ್) ಸಹ ಬಳಸಬಹುದು. ಇವುಗಳು ಹೆಚ್ಚು ಸ್ವೀಕೃತವಾದ ಚಿಕಿತ್ಸೆಯ ರೂಪವಾಗಿವೆ.

ಅದಕ್ಕೆ ಏನು ಕಾರಣ

ಮೆಡಿಟರೇನಿಯನ್ ಫ್ಲೈ ಸೆರಾಟಿಟಿಸ್ ಕ್ಯಾಪಿಟಾಟಾದ ಲಾರ್ವಾಗಳ ಆಹಾರ ಚಟುವಟಿಕೆಗಳಿಂದಾಗಿ ಈ ರೋಗಲಕ್ಷಣಗಳು ಉಂಟಾಗುತ್ತವೆ. ಅದರ ಹೆಸರಿನ ಹೊರತಾಗಿಯೂ, ಇದು ಉಪ-ಸಹಾರಾ ಆಫ್ರಿಕಾದಲ್ಲಿ ಸಾಂಕ್ರಾಮಿಕವಾಗಿದೆ. ಮತ್ತು ಮೆಡಿಟರೇನಿಯನ್ ಪ್ರದೇಶದ ಜೊತೆಗೆ, ಇದು ಮಧ್ಯಪ್ರಾಚ್ಯ, ದಕ್ಷಿಣ ಮತ್ತು ಮಧ್ಯ ಅಮೇರಿಕ ಮತ್ತು ಆಸ್ಟ್ರೇಲಿಯಾಗಳಲ್ಲಿ ಕೂಡಾ ಕಂಡುಬರುತ್ತದೆ. ಹೆಣ್ಣು ಕೀಟಗಳು ಹಣ್ಣಾಗುತ್ತಿರುವ ಹಣ್ಣು ಅಥವಾ ಬೆರಿಗಳ ಮೃದುವಾದ ಸಿಪ್ಪೆಯನ್ನು ಚುಚ್ಚಿ ಆ ತೂತಾದ ರಂಧ್ರದಲ್ಲಿ, ಸಿಪ್ಪೆಯ ಕೆಳಗೆ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಯೊಡೆದ ನಂತರ, ಮರಿಹುಳುಗಳು ಹಣ್ಣಿನ ತಿರುಳನ್ನು ತಿನ್ನುತ್ತವೆ ಮತ್ತು ಸಾಮಾನ್ಯವಾಗಿ ಆ ಹಣ್ಣನ್ನು ಸೇವಿಸಲು ಸಧ್ಯವೇ ಆಗದಷ್ಟು ತೀವ್ರ ಹಾನಿ ಉಂಟುಮಾಡುತ್ತದೆ. ಇದೊಂದು ಪಾಲಿಫಾಗಸ್ ಕೀಟವಾಗಿದೆ, ಅಂದರೆ ಇದು ಹಲವಾರು ಆಶ್ರಯದಾತ ಗಿಡಗಳನ್ನು ತಿನ್ನುತ್ತದೆ. ಇದರ ಅಚ್ಚುಮೆಚ್ಚಿನ ಸಸ್ಯಗಳು ಹತ್ತಿರದಲ್ಲಿಲ್ಲದಿದ್ದರೆ ಇದು ಹೊಸ ಆಶ್ರಯದಾತ ಗಿಡಗಳಿಗೂ ಸಹ ಸುಲಭವಾಗಿ ಸೋಂಕು ತಗುಲಿಸುತ್ತದೆ. ಸೋಂಕಿತ ಹಣ್ಣುಗಳ ಮೇಲೆ ಬೆಳೆಯುವ ಅವಕಾಶವಾದಿ ಶಿಲೀಂಧ್ರಗಳನ್ನು ಸಹ ಇದು ಸಾಗಿಸಬಹುದೆಂಬ ಸಾಕ್ಷ್ಯ ಇದೆ. ಇದು ಅತ್ಯಂತ ಆಕ್ರಮಣಕಾರಿ ಜಾತಿಯಾಗಿದ್ದು, ಹಲವಾರು ವೈವಿಧ್ಯಮಯ ವಾತಾವರಣಗಳಲ್ಲಿ ಬದುಕುತ್ತದೆ ಮತ್ತು ತುಲನಾತ್ಮಕವಾಗಿ ಇವು ವಿಶಾಲ ವ್ಯಾಪ್ತಿಯ ತಾಪಮಾನದಲ್ಲಿ ಬೆಳೆಯುತ್ತವೆ. 10 ರಿಂದ 30 ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನ ಅನುಕೂಲಕರ ವ್ಯಾಪ್ತಿಯಾಗಿದೆ.


ಮುಂಜಾಗ್ರತಾ ಕ್ರಮಗಳು

  • ಹಣ್ಣಿನ ತೋಟಗಳಲ್ಲಿ ಈ ಕೀಟವು ಕಂಡುಬಂದರೆ ಸಂಪರ್ಕತಡೆ ನಿಯಮಗಳನ್ನು ಅನುಸರಿಸಿ.
  • ಕೀಟವನ್ನು ಪತ್ತೆಹಚ್ಚಲು ಕೀಟ-ಪರಿಶೀಲನೆ ಬಲೆಗಳು ಅಥವಾ ಫೆರೋಮೋನ್ ಬಲೆಗಳನ್ನು ಬಳಸಿ.
  • ಇದನ್ನು ಪತ್ತೆ ಹಚ್ಚಿದ ನಂತರ ಸಾಧ್ಯವಾದಷ್ಟು ಬೇಗ ಸಮರ್ಥ ಅಧಿಕಾರಿಗಳಿಗೆ ವರದಿ ಮಾಡಿ.
  • ಆ ಪ್ರದೇಶದಿಂದ ಯಾವುದೇ ಸೋಂಕಿತ ಹಣ್ಣುಗಳನ್ನು ಬೇರೆಡೆಗೆ ಒಯ್ಯಬೇಡಿ.
  • ರಫ್ತು ಮಾಡುವ ಉದ್ದೇಶವಿರುವ ಹಣ್ಣುಗಳನ್ನು ಕಾಗದ ಅಥವಾ ಪಾಲಿಥಿನ್ ಹಾಳೆಗಳಲ್ಲಿ ಸುತ್ತಿರಿ.
  • ಎಲ್ಲಾ ಸೋಂಕಿತ ಹಣ್ಣುಗಳನ್ನು ಎರಡೆರಡು ಚೀಲಗಳೊಳಗೆ ತುಂಬಿ ಕಸದ ತೊಟ್ಟಿಯಲ್ಲಿ ಹಾಕಿ ವಿಲೇವಾರಿ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ